ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಾಡು ನೀ ಪ್ರಯತ್ನ

Photo of Pink and Blue Abstract Painting

ಪ್ಯಾರಿಸುತ

ಯತ್ನ,ಯತ್ನ ಮಾಡು,ಮಾಡು ನಿನ್ನ ಪ್ರಯತ್ನ
ಆಗಲೇ ನನಸಾಗಿಸುವುದು ಆ ನಿನ್ನ ಸಪ್ನ
ರಾತ್ರಿ ಕಂಡ ಕನಸುಗಳೆಲ್ಲ ಕನಸುಗಳೇ ಅಲ್ಲ
ಮಲಗಲಾವುದು ಬಿಡೋದಿಲ್ಲವಲ್ಲ
ಅದುವೇ ನಿನ್ನ ಸಪ್ನ, ಮಾಡು ನೀ ಪ್ರಯತ್ನ

ಒಳ್ಳೆ ಬದುಕು ಕಾಣಲು ವಿದ್ಯೆಯೊಂದು ಸಾಲದು
ಒಂದೇ ಗುರಿಯ ನಿಗದಿಸಿ ಯತ್ನ ಮಾಡು ಸಿಗುವುದು
ಕಾಲ ತುಂಬಾ ಓಡುವದು ನೀನು ಯಾಕೆ ನಿಲ್ಲುವದು
ಗುರಿಯ ಕಡೆ ಓಡುತಿರೇ ಸಾಧನಾಶಿಖರವೇ ನಿನ್ನದು

ಬಡವ ಬಲ್ಲವ ಎಲ್ಲ ಒಂದೇ ಗುರಿಯನ್ನು ಸಾಧಿಸಲು
ಕುಂಟು ನೆಪವು ಹೇಳಿದರೆ ಆಗದು ಉಚ್ಛವಾಗಿ ಬದುಕಲು
ಪಡೆದು ಬಂದ ಜನುಮ ಗುರುತಾಗಿಯೇ ಉಳಿಸಲು
ಹಗಲಿರುಳು ಯತ್ನಿಸು ಜಯದ ಡಮರುಗ ಬಡಿಯಲು

ಗೆದ್ದು ಬಂದ ಸಾಧಕರೆಲ್ಲ ಅದೃಷ್ಟ ಮಾಡಿ ಗೆದ್ದವರಲ್ಲ
ಇಟ್ಟ ಗುರಿಯನು ಆಗದೆಂದು ಬಿಟ್ಟವರಲ್ಲ
ಸುಲಭವಾಗಿ ಗೆದ್ದರೆ ಸಾಧನೆಯಾಗೋದಿಲ್ಲ
ಗೌರವಯುತ ಸನ್ಮಾನ ಬಿಟ್ಟಿಯಾಗಿ ಸಿಗೋದಿಲ್ಲ

*******************************

About The Author

Leave a Reply

You cannot copy content of this page

Scroll to Top