ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಶಿಕ್ಷಣ

ಮೌಲ್ಯಯುತ ಜೀವನಕ್ಕೆ ಶಿಸ್ತು ರಮೇಶ ಇಟಗೋಣಿ ಮೌಲ್ಯಯುತ ಜೀವನಕ್ಕೆ ಶಿಸ್ತು : ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು. ವಿದ್ಯೆಯನ್ನು ಅರ್ಥೈಸಿಕೊಂಡು ಕಲಿಯುವ, ಗ್ರಹಿಸುವ ಸಾಮರ್ಥ್ಯ ಸಂಪಾದಿಸುವವನೇ ವಿದ್ಯಾರ್ಥಿ. ಕಲಿಕಾರ್ಥಿಗೆ ಏಕಲವ್ಯನಂತಹ ಉತ್ಕಟವಾದ ಕಲಿಕೆಯ ಹಸಿವು ಇದ್ದಲ್ಲಿ ವಿದ್ಯೆಯನ್ನು ಒಲಿಸಿಕೊಳ್ಳುವುದು ಕಷ್ಟ ಆಗಲಾರದು. ಮಕ್ಕಳಾಗಿ ಕಲಿಯುವುದು ಎಷ್ಟು ಚಂದವೋ ಅಷ್ಟೇ ಗುರುವಾಗಿ ಕಲಿಸೋದು ಅಷ್ಟೇ ಅಂದವಾಗಿದೆ. ಸಾವಿರಾರೂ ಕಲ್ಲುಗಳನ್ನು ಸುಂದರವಾದ ಮೂರ್ತಿ ಮಾಡುವ ಬ್ರಹ್ಮ ಶಿಕ್ಷಕ. ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಆದರೆ ಟೀಚರ್ ಲೈಫ್ ಇಸ್ ಡೈಮಂಡ್ ಲೈಫ್. ಮಕ್ಕಳಲ್ಲಿ ಶಿಸ್ತನ್ನು ರೂಢಿಸುವ ಕಾರ್ಯ ಮನೆಯಿಂದಲೇ ಆರಂಭವಾಗಬೇಕು “ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು” ಎಂಬಂತೆ ಶಿಸ್ತಿನ ಪಾಲನೆ ಕೆವಲ ವಿದ್ಯಾರ್ಥಿ ಜೀವನದ ಭಾಗವಲ್ಲ ಈಡೀ ಜೀವನದುದ್ದಕ್ಕೂ ಶಿಸ್ತು ಒಂದು ಅವಿಭಾಜ್ಯ ಅಂಗ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಮಕ್ಕಳಿಗೆ ಶಿಸ್ತನ್ನು ಕಾದುಕೊಳ್ಳಲು ತಿಳಿ ಹೇಳುವುದು ಪಾಲಕರ ಕರ್ತವ್ಯವಾಗಿದೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಅಳವಡಿಸಿಕೊಳ್ಳುವುದೇ ಶಿಸ್ತು, ಶಿಕ್ಷೆಯೇ ಶಿಸ್ತಲ್ಲ ಶಿಕ್ಷೆಯಿಂದ ಮಾತ್ರ ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ಯಾವ ವಿದ್ಯಾರ್ಥಿ ಶಿಸ್ತು ಅಳವಡಿಸಿಕೊಳ್ಳುತ್ತಾನೆಯೋ, ಯಾರು ಶಿಸ್ತಿನ ಶಿಪಾಯಿಗಳಾಗಿ ಓದುತ್ತಾರೆಯೋ ಅಂತಹ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ ಅಂತವರು ಮಾತ್ರ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ. ಶಿಕ್ಷಣ ಎಂದರೆ ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವುದಲ್ಲ ನಿಮ್ಮಲ್ಲಿ ವ್ಯಕ್ತಿತ್ವವನ್ನು, ಮನುಷ್ಯತ್ವವನ್ನು, ಸಂಸ್ಕಾರವನ್ನು, ಉತ್ತಮ ಗುಣಗಳನ್ನು ಪಡೆಯುವುದೇ ಶಿಕ್ಷಣವಾಗಿದೆ. ವಿದ್ಯಾರ್ಥಿ ತನ್ನ ಜೀವನದಲ್ಲಿ ಗುರಿ ಸಾಧಿಸಬೇಕಾದರೆ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ಅದರಲ್ಲೂ ಶಿಸ್ತು ಮತ್ತು ಸಮಯಪ್ರಜ್ಞೆ, ಹಿರಿಯರನ್ನು ಗೌರವಿಸುವ ಗುಣ, ಸಂಯಮದ ನಡವಳಿಕೆಗಳು ಹೆಚ್ಚಾಗಬೇಕು ಇವುಗಳನ್ನು ಯಾರು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೋ ಅಂತವರು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ ಇಲ್ಲವಾದರೆ “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬಂತೆ ಜೀವನದುದ್ದಕ್ಕೂ ಗೊಂದಲದಲ್ಲಿ ಉಳಿಯುತ್ತಾರೆ. “ಒಡೆದ ಮುತ್ತು ಕಳೆದ ಹೊತ್ತು” ಯಾವತ್ತೂ ತಿರುಗಿ ಬಾರದು ಎಂಬ ಮಾತಿನಂತೆ ಸಿಕ್ಕಂತ ಸಮಯವನ್ನು ಬಳಸಿಕೊಂಡು ಅವಕಾಶಗಳನ್ನು ಸೃಷ್ಟಿಸುತ್ತಾ ಹೋಗಬೇಕು. ಸಮಯ ಎಲ್ಲರಿಗೂ ಒಂದೇ ಅದನ್ನು ಅರಿತು ಹೆಜ್ಜೆ ಇಡುವುದು ಸಮಂಜಸ. ವಿದ್ಯಾರ್ಥಿಗಳಿಗೆ ಒಂದು ವರ್ಷದ ಮಹತ್ವ ತಿಳಿಯುವುದು ಪರೀಕ್ಷೆಯಲ್ಲಿ ಉತ್ತಿರ್ಣರಾದಾಗ ಮಾತ್ರ, ಸಿಕ್ಕ ಅವಕಾಶವನ್ನು ಆಯಾ ಸಮಯದಲ್ಲಿ ಸರಿಯಾಗಿ ಬೆಳೆಸಿಕೊಳ್ಳುತ್ತಾ ಶಿಸ್ತಿನ ಜೊತೆಗೆ ಸಾಧನೆಯು ನಿಮ್ಮನ್ನು ಬೆನ್ನಟ್ಟಿ ಬರುತ್ತದೆ. ಶಿಸ್ತು ಎಂದರೆ ಕೆಲವರ ಮನಸ್ಸಿಗೆ ನಿಯಂತ್ರಣ ಹಾಕಿಕೊಳ್ಳುತ್ತಾರೆ ಬದುಕಿನ ಇತಿಮಿತಿಗಳನ್ನು, ಎಲ್ಲೆಯನ್ನು ಹಾಕಿಕೊಳ್ಳುತ್ತಾರೆ ಸಂತೋಷದ ಎಲ್ಲ ವಿಚಾರಗಳಿಂದ ದೂರ ಇರುತ್ತಾರೆ ಇದು ಶಿಸ್ತು ಅಲ್ಲ. ಬದುಕಿನೊಂದಿಗೆ ಶಿಸ್ತು ರೂಢಿಸಿಕೊಳ್ಳುವುದೆಂದರೆ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಏಕಾಗ್ರತೆಯಿಂದ ತಮ್ಮೊಳಗಿನ ಶಕ್ತಿಯನ್ನು ಹರಿಬಿಡುವುದರ ಜೊತೆಗೆ ಇತರರ ಮಾತುಗಳಿಗೆ ಒಳಗಾಗದೇ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದೆ ಸರಿಯಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದೇ ಶಿಸ್ತು. ಎಲ್ಲ ವಿದ್ಯಾರ್ಥಿಗಳ ಜೀವನದಲ್ಲಿ ಗುರುವಿನ ಪಾತ್ರ ಅಮೂಲ್ಯವಾದದ್ದು ಶಿಕ್ಷಕರು ಕೂಡಾ ಒಬ್ಬ ನಿರಂತರ ವಿದ್ಯಾರ್ಥಿಯಾಗಿ ಬಹಳ ವಿಚಾರಗಳನ್ನು ವಿದ್ಯಾರ್ಥಿಗಳಿಂದ ಕಲಿತುಕೊಳ್ಳುತ್ತಾರೆ. ತಮ್ಮಲ್ಲಿರುವ ಎಲ್ಲ ಒಳ್ಳೆಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬಿತ್ತರಿಸಿ ಮೌಲ್ಯಯುತ ಮೂರ್ತಿಯನ್ನಾಗಿ ರೂಪಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರೀತಿಸಿ, ಬೋಧಿಸಿ ಒಳ್ಳೆಯ ಮೌಲ್ಯ ತುಂಬಿ ನಿಸ್ವಾರ್ಥ ಸೇವೆ ಸಲ್ಲಿಸುವಲ್ಲಿ ಶಿಕ್ಷಕರದು ಒಂದು ಕೈ ಮೇಲೆ ಇರುತ್ತದೆ. “ಹರ ಮುನಿದರೂ ಗುರು ಮುನಿಯಲಾರ” ಎಂಬ ಮಾತಿನಂತೆ ಅಂತಹ ಪ್ರತಿಯೊಬ್ಬ ಗುರುವಿಗೂ ನನ್ನ ಅನಂತಕೋಟಿ ನಮನಗಳು. *****************************

ಶಿಕ್ಷಣ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ದೌರ್ಬಲ್ಯ-ಸಾಮರ್ಥ್ಯ -2 ಅವ್ಯಕ್ತ ನನ್ನ ಹಿಂದಿನ ಕಥೆಯಲ್ಲಿ ಹೇಳಿದ ರೀತಿ ನಮ್ಮ ದೃಷ್ಟಿಕೋನ ದಲ್ಲಿ ಬದಲಾವಣೆಯಾದಂತೆ ನಮ್ಮ ದೌರ್ಬಲ್ಯಗಳು ನಮ್ಮ ಸಾಮರ್ಥ್ಯಗಳಾಗಿ ಬದಲಾಗುತ್ತವೆ….. ಇದಕ್ಕೆ ಅಂಟಿಕೊಂಡಂತೆ ಇನ್ನೊಂದು ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿದುಕೊಳ್ಳಲು ಪ್ರಯತ್ನಿಸೋಣ… ಸಾಮಾನ್ಯವಾಗಿ ಮಕ್ಕಳು ಅಥವಾ ಕೆಲವು ದೊಡ್ಡವರು ತಮಗೆಲ್ಲ ತಿಳಿದಿದೆ ಎಂದು ಪ್ರತಿಯೊಂದು ಘಟನೆಯನ್ನು ಪ್ರತಿಯೊಬ್ಬರನ್ನು ಸರಿ-ತಪ್ಪುಗಳಲ್ಲಿ, ಒಳ್ಳೆಯದು-ಕೆಟ್ಟದ್ದು ಗಳಲ್ಲಿ ತೂಗಿ ತಮ್ಮ ಹಳೆಯ ಅನುಭವಗಳ ಮೇರೆಗೆ ಅವರದೇ ಆದ ಒಂದು ದೃಷ್ಟಿಕೋನವನ್ನು ಮಾಡಿಕೊಂಡು ಬಿಡುತ್ತಾರೆ.. ಅವರಿಗೆ ಅದೇ ಸರಿ…ಈ ನಿಟ್ಟಿನಲ್ಲಿ ನನ್ನ ಮಕ್ಕಳಲ್ಲಿಯೂ ಕೂಡ ಇದು ಕಂಡುಬಂತು… ಆ ದಿನ ನಾನು ಹೇಳಿ ಕೊಟ್ಟಿದ್ದೇನೋ ಹೌದು ನಮ್ಮ ಗುಣಗಳನ್ನು ನಾವು ತಿಳಿದುಕೊಂಡರೆ, ಅದು ನಮ್ಮ ಸಾಮರ್ಥ್ಯವಾಗಿ ಬಿಡುತ್ತವೆ…. ಆದರೆ ಎಲ್ಲೋ ಇದು ಅರ್ಧ ಸತ್ಯವಾಗಿತ್ತು. ಅದನ್ನು ಸಮಾಜದ ದೃಷ್ಟಿಯಿಂದಲೂ ಹೇಳಿಕೊಡಬೇಕಾದ ಅಗತ್ಯತೆ ಇತ್ತು… ಇದಕ್ಕೆ ಪೂರಕವಾಗಿ ಒಂದು ಹುಡುಗಿ ನನ್ನ ಬಳಿಗೆ ಬಂತು ‘ಮಿಸ್ ಮಿಸ್ಆವತ್ ಹೇಳಿದ್ದೇನೋ ನಿಜ! ನಾವು ಹೇಗಿದ್ದೇವೆ ಅದನ್ನು ಒಪ್ಪಿಕೊಂಡರೆ ನಮಗೆ ನೋವಾಗುವುದಿಲ್ಲ. ಆದರೂ ಏಕೆ ಸಮಾಜದಲ್ಲಿ ಕೆಲವೊಂದನ್ನು ಎತ್ತಿಹಿಡಿಯುತ್ತಾರೆ ?…’ ಅವಳ ಮಾತು ಕೇಳಿ ನನಗೆ ಅಯ್ಯೋ ಎನಿಸಿತು, ಹೌದಲ್ವಾ ಇದರಲ್ಲಿ ಸಮಾಜದ ಜವಾಬ್ದಾರಿಯನ್ನು ತಿಳಿಸಿ ಹೇಳೋಣ..  ಇವತ್ತಿನ ಕ್ರಿಯೆ ನನ್ನದು ಸ್ವಲ್ಪ ವಿಚಿತ್ರವಾಗಿತ್ತು, ಪ್ರತಿಯೊಂದು ಮಗುವಿನ ದೌರ್ಬಲ್ಯವು ನನಗೆ ಗೊತ್ತಿತ್ತು.. ಬೇಕಂತಲೇ ಅದನ್ನು ಎತ್ತಿ ಹಿಡಿದು ಹೀಯಾಳಿಸಿ ಬಿಟ್ಟೆ.. “ಏನೇ ಡುಮ್ಮಿ ಕೊಟ್ಟ ಕೆಲಸ ಮಾಡಿದ್ಯಾ, ಇಲ್ಲ ಬರೀ ತಿಳ್ಕೊಂಡೆ ಕೂತಿದ್ಯಾ”……“ಕೋಳಿ ಅಳುಬುರುಕಿ ಕೆಲಸ ಮುಗಿಸು ಆಮೇಲೆ ಕಾವೇರಿಯ ಹೊಳೆ ತುಂಬಿಸುವಂತೆ”…. “ಏ ಕುಳ್ಳ , ನೋಡಲಿಕ್ಕೆ ಮಾತ್ರ ಕುಳ್ಳ ಬರೀ ಕುಚೇಷ್ಟೆ ಪ್ರತಿಷ್ಠೆ ನಿನ್ನದು ಸುಮ್ಮನೆ ಕೂತು ನಿನ್ನ ಕೆಲಸ ಮಾಡು ಹುಂಬ”…. ಐದೇ ನಿಮಿಷದಲ್ಲಿ ಮಕ್ಕಳ ಮುಖಗಳೆಲ್ಲ ಚಪ್ಪೆಯಾಗಿ ಹೋದವು… ನಾನು ಮನಸ್ಸಿನಲ್ಲಿ ನಗಾಡಿ ಕೊಳ್ಳುತ್ತಾ….ಆ ದಿನದ ಕೊನೆ ಬರುವವರೆಗೂ ಅವರುಗಳನ್ನು ಗೊಂದಲದಲ್ಲಿಯೇ ಬಿಟ್ಟುಬಿಟ್ಟೆ…. ನನಗೆ ಗೊತ್ತು ಸುಲಭವಾಗಿ ಬಾಯಲ್ಲಿ ಹೇಳಿದ ನೀತಿ ಮಕ್ಕಳ ತಲೆಗೆ ಹತ್ತುವುದಿಲ್ಲ ಕ್ರಿಯೆಯಲ್ಲಿ ಮಾಡಿತೋರಿಸಿದರೆ ಮಾತ್ರ ಹತ್ತರಲ್ಲಿ ಐದು ಜನಕ್ಕಾದರೂ ಉಳಿದುಕೊಳ್ಳುತ್ತದೆ….ದಿನದ ಕೊನೆಯಲ್ಲಿ ಮಕ್ಕಳಲ್ಲಿ ಕೇಳಿದೆ, ಹೇಗಿತ್ತು ಇವತ್ತು ನನ್ನ ಮಾತಿನ ಶೈಲಿ ವೆರಿ ಸ್ಟ್ರಾಂಗ್ ಅಲ್ವಾ….. ಎಲ್ಲರೂ ಸಪ್ಪೆಯಾಗಿ ಸ್ವಲ್ಪ ಹೊತ್ತು ಕೂತರು ನಂತರ ಅದರಲ್ಲಿ ಒಬ್ಬಳು ‘ಮಿಸ್ ನೀವ್ ಇವತ್ತು ಹೀಗೆ ಮಾತನಾಡಬಾರದಿತ್ತು. ಯಾಕೆ ಅವಳನ್ನು ಹೀಯಾಳಿಸಿದಿರಿ, ಅವಳಿಗೆ ನೋವಾಗುವುದಿಲ್ಲ ವೇ?’ ಎಂದು ಕೇಳಿಯೇ ಬಿಟ್ಟಳು… ನನಗೂ ಬೇಕಿದ್ದದು ಅವೇ ತಾನೇ…. ನಾನು ಹೇಳಿದೆ ‘ಹೌದು ಬೇಕಂತಲೇ ಹೀಗೆ ಮಾಡಿದೆ.ಕೆಲವು ದಿನಗಳ ಕೆಳಗೆ ನಮ್ಮ ದೌರ್ಬಲ್ಯವನ್ನು ನಾವು ಸಾಮರ್ಥ್ಯ ವಾಗಿ ಹೇಗೆ ಉಳಿಯಬಹುದು ಎಂದು ತಿಳಿಸಿಕೊಟ್ಟಿದೆ, ಇವತ್ತು ಬೇರೆಯವರ ದೌರ್ಬಲ್ಯಗಳ ಕಡೆಗೆ ನಮ್ಮ ದೃಷ್ಟಿಕೋನ ಹೇಗಿರಬೇಕು ಹಾಗೂ ನಮ್ಮ ಜವಾಬ್ದಾರಿ ಏನು ಹೇಳಿ ನೋಡೋಣ??’ಎಲ್ಲರೂ ಯೋಚಿಸತೊಡಗಿದರು, ನನಗೆ ಗೊತ್ತಿತ್ತು ಅಷ್ಟು ಸುಲಭವಾಗಿ ಇವರು ಗ್ರಹಿಸಿರಲಿಕ್ಕಿಲ್ಲಾ… ಇನ್ನೊಬ್ಬರಿಗೆ ದೈಹಿಕವಾಗಿ ನಾವು ಹೊಡೆಯುವುದು ಜಿಗುಟುಗಳು ಎಷ್ಟು ಸರಿಯಲ್ಲವೋ ಹಾಗೆ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹದನ್ನು ಮಾತನಾಡುವುದು ತಪ್ಪು, ಇದರಲ್ಲಿ ಅವರ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದಾದರೆ ಎಂದಿಗೂ ಹಾಗೆ ಮಾಡಬಾರದು…’ಆತ್ಮೀಯ ಸ್ನೇಹಿತರು ಹೀಗೆ ಅಡ್ಡ ಹೆಸರು ಇಟ್ಟು ಕರೆಯಬಹುದು ಅಲ್ಲವೇ’ ಎಂದು ಇನ್ನೊಬ್ಬ ಕೇಳಿದ.. ನಮಗೆ ಆತ್ಮೀಯ ವಾದವರು ನಮ್ಮ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಮಾಜದ ಎದುರು ವರ್ತಿಸುವುದಿಲ್ಲ, ಹಾಗಾದರೆ ಮಾತ್ರ ಅವರು ನಮ್ಮ ನಿಜವಾದ ಆತ್ಮೀಯರು, ನಾವು ನಾವು ಇರುವಾಗ ಎಷ್ಟು ಸಲಿಗೆಯ ಮಾತನಾಡಿದರು, ಮುಕ್ತವಾಗಿ ತರಲೆ ಹೊಡೆದರೂ ಹತ್ತಾರು ಜನಗಳ ಎದುರು ಅವರ ಗೌರವ ಪ್ರೀತಿ ಎಷ್ಟು ಮುಖ್ಯವೋ ಅಷ್ಟೇ ಆತ್ಮೀಯರ ಗೌರವ ಪ್ರೀತಿಯನ್ನು ಕಾಪಾಡುತ್ತಾರೆ…ಇಲ್ಲವಾದರೆ ಅವರು ನಿಮ್ಮ ಪರಮಾಪ್ತರು ಅಲ್ಲವೇ ಅಲ್ಲ… ಇದು ಮಾತ್ರ ನಿಜವಾದ ಸಂಬಂಧ ವಾಗಿರುತ್ತದೆ, ನೆನಪಿನಲ್ಲಿಡಿ ಮಕ್ಕಳೇ ಎಂದೆ. ಸಮಾಜದ ಒಳಿತಿಗೆ, ಅದರ ಆರೋಗ್ಯಕರ ಬೆಳವಣಿಗೆಗೆ ಪ್ರತಿಯೊಬ್ಬನಿಗೂ ಸಾಮಾಜಿಕ ಜವಾಬ್ದಾರಿ ಇರಬೇಕು. **********************************

ಅವ್ಯಕ್ತಳ ಅಂಗಳದಿಂದ Read Post »

ಕಾವ್ಯಯಾನ

ಕಾವ್ಯಯಾನ

ಅದಿಂಬಾದೊಳು ರೇಖಾ ವಿ.ಕಂಪ್ಲಿ ಅಪಸ್ವರವು ಹಾಡುತಿದೆ ಧ್ವನಿಯ ಗೂಡಿನೊಳು ಇಂದುಮಂಡಲದಿಂ ಬೆಳಕಿಲ್ಲದ ಅಂಗಳದೊಳು ಉಪರೋಚಿತ ಮನದಿಂ ಉಪಾದಿ ಕನಸೊಳು ಋತುಮಾನದ ತಾಡನವಿಲ್ಲ ಕಾಲಮಾನದೊಳು ಎಕ್ಕತಾಳಿ ಎಡಬಿಡಂಗಿ ಕೊಡಂಗಿ ಎಡೆಸೆಳೆಯೊಳು ಒಡಕಲು ಗೆಳೆತನದ ಹಸಿಮುಸಿ ಬಂಧದೊಳು ಕಗ್ಗಾಡಿನಲಿ ಹೆದ್ದಾರಿಯ ಬಯಸುತ ಮಬ್ಬಿನೊಳು ಗವಯ ಯಾನ ಯಾವುದೆಂದು ಅರಿಯಲ್ಕೆಯೊಳು ಚಕ್ರಬಂಧದಲಿ ಅಕ್ಷರಗಳ ಸುಳಿ ಕಾಣಿಸದೊಳು ಜಡಮತಿಯು ಕವಿದ ಜಗದ ನಿಯಮದೊಳು ಟಂಕಾರವಿಹುದೆ ಬಿಲ್ಲು ಬಾಣಗಳಿಲ್ಲದೊಳು ಡಂಬಕ ದೇಹ ಅಲಂಕಾರ ಬಿನ್ನಾ ವೈಯಾರದೊಳು ತಡಕಾಡಿಹೆ ಎಲ್ಲಾ ನಶಿಸಿದ ಬಳಿಕವೂ ಅದರೊಳು ದಂಡನೀತಿ ಎಸೆದಿಹೆವು ಲೋಕಪಾಪದೊಳು ಪಕ್ಕಣದ ಬೀದಿಯಲಿ ಹುಡುಕುತ ನ್ಯಾಯದೊಳು ಬಂಜೆಪಡಿಸಿಹೆವು ಧಮ೯ ಮತಾಂಧದೊಳು…… ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮತ್ತೆ ನೀನು ಔಷಧಿಯಾಗು ಮೂಗಪ್ಪ ಗಾಳೇರ ಮತ್ತೆ ನೀನು ಔಷಧಿಯಾಗು ನನ್ನ ಬಿಟ್ಟು ಹೋದ ಮೇಲೆ ಒಳ್ಳೆಯ ದಿನಗಳು ಬರಬಹುದೆಂದಿನಿಸಿರಬಹುದು ನಿನಗೆ ಸತ್ಯಶೋಧನೆಯ ಹಾದಿಯಲ್ಲಿ ಪ್ರೀತಿಯ ಅದೆಷ್ಟೋ ಕನಸುಗಳು ಸತ್ತು ಸ್ವರ್ಗಕ್ಕೂ ಸೇರದೆ ನರಕಕ್ಕೂ ನಿಲುಕದೆ ಬೇತಾಳ ಗಳಂತೆ ನಿನ್ನ ನೆನಪಿನ ಹಿಂದೆ ಸುತ್ತ ಬಹುದೆಂಬ ಒಂದಿಷ್ಟು ಅರಿವಿರಬಾರದೆ……. ಪ್ರೀತಿಯನ್ನು ಹುಡುಕುತ್ತಾ ಹೋಗುತ್ತೇನೆ ಎಂಬುವುದು ಹುಡುಗಾಟದ ವಿಚಾರವಲ್ಲ……… ಯಾಕಾದರೂ ನೀನು ನನ್ನ ಅರ್ಧ ದಾರಿಯಲ್ಲಿ ಕೈ ಬಿಟ್ಟು ಹೋದೆನೆಂದು ಮರುಗುವ ದಿನಗಳು ಬರಲು ದೂರವಿಲ್ಲ…… ಹೃದಯದ ಒಳ ಕೋಣೆಯಲ್ಲಿ ಜಡಿದ ಸರಳುಗಳಿಗೆ ಬರೀ ನಿನ್ನ ಪ್ರೀತಿಯದ್ದೆ ಚಿಂತೆ………. ನಾನೆಂದು ತುಟಿಗಳಿಗೆ ವಿಷ ಮೆತ್ತಿಕೊಂಡು ಮಾತನಾಡಿದವನಲ್ಲ…….. ನಿನ್ನ ಮುಡಿಗೆ ನಕ್ಷತ್ರಗಳನ್ನು ಮುಡಿಸುವೆನೆಂದೇಳಿದ ಮೂರ್ಖನಲ್ಲ…..! ಒಂದಂತೂ ನಿಜ ಚಂದಿರನಿಲ್ಲದ ಅಮಾವಾಸ್ಯೆ ಕತ್ತಲಲ್ಲಿ ನನ್ನ ಪ್ರೀತಿ ನಿನಗೆ ಹೇಳುವಾಗ ಸೂರ್ಯ ಚಂದ್ರ ಅಷ್ಟೇ ಏಕೆ ನಕ್ಷತ್ರಗಳು ನಾಚಿ ರಜೆ ಯಾಕೆ ಕುಳಿತಿದ್ದ ನೆನಪುಗಳಷ್ಟೆ ನನಗೀಗಾ……. ಮರಳಿ ಬಾ ಗೆಳತಿ ಲೆಕ್ಕಕ್ಕೆ ಸಿಗದ ಕನಸುಗಳಿಗೆ ಹುಚ್ಚು ಹರೆಯದ ದಿನಗಳಿಗೆ ಮೈಚಾಚಿ ಮಲಗಿಕೊಂಡಿದ್ದ ಮೌನಕ್ಕೆ ಮತ್ತೆ ನೀನು ಔಷಧಿಯಾಗು…….. *********

ಕಾವ್ಯಯಾನ Read Post »

You cannot copy content of this page

Scroll to Top