ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶಾಯರಿಗಳು

Photo of Woman Closing Her Eyes

ಮರುಳಸಿದ್ದಪ್ಪ ದೊಡ್ಡಮನಿ

(ಕೂದಲಾ)                                                                           

ನಿನ್ನ ಕೂದಲ ಹಾಂಗ

ಹಗೂರಕ ನಿನ್ನ ಗಲ್ಲಕ್ಕ

ಹಾರಿಕೊತ ಮುತ್ತಿಡತಾವು

ಅವು ಎಷ್ಟು ಪುಣ್ಯಾ ಮಾಡ್ಯಾವು.

ನೀ ಬಾಚಿ ಕಟ್ಟಿದ ಮುಡಿ ಬಿಚ್ಚಿ

ಜಾಡಿಸಿದರ ಹುಚ್ಚು ಬಿಡಬೇಕು

ಅವನ್ನೋಡಿದ ಹರೇದ ಹುಡುಗರಿಗೆ

ಹುಚ್ಚು ಹಿಡಿ ಬೇಕು.

 ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ

ನವಿಲು ಕುಣದಂಗಕ್ಕೈತಿ

ನವಿಲಿನ ಕುಣತಕ್ಕ

ನನಗರ ಒಂದ್ ನಮೂನಿ ಆಕ್ಕೈತಿ.

ನಿನ್ನ ಮುಂಗುರುಳು ಎಷ್ಟು ಚಂದ

ಮುಖದ ಮ್ಯಾಗ ಹಾರಾಡತಾವು

ಅವುಕ ಸಲಿಗಿ ಕೊಟ್ಟಿ ಅಂತ ಕಾಣತೈತಿ

ಎಲ್ಲೆಂದ್ರಲ್ಲಿ ನಿನ್ನ ಗಲ್ಲಕ್ಕ ಮುತ್ತಿಡತಾವು.

********

About The Author

1 thought on “ಕಾವ್ಯಯಾನ”

Leave a Reply

You cannot copy content of this page

Scroll to Top