ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ದಕ್ಕಿತೆಷ್ಟು ಪ್ರೀತಿ ವಿನುತಾ ಹಂಚಿನಮನಿ (ವೆಲೆಂಟಾಯಿನ್ ಡೇ’ದ ಸಂಭ್ರಮ ಮುಗಿದಾಯ್ತು ಅದರ ಉತ್ತರಾರ್ಧ ಹೀಗೂ ಇರಬಹುದೇ …….) ಲಕ್ಷ್ಮಣ ರೇಖೆ ದಾಟಿದ ಒಂದು ತಪ್ಪಿಗೆ ದಕ್ಷಿಣೆ ತೆರಬೇಕಾಯ್ತು ನೂರೊಂದು ತೆಪ್ಪಗೆ ರಕ್ಷಣೆ ಇಲ್ಲದಾಯ್ತು ಕಾಡಿನಲಿ ತಾಯ್ತನಕೆ ದಕ್ಷ ಸಹನೆ ತ್ಯಾಗದ ಮೂರುತಿ ಸೀತೆಗೆ ಅಕ್ಷಯವಾದ ವನವಾಸ ಪತಿಯ ದೇಣಿಗೆ ಶ್ರೇಷ್ಠ ರಾಧೆಯ ಪ್ರೀತಿಗೆ ಹಂಬಲಿಸಿದವ ಅಷ್ಟ ಮಹಿಷಿಯರಿಗೆ ವಲ್ಲಭನಾದ ಗೋಕುಲದ ಕೃಷ್ಣ ಗೋಪಿಲೋಲನೀತ ದ್ವಾರಕಾಧೀಶನಾಗಿ ಬಾಲ್ಯದ ಗೆಳತಿಯ ಮರೆತ ಪದ್ಮಪತ್ರದ ಜಲಬಿಂದುವಾಗಿ ರಾಧೆಗೆ ದೊರೆತ ಐವರು ಶೂರ ಪತಿಗಳ ಧರ್ಮದ ಹಠಕೆ ದ್ರೌಪದಿಯ ಎದೆಯಾಯ್ತು ಪಗಡೆಯ ಪಠ ಅವಮಾನ ವನವಾಸಗಳೇ ಕೊಡುಗೆ ಸೂರ್ಯ ಚಂದ್ರರೆ ಸಾಕ್ಷಿ ಶೋಷಣೆಗೆ ಅಗ್ನಿಪುತ್ರಿಯ ಜೀವ ಉರಿದ ಬವಣೆಗೆ ಸಲೀಮನ ಪ್ರೇಮದ ಪುತ್ಥಳಿ ಅನಾರ್ಕಲಿ ಅಕಬರನ ಅಂತಸ್ತಿಗಾದಳು ನರಬಲಿ ಜೀವಂತ ಹುಗಿಸಿದ ಅವಳ ಮಹಾಬಲಿ ಜಹಾಂಗೀರನಿಗೆ ಚಕ್ರವರ್ತಿಯ ಪಟ್ಟ ಪ್ರೀತಿಯ ಸಮಾಧಿಯ ಮೇಲೆ ಕಟ್ಟಿ ಶಹಾಜಾನನ ಪ್ರೇಮದಫಲದ ಸೊತ್ತು ಹದಿಮೂರು ಬಾರಿ ಗರ್ಭ ಹೊತ್ತು ಕೊನೆಗೆ ಮಣ್ಣಾದಳು ಹೆತ್ತು ಹೆತ್ತು ತಾಜಮಹಲ ಅವನ ಪ್ರೀತಿಯ ಕುರುಹು ಮುಮ್ತಾಜಳ ಬಲಿದಾನದ ಗುರುತು ಆದಿಲಶಾಹಿಯ ಪಿಸುಮಾತಿನ ಬಲೆಗೆ ಮೊದಲು ಮರುಳಾದ ರಂಭ ಒಲಿದು ಜೀವತೆತ್ತು ಮಲಗಿದಳು ಗೋಲಗುಮ್ಮಜದಿ ಕಾದಿಹಳು ಶತಶತಮಾನ ಗುಮ್ಮಟದಿ ಬಾದಶಹನ ಪ್ರೇಮ ನಿವೇದನೆಗೆ ಒಲವಿನ ನಾಟಕದ ಅಂಕದ ಪರದೆ ಜಾರಿ ನಲುಗಿತು ನಾರಿಯ ಸಮ್ಮಾನ ಬಾರಿಬಾರಿ ತಿಳಿಯದಾದೆಯಾ ನೀ ಜಗದ ನೀತಿ ನಿನ್ನ ಪ್ರೇಮ ತ್ಯಾಗಗಳ ಅಳೆದ ರೀತಿ ನಿನಗೆ ಇದರಲಿ ದಕ್ಕಿತೆಷ್ಟು ಪ್ರೀತಿ? *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ರಾತ್ರಿ ಮೆರವಣಿಗೆ ಪ್ಯಾರಿಸುತ ಹಗಲು ಸರಿದು ಇರುಳು ಕವಿದು ಕಣ್ಣು ಕನಸುಬೇಡಿದೆ ಹೃದಯ ಕಥೆ ಕೇಳಲು ತಣಿವರೆಸಿದೆ ಬೆಚ್ಚಗೆ ಹೊದಿಕೆ ಮೈಗೆ ಮುಡಿಯಲಿನ್ನು ರಾತ್ರಿ ಜೊತೆ ಮೆರವಣಿಗೆ…. ಚುಕ್ಕಿ ಚಂದ್ರನನ್ನು ಓಲೈಸುವಂತೆ ಚಂದ್ರಕಾಂತಿ ಸೂರ್ಯಪ್ರಭೆಯನ್ನು ನಂಬಿರುವಂತೆ ನಾನು ನಿನ್ನನ್ನು ಮಾತ್ರ ನಂಬಿದ್ದೇನೆ ಇಲ್ಲಿ ನನ್ನ ನಿನ್ನ ನಂಬಿಕೆ ಮುಖ್ಯವಲ್ಲ ಪ್ರೀತಿ ಜೀವಂತಿಕೆ ಅಷ್ಟೇ ಮುಖ್ಯವಾಗುವದು…! ಬಿಕೋ ಅನ್ನುತ್ತಿರುವ ರೋಡಿನಲ್ಲಿ ಬೀದಿದೀಪಗಳ ಅಲಂಕಾರ ದಟ್ಟ ವಾಹನಗಳ ವಾದ್ಯಮೇಳ ಅಕ್ಷತೆ ಹಾಕುವಂತೆ ರಪ ರಪ ಮಳೆಯ ಹನಿ ದೀಪದೂಳುಗಳ ಗುಯ್ಯಗುಟ್ಟುವ ಮಂತ್ರಘೋಷ ಅಪ್ಪಟ ಮದುವೆ ಮನೆಯಂತೆ ನೋಟಕ್ಕೆ ಸಿಗುವ ಈ ರಾತ್ರಿ ಅಧ್ಭುತ ಸೃಷ್ಟಿಸಿದೆ…! ಹೀಗೆ ಬಂದು ಹಾಗೆ ಹೋಗುವ ಕನಸುಗಳ ಮೇಲೆ ಅದೇನು ಕವಿತೆ ಬರೆಯಲಿ ಅದೇನೇ ಬರೆದರೂ ಅವಳ ಹಾಜರಾತಿ ಇರುವದು ಅಲ್ಲೊಮ್ಮೆ ಇಲ್ಲೊಮ್ಮೆ ಬರುವ ಸುಳಿವು ಕೊಡುವನೀನು , ಅದೆಂತಹ ಮಾಯಗಾತಿ…! ನನ್ನೆಲ್ಲ ರಾತ್ರಿಯನು ಧಾರೆಯರೆದರೂ ಇನ್ನೂ ಮೀನಾಮೇಷ ಮಾಡುತ್ತಿರುವೆ ******

ಕಾವ್ಯಯಾನ Read Post »

ಇತರೆ

ಜ್ಞಾನಪೀಠ ವಿಜೇತರು

ವಿ.ಕೃ. ಗೋಕಾಕ್ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕ್..! ಕನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕರಾಗಿ ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕರು ಕೃಷ್ಣರಾಯ-ಸುಂದರಮ್ಮ ದಂಪತಿಗಳಿಗೆ ೯-೮-೧೯0೯ರಲ್ಲಿ ಜನಿಸಿದರು. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ೧೯೩೧ರಲ್ಲಿ ಪುಣೆಯ ಫಗ್ರ್ಯುಸನ್ ಕಾಲೇಜಿನಲ್ಲಿ ಅನಂತರ ಆಕ್ಸಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು… ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್‍ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, ಧಾರವಾಡದ ಕರ್ಣಾಟಕ ಕಾಲೇಜಿನಲ್ಲಿ (೧೯೫೨) ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು… ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದರು. ೧೯೭0ರಲ್ಲಿ ಸಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್ ನಿರ್ದೇಶಕರಾದರು… ಆಂಧ್ರದ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗೋಕಾಕರು, ಪಿ. ಇ. ಎನ್. ಅಧಿವೇಶನಕ್ಕೆ ೧೯೫೭ರಲ್ಲಿ ಜಪಾನಿಗೆ ತೆರಳಿದರು. ಬೆಲ್ಜಿಯಂನಲ್ಲಿ ಕವಿ ಸಮ್ಮೇಳನದಲ್ಲಿ ಭಾಗವಹಿಸಿದರು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದರು… ಗೋಕಾಕರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (೧೯೫೮), ಅಮೆರಿಕಾದ ಫೆಸಿಫಿಕ್ ವಿಶ್ವವಿದ್ಯಾಲಯ, ಕರ್ನಾಟಕ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿವೆ… ಕನ್ನಡ ಸಾಹಿತ್ಯ ಪರಿಷತ್ತು ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ೪೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿ ಗೌರವಿಸಿದೆ. ದ್ಯಾವಾ ಪೃಥಿವಿ ಖಂಡಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ ವಿ.ಕೆ.ಗೋಕಾಕರಿಗೆ… ತಮ್ಮ ‘ಭಾರತ ಸಿಂಧುರಶ್ಮಿ’ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಗೋಕಾಕರು ಕನ್ನಡಕ್ಕೆ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಸಮರಸವೇ ಜೀವನ (ಇಜ್ಜೋಡು) ಬೃಹತ್ ಕಾದಂಬರಿ ಇವರಿಗೆ ಹೆಸರನ್ನು ತಂದುಕೊಟ್ಟಿದೆ. ಇವರು ಭಾಷಾ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಗೋಕಾಕ ವರದಿ ಇತಿಹಾಸವನ್ನೇ ಸೃಷ್ಟಿಸಿತು… ನವ್ಯತೆ ಹಾಗೂ ಕಾವ್ಯ ಜೀವನ, ವಿಶ್ವಮಾನವ ದೃಷ್ಟಿ, ಸೌಂದರ್ಯ ಮೀಮಾಂಸೆ, ಆಂಗ್ಲ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಇತ್ಯಾದಿ ವಿಮರ್ಶಾ ಗ್ರಂಥಗಳು, ಜನನಾಯಕ, ವಿಮರ್ಶಕ ವೈದ್ಯ, ಯುಗಾಂತರ, ಮುಂತಾದ ನಾಟಕಗಳು ಇವರಿಂದ ರಚಿತವಾಗಿವೆ. ಇಂಗ್ಲಿಷಿನಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ… ಅರವಿಂದ ಭಕ್ತರು, ಬೇಂದ್ರೆ ಆರಾಧಕರೂ ಆಗಿದ್ದ ಗೋಕಾಕರು ೨೮-೪-೧೯೯೨ರಲ್ಲಿ ಮುಂಬಯಿಯಲ್ಲಿ ನಿಧನರಾದರು..! ******* — ಕೆ.ಶಿವು.ಲಕ್ಕಣ್ಣವರ

ಜ್ಞಾನಪೀಠ ವಿಜೇತರು Read Post »

ಕಾವ್ಯಯಾನ

ಕಾವ್ಯಯಾನ

ಘನಿತ ಡಾ.ಗೋವಿಂದ ಹೆಗಡೆ ಘನಿತ ಇಬ್ಬನಿಯಲ್ಲಿ ತೊಯ್ದ ಪುಲಕದಲ್ಲಿ ಹೂವು ಇನ್ನೇನು ಆರಿಹೋಗುವ ಆತಂಕದಲ್ಲಿ ಇಬ್ಬನಿ ಬಿಂದು ನೋಡುತ್ತ ನಿಂತ ನಾನು-ನೀನು ಇನ್ನೇನು ಇದೇ ಇಬ್ಬನಿ ನಿನ್ನ ಕಂಗಳ ತೋಯಿಸುತ್ತದೆ ನಿನ್ನ ಮಡಿಲಿಗೆ ನನ್ನ ತಲೆಗೆ ಅವಿನಾ ಸಂಬಂಧ ಅದಕ್ಕೆ ಗೊತ್ತೇ ಈಗ ನೀನು ಸೆಳೆಯುವೆ ಮಡಿಲಿಗೆ ತಬ್ಬಿ ಮುದ್ದಿಸುವೆ ಅದುರುವ ತುಟಿಗಳಲ್ಲಿ “ನಾನಿದೀನಿ ಕಣೋ” ಹೇಳುವ ಹೇಳದಿರುವ ಸಂಭವದಲ್ಲಿ ತಾರೆಗಳು ಕಂಪಿಸಿವೆ ಅಲೆಗಳು ಮರ್ಮರ ನಿಲ್ಲಿಸಿವೆ ಎಷ್ಟೊಂದು ದೇಶಕಾಲಗಳು ಈ ಒಂದು ಕ್ಷಣಕ್ಕಾಗಿ ಮಿಡಿದಿವೆ ತುದಿಗಾಲಲ್ಲಿ, ಮೊರೆದಿವೆ ಇದೇ ಒಂದು ಚಣ ಅದೇ ಇಬ್ಬನಿಯ ಒಂದೇ ಒಂದು ಬಿಂದು ಜಾರಿ ಹನಿಯಲು ನಿನ್ನ ರೆಪ್ಪೆಯ ಅಂಚಿನಿಂದ ನನ್ನ ಎದೆಗೆ ಘನೀಭವಿಸುತ್ತದೆ ಆಗ ಕಾಲದ ಈ ಬಿಂದು ಅನಂತಕ್ಕೆ ಸಲ್ಲುವ ಚಿತ್ರವಾಗಿ ಹಾಗಲ್ಲದೆ ಮುಕ್ತಿಯೆಲ್ಲಿ ಹೂವಿಗೆ ಇಬ್ಬನಿಗೆ ನನಗೆ-ನಿನಗೆ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಸಂತನಾಗಮನ ವಿಜಯ ನಿರ್ಮಲ ವಸಂತನಾಗಮನ ವನರಾಣಿ ನವಕನ್ಯೆಯಾಗಿಹಳು ಹರೆಯದಿ ಮೈದುಂಬಿ ನಗುತಿಹಳು ಭೂದೇವಿ ಸಂಭ್ರಮದಿ ನಲಿದಿಹಳು ವನಬನಗಳೆಲ್ಲ ಹೊಸ ಚಿಗುರು ತುಂಬಿ ಗಿಡಮರಗಳೆಲ್ಲ ಬಣ್ಣ ಬಣ್ಣದ ಹೂ ಗುಚ್ಛದಲಿ ತುಂಬಿ ತುಳುಕುತಿವೆ ಮಾವು ಬೇವು ಜೊತೆಯಾಗಿ ತೋರಣ ಕಟ್ಟಿ ವನವನೆಲ್ಲ ಸಿಂಗರಿಸುತಿದೆ ಮಾಮರದಂದಕೆ ಮನಸೋತ ಕೋಗಿಲೆ ಮಧುರವಾಗಿ ಕುಹೂ ಕುಹೂ ಎನುತಿದೆ ಕಾನನವೆಲ್ಲ ಹಚ್ಚ ಹಸುರಾಗಿ ಸೌಂದರ್ಯ ತುಂಬಿಕೊಂಡು ಹೊಸ ಗಾನಕೆ ತಲೆದೂಗಿವೆ ಹಕ್ಕಿ ಪಕ್ಷಿಗಳು ಇಂಪಾದ ದನಿಯಲಿ ಕೂಗಾಡುತ ತಮ್ಮ ಗೂಡುಗಳಲಿ ಸಂತಸದಿ ಮೆರೆಯುತ ಹಬ್ಬಕೆ ಸಜ್ಜಾಗುತಿವೆ ತಮ್ಮದೇ ಶೈಲಿಯಲಿ ಶಿಶಿರದಲಿ ಸೋತು ಹಣ್ಣೆಲೆಗಳೆಲ್ಲ ಉದುರಿ ಮರಗಳೆಲ್ಲ ಬೋಳಾಗಿ ತುಂತುರು ಹನಿಗಳ ಸಿಂಚನದಲಿ ಮತ್ತೆ ಹೊಸ ಹಸಿರು ಚಿಗುರಲು ಬಂದ ನೋಡಿ ಋತುಗಳ ರಾಜ ವಸಂತ ಹೊತ್ತು ತಂದ ಮತ್ತೆ ಚೈತ್ರ ವನು ಧರೆಗೆಲ್ಲ ನೀಡಿ ಚೈತನ್ಯವನು ವನ ಬನವೆಲ್ಲ ಚಿಗುರಿ ಸಿಂಗಾರದಲಿ ಸೆಳೆಯುತಿದೆ ನೋಡಲಿ ಪ್ರಕೃತಿಯ ಮಡಿಲು ಪ್ರತಿ ಜೀವದಲ್ಲೂ ಆರಾಧನೆ ತುಂಬುತ ರಸಿಕ ಮನಗಳಲಿ ಹೊಸ ಬಯಕೆಗಳ ಸ್ಪುರಿಸುತಿದೆ ನೋಡಲ್ಲಿ ಸೃಷ್ಟಿ ಪಾಲಕನ ಆಗಮನವೇ ವಸಂತ ನಳನಳಿಸುತಿದೆ ವನವೆಲ್ಲ ತುಂಬಿ ಹೂಗಳಿಂದ ಮಲ್ಲಿಗೆ ಸಂಪಿಗೆ ಹೂಗಳರಲಿ ಚೆಲ್ಲಿದೆ ಕಂಪನು ಹರಡುತಿದೆ ವನದ ತುಂಬೆಲ್ಲ ಜನಮನದಲಿ ತುಂಬುತ ಹೊಸ ನವೋಲ್ಲಾಸವನು ಆಸ್ವಾದಿಸುತ್ತಾ ತೊಡಗಲು ಪ್ರೇರೇಪಿಸುವಂತಿದೆ ಪ್ರೇಮೋಲ್ಲಾಸದಲಿ ಪ್ರೇಮಿಗಳನು ಮೂಡುತಿದೆ ಹೊಸ ಚಿಗುರಿನಂದದಿ ಕವಿ ಮನದಲಿ ಹೊಸ ಬಗೆಯ ನವ ಕಾವ್ಯದ ಸೃಷ್ಟಿಗೆ ಹಾಕಿ ಮುನ್ನುಡಿಯನು ವರ್ಣಿಸಿ ಪದಗಳಲಿ ವಸಂತನಾಗಮನವನು ***********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಸಾರಾ ಶಗುಫ್ತಾ (ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಅವರ ಜೀವನ ಮತ್ತು ಕಾವ್ಯ  ಕುರಿತು ಅಮೃತಾ ಪ್ರೀತಂ ಬರೆದಿದ್ದಾರೆ . ಕನ್ನಡಕ್ಕೆ ಹಸನ್ ನಯೀಂ ಸುರಕೋಡ ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನ, ಗದಗ ಅದನ್ನು ಪ್ರಕಟಿಸಿದೆ. ಅದು ೨೮. ೫. ೨೦೧೬ರಂದು ಧಾರವಾಡದಲ್ಲಿ ಬಿಡುಗಡೆಯಾಗಿದೆ.) ಸಾರಾ ಶಗುಫ್ತಾರವರ ಜೀವನ ಮತ್ತು ಕಾವ್ಯ ಕುರಿತ ವೃತಾಂತ ‘ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು’..! ಹಾಲ ಮೇಲೆ ಆಣೆ… ಆಸ್ಟ್ರೇಲಿಯಾದಲ್ಲಿ ಒಂದು ಕತೆ ಜನಜನಿತವಾಗಿದೆ. ಆ ದೇಶದಲ್ಲಿ ಒಮ್ಮೆ ಜನಿಸಿದ ಬಾತುಕೋಳಿಗಳಿಗೆ ಬಿಳಿಯ ರೆಕ್ಕೆಗಳಿದ್ದವು. ಆಗ ಅವು ಒಂದು ಪ್ರಚಂಡ ಬಿರುಗಾಳಿಗೆ ಸಿಲುಕಿಕೊಂಡವು. ಅವು ಹದ್ದುಗಳ ಗೂಡಿನಲ್ಲಿ ಆಶ್ರಯ ಪಡೆಯಬೇಕಾಯಿತು. ಹದ್ದುಗಳು ಸಾಯಂಕಾಲ ತಮ್ಮ ಗೂಡಿಗೆ ಮರಳಿದಾಗ ಅಲ್ಲಿ ಬಾತುಕೋಳಿಗಳಿದ್ದುದನ್ನು ಕಂಡವು. ಕೆರಳಿ ಕೆಂಡವಾದ ಹದ್ದುಗಳು ತಮ್ಮ ಚುಂಚದಿಂದ ಅವುಗಳ ರೆಕ್ಕೆಗಳನ್ನು ಎಳೆಯತೊಡಗಿದವು. ಬಾತುಕೋಳಿಗಳ ರೆಕ್ಕೆಗಳು ಇಲ್ಲವಾದವು. ಹದ್ದುಗಳು ಅವುಗಳನ್ನು ತಮ್ಮ ಉಗುರುಗಳಲ್ಲಿ ಹಿಡಿದುಕೊಂಡು ದೂರದ ಒಂದು ಕಾಡಿನಲ್ಲಿ ಎಸೆದವು.. ತಿನ್ನಲು ಮತ್ತು ಕುಡಿಯಲು ಏನೂ ಸಿಗದೆ ಬಾತುಕೋಳಿಗಳು ತಮ್ಮ ಸಾವನ್ನು ಎದುರು ನೋಡತೊಡಗಿದ್ದಾಗ ಕೆಲವು ಕಾಗೆಗಳು ಬಂದವು, ಅವುಗಳ ಬಗ್ಗೆ ಕನಿಕರಪಟ್ಟವು. ಬಾತುಕೋಳಿಗಳು ತಮ್ಮ ಗೋಳಿನ ಕತೆ ಹೇಳಿಕೊಂಡವು. ಕಾಗೆಗಳು “ಈ ಹದ್ದುಗಳು ನಮ್ಮ ವೈರಿಗಳು. ನೀವು ಸೇಡು ತೀರಿಸಿಕೊಳ್ಳಬೇಕು. ಅವು ಪಾಠ ಕಲಿಯುವಂತಾಗಬೇಕು. ಅವುಗಳಿಗೆ ಅದೇ ಗತಿಯಾಗಬೇಕು.” ಎಂದವು. ನೆರವಿನ ಸಂಕೇತವಾಗಿ ಕಾಗೆಗಳು ಅವುಗಳಿಗೆ ತಮ್ಮ ರೆಕ್ಕೆಗಳನ್ನು ನೀಡಿದವು. ಆ ಕಾರಣದಿಂದಾಗಿ ಆಸ್ಟ್ರೇಲಿಯನ್ ಬಾತುಕೋಳಿಗಳು ಇಂದಿಗೂ ಕಪ್ಪು ರೆಕ್ಕೆಗಳನ್ನು ಹೊಂದಿರುತ್ತವೆ… ಆ ಕತೆಯ ಕಾಗೆಗಳು ನನಗೆ ನೆನಪಾಗುತ್ತಲೇ ಸಾರಾಳ ಒಂದು ಕವನ ಓದತೊಡಗಿದೆ… ನೀ ಒಬ್ಬ ಕವಿ ನಾನು ಗೂಡಿನಲ್ಲಿ ಕೊಳೆಯುತ್ತಿರುವ ಕ್ಷುಲ್ಲಕ ಹೆಣ್ಣು ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು ಸೂಳೆಯಾದ ನಾನು ಒಲಿಸಿಕೊಳ್ಳಲಾಗಲಿಲ್ಲ ನಿನ್ನನ್ನು ನನ್ನೆದೆಯಿಂದ ಜಾರಿದವು ಬರಿ ಖೊಟ್ಟಿ ನಾಣ್ಯ ನೀನು ತಪ್ಪಿಸಿಕೊಂಡೆ ಮದುವೆಯನ್ನು ಇಡೀ ನಾಲ್ಕು ದಿನ ಹೆಣೆದೆ ಅರ್ಧ ಹೊರಸು ನೀನು ಮಲಗಿದೆ ನನ್ನ ಲಜ್ಜೆಯ ಹಾಸಿಗೆಯಲ್ಲಿ ನಾನೊಬ್ಬ ಕ್ಷುಲ್ಲಕ ಹೆಣ್ಣು ಹಾಗಾಗಿ ಬೇಕಿದೆ ಪರಿಹಾರ ನೀನು ಮರೆಯಲಾರೆ ಸಾವನ್ನು ನಾ ಮರೆಯಲಾರೆ ನೋವನ್ನು ಖರೇ ನಾಣ್ಯವೆನಿಸಿಕೊಂಡಿತು ನನ್ನ ಖೊಟ್ಟಿ ನಾಣ್ಯ ಬೇಕೆಂದಾಗ ನಾನು ನಿನ್ನನ್ನು ಖರೀದಿಸಬಲ್ಲೆ ಎಲ್ಲೇ ಆಗಲಿ ಇಳಿಸಿಕೋ ಮುಸುಕಿನಲ್ಲಿ ನಿನ್ನ ಭಾರವನ್ನು ನಿನ್ನಿಂದಲೇ ಶುರುವಾಗಲಿ ನನ್ನ ವ್ಯಾಪಾರ ನಾನು ನರ್ತನದಿಂದ ಸವೆಸಿದೆ ನನ್ನ ಪೈಜಣದ ಗೆಜ್ಜೆಗಳನ್ನು ನೀನು ಸರ್ವಸ್ವವನ್ನು ಕಳೆದುಕೊಂಡೆ ಮೌನದಲ್ಲಿ ಗೂಡಿನಲ್ಲಿ ಕೂಡಿ ಹಾಕಲು ಒಂದು ಹೆಣ್ಣನ್ನು ಮದುವೆಯಾಗಿ ಸೂಳೆಮಕ್ಕಳು ಮೀರಿದರು ಎಲ್ಲ ಮಿತಿಗಳನ್ನು ಅದನ್ನೆಲ್ಲ ಅರಿತುಕೊಂಡೆ ಜೀವ ಪಣಕ್ಕೊಡ್ಡಿ ನಿನ್ನೆಲ್ಲ ಪದಗಳು ನೆರವಾಗುತ್ತವೆ ಕುಂಟಲಗಿತ್ತಿಯರಾಗಿ ನಿನ್ನಿಂದ ನಾ ತಿರುಗಿ ಪಡೆಯಲಾರೆ ಮೆಹರ್ ಅಷ್ಟೊಂದು ಮುಗ್ಗಲಗೇಡಿ ನಾನು ಜನ ನನಗೆ ನೀಡುವರು ಕಾಣಿಕೆಯಾಗಿ ನನ್ನ ಮೆಹರ್ ಜನಜನಿತವಾಗಿದೆ ನಿನ್ನ ಬಳಲಿಕೆ ಹೆಪ್ಪುಗಟ್ಟಿವೆ ನಿನ್ನ ಕೈಗಳು ಏನಾಯಿತು ನಿನ್ನ ಸಮರಕಲೆಗಳಿಗೆ ಆ ನಾಲ್ವರು ಹಿಜಡಾಗಳ ಅಣತಿ ಮೇರೆಗೆ ಯಾವಾಗ ನಾನಾದೆ ನಿನ್ನ ಮಾನ-ಮರ್ಯಾದೆ ನಿನ್ನ ಮಕ್ಕಳನ್ನು ಮರೆ ಮಾಚುವುದು ನಿನ್ನ ಸ್ವಾಭಿಮಾನ ರಮಿಸೀತು ಹೇಗೆ ಅದು ನನ್ನ ಚೂರಾದ ಮನಸ್ಸನ್ನು? ನನ್ನ ಕೊನೆಯ ಮನುಷ್ಯ ಸತ್ತು ಹೋದ ಅವನ ಮಡದಿಯಾಗಿದ್ದೆ ಇಲ್ಲಿ ತನಕ ನನ್ನ ಬಳೆಗಳೆ ಬದಲಾಗಿವೆ ಈಗ ಬರ್ಚಿಗಳಾಗಿ ಬರ್ಚೆಗಳಿಂದಲೇ ಬರೆಯುವೆ ನನ್ನ ಕತೆಯನ್ನು… ಕಡೆಗೂ ಸಾರಾ ತನ್ನ ಇಡೀ ಕತೆ ನನಗೆ ನಿರೂಪಿಸಿದಳು– “ಅಮೃತಾ, ದಿನಾಲು ನಿನ್ನ ತಲೆ ತಿನ್ನಲು ಬರುತ್ತಿದ್ದೇನೆ. ಅಷ್ಟಕ್ಕೂ ನಾನು ಹೋಗುವುದಾದರೂ ಎಲ್ಲಿ? ಹೌದಲ್ಲ, ನಾನು ಇಲ್ಲಿಯವರೆಗೆ ಕಾವ್ಯ ರಚನೆಗೆ ಹೇಗೆ ತೊಡಗಿದೆಯೆನ್ನುವುದನ್ನೇ ನಿನಗೆ ಹೇಳಲಿಲ್ಲ. ಐದು ವರ್ಷಗಳ ಹಿಂದೆ, ನನ್ನೊಂದಿಗೆ ಕುಟುಂಬ ಯೋಜನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ, ತನ್ನನ್ನು ಕವಿ ಎಂದುಕೊಂಡಿದ್ದ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಬಂದ. ಆಗ ನಾನೊಬ್ಬ ವಿಚಿತ್ರ ಸಾಂಪ್ರದಾಯವಾದಿ ಯುವತಿಯಾಗಿದ್ದೆ. ಮನೆಯಿಂದ ಆಫೀಸಿಗೆ ನಡೆದುಕೊಂಡು ಬರುವುದನ್ನೇ ಬಹಳ ಕಷ್ಟಪಟ್ಟು ಕಲಿತುಕೊಂಡಿದ್ದೆ. ಯಾವುದೇ ಬಗೆಯ ಸೃಜನಶೀಲತೆಯಲ್ಲಿ ನನಗ ಆಸಕ್ತಿ ಇದ್ದಿರಲಿಲ್ಲ. ಆದಾಗ್ಯೂ ಕವಿಗಳು ಬಹಳ ದೊಡ್ಡ ವ್ಯಕ್ತಿಗಳೆಂದು ನನಗೆ ಅನಿಸಿತ್ತು. ಒಂದು ದಿನ ಕವಿ ಮಹಾಶಯ “ನಾನು ಒಂದು ಮಹತ್ವಪೂರ್ಣ ವಿಷಯ ಕುರಿತು ಮಾತಾಡಬೇಕಿದೆ.”ಎಂದ. ನಾವು ರೆಸ್ಟಾರೆಂಟೊಂದರಲ್ಲಿ ಭೇಟಿಯಾದೆವು. “ನೀನು ನನ್ನನ್ನು ಮದುವೆಯಾಗುವೆಯಾ?” ಎಂದು ಆತ ಕೇಳಿದ. ಮರುದಿನವೇ ನಮ್ಮ ಮದುವೆ ನಿಶ್ಚಿತಾರ್ಥವಾಯಿತು. ಕಾಜಿಗೆ ಕೊಡುವುದಕ್ಕೆ ನಮ್ಮ ಬಳಿ ಹಣವಿದ್ದಿರಲಿಲ್ಲ. “ಅರ್ಧ ಹಣ ನೀವು ವ್ಯವಸ್ಥೆ ಮಾಡಿರಿ, ಇನ್ನರ್ಧ ನಾನು ಕೊಡುವೆ.” ಎಂದೆ… “ನನ್ನ ತಂದೆತಾಯಿಯರಿಗೆ ನನ್ನ ನಿರ್ಧಾರ ಇಷ್ಟವಾಗಿಲ್ಲ. ಅವರು ಮದುವೆಗೆ ಹಾಜರಾಗುವುದಿಲ್ಲ. ನನ್ನ ಪರವಾಗಿ ನೀವೇ ಸಾಕ್ಷಿಗಳನ್ನು ಕರೆ ತರುವ ವ್ಯವಸ್ಥೆ ಕೂಡ ಮಾಡಬೇಕು.” ಎಂದೂ ಅವನಿಗೆ ಸೂಚಿಸಿದೆ… ನನ್ನೊಬ್ಬ ಗೆಳತಿಯ ಬಟ್ಟೆಗಳನ್ನು ಎರವಲು ತಂದು ವಿವಾಹ ಸ್ಥಳ ತಲುಪಿದೆ. ನಮ್ಮ ಮದುವೆ ನೆರವೇರಿತು. ಕಾಜಿ ತನ್ನ ಶುಲ್ಕ ಮತ್ತು ಮಿಠಾಯಿಯ ಬಾಕ್ಸ್ ಸ್ವೀಕರಿಸಿದ. ನಮ್ಮ ಬಳಿ ಕೇವಲ ಆರು ರೂಪಾಯಿ ಉಳಿದಿತ್ತು. ನಾವು ನಮ್ಮ ಗುಡಿಸಲು ತಲುಪಿದಾಗ ನಮ್ಮ ಬಳಿ ಉಳಿದದ್ದು ಎರಡು ರೂಪಾಯಿ… ಕಂದೀಲ ಬೆಳಕಿನಲ್ಲಿ ಬುರ್ಖಾ ತೊಟ್ಟು ನಾನು ಕುಳಿತುಕೊಂಡೆ. ಕವಿ ಮಹಾಶಯ “ನಿನ್ನ ಬಳಿ ಎರಡು ರೂಪಾಯಿ ಇದೆಯೆ?” ಎಂದು ಕೇಳಿದ. ತನ್ನ ಗೆಳೆಯರ ಮರುಪ್ರಯಾಣಕ್ಕೆ ಅದು ಬೇಕಿತ್ತು. ನಾನು ನನ್ನ ಕಡೆಯ ಎರಡು ರೂಪಾಯಿ ಸಹ ಕೊಟ್ಟುಬಿಟ್ಟೆ… ಕೆಲ ದಿನಗಳ ನಂತರ “ನನ್ನ ಮನೆತನದಲ್ಲಿ ಹೆಂಡತಿ ಕೆಲಸ ಮಾಡುವುದಿಲ್ಲ.” ಎಂದು ಅವನು ಹೇಳಿದ. ನಾನು ಕೆಲಸ ಬಿಟ್ಟೆ. ಪ್ರತಿ ದಿನ ತಮ್ಮನ್ನು ಸುಪ್ರಸಿದ್ಧ ಕವಿಗಳೆಂದು ಭಾವಿಸಿದ್ದ ಕೆಲವು ಸೋಮಾರಿಗಳು ನಮ್ಮ ಮನೆಗೆ ಬರತೊಡಗಿದರು… ಹಿಂಸೆ ನನ್ನ ರಕ್ತದಲ್ಲಿಲ್ಲ. ಆದರೆ ಹಸಿವೆಯನ್ನು ಮಾತ್ರ ತಾಳಿಕೊಳ್ಳಲಾರೆ. ಪ್ರತಿ ದಿನ ‘ಮಹಾನ್’ ವಿಚಾರಗಳ ಕುರಿತು ಚರ್ಚೆಯಾಗುತ್ತಿತ್ತು. ನಮ್ಮ ಮನೆಯಲ್ಲಿ ಚಿಂತನ-ಮಂಥನ ನಡೆಯುತ್ತಿತ್ತು. ಇಷ್ಟರ ಹೊರತಾಗಿ ನನ್ನ ಗಂಡ ಬೇರೆ ಏನೂ ಮಾಡುತ್ತಿರಲಿಲ್ಲ… ಒಂದು ದಿನ ನಮ್ಮ ಬಾಡಿಗೆ ಗುಡಿಸಿಲಿನಿಂದ ಹೊರ ದಬ್ಬಲಾಯಿತು. ಅನಂತರ ಇದರರ್ಧದಷ್ಟು ಮನೆಯನ್ನು ಬಾಡಿಗೆಗೆ ಪಡೆದೆವು. ಹಾಸಿಗೆ ಮೇಲೆ ಮಲಗಿಕೊಂಡು ನಾನು ಗೋಡೆಗಳನ್ನು ದಿಟ್ಟಿಸುತ್ತಿದ್ದೆ. ಎಷ್ಟೋ ಸಲ ನಾನು ನನ್ನವೇ ಮೂರ್ಖ ಯೋಚನೆಗಳಿಗೆ ಬಲಿಯಾಗುತ್ತಿದ್ದೆ… ನಾನು ಏಳು ತಿಂಗಳ ಗರ್ಭಿಣಿಯಾಗಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ನನಗೆ ಪ್ರಸವ ವೇದನೆ ಶುರುವಾಯಿತು. ಕಾವ್ಯ ಪ್ರತಿಭೆಯ ಹಮ್ಮಿನ ಅಮಲೇರಿಸಿಕೊಂಡು ಕವಿ ಮಹಾಶಯ ತನ್ನ ಗೆಳೆಯರೊಂದಿಗೆ ಹೊರಗೆ ಹೋಗಿಬಿಟ್ಟ ನನ್ನತ್ತ ಕಣ್ಣೆತ್ತಿಯೂ ನೋಡದೆ… ನನಗೆ ನೋವು ಅಸಹನೀಯವಾದಾಗ ನನ್ನ ಮನೆಯೊಡತಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದಳು. ನನ್ನ ಕೈಯಲ್ಲಿ ಬರೀ ಐದು ರೂಪಾಯಿ ಇತ್ತು. ಸ್ವಲ್ಪ ಹೊತ್ತಿನ ನಂತರ ನನಗೆ ಗಂಡು ಮಗುವಾಯಿತು. ಚಳಿ ಇತ್ತು. ಕೂಸಿಗೆ ಹೊದಿಸಲು ಒಂದು ಟಾವೆಲ್ ಸಹ ಇದ್ದಿರಲಿಲ್ಲ. ಮಗುವು ಐದು ನಿಮಿಷದ ಮಟ್ಟಿಗೆ ಕಣ್ಣು ತೆರೆಯಿತು. ನಂತರ ತನ್ನ ಕಫನ್ ಅರಸಿಕೊಂಡು ಹೋಯಿತು… ಆ ಕ್ಷಣದಿಂದ ಮೈ ತುಂಬ ಕಣ್ಣಾದೆ… ನರ್ಸ್ ನನ್ನನ್ನು ಬೇರೊಂದು ವಾರ್ಡ್‍ಗೆ ಕರೆದೊಯ್ದಳು. ಅಲ್ಲಿ ನನಗೆ ಒರಗಲು ನೆರವಾದಳು. ನಾನು ಮನೆಗೆ ಹೋಗಬೇಕೆಂದಿದ್ದೇನೆ ಎಂದು ಅವಳಿಗೆ ಹೇಳಿದೆ. ಏಕೆಂದರೆ ಮನೆಯಲ್ಲಿ ಯಾರೊಬ್ಬರಿಗೂ ಏನು ನಡೆದಿದೆ ಎನ್ನುವುದು ಗೊತ್ತಿರಲಿಲ್ಲ. ಅಪಾರ ಕಾಳಜಿಯಿಂದ ಅವಳು ನನ್ನತ್ತ ದೃಷ್ಟಿ ಬೀರಿದಳು. “ನಂಜೇರುವ ಎಲ್ಲ ಸಾಧ್ಯತೆ ಇದೆ. ಅದಕ್ಕಾಗಿ ಹಾಸಿಗೆಯಲ್ಲಿ ಮಲಗಿರು.” ಎಂದು ಹೇಳಿದಳು… ಆಗ ನನ್ನ ಬಳಿ ಸತ್ತ ಕೂಸು ಮತ್ತು ಐದು ರೂಪಾಯಿ ಇತ್ತು. “ಆಸ್ಪತ್ರೆ ಬಿಲ್ ಕೊಡಬೇಕೆಂದರೆ ನನ್ನ ಬಳಿ ಹಣವಿಲ್ಲ. ನಾನು ಒಂದಷ್ಟು ಹಣ ತರುವೆ. ಇನ್ನು ಹೆಚ್ಚು ಕಾಲ ಹಾಸಿಗೆಯಲ್ಲಿ ಮಲಗಿರುವುದು ನನಗೆ ಸಾಧ್ಯವಾಗಲಾರದು. ನೀವು ನನ್ನ ಮಗುವನ್ನು ಭದ್ರತೆ ಎಂದು ಇಟ್ಟುಕೊಳ್ಳಿರಿ. ನಾನು ಬರುವೆ. ಓಡಿ ಹೋಗುವುದಿಲ್ಲ.” ಎಂದು ನರ್ಸ್‍ಗೆ ಮೊರೆ ಇಟ್ಟೆ… ನಾನು ನೆಲ ಮಹಡಿಗೆ ಹೋದೆ. ನನಗೆ ವಿಪರೀತ ಜ್ವರವಿತ್ತು. ನಾನು ಬಸ್ ಹತ್ತಿದೆ. ಹೇಗೋ ಮನೆ ತಲುಪಿದೆ. ನನ್ನ ಸ್ತನಗಳು ಹಾಲಿನಿಂದ ಬಿಗಿದುಕೊಂಡಿದ್ದವು. ನಾನು ಪಾತ್ರೆಯಲ್ಲಿ ಹಾಲು ಹಿಂಡಿದೆ. ಈ ಮಧ್ಯ ಕವಿ ಮಹಾಶಯ ತನ್ನ ಎಂದಿನ ಗೆಳೆಯರ ತಂಡದೊಂದಿಗೆ ಪ್ರವೇಶಿಸಿದ… ನಾನಂದೆ “ಗಂಡು ಮಗುವು ಆಗಿತ್ತು. ಸತ್ತು ಹೋಯಿತು.” ತುಂಬ ಮಾಮೂಲು ಎನ್ನುವಂತೆ ಅವನು ಕೇಳಿಸಿಕೊಂಡ. ತನ್ನ ಗೆಳೆಯರಿಗೆ ಸುದ್ದಿ ತಲುಪಿಸಿದ. ಆ ಮೇಲೆ ಏನೂ ನಡೆದೇ ಇಲ್ಲವೆನ್ನುವಂತೆ ಚರ್ಚೆಯನ್ನು ಎಲ್ಲಿಗೆ ಬಿಟ್ಟಿದ್ದರೋ ಅಲ್ಲಿಂದ ಮುಂದುವರಿಸಿದರು… … ಫ್ರೈಡ್ ಬಗ್ಗೆ ಏನಂತೀರಾ? … ರಿಂಬಾ ಏನು ಹೇಳಿದ್ದಾನೆ? … ಶಾಹಿದ್ ಹೇಳಿದ್ದೇನು? … ವಾರಿಸ್ ಶಾಹ್ ಬಹಳ ದೊಡ್ಡ ವ್ಯಕ್ತಿ. ಈ ವಿಷಯ ನಾನು ನಿತ್ಯವೂ ಕೇಳುತ್ತಿದ್ದೆ. ಆದರೆ ಆ ದಿನ ಶಬ್ದಗಳ ಅಬ್ಬರ ಜೋರಾಗಿತ್ತೆಂದು ಅನಿಸಿತು. ಈ ಎಲ್ಲ ಮಹಾನ್ ವ್ಯಕ್ತಿಗಳು ಈಗಾಗಲೇ ನನ್ನ ರಕ್ತದಲ್ಲಿದ್ದಾರೆ, ನನ್ನ ಎದೆ ಹಾಲಿನಲ್ಲಿದ್ದಾರೆ ಎಂದು ಅನಿಸಿತು. ರಿಂಬಾ ಮತ್ತು ಫ್ರೈಡ್ ನನ್ನ ಮಗುವನ್ನು ಕಿತ್ತುಕೊಳ್ಳುತ್ತಿದ್ದಾರೇನೋ, ಜಜ್ಜಿ ಹಾಕುತ್ತಿದ್ದಾರೇನೋ ಎಂದು ಅನಿಸಿತು… ಅಮೃತಾ, ಜ್ಞಾನಾರ್ಜನೆ ನನ್ನನ್ನು ಅಣಕಿಸುತ್ತಿತ್ತು ಎಂದು ನಿನಗೆ ಅನಿಸಬಹುದಲ್ಲವೆ? ಆ ದಿನ ಜ್ಞಾನ ನನ್ನ ಸ್ಥಳಕ್ಕೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟಿತೇನೋ. ಹೀಗಿತ್ತು ನನ್ನ ಮಗುವಿನ ಜನನ… ಅದೇನೇ ಇರಲಿ ಅವರ ಚರ್ಚೆ ಮತ್ತಷ್ಟು ಹೆಚ್ಚು ಕಾಲು ಮುಂದುವರಿಯಿತು. ಅಷ್ಟೂ ಕಾಲ ಮೌನ ತನ್ನ ದುರ್ಬಲ ಕಣ್ಣುಗಳಿಂದ ನನ್ನನ್ನೇ ದಿಟ್ಟಿಸುತ್ತಿತ್ತು… ನಂತರ ಈ ಜನ ಹೊರಟು ಹೋದರು. ತಮ್ಮ ಚಿಂತನೆಗಳ ಅಮಲೇರಿಸಿಕೊಂಡು… ನಾನು ಒಂದು ಚೀತ್ಕಾರದಂತೆ ಮೆಟ್ಟಲಿಳಿದು ಹೋದೆ. ಆಗ ನನ್ನ ಕೈಯಲ್ಲಿ ಕೇವಲ ಮೂರು ರೂಪಾಯಿ ಇತ್ತು. ನಾನು ನನ್ನ ಗೆಳತಿಯ ಮನೆಗೆ ಹೋದೆ. ಮುನ್ನೂರು ರೂಪಾಯಿ ಸಾಲ ಕೇಳಿದೆ. ಅವಳು ಹಣ ನೀಡಿದಳು. ಆದರೆ ನನ್ನತ್ತ ನೋಡುತ್ತ “ಮೈಯಲ್ಲಿ ಹುಷಾರಿಲ್ಲವೆ?” ಎಂದು ಕೇಳಿದಳು. “ಸ್ವಲ್ಪ ಜ್ವರವಿದೆ. ನಾನು ನಿಲ್ಲುವಂತಿಲ್ಲ. ನನ್ನ ಮಾಲೀಕನಿಗೆ ಹಣ ಕೊಡಬೇಕಿದೆ. ಅವನು ನನಗಾಗಿ ದಾರಿ ನೋಡುತ್ತಿದ್ದಾನೆ”… ನಾನು ಆಸ್ಪತ್ರೆ ತಲುಪಿದೆ. ಬಿಲ್ ಎರಡು ನೂರ ತೊಂಬತ್ತೈದು ಆಗಿ ಬಿಟ್ಟಿತ್ತು. “ದಯವಿಟ್ಟು ನನ್ನ ಮಗುವಿಗೆ ಕಫನ್ ವ್ಯವಸ್ಥೆ ಮಾಡಿ ಎಲ್ಲಾದರೂ ಅದನ್ನು ದಫನ್ ಮಾಡಿರಿ.” ಎಂದು ಡಾಕ್ಟರ್‍ಗೆ ಮನವಿ ಮಾಡಿಕೊಂಡೆ… ನಿಜವಾದ ಗೋರಿ ನನ್ನ ಹೃದಯದಲ್ಲಿ ಆಗಲೇ ನಿರ್ಮಾಣಗೊಂಡಿತ್ತು.– ಆಗ ನಾನು ಜೋರಾಗಿ ಕಿರುಚಿಕೊಂಡೆ. ಮಗುವನ್ನು ಕಳೆದುಕೊಂಡಿದ್ದರಿಂದ ನಾನು ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರಬೇಕೆಂದು ಡಾಕ್ಟರ್ ಭಾವಿಸಿದರು. ಬರಿಗಾಲಲ್ಲೇ ಓಡುತ್ತಾ ಬಸ್ ಹತ್ತಿದೆ. ಕಂಡಕ್ಟರ್ ನನಗೆ ಟಿಕೆಟ್ ಕೊಡುವ ಗೊಡವೆಗೆ ಹೋಗಲಿಲ್ಲ. ಕಾರಣ ನನ್ನ ಬಟ್ಟೆಯೆಲ್ಲ ರಕ್ತಸಿಕ್ತವಾಗಿತ್ತು. ನನ್ನ ಸ್ಟಾಪ್ ಬರುತ್ತಲೇ ಬಸ್ ಇಳಿದೆ. ಐದು ರೂಪಾಯಿ ನೋಟನ್ನು ಕಂಡಕ್ಟರ್ ಕೈಗೆ ತುರಿಕಿ ಹೊರಟು ಹೋದೆ… ಹೋಮ್… ಹೋಮ್… ಸ್ವೀಟ್ ಹೋಮ್… ಈಗ ನಾನು ಮನೆ ತಲುಪಿದೆ. ಹಾಲು ಇನ್ನೂ ಪಾತ್ರೆಯಲ್ಲಿತ್ತು. ಆದರೆ ಅದು ಕಫನ್‍ಗಿಂತಲೂ ಶುಭ್ರವಾಗಿತ್ತು. ನಾನು ಹಾಲ ಮೇಲೆ ಆಣೆ

ಪುಸ್ತಕ ಪರಿಚಯ Read Post »

ಕಾವ್ಯಯಾನ

ಕಾವ್ಯಯಾನ

ಕಾಮದಹನ ಗೌರಿ. ಚಂದ್ರಕೇಸರಿ ಕಾಮ ದಹನ ಒಡಲು ಬರಿದು ಮಾಡಿಕೊಂಡ ಕಣ್ಣೀರ ಕಡಲು ಬತ್ತಿಸಿಕೊಂಡ ನಿಟ್ಟುಸಿರಲ್ಲೇ ನೋವ ನುಂಗಿಕೊಂಡವಳ ಜೋಳಿಗೆಗೆ ನ್ಯಾಯ ಬಂದು ಬಿದ್ದಿದೆ ಅಂತೂ ಕಾಮ ದಹನವಾಯಿತು. ಏಳು ವರುಷಗಳ ಹೋರಾಟ, ಗೋಳಾಟ ಸುತ್ತಿ, ಸವೆಸಿದ ಮೆಟ್ಟುಗಳೆಷ್ಟೋ ಹತ್ತಿ ಇಳಿದ ಮೆಟ್ಟಿಲುಗಳೆಷ್ಟೋ ಕರುಣೆ ಬದುಕಿದೆ ಇನ್ನೂ ಕಪ್ಪು ಪಟ್ಟಿಯ ಹಿಂದಿರುವ ಕಣ್ಣುಗಳಲಿ                   ಅಂತೂ ಕಾಮ ದಹನವಾಯಿತು. ಬಾಯ ಪಸೆ ಇಂಗುವವರೆಗೂ ಎದೆಯ ಗೂಡ ಗಾಳಿ ಇರುವವರೆಗೂ ನ್ಯಾಯಕ್ಕಾಗಿ ಅಂಗಲಾಚಬೇಕು ದಶಕಗಳವರೆಗೆ ಕಾಯಬೇಕು ಅಂತೂ ಕಾಮ ದಹನವಾಯಿತು ತಮ್ಮ ತಾವು ದಹಿಸಿಕೊಳ್ಳಬೇಕು ಸೀತೆಯರು ವನವಾಸ ಪಡಬೇಕು ದ್ರೌಪದಿಯರು ಸಾಬೀತು ಪಡಿಸಲು ಅತ್ಯಾಚಾರಗಳನ್ನು ದೇಹದ ಮೇಲಾದ ಹಲ್ಲಿನ ರುಜುಗಳ ಕಾಪಿಟ್ಟುಕೊಳ್ಳಬೇಕು ಸಾಕ್ಷಿಗಾಗಿ ಅಂತೂ ಇಂತೂ ಕಾಮ ದಹನವಾಯಿತು *******                    

ಕಾವ್ಯಯಾನ Read Post »

ಇತರೆ

ದ.ರಾ.ಬೇಂದ್ರೆ ಒಂದು ಓದು

ಹೃದಯ ತ0ತಿ ಮೀಟಿದ ವರಕವಿ ವೀಣಾ ರಮೇಶ್ ಕನ್ನಡದ ಕಾವ್ಯಗಳ ಮೇಲೆ ಧಾರವಾಡದ ಪೇಡೆಯ ಸಿಹಿ ಉಣಬಡಿಸಿದ ಕವಿಗ್ಗಜ. ಮೇಲೆ ಕಾವ್ಯ ರಸಗಳ ಪ್ರೀತಿ ಪ್ರೇಮದ ಭಾಷೆಗೆ ಹೊಸತು ವ್ಯಾಖ್ಯಾನ ಕೊಟ್ಟ ಮುದ್ದು ಕವಿ. ರಸಕಾವ್ಯಗಳ ಮೇಲೆ ಪಾತಾರ ಗಿತ್ತಿಯ ಬಣ್ಣ ತು0ಬಿ, ಚೆಲುವು ಬೆರಸಿ ಅ0ದ ಚೆ0ದದ ಪುಕ್ಖಗಳನಿಟ್ಟು ಮನಸುಗಳ ಮರೆಯಲಿ ಕುಣಿದು ಹಾರುವ ಪದಗಳ ಕಟ್ಟಿದ ಬೇ0ದ್ರೆ ಸಾಹಿತ್ಯ. ಮೀಟಿದ ನಾಲ್ಕು ತ0ತಿಗಳಲ್ಲಿ ಹೊಮ್ಮಿದ ನಾದಲೀಲೆ ಕನ್ನಡದ ಶಿಖಿರದ ಮೇಲೆ ಪ್ರತಿಧ್ವನಿಸಿದ ನಮ್ಮ ಅಜ್ಜ ಬೇ0ದ್ರೆ. ಕನ್ನಡದ ಭಾಷೆಯಲ್ಲಿ ಜವಾರಿ ಭಾಷೆ ಆಗಿರುವ ಧಾರವಾಡ ಕನ್ನಡವನ್ನು ಸೂಕ್ಷ್ಮವಾಗಿ ಸೃಜನಾತ್ಮಕವಾಗಿ ಬಳಸಿಕೊ0ಡವರು ಬೇ0ದ್ರೆ ಯವರು ತನ್ನ ಕಾವ್ಯದ ಕ್ರಾ0ತಿಕಾರಿ ಸಾಲುಗಳಿ0ದ ಜೈಲು ಸೇರಿದ ಕವಿ ದ.ರಾ.ಬೇ0ದ್ರೆ. ಸ್ವಾತ0ತ್ರ್ಯ ಸ0ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಬೇ0ದ್ರೆ ನರಬಲಿ ಕವಿತೆಯಿ0ದ ಅದನ್ನು ತಿಳಿದು ಅರ್ಥ ಮಾಡಿಕೊ0ಡ ಬ್ರಿಟಿಷರು ಅಧ್ಯಾಪಕ ವೃತ್ತಿಯಿ0ದ ವಜಾ ಗೊಳಿಸಿದರು ಅವರ ಮಾತ್ರ ಭಾಷೆ ಮರಾಠಿ, ಆದರೆ ಅವರಿಗೆ ಒಲಿದು ಬ0ದದ್ದು ಕನ್ನಡ ಭಾಷೆ, ಕನ್ನಡಕ್ಕೆ ಜ್ಞಾನಪೀಠ ತ0ದುಕೊಟ್ಟರು. ಬೇ0ದ್ರೆಯವರ ಮೊನಚಾದ ಸಾಹಿತ್ಯದಿ0ದ ಸೆರೆವಾಸ ಅನುಭವಿಸಿದರು. ಜೈಲು ಸೇರಿದ ಬೇ0ದ್ರೆ ಆದರೆ ಅವರ ಕಾವ್ಯ ಸ್ಪೂತರ್ಿಗೆ ಧಕ್ಕೆ ಯಾಗಲಿಲ್ಲ. ಅವರ ಸಾಹಿತ್ಯ ಪ್ರೇಮಕ್ಕೆ ಕೊರತೆಯಾಗಲಿಲ್ಲ. ಬದುಕಿನ ಬಗ್ಗೆ ಅತ್ಯ0ತ ಪರಿಣಾಮಕಾರಿ ಸಾಹಿತ್ಯ ಬರೆದ ಧೀಮ0ತ ಬೇ0ದ್ರೆ. ಉತ್ಸಾಹದ ಚಿಲುಮೆ. ನೊ0ದ ಜೀವಕ್ಕೆ ಸಾ0ತ್ವಾನ ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು. ಇದು ಅವರ ಬದುಕಿನ ಕಾವ್ಯ ಪ್ರೀತಿ. ಧಾರವಾಡದ ಸಾಧನಕೇರಿಯಲ್ಲಿ ಜನನ. ವೈಧಿಕ ಕುಟು0ಬದಲ್ಲಿ ಜನಿಸಿದ ಬೇ0ದ್ರೆ ಕನ್ನಡವನ್ನು ಅಪ್ಪಿಕೊ0ಡರು. ಕನ್ನಡದ ಒಡನಾಟ, ಬದುಕಿಗೆ ಅ0ಟದ ಬಡತನ ಅವರ ಕಾವ್ಯಕ್ಕೆ ಮೂಲಸೆಲೆಯಾಗಿ ಹೋಯಿತು. ಅವರ ಬದುಕಲ್ಲಿ ನಡೆದ ಘಟನೆ. ನಿಜಕ್ಕೂ ರೋಚಕ, ಬಾಲ್ಯದಲ್ಲೇ ಕವಿತೆಗಳನ್ನು ಬರೆಯುತ್ತಿದ್ದರು ಬೇ0ದ್ರೆ. ಅವರು ರಚಿಸಿದ ಒ0ದು ಕವನ ಪುಣೆಯಲ್ಲಿ ಬಿ.ಎ. ಮಾಡುತ್ತಿದ್ದಾಗ, ಪಠ್ಯದಲ್ಲಿ ಬ0ತಿತ್ತು. ಅದನ್ನು ಸ್ವತಃ ಬೇ0ದ್ರೆಯವರೆ ಬರೆದದ್ದು ಎ0ದು ಕನ್ನಡ ಪಾಠ ಮಾಡುತ್ತಿದ್ದ ಅಧ್ಯಾಪಕರಿಗೆ ತಿಳಿದಿಲ್ಲ. ಕಾಲೇಜು ಮುಗಿಯುವ ವೇಳೆಗೆ ಸ್ವತಃ ಬೇ0ದ್ರೆಯವರೇ ಬರೆದದ್ದು ಎ0ದು ಕನ್ನಡ ಪಾಠ ಮಾಡುತ್ತಿದ್ದ ಅಧ್ಯಾಪಕರಿಗೆ ತಿಳಿದಿಲ್ಲ. ಕಾಲೇಜು ಮುಗಿಯುವ ವೇಳೆಗೆ ಸ್ವತಃ ಬೇ0ದ್ರೆಯವರೇ ತಿಳಿಸಿದರ0ತೆ, ಮೇರು ಕವಿ ಬೇ0ದ್ರೆ. ರಸವೇ ಜನನ ವಿರಸವೇ ಮರಣ ಸಮರಸವೇ ಜೀವನ ಬದುಕಿನ ನೈಜ ಪ0ಕ್ತಿಯ ಸಾಲುಗಳು ಕಾವ್ಯರೂಪದಲ್ಲಿ ಚಲ್ಲಿದರು ಬೇ0ದ್ರೆ. ಮಹಾರಾಷ್ಟ್ರ ಸೊಲ್ಲಾಪುರದಲ್ಲಿ ಅಧ್ಯಾಪಕರಾಗಿ ಬೇ0ದ್ರೆ ಕನ್ನಡದಲ್ಲೇ ಕಾವ್ಯ ರಚಿಸಿದರು. ಅ0ಬಿಕಾತನಯದತ್ತ ಎನ್ನುವ ಕಾವ್ಯನಾಮದಿ0ದ ಕನ್ನಡ ವರ ಕವಿ ಎನಿಸಿಕೊ0ಡರು. ಬದುಕಿನುದ್ದಕ್ಕು ನೋವುಗಳನ್ನು ಅನುಭವಿಸಿದರು. ಬೇ0ದ್ರೆ ಅನುಭವಕ್ಕೆ ಬ0ದ ಪ್ರತಿ ಕ್ಷಣಗಳಿಗೂ ಅಕ್ಷರ ರೂಪ ತ0ದುಕೊಟ್ಟರು. ಕೈಯಲ್ಲಿದ್ದ ಹೈಸ್ಕೂಲ್ ಕೆಲಸವು ಹೋಯಿತು ಕೈಯಲ್ಲಿ ಬಿಡಿಗಾಸು ಇರಲಿಲ್ಲ. ಹುಟ್ಟಿದ ನಾಲ್ಕು ಮಕ್ಕಳು ಒಟ್ಟೊಟ್ಟಿಗೆ ಹಾಸಿಗೆ ಹಿಡಿದಾಗ ಚಿಕಿತ್ಸೆ ಕೊಡಲಾಗಲಿಲ್ಲ. ಅದರಲ್ಲಿ ಒ0ದು ಮಗು ಸತ್ತು ಹೋಯಿತು. ಆ ಕ್ಷಣ ಪತ್ನಿಯ ಕಣ್ಣೀರು ಕ0ಡು ಬೇ0ದ್ರೆ, ಮಾತಲ್ಲಿ ಹೇಳಲಾಗದನ್ನು ಕವಿತೆಯ ಮೂಲಕ ತಿಳಿಸಿದರು. ನೀ ಹಿ0ಗೆ ನೋಡಬೇಡ ನನ್ನ ನೀ ಹಿ0ಗೆ ನೋಡಿದರೆ ನನ್ನ ತಿರುಗಿ ನಾ ಹೆ0ಗ ನೀಡಲಿ ನಿನ್ನ ಇದು ಅವರ ಕಣ್ಣೀರಲ್ಲಿ ಉಕ್ಕಿದ ಹಾಡು.           ಬೇ0ದ್ರೆ ಕಾವ್ಯಶಕ್ತಿ ಅ0ತದ್ದು ಎಷ್ಟು ಕಷ್ಟ ಬ0ದರೂ ಎ0ತ ಪರಿಸ್ಥಿತಿ ಎದುರಾದರೂ ದೃತಿಗೆಡಲಿಲ್ಲ ಅಳುಕಲಿಲ್ಲ ಅವರ ಪ್ರತಿ ನೋವಿಗೂ        ಅವರ ಸಾಹಿತ್ಯ ಮದ್ದಾಗಿತ್ತು. ಅವರ ಕವನಗಳೇ ಎಲ್ಲದಕ್ಕೂ ಸಮಾಧಾನ ನೀಡಿತ್ತು. ಅವರ ಕವನ ಓದಿದ ಒಬ್ಬರು ಬೇ0ದ್ರೆಗೆ ಹೇಳಿದರ0ತೆ ನಾನು ಬೇ0ದ್ರೆ ಆಗಬೇಕು ಅ0ತ ಅದಕ್ಕೆ ಬೇ0ದ್ರೆ ಹೇಳದರ0ತೆ ಬೇ0ದ್ರೆ ಯಾರಲ್ಲೂ ಹೇಳಿಕೊ0ಡಿಲ್ಲ, ಯಾರ ಸಹಾಯವೂ ಕೇಳಿಲ್ಲ. ವರಕವಿ ಎನಿಸಿಕೊ0ಡತು ಇಳಿದು ಬಾ ಬೇ0ದ್ರೆ ಇಳಿದು ಬಾ…. ಕನ್ನಡದ ಕಾವ್ಯಗೀತೆಗಳಲ್ಲಿ ಹರಿದು…. ಬಾ…. ಸಾಹಿತ್ಯ ಶಿಬಿರದ ನೆತ್ತಿಯಿ0ದ ಇಳಿದು…ಬಾ….ಬೇ0ದ್ರೆ ಇಳಿದು ಬಾ…ವರಕವಿಗಿ0ದು ಹೃದಯದಾಳದಲ್ಲೊ0ದು ನಮನ.    **************

ದ.ರಾ.ಬೇಂದ್ರೆ ಒಂದು ಓದು Read Post »

ಅನುವಾದ

ಅನುವಾದ ಸಂಗಾತಿ

ಪಾಪ ಮೂಲ:ಫಾರೂಫ್ ಫರಾಕ್ಜಾದ್ (ಇರಾನಿ ಕವಿಯಿತ್ರಿ) ಕನ್ನಡಕ್ಕೆ: ಕಮಲಾಕರಕಡವೆ ಸುಖಭರಿತ ಪಾಪವೊಂದೆಸಗಿದೆ ನಾನುಉರಿವ ಬೆಚ್ಚಗಿನ ಆಲಿಂಗನದಲ್ಲಿಪಾಪವೆಸಗಿದೆ ನಾನು ಬಿಸಿ ಕಬ್ಬಿಣದಂತಬಾಹುಗಳಿಂದ ಸುತ್ತುವರಿದಿದ್ದಾಗ. ಆ ಕತ್ತಲ, ಶಾಂತ ಏಕಾಂತದಲ್ಲಿನಾನವನ ಗುಟ್ಟಬಚ್ಚಿಟ್ಟ ಕಣ್ಣುಗಳೊಳಗೆ ಇಣುಕಿದೆ.ಅವನ ಅಗತ್ಯ-ಭರಿತ ಕಂಗಳ ಬೇಡಿಕೆಗೆ ಪ್ರತಿಯಾಗಿನನ್ನ ಚಂಚಲ ಹೃದಯ ಕಂಪಿಸಿತು. ಆ ಕತ್ತಲ, ಶಾಂತ ಏಕಾಂತದಲ್ಲಿಕುಳಿತಿದ್ದೆ ನಾನು ಅವನ ಪಕ್ಕ ಕೆದರಿದ ಕೂದಲಲ್ಲಿಅವನ ತುಟಿಗಳು ಸುರಿದವು ಕಾಮನೆಗಳ ನನ್ನ ತುಟಿಗಳ ಮೇಲೆನನ್ನ ಹೃದಯದ ಹುಚ್ಚು ಸಂಕಟದಿಂದ ಬಿಡುಗಡೆ ಪಡೆದೆ ನಾನು. ಅವನ ಕಿವಿಯೊಳಗುಸುರಿದೆ ಪ್ರೇಮ ಕತೆಯಬಯಸುವೆ ನಿನ್ನ, ಓ ನನ್ನ ಬಾಳ ಸಂಗಾತಿಯೇಬಯಸುತ್ತೇನೆ ನಿನ್ನ ಜೀವ ತುಂಬುವ ಆಲಿಂಗನವಓ ನನ್ನ ಹುಚ್ಚು ಪ್ರೇಮಿಯೇ. ಬಯಕೆ ಅವನ ಕಣ್ಣಲ್ಲಿ ಕಿಡಿಯೊಂದ ಹೊತ್ತಿಸಿತು;ಬಟ್ಟಲಲಿ ಮಧ್ಯ ನರ್ತಿಸಲು ತೊಡಗಿತು.ಕೋಮಲ ಹಾಸಿಗೆಯಲ್ಲಿ ನನ್ನ ದೇಹಅವನೆದೆಯ ಮೇಲೆ ಉನ್ಮಾದದಲ್ಲಿ ಕಂಪಿಸಿತು. ಸುಖಭರಿತ ಪಾಪವೊಂದೆಸಗಿದೆ ನಾನುನಡುಗುವ, ಸ್ತಬ್ಧ ಆಕಾರದ ಪಕ್ಕದಲ್ಲಿಓ ದೇವರೇ, ಯಾರಿಗೆ ಗೊತ್ತು ನಾನೇನು ಮಾಡಿದೆಆ ಕತ್ತಲ ಶಾಂತ ಏಕಾಂತದಲ್ಲಿ. ****** “The Sin” I sinned a sin full of pleasure,In an embrace which was warm and fiery.I sinned surrounded by armsthat were hot and avenging and iron. In that dark and silent seclusionI looked into his secret-full eyes.my heart impatiently shook in my breastIn response to the request of his needful eyes. In that dark and silent seclusion,I sat dishevelled at his side.his lips poured passion on my lips,I escaped from the sorrow of my crazed heart. I whispered in his ear the tale of love:I want you, o life of mine,I want you, O life-giving embrace,O crazed lover of mine, you. desire sparked a flame in his eyes;the red wine danced in the cup.In the soft bed, my bodydrunkenly quivered on his chest. I sinned a sin full of pleasure,next to a shaking, stupefied form.o God, who knows what I didIn that dark and quiet seclusion. *******

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಯದಿನಕ್ಕೊಂದು ಕವಿತೆ ರೇಖಾ ವಿ.ಕಂಪ್ಲಿ ಕವಿತೆ ನಿನಗೊಂದು ಖಲಾಮು ಇದ್ದರೆ ಸಾಕೆ ಇಲ್ಲ ಕವಿ ಬೇಕೇ? ಬರಿ ಕವಿ ಇದ್ದರೆ ಸಾಕೆ ಇಲ್ಲ ಭಾವನೆ ಬೇಕೇ? ಭಾವನೆಯೊಂದಿದ್ದರೆ ಸಾಕೆ ಇಲ್ಲ ಭಾಷೆ ಬೇಕೇ? ಭಾಷೆ ಒಂದು ಇದ್ದರೆ ಸಾಕೆ ಬರವಣಿಗೆ ಬೇಕೇ? ಬರಿ ಬರವಣಿಗೆ ನಿನಗೆ ಸಾಕೆ ಇಲ್ಲ ಓದುಗನೊಬ್ಬ ಬೇಕೇ? ಓದುಗನೊಬ್ಬ ಇದ್ದರೆ ಸಾಕೆ? ಕವಿತೆ ಕೊನೆಯಲಿ ಹಾಡಿ ಹೇಳಿತು ಮೆಲ್ಲಗೆ ಎಲ್ಲವು ಬೇಕು ಎನಗೆ..

ಕಾವ್ಯಯಾನ Read Post »

You cannot copy content of this page

Scroll to Top