ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Image result for images oflove paintings

ಸುಜಾತಾ ರವೀಶ್

ಆಸೆಯ ತೇರನೇರು ಮರೆತು ಹಳತನು ಹೊಸತು ನಿರೀಕ್ಷೆಯಲಿ ಗೆಳತಿ 
ಭಾಷೆಯ ರಥದಲ್ಲಿ ಕಲೆತು ಬಾಳಪಥ ನಿರತ ಪರೀಕ್ಷೆಯಲ್ಲಿ ಗೆಳತಿ 

ಒಲವು ಬಂದಿರಲು ದಿನವು ಹೃದಯದಿ ನಿನ್ನದೇ ಆರಾಧನೆ ಏತಕೆ? 
ಬಲವು ತಂದಿರಲು ಮನದಿ ಉಪಾಸನೆ ಪಾವನ ಪ್ರತೀಕ್ಷೆಯಲಿ ಗೆಳತಿ

ಸಂಗಾತಿ ಬರೆದಿರಲು ಮುನ್ನುಡಿ ಬದುಕಿನ ಪ್ರಣಯ ಕಾದಂಬರಿಯಲಿ 
ಸಂಪ್ರೀತಿ ಮೆರೆದಿರಲು ಕನ್ನಡಿ ಬಾಳಿನ ಬರಹ ಸಮೀಕ್ಷೆಯಲಿ ಗೆಳತಿ  

ನಿನ್ನಯ ಆಗಮನದಿ ಮನಸಿದು ಮುಗಿಲನು ನೋಡಿದ ನವಿಲಿನಂತೆ
ನನ್ನ ಆಂತರ್ಯದ ಕನಸಿದು ನಲಿವಿನ ಮೋಡಿಯ ಅಪೇಕ್ಷೆಯಲಿ ಗೆಳತಿ

ಬೆಸುಗೆ ತಂತಿಗಳು ಜೋಡಿಸಿ ಭರವಸೆ ನೇದಿಹ ಅನುಬಂಧ ವಿದು 
ಒಸಗೆ ವಿನಂತಿಗಳು ಸುಜಿಯ ವಿಶ್ವಾಸ  ಕೋರುವ ಅಕಾಂಕ್ಷೆಯಲಿ ಗೆಳತಿ

*******

About The Author

Leave a Reply

You cannot copy content of this page

Scroll to Top