ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಅವಳ ತನ್ಮಯತೆಗೆ ಸ್ವಲ್ಪವೂ ಭಂಗ ಬಾರದಿರಲಿ ಕಡಲು ಅಷ್ಟೊಂದು ಜೋರಾಗಿ ಮೊರೆಯದಿರಲಿ ಚರಿತ್ರೆಯಲಿ ಕಾಲು ಹೂತು ಕೂತಿದ್ದಾಳೆ ಅವಳು ವಿವಶತೆಯಲ್ಲೂ ಮುಂಗುರುಳು ನಲುಗದೆ ಇರಲಿ ಮಧುಶಾಲೆಯೇಕೆ ಹೀಗೆ ಪಾಳು ಬಿದ್ದಿದೆ ಗೆಳೆಯ ಒಡಲ ತಣಿಸುವ ಮಧುಭಾಂಡ ಬರಿದಾಗದಿರಲಿ ಅದೆಂಥ ಕ್ಷುಬ್ಧತೆಯಲ್ಲಿ ದಾರಿ ಸವೆಸುವೆ ನೀನು ಸೈರಿಸಿ ಪಾಲಿಸುವ ಮಡಿಲು ಮುಕ್ಕಾಗದಿರಲಿ ಎದೆಗುದಿಗೇಕೆ ಬಿಡದೆ ತುಪ್ಪ ಸುರಿಯುವೆ ‘ಜಂಗಮ’ ತಡೆ,ಕಾಪಿಡುವ ರೆಪ್ಪೆ ನಡುವೆ ಬದುಕು ವಿಶ್ರಮಿಸಲಿ ********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ವೇದಗಳಿಗೂ ಮುನ್ನ ನೀನಿದ್ದೆ ಮೂಲ:ಬಾಬುರಾವ್ ಬಾಗುಲ್(ಮರಾಠಿ) ಕನ್ನಡಕ್ಕೆ: ಕಮಲಾಕರ ಕಡವೆ “ವೇದಗಳಿಗೂ ಮುನ್ನ ನೀನಿದ್ದೆ” ವೇದಗಳಿಗೂ ಮುನ್ನ ನೀನಿದ್ದೆದೈವಗಳ ಹುಟ್ಟಿಗೂ ಮುನ್ನ;ಕಂಡು ಪಂಚಭೂತಗಳ, ಅವುಗಳ ವಿರಾಟ, ವಿಕಾರ ಸ್ವರೂಪವ್ಯಥಿತನಾಗಿ, ವ್ಯಾಕುಲಗೊಂಡುಕೈಯೆತ್ತಿ ಪ್ರಾರ್ಥಿಸುತ್ತಿದ್ದೆ ನೀನುಆ ಪ್ರಾರ್ಥನೆಗಳೇ ಧರ್ಮಗ್ರಂಥಗಳಾದವುಎಲ್ಲ ದೈವಗಳ ಜನ್ಮವ ಆಚರಿಸಿದವ ನೀನುಎಲ್ಲ ದೇವದೂತರ ಹೆಸರಿಟ್ಟು ಆನಂದಿಸಿದವ ನೀನೇಓ ಮಾನವನೇ, ಸೂರ್ಯನಿಗೆ ಸೂರ್ಯನೆಂದವ ನೀನುಆಗಲೇ ಸೂರ್ಯ ಸೂರ್ಯನಾದದ್ದುಚಂದ್ರನಿಗೆ ನೀನು ಚಂದ್ರನೆಂದಾಗಲೇಚಂದ್ರ ಚಂದ್ರನಾದದ್ದುನೀನೇ ಇಡೀ ವಿಶ್ವದ ನಾಮಕರಣ ಮಾಡಿರುವೆಎಲ್ಲ ಬಲ್ಲರು, ಓ ಪ್ರತಿಭಾಶಾಲಿ ಮಾನವನೇ,ನೀನೇ ಕಾರಣೀಭೂತನಿನ್ನಿಂದಲೇ ಈ ಜಗವು ಸುಂದರ, ನಿನ್ನಿಂದಲೇ ಜೀವಂತ*********

ಅನುವಾದ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ

‘ಗಂಗವ್ವ ಗಂಗಾಮಾಯಿ‘ ಶಂಕರ ಮೊಕಾಶಿ ಪುಣೇಕರ ಕೆ.ಶಿವು ಲಕ್ಕಣ್ಣವರ ಗಂಗವ್ವ ಗಂಗಾಮಾಯಿಯಾಗುವ ಅಪೂರ್ವ ಕಥನವೇ ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’..! ಕನ್ನಡದ ಮುಖ್ಯ ಸ್ತ್ರೀಪಾತ್ರಗಳ ಜೊತೆ ನಡೆಸುವ ಈ ಸಂವಾದಕ್ಕೆ ಹಲವು ಆಸೆಗಳು, ಉದ್ದೇಶಗಳು ಇವೆ. ಕನ್ನಡ ಮನಸ್ಸನ್ನು ಆವರಿಸಿರುವ, ಕಾಡಿರುವ ಈ ಸ್ತ್ರೀಪಾತ್ರಗಳನ್ನೆಲ್ಲ ಒಂದು ವೇದಿಕೆಗೆ ತಂದಾಗ ಸೃಷ್ಟಿಯಾಗುವ ಹೆಣ್ಣಿನ ಚಿತ್ರ ಹೇಗಿರಬಹುದು ಎನ್ನುವ ಕುತೂಹಲ, ಹೆಣ್ಣನ್ನು ನೋಡುವ, ಪರಿಭಾವಿಸುವ ನಿರ್ದಿಷ್ಟ ವಿನ್ಯಾಸಗಳು ಇವೆಯೇ ಎನ್ನುವ ಹುಡುಕಾಟವೇ ಲೇಖಕನದ ಮತ್ತು ಲೇಖಕನ ದೃಷ್ಟಿಕೋನ… ಆಯ್ಕೆ, ಆದ್ಯತೆ, ಸಮಕಾಲೀನ ಒತ್ತಡಗಳನ್ನೆಲ್ಲ ಮೆಟ್ಟಿ ನಿಂತ ಸ್ತ್ರೀಪಾತ್ರಗಳು ಏನನ್ನು ಪ್ರತಿನಿಧಿಸುತ್ತವೆ? ಕಲೆಯ ಶಕ್ತಿಯನ್ನೋ, ಹೆಣ್ಣಿನ ವ್ಯಕ್ತಿತ್ವದ ನಿಜ ನೆಲೆಯನ್ನೋ? ಅಪವಾದವೆನ್ನುವಂತೆ, ಅಪರೂಪವೆನ್ನುವಂತೆ, ಮುಖ್ಯವೆನ್ನುವಂತೆ ಕಾಣುವ ಸ್ತ್ರೀ ಪಾತ್ರಗಳಾಚೆಗೆ ಅಜ್ಞಾತವಾಸದಲ್ಲಿರುವ ಪಾತ್ರಗಳೂ ಇವೆಯೆ? ಈ ಸ್ತ್ರೀ ಪಾತ್ರಗಳ ಮೂಲಕ ಭಿನ್ನ ಲೋಕದೃಷ್ಟಿಯೊಂದನ್ನು ಕಟ್ಟಲು ಸಾಧ್ಯವಿದೆಯೆ? ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುವಲ್ಲಿ ಈ ಪಾತ್ರಗಳ ಪಾತ್ರವೇನು..? ಇಂಥ ಹಲವು ಪ್ರಶ್ನೆಗಳ ಮುಖಾಮುಖಿಯೇ ಗಂಗವ್ವ ಗಂಗಾಮಾಯಿ… ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ ನಿಸ್ಸಂದೇಹವಾಗಿ ಕನ್ನಡದ ಶ್ರೇಷ್ಠ ಪಠ್ಯಗಳಲ್ಲೊಂದಾಗಿರುವಂತೆಯೇ ಗಂಗವ್ವ ಕನ್ನಡ ಜಗತ್ತು ಸೃಷ್ಟಿಸಿರುವ ಸಾರ್ವಕಾಲಿಕ ಪಾತ್ರಗಳಲ್ಲೊಂದು. ತಾಯ್ತನವನ್ನು ಕುರಿತ ಎಲ್ಲ ಬಗೆಯ ರೊಮ್ಯಾಂಟಿಕ್ ನಿರೂಪಣೆಗಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆದು ಹಾಕುತ್ತಲೇ ತಾಯ್ತನ ಮತ್ತು ಹೆಣ್ಣಿನ ಶಕ್ತಿಯನ್ನು ಈ ಕಾದಂಬರಿ ಅದ್ಭುತವಾಗಿ ಕಟ್ಟಿಕೊಡುತ್ತದೆ. ಇದನ್ನು ಈ ಕಾದಂಬರಿ ಎಷ್ಟು ಶಕ್ತವಾಗಿ ಮಾಡುತ್ತದೆ ಎಂದರೆ, ಹೆಣ್ಣಿನ ಶಕ್ತಿ ವಿಶೇಷಗಳ ಬಗ್ಗೆ ನಮ್ಮಲ್ಲಿ ಭಾವುಕವೂ, ರಮ್ಯವೂ ಆದ ಕೃತಜ್ಞತೆಯ ಭಾವವೊಂದು ಅನಾಯಾಸವಾಗಿ ಮೂಡುವಷ್ಟು..! ಗಂಡನನ್ನು, ಭಾವನಾತ್ಮಕ ಹಾಗೂ ಆರ್ಥಿಕ ಸುರಕ್ಷತೆಯನ್ನು ಒಟ್ಟಿನಲ್ಲಿ ಎಲ್ಲ ಬಗೆಯ ಆಧಾರಗಳನ್ನು ಕಳೆದುಕೊಂಡು ಮಗನನ್ನು ಬೆಳೆಸುವ, ಅವನಿಗೊಂದು ಬದುಕನ್ನು ಕಟ್ಟಿಕೊಡುವುದೇ ತನ್ನ ಬದುಕಿನ ಏಕೈಕ ಗುರಿಯೆಂದು ತಿಳಿಯುವ, ಮಾತ್ರವಲ್ಲ, ಅದನ್ನು ಅಕ್ಷರಶಃ ಬದುಕಿನ ಪ್ರತಿಘಳಿಗೆಯೂ ಪಾಲಿಸುತ್ತಾಳೆ ಗಂಗವ್ವ… ಜಗತ್ತಿನಾದ್ಯಂತ ಇಂಥ ಲಕ್ಷಾಂತರ ತಾಯಂದಿರಿದ್ದಾರೆ. ಅವರಿಗೆಲ್ಲ ತ್ಯಾಗಮಯಿಗಳೆಂಬ, ಬದುಕನ್ನು ಗಂಧದ ಹಾಗೆ ತೇಯುವ ಸಾರ್ಥಕ ಜೀವಿಗಳೆಂಬ ಪ್ರಶಸ್ತಿಯೂ ಯಾವುದೇ ವಶೀಲಿಬಾಜಿಯಿಲ್ಲದೇ ಅಪಾರ ಕೃತಜ್ಞತೆಯಲ್ಲಿ ಸಲ್ಲುತ್ತಾ ಬಂದಿದೆ. ಈ ದೃಷ್ಟಿಕೋನವು ಹೆಣ್ಣು ಇರಬೇಕಾದ್ದೇ ಹೀಗೆ ಎನ್ನುವ ಕರಾರಾಗಿಯೂ ಸ್ಥಾಪಿತವಾಗಿಬಿಟ್ಟಿದೆ. ಇದು ಹೆಣ್ಣಿನ ಶಕ್ತಿ ವಿಶೇಷ ಎನ್ನುವುದೇನೋ ಸರಿ, ಆದರೆ ತಾಯ್ತನವೆನ್ನುವುದು ಪ್ರತಿಘಳಿಗೆಯೂ ಅಪೇಕ್ಷಿಸುವ ಮನೋಚೈತನ್ಯವನ್ನು, ಅದನ್ನು ನಿರಂತರವಾಗಿ ಉಳಿಸಿಕೊಳ್ಳಲು ಏನೆಲ್ಲವನ್ನೂ ಹೆಣ್ಣು ಪಣಕ್ಕೆ ಒಡ್ಡಬೇಕಾಗುತ್ತದೆ ಎನ್ನುವುದನ್ನು ಗಂಗವ್ವನ ಪಾತ್ರ ಸಾಕ್ಷಾತ್ಕರಿಸಿ ಕೊಡುತ್ತದೆ. ಆದ್ದರಿಂದಲೇ ಇದು ‘Making of the Mother’ನ ವಾಸ್ತವವಾದಿ ಚಿತ್ರಣದ ಹಾಗೆ ಕಾಣಿಸುತ್ತದೆ… ಗಂಗವ್ವನ ಪಾತ್ರ ಗಂಗವ್ವನಿಂದ ಗಂಗಾಮಾಯಿಯಾಗುವ ಪ್ರಕ್ರಿಯೆಯ ಸಜೀವ ಚಿತ್ರಣ ಈ ಕಾದಂಬರಿಯಲ್ಲಿದೆ. ಗಂಗವ್ವನ ಪಾತ್ರದ ಪ್ರವೇಶವೇ ಕೃತಿಕಾರರ ದೃಷ್ಟಿಕೋನದ ಥಾಟನ್ನು ನಾಟಕೀಯವಾಗಿ ಓದುಗರಿಗೆ ಪರಿಚಯಿಸುತ್ತದೆ. ಭಾರತೀಯರ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಗಂಗಾಜಲವನ್ನು ತನ್ನ ಮಗನನ್ನು ಪೊರೆಯಬೇಕಾದ ಜವಾಬ್ದಾರಿಯ ಸಲುವಾಗಿ ರೈಲಿನಿಂದ ಹೊರಗೆ ಚೆಲ್ಲುವ ದೃಶ್ಯದಿಂದ ಕಾದಂಬರಿ ಆರಂಭವಾಗುತ್ತದೆ. ಈ ಜವಾಬ್ದಾರಿಯ ಅರಿವು ಅವಳಿಗೆ ಆ ಘಳಿಗೆಯಲ್ಲಿ ಆಗುತ್ತದೆ ಎಂದಲ್ಲ. ಆದರೆ ಆ ಜವಾಬ್ದಾರಿ ಎಷ್ಟು ಮುಖ್ಯವಾದುದು ಮತ್ತು ಅನಂತವಾದುದು ಎಂದರೆ ಗಂಗಾಜಲ ತನ್ನ ಮನೆಯಲ್ಲಿ ಕಣ್ಣೆದುರಿಗೆ ಇರುವುದು ಅದಕ್ಕೊಡ್ಡುವ ಸವಾಲಿನ ಹಾಗೆ, ಸಾವಿನ ಅಸ್ತಿತ್ವವನ್ನು, ಆಗಮನದ ಅನಿವಾರ್ಯತೆಯನ್ನು ಆ ಗಂಗಾಜಲ ಪ್ರತಿಕ್ಷಣ ನೆನಪಿಸುವ ಮೂಲಕ ತನಗೆ ಅಡ್ಡಿಯಾಗಬಹುದೆಂದು ಆ ಗಂಗಾಜಲವನ್ನು ಹೊರಗೆ ಚೆಲ್ಲುತ್ತಾಳೆ… ಇದು ಆ ಗಂಗಾಜಲವನ್ನು ಕುರಿತ ಅವಳ ಅಪನಂಬಿಕೆಯ ಸಂಕೇತವೇನಲ್ಲ, ಸ್ವಭಾವತಃ ದೈವಶ್ರದ್ಧೆಯವಳಾದ ಗಂಗವ್ವನಿಗೆ ಧಾರ್ಮಿಕ ನಂಬಿಕೆಗಿಂತಲೂ ಮಗನನ್ನು ನೆಲೆನಿಲ್ಲಿಸುವುದು ತನ್ನ ಬದುಕಿನ ಪರಮ ಗುರಿ ಎನ್ನುವುದರಲ್ಲಿರುವ ನಂಬಿಕೆ ಮೇಲುಗೈ ಪಡೆಯುತ್ತದೆ ಎನ್ನುವ ಅಂಶ ತಾಯ್ತನದ ಸಹಜ ಗುಣವನ್ನು ಮಾತ್ರವಲ್ಲ; ಅದನ್ನು ಕಾಪಾಡಿಕೊಂಡು ಬರುವುದು ಯಾವ ಹೆಣ್ಣಿಗೂ ಒಂದು ಸವಾಲೂ ಹೌದು, ಅದೊಂದು ಸಾವಯವ ಪ್ರಕ್ರಿಯೆಯೂ ಹೌದು ಎನ್ನುವ ಬಹು ಮುಖ್ಯವಾದ ಅಂಶವನ್ನು ಹೇಳುತ್ತದೆ. ಸಾಮಾನ್ಯವಾಗಿ ಈ ಅಂಶವನ್ನು ಅವಳ ಹುಟ್ಟುಗುಣವೆನ್ನುವಂತೆ ನಿಭಾಯಿಸಲಾಗುತ್ತದೆ. ಆದರೆ ಪುಣೇಕರರ ಈ ಕೃತಿ ಅದೊಂದು ಸಿದ್ಧ ಸ್ಥಿತಿಯಲ್ಲ ಎನ್ನುವುದಕ್ಕೆ ಒತ್ತು ಕೊಡುವುದರ ಮೂಲಕ ಅದೊಂದು ಕಷ್ಟದ ದಾರಿ ಎನ್ನುವುದನ್ನು ಹೇಳುತ್ತದೆ… ಸ್ವಲ್ಪ ಉತ್ಪ್ರೇಕ್ಷಿತವಾಗಿ ಹೇಳುವುದಾದರೆ, ತಾಯ್ತನವೆನ್ನುವುದು ಅಹಂಕಾರವನ್ನು ಕಳೆದುಕೊಳ್ಳುತ್ತಾ ಹೋಗುವ ಕ್ರಿಯೆಯೂ ಹೌದು ಎನಿಸಿಬಿಡುತ್ತದೆ ಗಂಗವ್ವನನ್ನು ಅರ್ಥಮಾಡಿಕೊಳ್ಳುವಾಗ. ಮಗ–ಸೊಸೆ ತನ್ನನ್ನು ಅನಾದರದಿಂದ ಕಂಡ ಸಂದರ್ಭವೊಂದರಲ್ಲಿ ಊಟವನ್ನೂ ಮಾಡದೆ ಅವಳ ಹಿತಚಿಂತಕರಾದ ದೇಸಾಯರ ಮನೆಗೆ ಗಂಗವ್ವ ಹೋಗುತ್ತಾಳೆ. ಅಸಹನೀಯ ಅವಮಾನವಾಗಿದ್ದಾಗಲೂ ಗಂಗವ್ವ ಮನೆಗೆ ವಾಪಸಾಗುವುದಾಗಿ ಹೇಳುತ್ತಾಳೆ. ತನ್ನ ಅವಮಾನಕ್ಕಿಂತ ಮಗನ ಅಭ್ಯುದಯವೇ ದೊಡ್ಡದಾಗಿ ಅವಳಿಗೆ ಕಾಣಿಸುತ್ತದೆ. ಆದರೆ ಇದಕ್ಕಾಗಿ ಅವಳು ರಾಜಿ ಮಾಡಿಕೊಳ್ಳಬೇಕಾಗುವುದು ತನ್ನ ಆತ್ಮಗೌರವದ ಜೊತೆಗೆ. ಬಹುಕಷ್ಟದ ಈ ಸಂದರ್ಭವನ್ನು ಅವಳು ಹಾಯುವ ಘಳಿಗೆಯ ತಲ್ಲಣಗಳನ್ನು ಪುಣೇಕರರು ಅಬ್ಬರವಿಲ್ಲದ ತೀವ್ರತೆಯಲ್ಲಿ ಹಿಡಿಯುತ್ತಾರೆ. ತಾನು ಎನ್ನುವ ಅಹಂಕಾರವನ್ನು ಗೆಲ್ಲಬೇಕಾದ ಅನಿವಾರ್ಯತೆಯನ್ನು ಅವಳು ಸಾಂಪ್ರದಾಯಿಕ ಹೆಣ್ಣಿನ ಮಾಮೂಲಿ ಧಾಟಿಯಲ್ಲಿಯೇ ನಿಭಾಯಿಸಲು ಯತ್ನಿಸುವ ಹಾಗೆ ಕಾಣಿಸುತ್ತದೆ. ‘ಹೆಂಗಸಿನ ಜನ್ಮ ಇರೋದೇ ಅನುಭೋಗಿಸೋಕೆ… ಅನುಭೋಗಿಸ್ತೀನಿ ಬಿಡು ಗೋಪಣ್ಣಾ…’ ಎನ್ನುತ್ತಾಳೆ… ಆದರೆ ಇಡೀ ಕಾದಂಬರಿಯ ಭಿತ್ತಿಯಲ್ಲಿ ಅವಳ ಪಾತ್ರದ ಚಲನೆಗಳು ಅಸಹಾಯಕ ಹೆಣ್ಣಿನ ಗೋಳಾಟವಾಗಿ ಕಾಣಿಸುವುದಿಲ್ಲ. ಬದುಕಿನ ಯಾವುದೇ ಸನ್ನಿವೇಶಗಳನ್ನೂ ನಿರ್ಭೀತಿಯಿಂದ, ಕುಂದಿಲ್ಲದ ಆತ್ಮವಿಶ್ವಾಸದಿಂದ ಎದುರಾಗುತ್ತಾಳೆ. ಈ ಸನ್ನಿವೇಶವೂ ಕೂಡ ಅವಳ ಜೀವನದೃಷ್ಟಿಯ ನಿದರ್ಶನವೇ ಆಗಿದೆ. ಮಗನ ಹಾಗೂ ಸೊಸೆಯ ಎದುರಿಗಿನ ಸೋಲಾಗಬಹುದು ಎನ್ನುವುದಕ್ಕಿಂತ, ತನ್ನ ಆತ್ಮಗೌರವಕ್ಕೆ ಭಂಗವಾಗುತ್ತದೆ ಎನ್ನುವ ಸಾಧ್ಯತೆಗಿಂತ, ಮಗನ ಬದುಕು ಹಳಿ ತಪ್ಪಬಾರದು ಎನ್ನುವ ಪ್ರಜ್ಞಾಪೂರ್ವಕವಾದ, ಕಷ್ಟದ ಆಯ್ಕೆ ಇದು. ಆದರೆ ಅದು ಕಾಣಿಸಿಕೊಳ್ಳುವುದು ಮಾತ್ರ ಹೆಣ್ಣಿನ ಜನ್ಮ ಎನ್ನುವ ಸಾಂಪ್ರದಾಯಿಕ ಭಾಷೆಯಲ್ಲಿ. ಆದ್ದರಿಂದಲೇ ಗಂಗವ್ವನ ಪಾತ್ರ ಹೆಣ್ಣಿನ ವ್ಯಕ್ತಿತ್ವದ ಹುಡುಕಾಟ ಮತ್ತು ರಚನೆಯ ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತದೆ… ಮುಖ್ಯವಾಗಿ ಹೆಣ್ಣಿನ ಸಾಮಾಜಿಕ, ಕೌಟುಂಬಿಕ ನೆಲೆಗಳಿಗೆ ಕೊಡುವ ಒತ್ತು ಇಲ್ಲೂ ಮುಂದುವರಿದಿರುವ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಗಂಗವ್ವನ ಪಾತ್ರದ ಶಕ್ತಿ ಮತ್ತು ಅನನ್ಯತೆ ಇರುವುದೇ ಹೆಣ್ಣಿನ ಬದುಕಿನ ಸಾಮಾಜಿಕ, ಕೌಟುಂಬಿಕ ನೆಲೆಗಳನ್ನು ಸ್ಪಷ್ಟ ರಾಜಕೀಯ ಹಾಗೂ ನೈತಿಕ ಪ್ರಜ್ಞೆಯಲ್ಲಿ ಪ್ರತಿಪಾದಿಸುವುದರಲ್ಲಿ. ಗಂಗವ್ವ ಮುನ್ನೆಲೆಗೆ ತರುವ ಈ ಅಂಶಗಳು ಅವಳ ವ್ಯಕ್ತಿತ್ವ ಮತ್ತು ಹೋರಾಟಕ್ಕೆ ಅಪಾರ ಬಲ ಕೊಡುತ್ತವೆ. ಇಡೀ ಲೋಕವನ್ನು ಎದುರು ಹಾಕಿಕೊಳ್ಳಬಲ್ಲ ಛಾತಿಯನ್ನು ಅವಳು ಪಡೆಯುವುದು ಈ ರಾಜಕೀಯ ಪ್ರಜ್ಞೆಯಲ್ಲಿ. ಈ ಕಾರಣಕ್ಕಾಗಿಯೇ ಅವಳಿಗೆ ತನ್ನ ನಡೆಯಲ್ಲಿ ಯಾವ ದ್ವಂದ್ವಗಳೂ ಇಲ್ಲ. ತನ್ನ ಖಾಸಾ ತಮ್ಮ ರಾಘಪ್ಪನ ಮಗಳನ್ನೇ ತನ್ನ ಸೊಸೆಯಾಗಿ ಮಾಡಿಕೊಳ್ಳುವ ಸಂದರ್ಭದಲ್ಲೂ ಒಪ್ಪಂದದಂತೆ ಒಂದು ಸಾವಿರ ರೂಪಾಯಿ ಕೊಡದಿದ್ದರೆ ‘ಅಕ್ಕಿಕಾಳು’ ಇಲ್ಲ ಎಂದು ತುಂಬಿದ ಮದುವೆ ಮನೆಯಲ್ಲಿ ಘಂಟಾಘೋಷವಾಗಿ ಹೇಳಬಲ್ಲಳು. ಇಷ್ಟಾಗಿ ಆ ಹಣ ಯಾಕಾಗಿ? ತಾನು ಉಡುವ ಹರಕು ಸೀರೆಯ ಬದಲು ರೇಷ್ಮೆ ಸೀರೆ ಉಡಲಂತೂ ಅಲ್ಲ. ಮಗನ ಭವಿಷ್ಯದ ಆಪದ್ಧನವಾಗಿ ಅದು ಅವಳಿಗೆ ಬೇಕು… ಯಾರನ್ನು ಬೇಕಾದರೂ ತನ್ನ ಖೆಡ್ಡಾದಲ್ಲಿ ಬೀಳಿಸಿಕೊಳ್ಳಬಲ್ಲ, ಗೆದ್ದು ಬೀಗಬಲ್ಲ ಪ್ರಚಂಡ ರಾಘಪ್ಪನನ್ನು ಗಂಗವ್ವ ಸೋಲಿಸುವುದು ಇದೇ ಪ್ರಖರ ರಾಜಕೀಯ ಪ್ರಜ್ಞೆಯಲ್ಲಿ. ತಾಯಿಯಾಗಲ್ಲದೆ ತನಗೆ ಇನ್ನೊಂದು ಅಸ್ತಿತ್ವವೇ ಇಲ್ಲವೇನೋ ಎನ್ನುವ ಮಟ್ಟದಲ್ಲಿ ಗಂಗವ್ವ ವ್ಯವಹರಿಸುತ್ತಾಳೆ. ಕೆಲವು ಸನ್ನಿವೇಶಗಳು ಗಂಗವ್ವನ ವ್ಯಕ್ತಿತ್ವದ ಅಪ್ರತಿಮ ಸಾಕ್ಷಿಗಳಾಗಿವೆ. ಗಂಗವ್ವನ ಗಂಡ ಸ್ವಾಮಿರಾಯನ ಆಸ್ತಿಯೆಲ್ಲ ಹರಾಜಿಗೆ ಬಂದ ಹೊತ್ತಿನಲ್ಲಿ ಇವಳು ಮಗ ಕಿಟ್ಟಿಯ ಕೈಗೆ ಕೆಲವು ಒಡವೆಗಳನ್ನು ಕೊಟ್ಟು ಹಿತ್ತಲಿನಲ್ಲಿ ಒಗೆಸುತ್ತಾಳೆ. ನಂತರ ಅವುಗಳನ್ನು ಮಾರಿ, ಬಂದ ಹಣವನ್ನು– ರಕ್ಷಕ ದೈವದಂತೆ ಅವಳನ್ನು, ಮಗ ಕಿಟ್ಟಿಯನ್ನು ಸದಾ ಪೊರೆದ ದೇಸಾಯರ ಬಳಿ ಇಡುತ್ತಾಳೆ. ಎಂಥ ದುರ್ಭರ ಸನ್ನಿವೇಶದಲ್ಲೂ ಕಂಗೆಡದ ಈ ಗುಣವೊಂದು ಅವಳ ವ್ಯಕ್ತಿತ್ವದ ಅಸಾಧಾರಣ ಲಕ್ಷಣ. ಇದೇ ಹಣದ ಮೇಲೆ ತಮ್ಮ ರಾಘಪ್ಪ ಕಣ್ಣಿಟ್ಟು ಏನೆಲ್ಲಾ ಹುನ್ನಾರಗಳನ್ನು ಮಾಡಿದರೂ ಆ ಹಣ ಅವನ ಕೈಗಾಗಲಿ, ಮಗ ಕಿಟ್ಟಿಯ ದಂದುರಾಳಿತನಕ್ಕಾಗಲಿ ದಕ್ಕದಂತೆ ನೋಡಿಕೊಳ್ಳುತ್ತಾಳೆ… ನಿದ್ದೆ ಎಚ್ಚರಗಳಲ್ಲಿ ತನ್ನ ಜವಾಬ್ದಾರಿಯನ್ನೇ ಉಸಿರಾಡುವ ಗಂಗವ್ವ ಈ ಕಾರಣಕ್ಕಾಗಿಯೇ ಸದಾ ಚಡಪಡಿಸುತ್ತಿರುತ್ತಾಳೆ. ಆದ್ದರಿಂದಲೇ ಇವಳ ವ್ಯಕ್ತಿತ್ವದಲ್ಲಿ ಪ್ರಸನ್ನತೆ ಎನ್ನುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಾಸ್ಯವೂ ಇವಳ ಬಳಿ ಸುಳಿಯುವುದಿಲ್ಲ. ಗಂಗವ್ವನ ವ್ಯಕ್ತಿತ್ವದ ಅಪೂರ್ಣತೆ ನಮ್ಮ ಅರಿವಿಗೆ ಬರುವುದು ಇಂಥ ಸಂಗತಿಗಳಿಂದ. ಮಗ ಕಿಟ್ಟಿಯನ್ನು ಕುರಿತ ಗಂಗವ್ವನ ಕಾಳಜಿ, ಸದೋದಿತವಾಗಿ ಅವಳು ನಡೆಸುವ ಪ್ರಯತ್ನಗಳನ್ನು, ಅವಳ ಭಂಗವಿರದ ಏಕೋನಿಷ್ಠೆಯನ್ನು ವೈಭವೀಕರಿಸುವ, ನಾಟಕೀಯಗೊಳಿಸುವ, ಓದುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುವ ಎಲ್ಲ ಅವಕಾಶಗಳೂ ಈ ಕೃತಿಗಿದ್ದವು. ಆದರೆ ಈ ಕಾದಂಬರಿ ಅದ್ಯಾವುದನ್ನೂ ಮಾಡದೆ ಗಂಗವ್ವನನ್ನು ಅವಳ ನಿಜದಲ್ಲಿ ನೋಡುವ ಪ್ರಯತ್ನ ಮಾಡುತ್ತದೆ. ಅವಳ ದೌರ್ಬಲ್ಯಗಳನ್ನು ಮುಚ್ಚಿಡುವ ಪ್ರಯತ್ನ ಮಾಡುವುದಿಲ್ಲವೆಂದೇ ಅವಳ ಶಕ್ತಿಯೂ ನಮ್ಮ ಅರಿವಿಗೆ ದಕ್ಕುವುದು ಸಾಧ್ಯವಾಗುತ್ತದೆ. ತಮ್ಮ ರಾಘಪ್ಪ ಹತ್ತು ವರ್ಷಗಳ ನಂತರ ಮೊದಲ ಬಾರಿಗೆ ಮನೆಗೆ ಬಂದಾಗ ಮಗ ಚಹಾ ಮಾಡು ಎಂದರೆ, ‘ರಾಘಪ್ಪ ಚಹಾದ ಮನುಷ್ಯ ಅಲ್ಲೇಳಪ್ಪ’ ಎನ್ನುವ ಕ್ರೌರ್ಯ, ಸಣ್ಣತನ, ದಿಗಿಲು ಹುಟ್ಟಿಸುತ್ತದೆ (ಚಹಾದ ಪುಡಿ ತೀರಿತ್ತು ಎಂದು ನಂತರ ಮಗನಿಗೆ ಅವಳು ಕೊಡುವ ಸಮರ್ಥನೆ ಅವಳ ನಡವಳಿಕೆಯ ಕ್ರೌರ್ಯವನ್ನೇನು ಕಡಿಮೆ ಮಾಡುವುದಿಲ್ಲ)… ಗಂಗವ್ವನ ಪಾತ್ರದ ಮಹತ್ವ ಇರುವುದು, ಸ್ಥಾಪಿತ ನಿಲುವೊಂದನ್ನು ಅಗೋಚರ ನೆಲೆಯಲ್ಲಿ ಮುರಿಯುವ ಪ್ರಯತ್ನದ ಕಾರಣಕ್ಕಾಗಿ. ಸಾಮಾನ್ಯವಾಗಿ ತಾಯ್ತನವು ಮಕ್ಕಳನ್ನು ತಮ್ಮ ಅಧಿಕಾರ ಮತ್ತು ಪ್ರೀತಿಯ ಅಧೀನತೆಯಲ್ಲಿ ನಿಯಂತ್ರಿಸಲು ಇರುವ ಒಂದು ಆವರಣವಾಗಿ ಬಳಕೆಯಾಗುತ್ತದೆ. ಅಲ್ಲಿ ಅಧಿಕಾರ ಕೇಂದ್ರದ ಪ್ರಶ್ನೆಯೂ ಸಹಜವಾಗಿಯೇ ಇರುತ್ತದೆ. ಎಂದರೆ ತಾಯಿ ಕೇಂದ್ರವಾಗಿ ಮಕ್ಕಳು ಅಧೀನವಾಗುವ ಕ್ರಮ. ಆದರೆ ಗಂಗವ್ವನ ಪಾತ್ರ ಇದಕ್ಕಿಂತ ಭಿನ್ನ. ಅದು ಮಗ ಕೇಂದ್ರ ಎನ್ನುವುದನ್ನು, ತನ್ನ ವೈಯಕ್ತಿಕ ಬದುಕಿನ ಸುಖದುಃಖಗಳು ಎರಡನೆಯವು ಎನ್ನುವುದನ್ನು ಗಂಗವ್ವ ಮತ್ತೆ ಮತ್ತೆ ಸಾಬೀತು ಮಾಡುತ್ತಾ ಹೋಗುತ್ತಾಳೆ… ಆದ್ದರಿಂದಲೇ ಆರಂಭದಲ್ಲಿ ಇದು ಅಹಂಕಾರವನ್ನು ಕಳೆದುಕೊಳ್ಳುವ ದಾರಿಯಾಗಿ ಕಾಣುತ್ತದೆ ಎಂದಿದ್ದು. ತಮ್ಮ ಈಡೇರದ ಆಸೆಗಳ ಪೂರೈಕೆಯ ವಾಹಕಗಳಾಗಿ ಮಕ್ಕಳನ್ನು ಪರಿಭಾವಿಸುವ ಮಾಮೂಲಿ ದಾರಿಯಲ್ಲ ಇದು. ಅಥವಾ ಮಗ ತನ್ನ ರಾಜ್ಯದ ನಿಷ್ಠಾವಂತ ಪ್ರಜೆಯಾಗಿರಬೇಕು ಎನ್ನುವ ನಿಲುವಿನಳಾಗಿಯೂ ಗಂಗವ್ವ ಕಾಣಿಸುವುದಿಲ್ಲ. ಜೀವ ಕೊಟ್ಟ ಮಗನಿಗೆ ಬದುಕು ಕಟ್ಟಿಕೊಡಬೇಕು ಎನ್ನುವ ಮೂಲಧಾತು ಇವಳನ್ನು ಬೇರೆ ಪಾತಳಿಯಲ್ಲಿಡುತ್ತದೆ. ಅಧಿಕಾರ, ವಾತ್ಸಲ್ಯ, ಕಾಳಜಿ ಮತ್ತು ಜವಾಬ್ದಾರಿ– ಇದು ಸಾಮಾನ್ಯವಾಗಿ ತಾಯ್ತನದಲ್ಲಿ ನಾವು ನೋಡುವ ಶ್ರೇಣೀಕೃತ ನೆಲೆಗಳು. ಗಂಗವ್ವನಲ್ಲಿ ಇದು ತಿರುವುಮುರುವಾಗಿದೆ. ಜವಾಬ್ದಾರಿ ಮೊದಲಾಗಿ ಅಧಿಕಾರ ಕೊನೆಯದಾಗಿದೆ. ಗಂಗವ್ವನನ್ನು ಗಂಗಾಮಾಯಿಯಾಗಿಸುವ ಅಂಶ ಇದೇ. ಇದನ್ನೇ ಮುಂದುವರೆಸಿ ಹೇಳುವುದಾದರೆ ತಾಯ್ತನವನ್ನು ಗ್ರಹಿಸಬೇಕಾದ ವಾಸ್ತವ ದೃಷ್ಟಿಕೋನವನ್ನು ಪುಣೇಕರರ ಈ ಕಾದಂಬರಿ ಶಕ್ತವಾಗಿ ಸ್ಥಾಪಿಸುತ್ತದೆ. ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ… ಎನಿಸಿದಾಗಲೂ ಅವಳ ಬಗ್ಗೆ ಪ್ರೀತಿ, ಕೃತಜ್ಞತೆ ಮಾತ್ರವಲ್ಲ ಗೌರವವೂ ಹುಟ್ಟುವುದು ಈ ಕಾರಣಕ್ಕಾಗಿ. ಕನ್ನಡದಲ್ಲಿ ಹಲವು ಅಮರ ತಾಯಂದಿರಿದ್ದಾರೆ. ಅವರಲ್ಲಿ ಗಂಗವ್ವನಿಗೆ ಹತ್ತಿರದ ಸಂಬಂಧಿಗಳೆಂದರೆ, ಲಂಕೇಶರ ‘ಅವ್ವ’ ಮತ್ತು ದೇವನೂರರ ‘ಸಾಕವ್ವ’..! ಇಂತಹ ಕೃತಿಕಾರರ ಪರಿಚಯ ಹೀಗಿದೆ– ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ

ಪುಸ್ತಕ Read Post »

ಕಾವ್ಯಯಾನ

ಕಾವ್ಯಯಾನ

ಬದುಕುವ ರೀತಿಗೆ! ಲೋಕೇಶ್ ಮನ್ವಿತ್ ಬದುಕುವ ರೀತಿಗೆ ಬುದ್ದನನ್ನಿರಿಸಿಕೊಂಡರೆ ಬುದ್ದಿಯಲ್ಲಿ ಅಂಗುಲಿಮಾಲ ಹೆಜ್ಜೆ ಇರಿಸುವವನೇನು? ನಿನ್ನ ಹಾದಿಯಲ್ಲಿ. ದಯೆಯಿರಲು ದೀನನಲ್ಲಿ ದಿನವೆಲ್ಲಾ ಸಂತಸವಷ್ಟೇ ಮನಸ್ಸಿಗೆ ಬೇಕಾದರೊಮ್ಮೆ ಅಂಗೈಯನ್ನೊಮ್ಮೆ ತಿರುಗಿಸಿವುದು ರೂಡಿಯಾಗಿಸಿಕೋ ಜಾತಿ ಮತಗಳ ಚೂರಾಗಿಸಿ ಎದೆಯ ಗುಡಿಯಲ್ಲೊಮ್ಮೆ ದೀಪವಿರಿಸು ಬೆಳಕು ಚಿಕ್ಕದಿರಬಹುದು ಜೀವವಿರುವವರೆಗೂ ನೀನು ಕಾಣುವೆ ಪ್ರತಿ ಜೀವಕ್ಕೂ ಬೆಳಕಾಗಿ ಬದುಕುವುದು ಸುಲಭ ಬೇಲಿಗಿಡಗಳು ತಾಕಿದವೆಂದು, ರಕ್ತ ಹರಿಯಿತೆಂದು, ನಿಲ್ಲದೆ ಅಲ್ಲಿ, ನೋವನ್ನೇ ನೆಪವಾಗಿಸಿಕೊಂಡು ಸಾಗಿಬಿಡು ತಡೆದು. ಮುಂದೆ ಹೂಗಳು ಅರಳಿ ನಿಂತಿವೆ ಸ್ವಾಗತವ ಕೋರಿ . ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಾಸ್ತವ ದೀಪಿಕಾ ಬಾಬು ವಾಸ್ತವ ಜೀವ ಇರುವ ಅವನನ್ನು ನಾನು ಪ್ರೀತಿಸಿದೆ, ಪ್ರೀತಿಯ ಮುಖವಾಡ ಧರಿಸಿದ ನನ್ನ ನಂಬಿಕಯೇ ಮೋಸವಾಯಿತು..! ಚಿಕ್ಕ ಪುಟ್ಟ ಹಕ್ಕಿ  ಪಕ್ಷಿಗಳ ತಂದು ನಾನು ಪ್ರೀತಿಸಿದೆ, ನಿನ್ನ ಸ್ವಾರ್ಥಕ್ಕೆ,ನನ್ನ ಬಂಧಿಸಿದೆಯಾ ಎಂದು ಹಾರಿ ಹೋಯಿತು..! ಬಾಲ್ಯದಲ್ಲೇ ಸಾವಿರಾರು ಕನಸನ್ನು ನಾನು ಪ್ರೀತಿಸಿದೆ, ನನಸಾಗದ ಬದುಕಿನ ನೈಜತೆಯ ಅರಿತು ಬಾಲ್ಯದಲ್ಲಿಯೇ ನುಚ್ಚು ನೂರಾಯಿತು…!! ಗುರು ಹಿರಿಯರನ್ನು, ಹೆತ್ತವರನ್ನು ನಾನು ಪ್ರೀತಿಸಿದೆ, ನೀನು ಹೆಣ್ಣು ಇಷ್ಟೇ ನಿನ್ನ ಬದುಕೆಂದು ಮದುವೆಯ ಬಂಧನದಲ್ಲಿಟ್ಟರು..!! ಗಂಡನನ್ನು, ಮಕ್ಕಳನ್ನು, ಮನೆಯನ್ನು ನಾನು ಪ್ರೀತಿಸಿದೆ, ನಮ್ಮ ಸೇವೆಯೇ ನಿನ್ನ ಕರ್ತವ್ಯ ಎಂದೆಳಿ ಸಂಸಾರದ ಜವಾಬ್ದಾರಿ ಹೊರಿಸಿದರು…!! ನಾನು ಈಗ ಯಾರನ್ನು ಪ್ರೀತಿಸಲಿ, ಆಸಕ್ತಳು ನಾನೀಗ, ಹುಟ್ಟು ಸಾವಿನ ಮಧ್ಯದಲ್ಲಿ ಸಾಗುವ ಈ ಜೀವನವನ್ನು, ನಾನು ಪ್ರೀತಿಸಲೇಬೇಕು…… ಇದೇ ಹೆಣ್ಣಿನ ವಾಸ್ತವದ ಪ್ರತಿರೂಪ….!! ***********

ಕಾವ್ಯಯಾನ Read Post »

ಅಂಕಣ ಸಂಗಾತಿ

ಜ್ಞಾನಪೀಠ ಪ್ರಶಸ್ತಿ ವಿಜೇತರು

ದ.ರಾ.ಬೇಂದ್ರೆ ಕೆ.ಶಿವು ಲಕ್ಕಣ್ಣವರ ವರ ಕವಿ ದ. ರಾ. ಬೇಂದ್ರೆಗೆ ಅಂಬು ತಾಯಿಯೇ ಬದುಕಿನ ಮೊದಲ ಪ್ರೇರಕ ಶಕ್ತಿ..! ಈ ಅಂಬು ತಾಯಿಯ ನೆನಪಿನಲ್ಲಿ ದ.ರಾ.ಬೇಂದ್ರೆಯವರು ‘ಅಂಬಿಕಾತನಯದತ್ತ’ವಾದರು… ಈ ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 31ನೆ ಜನವರಿ 1896ರಂದು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು. ಅವರ ತಂದೆ ರಾಮಚಂದ್ರ ಪಂತರು. ತಾಯಿ ಅಂಬೂ ತಾಯಿ. ತಂದೆಯವರು ತೀರಿಕೊಂಡ ಮೇಲೆ ತನ್ನ ಇನ್ನೊಬ್ಬ ಚಿಕ್ಕಪ್ಪ ಬಂಡೋಪಂತರ ಆಶ್ರಯದಲ್ಲಿ ಬೇಂದ್ರೆಯವರ ಬಡ ಕುಟುಂಬ ಆಸರೆ ಪಡೆಯಿತು. ಚಿಕ್ಕಪ್ಪನ ಆಶ್ರಯದಲ್ಲಿಯೇ ಬಿ.ಎ. ವರೆಗಿನ ಅಭ್ಯಾಸ, ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ನಡೆಯಿತು… ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಮೂರು ವರ್ಷ, ಮುಂದೆ ರಾಷ್ಟ್ರೀಯ ಶಾಲೆಯಲ್ಲಿ ಉದ್ಯೋಗ, ತಮ್ಮ 28ನೆಯ ವಯಸ್ಸಿನಲ್ಲಿ ಮಾತೃವಿಯೋಗ, ಮಧ್ಯೆ ಸೊಂಡೂರು ಸಂಸ್ಥಾನದಲ್ಲೂ ಸ್ವಲ್ಪಕಾಲದ ನೌಕರಿ. ಒಂದು ವರ್ಷ ಅಲೆದಾಟ, 1925ರಿಂದ 1932ರವರೆಗೆ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ವಿವಿಧ ಕ್ಷೇತ್ರಗಳ ದುಡಿಮೆ. ನರಬಲಿ ಕವನದ ಕಾರಣವಾಗಿ 3 ತಿಂಗಳು ಹಿಂಡಲಗಿ ಕಾರಾಗೃಹ ವಾಸ ಶಿಕ್ಷೆ. ಮತ್ತೆ ಅಲೆದಾಟ, 1935ರಿಂದ 1940ರವರೆಗೆ 5 ವರ್ಷಗಳ ಕಾಲ ನಿರುದ್ಯೋಗ. ಅನಂತರ ಅಣ್ಣ ಮಾಸ್ತಿ ಅವರ ಬೆಂಬಲದಿಂದ ‘ಜೀವನ’ ಪತ್ರಿಕೆಯ ಸಂಪಾದಕನೆಂಬ ಗೌರವ ವೃತ್ತಿ. ಒಂದು ವರ್ಷ ಗದಗಿನ ಚೌಹಾನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ. ಮತ್ತೆ ಒಂದು ವರ್ಷ ಹುಬ್ಬಳ್ಳಿಯ ಇಂಗ್ಲಿಷ್ ಸ್ಕೂಲಿನಲ್ಲಿ ಅಲ್ಪಾವಧಿ ವೃತ್ತಿ. 1942-43ರಲ್ಲಿ ಪೂನಾದ ಕಾಮರ್ಸ್ ಕಾಲೇಜಿನಲ್ಲಿ ಅರ್ಧಕಾಲಿಕ ಕನ್ನಡ ಅಧ್ಯಾಪಕ ವೃತ್ತಿ. ಅನಂತರ 1944ರಲ್ಲಿ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ವೃತ್ತಿ. ಸುಮಾರು 12ವರ್ಷಗಳ ಕಾಲ ಆ ಹುದ್ದೆಯಲ್ಲೇ ಇದ್ದ ಇವರಿಗೆ 60 ಆಯಿತೆಂದು ಅಲ್ಲಿ ನಿವೃತ್ತಿಯಾಯಿತು. 1956ರಲ್ಲಿ ಆಕಾಶವಾಣಿಯಲ್ಲಿ ಮೊದಲು ಪ್ರೊಡ್ಯೂಸರ್ ಆಗಿ, ಆಮೇಲೆ ಸಲಹೆಗಾರರಾಗಿ ಧಾರವಾಡದಲ್ಲಿ ಮತ್ತೆ ಒಂದು ಉದ್ಯೋಗ. ಸರ್ಕಾರಕ್ಕೆ ಆಕಾಶವಾಣಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಪಿ.ಎಂ. ಲಾಡ್ ಅವರ ಮೂಲಕ ದೊರೆತ ಉದ್ಯೋಗ ಅದು. ಇಡೀ ಬದುಕಿನ ತುಂಬಾ ಉದ್ಯೋಗ ನಿರುದ್ಯೋಗಗಳ ಚೆಲ್ಲಾಟ. ಈ ಮಧ್ಯೆಯೂ ಧೃತಿಗೆಡದ ಕವಿಚೇತನ ಬೇಂದ್ರೆಯವರದು… ಬೇಂದ್ರೆಯವರ ವಿವಾಹವಾದದ್ದು 1919ರಲ್ಲಿ, ಹುಬ್ಬಳ್ಳಿಯಲ್ಲಿ. ನರಗುಂದದಲ್ಲಿ ಸಾರ್ವಜನಿಕ ಸೇವಾ ಇಲಾಖೆಯಲ್ಲಿ ನೌಕರರಾಗಿದ್ದ ಶ್ರೀ ಜೋಗಳೇಕರ ವಾಸುದೇವರಾಯರ ಮಗಳಾದ ರಂಗೂತಾಯಿಯೇ ಇವರ ಮಡದಿ. ಬೇಂದ್ರೆ ಮನೆತನಕ್ಕೆ ಬಂದ ಮೇಲೆ ಅವರ ಹೆಸರು ಲಕ್ಷ್ಮೀಬಾಯಿ. ಲಕ್ಷ್ಮೀಬಾಯಿ ಹಾಗೂ ಬೇಂದ್ರೆಯವರ ಸಂಸಾರ ಕಂಡದ್ದು ಹೆಚ್ಚಾಗಿ ಕಷ್ಟದ ದಿನಗಳು. ಅದರಲ್ಲಿಯೂ ಹುಟ್ಟಿದ 9 ಮಕ್ಕಳಲ್ಲಿ 6 ಮಕ್ಕಳು ಕಣ್ಣ ಮುಂದೆಯೇ ಇಲ್ಲವಾಗಿ ಉಳಿದವರು 2 ಗಂಡು ಮಕ್ಕಳು (ವಾಮನ ಬೇಂದ್ರೆ ಮತ್ತು ಪಾಂಡುರಂಗ ಬೇಂದ್ರೆ) ಮತ್ತು ಒಬ್ಬಳು ಮಗಳು ಶ್ರೀಮತಿ ಮಂಗಳ. ಬಡತನದ ಕುಲುಮೆಯಲ್ಲಿ ಬೇಯುತ್ತಿದ್ದಂತೆಯೇ ಕರುಳ ಕುಡಿಗಳು ಕಣ್ಣಮುಂದೆ ಬಾಡಿಹೋದಾಗ ಆ ದುಃಖದ ಅನುಭವವನ್ನೂ ಎದೆಯಲ್ಲಿ ತುಂಬಿಕೊಂಡವರು ಅವರು… ಇಷ್ಟಾದರೂ ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು. ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು. ರಸವೆ ಜನನ ವಿರಸ ಮರಣ ಸಮರಸವೇ ಜೀವನ ಎಂದು ಬದುಕನ್ನು ಎದೆಗಪ್ಪಿಕೊಂಡು ಅರಳಿದ ಕಾವ್ಯಚೇತನ ಅವರದ್ದು… ಬೇಂದ್ರೆ ಅಥವಾ ‘ಬೇನ್’ರೆ ಅಂದರೆ ದೇವಾಲಯಗಳಲ್ಲಿ ಋಕ್ ಮಂತ್ರಗಳನ್ನು ಪಠಿಸುವವರು ಎಂಬ ಅರ್ಥ ಇದೆಯಂತೆ. ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು. ಇವರ ಮುತ್ತಜ್ಜ ರಾಮಭಟ್ಟ ಎಂಬುವರು ಕೊನೆಗೆ ಸಂನ್ಯಾಸ ದೀಕ್ಷೆ ಪಡೆದು ಸಮಾಧಿಸ್ತರಾದರೆ, ಬೇಂದ್ರೆಯವರ ಅಜ್ಜ ಅಪ್ಪಾಭಟ್ಟ ತಪಃಶಕ್ತಿಯ ಜೊತೆಗೆ ಕಾವ್ಯಶಕ್ತಿಯನ್ನೂ ಪಡೆದಿದ್ದರಂತೆ. ಇವರು ಸತ್ಯನಾರಾಯಣ ಕಥೆಯನ್ನು ರಚಿಸಿದ್ದರೆಂದು ಹೇಳುತ್ತಾರೆ… ಬೇಂದ್ರೆಯವರ ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳ ಹೆಸರುಗಳನ್ನು ಹೇಳುವುದು ಅಷ್ಟು ಸುಲಭದ ಮಾತಲ್ಲ. ಅಂಬೂ ತಾಯಿಯೇ ಅವರ ಬದುಕಿನ ಮೊದಲ ಪ್ರೇರಕ ಶಕ್ತಿ. ಅವರ ಸಂಕೇತವಾಗಿಯೇ ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಮಾಡಿಕೊಂಡರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ಕವಿ ಹುಯಿಲಗೋಳ ನಾರಾಯಣರಾಯರು ಇವರ ಶಿಕ್ಷಕ ವರ್ಗದಲ್ಲಿ ಒಬ್ಬರಾಗಿದ್ದರು. ಇನ್ನೊಬ್ಬ ಮಹತ್ವದ ವ್ಯಕ್ತಿಯೆಂದರೆ ಪುಣೆಯ ಫರ್ಗೂಸನ್ ಕಾಲೇಜಿನ ಆಂಗ್ಲಭಾಷೆಯ ಪ್ರಾಧ್ಯಾಪಕರಾದ ಪಟವರ್ಧನ ಅವರು. ಬಾಲ್ಯದುದ್ದಕ್ಕೂ ಆಸರೆಯಾಗಿದ್ದವರು ಅವರ ಕಕ್ಕ ಬಂಡೋಪಂತರು. ಅಧ್ಯಯನ ಬೇಂದ್ರೆಯವರ ಬದುಕಿನ ಒಂದು ಅವಿಭಾಜ್ಯ ಅಂಗ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಸಾಹಿತ್ಯಗಳನ್ನು ಅಧ್ಯಯನ ಮಾಡಿದವರು ಅವರು. ಎಲ್ಲಕ್ಕಿಂತ ಅತಿ ಮುಖ್ಯವಾದ ವಿಷಯ ಎಂದರೆ ಇವರ ಬದುಕು ಮರಾಠಿ, ಕನ್ನಡ ದ್ವಿಭಾಷಾ ವಾತಾವರಣದಲ್ಲಿದ್ದುದು. ಕನ್ನಡದಲ್ಲಿ ಇಂಥ ದ್ವಿಭಾಷಾ, ದ್ವಿಸಂಸ್ಕೃತಿಗಳ ವಾತಾವರಣದಲ್ಲಿ ಮಾಸ್ತಿ, ಡಿ.ವಿ.ಜಿ., ಪು.ತಿ.ನ ಅವರೂ ಇದ್ದವರೇ ಎಂದರೂ ಬೇಂದ್ರೆಯವರ ಕಾವ್ಯದಲ್ಲಿ ಮರಾಠಿ, ಕನ್ನಡ ಭಾಷಾ ಸಂಸ್ಕೃತಿಗಳ ಸಂಗಮದ ಫಲಸಮೃದ್ಧಿಯನ್ನು ಕಾಣಬಹುದಾಗಿದೆ. ಮರಾಠಿಯ ಜ್ಞಾನೇಶ್ವರಿ, ರಾಮಾಯಣ, ಮಹಾಭಾರತ, ಭಾಗವತ, ವಚನಗಳು, ಕೀರ್ತನ ಸಾಹಿತ್ಯ, ತತ್ವಜ್ಞಾನ, ಸಂಖ್ಯಾಶಾಸ್ತ್ರ, ಖಗೋಳಶಾಸ್ತ್ರ, ಜೋತಿಷ್ಯ ಶಾಸ್ತ್ರ, ಕಾವ್ಯಮೀಮಾಂಸೆ, ಅಲಂಕಾರ, ಉಪನಿಷತ್ತು, ಪಾಣಿನಿಯ ವ್ಯಾಕರಣ, ಕನ್ನಡ ಸಾಹಿತ್ಯ-ಹೀಗೆ ಬಹು ಮುಖ್ಯವಾದ ಅಧ್ಯಯನದಿಂದ ಸಮೃದ್ಧಗೊಂಡ ಚೇತನ ಬೇಂದ್ರೆಯವರದು. ವಿಶ್ವದ ಮಹಾಕವಿಗಳು, ಹಾಗೆಯೇ ಖಲಿಲ್ ಜಿಬ್ರಾನ್, ಜಾರ್ಜ್ ರಸೆಲ್, ಜೆ. ಕೃಷ್ಣಮೂರ್ತಿ, ಅರವಿಂದರು, ಸ್ವಾಮಿ ರಾಮದಾಸ್, ಮಾರಿಸ್ ಮೇಟರ್ಲಿಂಕ್ ಇಂಥ ದಾರ್ಶನಿಕರ ಅನುಭವ ಚಿಂತನ ಸಮುದ್ರಗಳನ್ನು ಕುಡಿದ ಅಗಸ್ತ್ಯ ಇವರು. ಇಂಗ್ಲಿಷ್, ಕನ್ನಡ ಸಂಸ್ಕೃತ ಮತ್ತು ಮರಾಠಿ ಸಾಹಿತ್ಯಗಳ ಅತ್ಯಂತ ಆತ್ಮೀಯವಾದ ಒಡನಾಟ ಪಡೆದಿದ್ದ ಈ ವ್ಯಕ್ತಿತ್ವದಲ್ಲಿ ಎರಡು ಭಾಷಾ ಸಂಸ್ಕೃತಿಗಳ ಸಂಗಮವಾಗಿದ್ದಂತೆಯೇ ನಗರ ಹಾಗೂ ಜಾನಪದ ಸಂಸ್ಕೃತಿಗಳು ಸಂಗಮಗೊಂಡಿದ್ದವು… ಅವರ ಮೊದಲನೇ ಕವನ ಸಂಕಲನವಾದ ‘ಗರಿ’ಯಲ್ಲಿ “ಕನ್ನಡದ ಅಶರೀರವಾಣಿಯು ಸಾವಿರ ಬಾಯಿಗಳಿಂದ ತನ್ನ ಕನಸನ್ನು ಕನ್ನಡಿಸುತ್ತಿದೆ. ಆ ಸಾವಿರ ಬಾಯಿಗಳಲ್ಲಿ ನನ್ನದೊಂದು. ಅದೇ ನನ್ನ ಧನ್ಯತೆ” ಎಂದು ಸಹೃದಯರಿಗೆ ನಿವೇದಿಸಿಕೊಳ್ಳುವ ಮಾತು ಬೇಂದ್ರೆಯವರ ಪ್ರತಿಭೆಯ ದ್ಯೋತಕವಾಗಿದೆ. ಹೀಗಾದುದರಿಂದಲೇ ಕನ್ನಡದ ಎಲ್ಲ ಒಳ್ಳೆಯ ಕಾವ್ಯವು ತನ್ನದೇ ಎನ್ನುವ ನಿರ್ಮತ್ಸರದ ಅಭಿಮಾನ ತಾನೇ ತಾನಾಗಿ ಮೂಡಿತು. ‘ಗೆಳೆಯರ ಬಳಗ’ ಎಂಬ ವಿ.ಕೃ. ಗೋಕಾಕ, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ರಂ. ಶ್ರೀ ಮುಗಳಿಯಂಥ ಕವಿಗಳ ಬಳಗವನ್ನೇ ಕಟ್ಟಿದರು. ಆ ಗುಂಪು ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಇತಿಹಾಸದ ಒಂದು ಜೀವಂತ ಭಾಗವಾಗಿ ಉಳಿದಿದ್ದಷ್ಟೇ ಅಲ್ಲ ಕವಿಗೆ ಕವಿ ಮುನಿವ ಎಂಬ ಗಾದೆಯನ್ನು ಸುಳ್ಳಾಗಿಸಿತು. ಅದಕ್ಕಿಂತ ಮುಖ್ಯವಾದ ಮಾತು ಎಂದರೆ ಕನ್ನಡದ ತಮ್ಮ ಸಮಕಾಲೀನ ಕವಿಗಳನ್ನು ಕುರಿತ ಅವರ ಧೋರಣೆ. ಯುಗದ ಕವಿಗೆ, ಜಗದ ಕವಿಗೆ ನಮಸ್ಕಾರ ಎಂದು ಕುವೆಂಪು ಅವರನ್ನು ಅಭಿನಂದಿಸುತ್ತ ಅವರ ಚಿತ್ರಾಂಗದಾ ಕಾವ್ಯವನ್ನು ಕುರಿತು ಹೇಳುವಾಗ ಹಿಂದಿನ ಮಹಾಕಾವ್ಯವನ್ನು ಮೀರಿಸಲಿದೆ ಎಂದು ಅಭಿಮಾನಪಟ್ಟಿದ್ದು ಬೇಂದ್ರೆಯವರ ಮುಕ್ತ ಪ್ರಶಂಸೆಯ ಕವಿಹೃದಯವನ್ನು ಪರಿಚಯಿಸುತ್ತದೆ. ಬೇಂದ್ರೆಯವರ ಸನಿಹಕ್ಕೆ ಹೋದ ಹೆಚ್ಚು ಕನ್ನಡ ಕವಿಗಳ ಭಾವನೆ ಇದೇ ತೆರನಾದದ್ದಾಗಿದೆ… ರಸ ಋಷಿ, ಶ್ರೇಷ್ಠ ಕವಿ ಹೀಗೆ ಬಹುವಿಧವಾಗಿ ರಸಿಕರಿಂದ ಗೌರವಿಸಲ್ಪಟ್ಟ ಬೇಂದ್ರೆಯವರ ಕಾವ್ಯ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿದೆ. ಬೆಳಗು, ರಾಗರತಿ, ಶ್ರಾವಣ, ಯುಗಾದಿ, ಸಣ್ಣ ಸೋಮವಾರ, ಹಕ್ಕಿ ಹಾರುತಿದೆ ನೋಡಿದಿರಾ, ಪಾತರಗಿತ್ತಿ ಪಕ್ಕ, ಹೋತದ ಹುಣಸಿ, ಶ್ರಾವಣ ವೈಭವ, ಚಿತ್ತಿಯ ಮಳೆಯ ಸಂಜೆ ಇಂಥ ನಿಸರ್ಗವನ್ನು ಕುರಿತ ಕವಿತೆಗಳಾಗಲಿ; ಮಾಯಾಕಿನ್ನರಿ, ಹುಬ್ಬಳ್ಳಿಯಾಂವಾ, ಮನಸುಖರಾಯನ ಮಗಳು ಇಂತಹ ಮಾಂತ್ರಿಕ ಕವಿತೆಗಳಾಗಲಿ; ಪುಟ್ಟ ವಿಧವೆ, ನರಬಲಿ, ತುತ್ತಿನಚೀಲ, 33 ಕೋಟಿ, ಕನಸಿನೊಳಗೊಂದು ಕನಸು ಇಂಥ ಸಾಮಾಜಿಕ ಕವಿತೆಗಳಾಗಲಿ; ಕೇಳಿರೊಂದು ಸೋಜಿಗದಂಥ ಬದುಕಿನ ಗಹನತೆಯ ಕಡೆಗೆ ಮನಸೆಳೆಯುವ ಕವಿತೆಯಾಗಲಿ; ಗೆಳೆಯ ಶಂಕರದೇವ, ಗುರುದೇವರಂಥ ವ್ಯಕ್ತಿತ್ವಗಳನ್ನು ಕುರಿತು ಬರೆದ ಕವಿತೆಗಳಾಗಲಿ; ಅನಂತ ಪ್ರಣಯ, ಪ್ರೀತಿ ಇಂಥ ಪ್ರೇಮದ ವಿವಿಧ ಮುಖಗಳನ್ನು ಕುರಿತ ಕವಿತೆಗಳಾಗಲಿ ಬೇಂದ್ರೆಯವರ ಕವಿತೆ ತನ್ನ ಸಾಚಾತನದಿಂದ ಮೆರೆಯುತ್ತದೆ… ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗುತ್ತ ಹೋಗುವ ಪವಾಡಸದೃಶ ಶಕ್ತಿ. ನೀ ಹಿಂಗ ನೋಡಬ್ಯಾಡ ನನ್ನ, ನಾನೊಂದು ನೆನೆದರೆ, ಸಖೀಗೀತ, ನಾದ ಲೀಲೆ, ಪಾಡು, ಹೋದ ಬುಧವಾರ – ಇಂಥ ಕವಿತೆಗಳು ಅವರ ಬದುಕಿಗೆ ತೀವ್ರವಾದ ಆಘಾತವುಂಟು ಮಾಡಿದ ಮಗನ ಸಾವು, ಸಂಸಾರದ ವಿರಸ, ತನ್ನ ಬದುಕಿನ ಕಥೆ-ವ್ಯಥೆಗಳು, ಮಡದಿ ತನ್ನನ್ನು ಬಿಟ್ಟು ಹೋದದ್ದು, ಇಂಥ ಘಟನೆಗಳಿಂದ ಮೂಡಿದವುಗಳಾಗಿವೆ. ಬದುಕೇ ಕಾವ್ಯವಾಗುವ ಸಹಜ ಕವಿ ಹೃದಯವನ್ನು ಇಂಥ ಕಡೆ ಗುರುತಿಸಬಹುದು. ಬದುಕಿಗೆ ತೀವ್ರವಾಗಿ ಸ್ಪಂದಿಸುವ ಕವಿಚೇತನವಾದದ್ದರಿಂದಲೇ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಪಾತರಗಿತ್ತಿ ಪಕ್ಕಗಳ ವೈಭವಗಳನ್ನು ನವಿಲು ಗರಿಗೆದರಿದಂತೆ ಮೈತೆರೆಯುತ್ತಾ ಹೋಗುತ್ತದೆ. ಶ್ರಾವಣವಾಗಲಿ, ಧಾರವಾಡದ ಚೆಲುವಾಗಲಿ ಬದುಕಿನ ಕಾವ್ಯ ಅಥವಾ ಸುಂದರ ಮುಖವಾಗಲೀ ಈ ಪ್ರತಿಭೆಗೆ ಸದಾ ಆಹ್ವಾನವಾಗಿರುತ್ತದೆ. ಕನ್ನಡದಲ್ಲಿ ಬೇಂದ್ರೆಯವರಷ್ಟು ವಿಫುಲವಾಗಿ ಹಾಗೂ ಕಾವ್ಯಮಯವಾಗಿ ಕೌಟುಂಬಿಕ ಗೀತೆಗಳನ್ನು ರಚಿಸಿದ ಕವಿಯನ್ನು ಕಾಣುವುದು ಕಷ್ಟ. ಗಂಡು ಹೆಣ್ಣಿನ ಪ್ರೀತಿ ಹಾಗೂ ವಿರಸ ವಿಕೋಪಗಳನ್ನು ತುಂಬಾ ಕಾವ್ಯಮಯವಾಗಿಸಿದ ಪ್ರತಿಭೆ ಇವರದ್ದು… ಬೇಂದ್ರೆಯವರ 27ಕವನ ಸಂಕಲನಗಳು ಪ್ರಕಟವಾಗಿವೆ. ಈ ಕವನ ಸಂಕಲನಗಳನ್ನು ಅವಲೋಕಿಸಿದಾಗ ಬದುಕನ್ನು ಅದರ ಆಳ, ವಿಸ್ತಾರ ಹಾಗೂ ವೈವಿಧ್ಯದಲ್ಲಿ ಕಂಡಿರಿಸಿದ ಮಹಾ ಪ್ರತಿಭೆಯೊಂದು ನಮಗೆದುರಾಗುತ್ತದೆ. ವಚನ ಪರಂಪರೆಯಲ್ಲಿ ರಚಿತವಾದ ವಿನೂತನ ಕಾಂತಿಯ ಕರುಳಿನ ವಚನಗಳು, ಮಾಂತ್ರಿಕತೆಯಿಂದ ಕಳಕಳಿಸುವ ಸುನೀತಗಳು ಅಲ್ಲದೆ ಕನ್ನಡದ ಅನುಭಾವ ಪರಂಪರೆಯನ್ನು ಮುಂದುವರೆಸಿರುವುದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ. ಬೆಳಗು ರೀತಿಯ ನಿಸರ್ಗ ಗೀತೆಯಿಂದ ಆರಂಭಿಸಿದ ಜೋಗಿ, ಓಂ ಸಚ್ಚಿದಾನಂದ ಇಂಥ ಕವಿತೆಗಳವರೆಗೆ ಇದರ ಹರವಿದೆ. ಕನ್ನಡದ ಪರಂಪರೆಯನ್ನು ಹಾಡಿ ಕರ್ನಾಟಕದ ಏಕೀಕರಣದ ಸಂಘಟನೆಯನ್ನು ಇವರ ಕಾವ್ಯ ನಡೆಸಿದ ರೀತಿ ಮುಖ್ಯವಾದದ್ದು. ಮಾನವನನ್ನು ಸದಾ ಕಾಡುವ ಹಸಿವು, ಬಡತನಗಳು ಕೂಡ ಅನ್ನದೇವರು, ಅನ್ನಬ್ರಹ್ಮದ ದೇಗುಲದಲ್ಲಿ ಇಂಥ ಕವಿತೆಗಳಿಗೆ ಕಾರಣವಾಗಿವೆ. ಬಂಗಾಳದಲ್ಲಿ ನಡೆದ ಮಾರಣ ಹೋಮವನ್ನು ಕುರಿತು ಬರೆದ ‘ನರಬಲಿ’ ಕವಿಯನ್ನು ಅಂದಿನ ಸರ್ಕಾರದ ಕೋಪಕ್ಕೂ ಗುರಿಯಾಗಿಸಿ ಸೆರೆಮನೆಗೆ ತಳ್ಳಿದ್ದು ಐತಿಹಾಸಿಕ ಘಟನೆ. ಬದುಕಿನ ಬಡತನ, ಕಷ್ಟ-ಕಾರ್ಪಣ್ಯದ ಮಧ್ಯೆಯೂ ನಿಸರ್ಗದ ಹಾಗೂ ಬದುಕಿನ ಸೌಂದರ್ಯವನ್ನು ಬೊಗಸೆ ಬೊಗಸೆಯಾಗಿ ಸವಿದ, ಹಾಗೆಯೇ ಬದುಕಿದ ಧೀಮಂತ ಪ್ರತಿಭೆ ಬೇಂದ್ರೆಯವರದು. ನಾದದ ನದಿಯೊಳು ಮಿಂದಾಗ ಸೂಜಿ ಹಿಂದ ದಾರದಾಂಗ ಇಂಥ ಅತ್ಯುತ್ತಮವಾದ ಅನೇಕ ಕಾವ್ಯಪಂಕ್ತಿಗಳನ್ನು ಬೇಂದ್ರೆಯವರ ಕಾವ್ಯದ ತುಂಬಾ ಕಾಣಬಹುದು. ಅದಕ್ಕೆ ಕಾರಣ ಈ ಪ್ರತಿಭೆ ವಿಶೇಷವಾಗಿ ರೂಪಕಗಳ ಮೂಲಕವೇ ಕ್ರಿಯಾತ್ಮಕವಾಗತೊಡಗುವುದು. ಉದಾಹರಣೆಗೆ ಅತ್ಯಂತ ಸರಳ ಎಂಬಂತೆ ಕಾಣುವ ಬಡವ ಬಡವಿ ಕವನವನ್ನೇ ನೋಡಬಹುದು… ಜೋಗಿಯಂಥ ಹೆಚ್ಚು ಸಂಕೀರ್ಣವೂ, ಕಿಂಚಿದ್ ಸ್ಪಷ್ಟವೂ ಹಾಗೂ ಅಧ್ಯಾತ್ಮಿಕವೂ ಆದ ಕವಿತೆಯನ್ನು ಬಿಟ್ಟು ಇಡೀ ಸಂಜೆಯೇ ಒಬ್ಬ ಸುಂದರ ಪ್ರಣಯಿನಿಯಾಗಿ ಎದ್ದು ಮೂಡಿಬರುವಂತೆ ಚಿತ್ರಿತವಾಗಿರುವ ಮಾಂತ್ರಿಕವಾದ, ರಾಗರತಿಯಂಥ ಕವಿತೆಯನ್ನು ಬಿಟ್ಟು ಸರಳವೂ, ಸಹಜವೂ ಆದರೆ ಬೇಂದ್ರೆಯವರ ಕಾವ್ಯ ಪಡೆಯುವ ಸಾರ್ಥಕ್ಯದ ರೀತಿಯನ್ನು ವ್ಯಂಜಿಸುವಂಥದ್ದು ಆಗಿದೆ ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಎಂದು ಸುಂದರವಾಗಿ ಮೂಡುವ’ ಬಡವ ಬಡವಿ ಕವನ. ಬೇಂದ್ರೆಯವರು ಅನೇಕ ಕವಿತೆಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ನಮ್ಮ ಕೊನೆಯ ಶರಣು ಹಾಗೂ ಮೇಘದೂತ ಕವಿತೆಗಳು ಅನುವಾದಗಳು. ಅರವಿಂದರ ಸಾವಿತ್ರಿಯನ್ನು ಮತ್ತೆ

ಜ್ಞಾನಪೀಠ ಪ್ರಶಸ್ತಿ ವಿಜೇತರು Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ದೌರ್ಬಲ್ಯದ ಸಾಮರ್ಥ್ಯ ಅವ್ಯಕ್ತ ದೌರ್ಬಲ್ಯದ ಸಾಮರ್ಥ್ಯ ಇವತ್ತಿನ ಕಥೆಯ ವಿಶೇಷವೇ ಹೆಚ್ಚಿನ ಮಕ್ಕಳಲ್ಲಿ ಕಂಡುಬರುವ ತಳಮಳ, ನೋವು-ನಲಿವುಗಳಿಗೆ ಕಾರಣವಾಗುವುದು. ನಾನು ಗಮನಿಸಿದ ಹಾಗೆ ಈ ಸಮಸ್ಯೆ ಎಂಟನೇ ಕ್ಲಾಸಿನ ಪ್ರೌಢ ಮಕ್ಕಳಲ್ಲಿ ಶುರುವಾದರೆ ಎಲ್ಲಿಯವರೆಗೆ ಬೇಕಿದ್ದರೂ ಹೋಗಬಹುದು. ಇವತ್ತಿನ ದಿನ ನಾನೊಂದು ಸಹಜವಾದ ಸಮಸ್ಯೆಯನ್ನು ತೆಗೆದುಕೊಂಡು ಮಕ್ಕಳಲ್ಲಿ ಮಾತನಾಡುವ ಎಂದು ಶುರುಮಾಡಿದೆ. ಅಲ್ಲಿ ಕ್ಲಾಸಲ್ಲಿದ್ದ ಎಲ್ಲ ಮಕ್ಕಳಿಗೂ ಒಂದು ಅಸೈನ್ಮೆಂಟ್ ಕೊಟ್ಟೆ.. ಎಲ್ಲರೂ ಒಂದು ಚೀಟಿ ತೆಗೆದುಕೊಂಡು ನಿಮಗೆ ಸಹಜವಾಗಿ ನೋವುಂಟುಮಾಡುವ ಬೇರೆಯವರ ಟೀಕೆ ಟಿಪ್ಪಣಿಗಳನ್ನು 4 ಪಾಯಿಂಟ್ಗಳಲ್ಲಿ ಬರೆಯಿರಿ ಅಂದೆ. ಮೊದಲು ಎಲ್ಲರೂ ಹಿಂದು-ಮುಂದು ನೋಡಿದರು, ಸ್ವಲ್ಪ ನಾಟಕದ ನಗೆ ಹೊನಲು ಹರಿಸಿದರು…. ನಾನು ಹೇಳಿದೆ ‘ಇದನ್ನು ಬರೆದರೆ ನಿಮಗೆ ಒಂದು ಹೊಸ ವಿದ್ಯೆ ಕಲಿಸುತ್ತೇನೆ ನಿಮ್ಮ ದೌರ್ಬಲ್ಯವನ್ನು ನಿಮ್ಮಸಾಮರ್ಥ್ಯವನ್ನಾಗಿ ಮಾಡುತ್ತೇನೆ. ಸ್ವಲ್ಪ ಪ್ರಯತ್ನ ಮಾಡಿ…’ನಂತರ ಒಂದೊಂದೇ ಮಗು ಬರಿಲಿಕ್ಕೆ ಶುರು ಮಾಡ್ತು…ಬರದ್ರು 3 4 5 ಇತರ ಹಲವು ವಿಷಯ, ಹಲವು ನೋವುಗಳ ಪಟ್ಟಿ ರೆಡಿಯಾಯಿತು. ಒಬ್ಬೊಬ್ಬರಾಗಿಯೇ ಓದಿ ಈಗ ಎಂದೆ.. ‘ಮಿಸ್ ನನಗೆ ನೀನು ಕಪ್ಪಗಿದ್ದೀಯ ನಿನ್ನ ಸ್ನೇಹ ಬೇಡ ಎಂದಿದ್ದಾರೆ. ಮನಸ್ಸಿಗೆ ತುಂಬಾ ನೋವಾಗುತ್ತದೆ’ ಎಂದು ಅವಳ ಕಥೆ ಹೇಳಿ ಮರುಗಿದಳು. ಇನ್ನೊಬ್ಬ ಎದ್ದು ‘ಮಿಸ್ ನೀನು ದಪ್ಪಗಿದ್ದೀಯಾ, ನಮ್ಮ ಜೊತೆ ಸರಿಹೊಂದುವುದಿಲ್ಲ, ಬೇರೆ ಕಡೆ ಇರು ಎಂದು ನನ್ನನ್ನು ಎಲ್ಲರೂ ದೂರ ಮಾಡುತ್ತಾರೆ ಮನಸ್ಸಿಗೆ ನೋವಾಗುತ್ತದೆ’ ಎಂದು ಅವನ ಕಥೆ ಹೇಳಿದ…ಮತ್ತೊಬ್ಬಳು ಎದ್ದುನಿಂತು ‘ಮಿಸ್ ನಾನು ಕುಳ್ಳಗಿರುವುದರಿಂದ ನನ್ನನ್ನು ಎಲ್ಲರೂ ಕುಳ್ಳಿ ಕುಳ್ಳಿ ಎಂದು ಕರೆಯುತ್ತಾರೆ. ನನಗೆ ತುಂಬಾ ಕಿರಿಕಿರಿಯಾಗುತ್ತದೆ’ ಅಂತ ಅವಳ ಕಥೆ…ಹೀಗೆ ಒಬ್ಬರಾದ ಮೇಲೊಬ್ಬರು ಕುಳ್ಳಗಿರುವುದು, ಹೆಚ್ಚು ಉದ್ದ ಇರೋದು, ಕರ್ರಗೆ ಇರುವುದು, ತುಂಬಾನೇ ಬೆಳ್ಳಗಿರುವುದು, ದಪ್ಪಗಿರುವುದು, ಸಣ್ಣಕ್ ಇರುವುದು, ಉಗ್ಗುವುದು, ಹುಬ್ಬುಗಳು ಕೂಡಿರುವುದು, ಇತ್ಯಾದಿಗಳು… ಎಲ್ಲ ಮಕ್ಕಳಲ್ಲೂ ಒಂದು ಅಥವಾ ಇನ್ನೊಂದು ಮನಸ್ಸಿಗೆ ಕೂಡಿದ ಸಮಸ್ಯೆಗಳಿವೆ ಎಂದು ನನಗೆ ಗೊತ್ತಿತ್ತು ಅದು ಇವತ್ತು ಸ್ವಲ್ಪ ಮಟ್ಟಿಗೆ ಹೊರಗೆ ಬಂದಂತಾಯಿತು,.. ನಾನೇ ಹೇಳಿದೆ ‘ಎಲ್ಲರೂ ಈಗ ಐದು ನಿಮಿಷ ಸುಮ್ಮನೆ ಕೂತ್ಕೊಳ್ಳಿ. ಮತ್ತೆ ನಿಮ್ಮ ನಿಮ್ಮ ಚೀಟಿಯಲ್ಲಿರುವ ಘಟನೆಗಳನ್ನು ತಾಳ್ಮೆಯಿಂದ ಓದಿ. ಅದರಲ್ಲಿ ಸತ್ಯ ಯಾವುದು ನೋಡಿ ಹೇಳಿ. ನನ್ನನ್ನು ಕೇಳಿದರೆ,ನಾನು ಸಣ್ಣವನಿದ್ದಾಗ, ನನ್ನನ್ನು ಹೆಚ್ಚಿನ ಮಕ್ಕಳು ಶಾಲೆಯಲ್ಲಿ ಕುಳ್ಳಿ ಕುಳ್ಳಿ ಎನ್ನುತ್ತಿದ್ದರು, ಆದರೆ ಸತ್ಯವೆಂದರೆ ನಾನು ಹೆಚ್ಚಿನ ಮಕ್ಕಳಿಗೆ ಹೋಲಿಸಿದರೆ ಕುಳ್ಳಗೆ ಇದ್ದೇನೆ ಎಂದು ನಾನು ತಿಳಿದಿದ್ದೆ. ಹಾಗಾಗಿ ನನ್ನ ಪ್ರಕಾರ ಕುಳ್ಳಿ ಎಂದರೆ ಅದು ನನ್ನಲ್ಲಿರುವ ಒಂದು ಸಾಮರ್ಥ್ಯವೇ ಹೊರತು ದೌರ್ಬಲ್ಯವಲ್ಲ, ಮತ್ತೆ ಯಾಕೆ ಬೇಸರ ಮಾಡಿಕೊಳ್ಳಬೇಕು’ ಎಂದು ಹೇಳಿದೆ. ‘ನೀವು ನಾನು ಹೇಳಿದ್ದನ್ನು ಮಾಡಿ’ಎಂದು ಹೇಳಿದೆ. 10 ನಿಮಿಷ ಬಿಟ್ಟು ಕೇಳಿದೆ…. ‘ನಿಮಗೆ ಆ ಪಟ್ಟಿಯಲ್ಲಿ ಇರುವ ನೋವಾಗುವ ವಿಷಯಗಳ ಗುಣವು ನಿಮ್ಮಲ್ಲಿವೆಯೆ????’ ಅನಿಸಿಕೆಗಳು ಮಿಶ್ರಿತವಾಗಿ ಬಂದದ್ದು ನೋಡಿ ಸಂತೋಷವಾಯಿತು. ಸತ್ಯವನ್ನು ಸತ್ಯದಂತೆ ತೆಗೆದುಕೊಂಡವರು ಕೆಲವರು, ಹೇಳಿದ ಮಾತಲ್ಲಿ ಸಾಧ್ಯತೆಗಳನ್ನು ವಿಶ್ಲೇಷಿಸಿದವರು ಕೆಲವರು. ‘ಹೌದು ನಿಜ! ನಾನು ನಿಜವಾಗಲೂ ದಪ್ಪಗಿದ್ದೇನೆ,ಕುಳ್ಳಗಿದ್ದೇನೆ, ಕರ್ರಗಿದ್ದೇನೆ,’ ಇತ್ಯಾದಿ,ಇತ್ಯಾದಿ,ಹೇಳುವ ಗುಂಪೊಂದಾದರೆ; ‘ಇಲ್ಲ,ಇಲ್ಲ ನನ್ನ ಹುಬ್ಬುಗಳೇನು ಅಷ್ಟು ದಪ್ಪನಾಗಿಲ್ಲ, ಅಷ್ಟು ಕೆಟ್ಟದಾಗಿಲ್ಲ, ಸ್ವಲ್ಪ ಕೂಡಿದೆ ಅಷ್ಟೇ….’ಇಂತಹ ಅಭಿಪ್ರಾಯವು ಹಳ್ಳಿ ಗುಂಪು ಇನ್ನೊಂದು…… ನಂತರ ನಾನು ಹೇಳಿದೆ ‘ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ನಿಜ ಗುಣಗಳನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಒಪ್ಪಿಕೊಂಡು ಬಿಟ್ಟರೆ ಅದು ಎಂದಿಗೂ ನಮ್ಮ ದೌರ್ಬಲ್ಯವಾಗಿ ಉಳಿಯುವುದಿಲ್ಲ. ಹಾಗಾಗಿ ನೀವೆಲ್ಲರೂ ಇನ್ಮೇಲೆ ಯಾರೇ ನಿಮ್ಮ ಬಗ್ಗೆ ಏನೇ ಹೇಳಿದರೂ ಮೊದಲು ಅದು ನೀವು ಅಹುದೇ ಎಂದು ಆಲೋಚಿಸಿ, ಹೌದಾದರೆ ಒಪ್ಪಿಕೊಂಡು ಬಿಡಿ, ಅಲ್ಲವಾದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ….’ ಮಕ್ಕಳಿಗೆ ಇನ್ನೂ ಸರಿಯಾಗಿ ಅರ್ಥ ಮಾಡಿಸಲು ಅಷ್ಟಾವಕ್ರ ಎಂಬ ಪಂಡಿತೋತ್ತಮನ ಕತೆಯನ್ನು ಮಕ್ಕಳಿಗೆ ಹೇಳಿದೆ. ಇದರಲ್ಲಿ ಇಡೀ ಸಭೆ ಅವನನ್ನು ನೋಡಿ ನಗುವಾಗ ಅಷ್ಟಾವಕ್ರ ಒಂದು ಮಾತನ್ನು ಹೇಳುತ್ತಾನೆ, “ ನಾನು ದೈಹಿಕವಾಗಿ ವಕ್ರವಾಗಿರಬಹುದು,ಆದರೆ ನೀವುಗಳು ಮಾನಸಿಕವಾಗಿ ವಕ್ರ ವಕ್ರವಾಗಿದ್ದೀರ”. ಕತೆ ಮುಗಿಯುವಷ್ಟರಲ್ಲಿ ಈ ವಿಷಯವು ಮಕ್ಕಳ ಮನಸ್ಸನ್ನು ಮುಟ್ಟಿತ್ತು.ಅದೇ ಒಂದು ನೆಮ್ಮದಿ. ನಮ್ಮ ಸಮಾಜದಲ್ಲಿ ಮಕ್ಕಳ ನ್ಯೂನ್ಯತೆಗಳನ್ನು ಅವರ ಸಾಮರ್ಥ್ಯವನ್ನಾಗಿ ಮಾಡಲು ಯಾವುದೇ ಪುಸ್ತಕವಿಲ್ಲ, ಪರೀಕ್ಷೆಯಿಲ್ಲ,ಶಾಲೆಯೂ ಇಲ್ಲ.ಅಂಕಗಳು ಮಾತ್ರವಲ್ಲ,ಅವರ ವ್ಯಕ್ತಿತ್ವವೂ ವಿಕಸನವಾಗುವುದು ಮುಖ್ಯ. “ನಮ್ಮ ಜೀವನದ ಅಂಕಪಟ್ಟಿಯನ್ನು ಅನುಭವಗಳಿಂದ ತುಂಬಿಸಿದರೆ, ಹೊಸ ವ್ಯಕ್ತಿತ್ವ ಹೊರಹೊಮ್ಮುವುದು ಖಂಡಿತ “ ************

ಅವ್ಯಕ್ತಳ ಅಂಗಳದಿಂದ Read Post »

You cannot copy content of this page

Scroll to Top