ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಹೂ ಕವಿತೆಗಳು. ರಂಗಮ್ಮ ಹೊದೇಕಲ್ ಗಂಧವಾಗಲು ಬೇರು ಎಷ್ಟು ನೋಯಬೇಕೋ.. ಘಮ ವಾಗಲು ದಾರಿ ಎಷ್ಟು ಸವೆಯಬೇಕೋ.. ನೆಲದಲ್ಲಿ ಭದ್ರ ಬೇರೂರಿ ಆಕಾಶಕ್ಕೆ ಕಣ್ಣು ನೆಟ್ಟು ಪರಿಮಳದ ಬೆಡಗ ಹಾಡುವ ಸೋಜಿಗವ ಹೂಗಳೇ ತೆರೆದಾವು ನೋಡಾ…….!! ಸೋತ ಮಾತು ಹುಗಿದು ಗಿಡ ನೆಡಬೇಕು ಅರಳಿದ ಹೂವಾದರೂ ಮಾತ ಕಲಿಸಿಯಾತು!! ಒಲವೂ ವಿಷವಾಗುವ ಕಾಲದಲ್ಲಿ ಹೂವೂ ಕೆರಳುವುದು ಅಚ್ಚರಿಯೇನಲ್ಲ!! ಬೇರಿನ ನೋವು..ಹೂವಿನ ನಗೆಯು! ನೊಂದೆನೆಂದು ಡಂಗೂರ ಸಾರದ ಬೇರು ಹೂ ನಗೆಯಲ್ಲಿ  ಲೋಕ ಸೆಳೆಯುತ್ತದೆ! ಬೇರಿನ ಕಣ್ಣೀರು ಗುರುತಾದವರು ಹೂವಿನ ಘಮಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ-ಮೌನದಲ್ಲಿ! ಹೂವಿನ ಸೌಂದರ್ಯ ಬೇರಿನ ಕಣ್ಣಲ್ಲಿದೆ ಬೇರಿನ ನಗು ಅರಳಿದ ಹೂವಿನಲ್ಲಿ!! ತುಳಿಯುತ್ತಾರೆಂದು ಗೊತ್ತಿದ್ದೂ ನೆಲಕೆ ಹೂ ಚಲ್ಲುವ ಮರ ನಮಗೆ ಮಾದರಿಯಾಗುವುದೇ ಇಲ್ಲ!! ಮತ್ತೇನಿಲ್ಲ… ನನ್ನ ಶಕ್ತಿಯ ಗುಟ್ಟು ನನ್ನನ್ನೆತ್ತಿ ನಿಲ್ಲಿಸಿದ ಅದೃಶ್ಯ ಬೇರಿನದು! ಈ ಹೂ ನಗು ಬೇರಿನ ಅಂತಃಕರಣಕ್ಕೆ ಕೃತಜ್ಞತೆಯು..! ನೆಲದಲ್ಲಿ ಭದ್ರ ಬೇರೂರಿ ಆಕಾಶಕ್ಕೆ ಕಣ್ಣು ನೆಟ್ಟು ಪರಿಮಳದ ಬೆಡಗ ಹಾಡುವ ಸೋಜಿಗವ ಹೂಗಳೇ ತೆರೆದಾವು ನೋಡಾ…….!! ಮತ್ತೇನು? ಹೂ ಅರಳುತ್ತದೆ ಉರುಳುತ್ತದೆ..!! ಅಷ್ಟರಲ್ಲೇ ಬದುಕೂ ಇದೆ!! ಹೂ ಬೆಡಗ ಹಾಡುತ್ತಾ ನಿಲ್ಲಬೇಡ! ಬೆನ್ನ ಹಿಂದೆ ಚೂರಿ ಇದ್ದಾತು! ಹೂ ಗಂಧದ ಹಾಗೆ ಮೌನ ತೇಲಿಬರುತ್ತದೆ ಎಲ್ಲರಿಗೂ ತಲುಪಲಾಗದು! ರಂಗಮ್ಮ ಹೊದೇಕಲ್ ಕವಿಪರಿಚಯ: ಶಾಲಾ ಶಿಕ್ಷಕಿಯಾದ ಇವರು ಶೈನಾ ಕೈಬರಹದ ಪತ್ರಿಕೆಯ ಕೈಬರಹಗಾರ್ತಿ.ಒಳದನಿ,ಜೀವಪ್ರೀತಿಯ ಹಾಡು ಇವರ ಕವನಸಂಕಲನಗಳು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಲೆಕ್ಕ ಇಡುವುದನ್ನು  ನಿಲ್ಲಿಸಿದ್ದೇನೆ ಚಂದ್ರಪ್ರಭ.ಬಿ ಅದೊಂದು ದಿನ ಅಪ್ಪ ನನ್ನ ಅವಸರಿಸಿ ಬರ ಹೇಳಿದ ಶಾಲೆಯಿಂದ ಓಡೋಡಿ ಬಂದ ನನ್ನ ತೆಕ್ಕೆಯಲ್ಲಿ ಬಿಗಿದು ಒಂದೇ ಸಮ ರೋಧಿಸಿದ ಅವನೂ ಅನಾಥನಾಗಿದ್ದ ನನ್ನಂತೆ ತನ್ನವ್ವನ ಕಳಕೊಂಡು ಆಡು ಕುರಿ ದನ ಮೇಯಿಸುತ್ತ ಅಪ್ಪನ ಕೂಗಿಗೆ ಓಗೊಡುತ್ತ ಆಗಾಗ ಶಾಲೆಗೂ ಮುಖ ತೋರಿಸುತಿದ್ದೆ ವರ್ಷದ ಕೊನೆಗೆ ಗೆಳೆಯರೆಲ್ಲ ಮುಂದಿನ ತರಗತಿಗೆ ನಾನು ಮಾತ್ರ ಹಿಂದೆ ಮೇಷ್ಟ್ರು ಹೇಳಿದರು – ‘ಗಣಿತದಲ್ಲಿ ನೀ ಎಲ್ಲ ಕಳಕೊಂಡೆ’ ವಸಂತ ಲಗ್ಗೆಯಿಟ್ಟುದು ಅರಿವಾದುದೇ ಅವಳ ರಾಗ ನನ್ನ ಕವಿತೆ ಸಂಧಿಸಿದಾಗ ನಮ್ಮ ನಡುವೆ ಗೋಡೆ ಎಳೆದವು ಅಂತಸ್ತಿನ ಇಟ್ಟಿಗೆ ನಾ ಬರಿಗೈಯಾಗಿದ್ದೆ ಒಲವ ಕಳಕೊಂಡು ಜೀವನ ನಾಟಕದ ಅಗಾಧ ರಂಗಸ್ಥಲ ಅಗಣಿತ ಪಾತ್ರ ಒಂದೊಂದು ಅಂಕದಲೂ ತಿರುವುಗಳ ರೋಚಕತೆ ತಿರುವು ತಿರುವಿನಲೂ ಬಗೆ ಬಗೆಯ ಲೆಕ್ಕ ಎಟುಕುತ್ತಲೇ ಕೈ ಜಾರುವ ಕೈಚೆಲ್ಲಿ ಕೂತಾಗ ತೆಕ್ಕೆಗೆ ಬಂದು ಬೀಳುವ ಸಂಗತಿಗಳ ವಿಸ್ಮಯ ಬದುಕಿನಲ್ಲಿ ಈಗ ಎಲ್ಲವೂ ಇದೆ ಕಳೆದುಕೊಳ್ಳುವುದು ನಿತ್ಯದ ಪರಿಪಾಠವಾದಂದಿನಿಂದ ಲೆಕ್ಕ ಇಡುವುದನ್ನು  ನಿಲ್ಲಿಸಿದ್ದೇನೆ. ಚಂದ್ರಪ್ರಭಾ ಕವಿ ಪರಿಚಯ: ಕಾಲೇಜಿನಲ್ಲಿ ಉಪನ್ಯಾಸಕರು. ಸಾಹಿತ್ಯದ ಓದು, ಬರವಣಿಗೆಯಲ್ಲಿ ಆಸಕ್ತಿ. ಕವಿತೆ, ಲೇಖನ ಬರೆಯುವ ಹವ್ಯಾಸ. ಪ್ರಕಟಿತ ಕೃತಿಗಳಿಲ್ಲ

ಕಾವ್ಯಯಾನ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ನಿಮ್ಮೊಂದಿಗೆ……… ಕು.ಸ.ಮಧುಸೂದನರಂಗೇನಹಳ್ಳಿ ಪ್ರಿಯರೆ,          ‘ಸಂಗಾತಿ’ ಡಿಜಿಟಲ್  ಕನ್ನಡ ಸಾಹಿತ್ಯ ಪತ್ರಿಕೆಯನ್ನು ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ.          ಇವತ್ತು ಮುದ್ರಣ ಮಾಧ್ಯಮದಿಂದ ಜನ ದೂರ ಸರಿಯುತ್ತಿದ್ದರೆ, ಅದಕ್ಕೆ ಕಾರಣ ವೇಗ ಹೆಚ್ಚಿಸಿಕೊಳ್ಳುತ್ತಿರುವ ಜನರ ಜೀವನ ಶೈಲಿ ಮತ್ತು ಅಗ್ಗದ ದರದಲ್ಲಿ ದೊರೆಯುತ್ತಿರುವ ಅಂತರ್ಜಾಲ ಸಂಪರ್ಕಗಳು,ಪ್ರತಿಯೊಬ್ಬರ ಕೈಲೂ ಇರುವ ಸ್ಮಾರ್ಟ್ ಪೋನುಗಳೇ ಕಾರಣ. ಇದರ ಜೊತೆಗೆ ದುಬಾರಿಯಾಗುತ್ತಿರುವ ಪುಸ್ತಕಗಳ ಬೆಲೆಯೂ ಒಂದು ಕಾರಣ!      ಮೊದಲಿನ ಹಾಗೆ ಪುಸ್ತಕವೊಂದನ್ನು ಕೈಲಿಹಿಡಿದು  ಕೂತಲ್ಲೇ ಬೇರು ಬಿಟ್ಟು ಓದುವ ಪುರಸೊತ್ತು ಯಾರಿಗೂ ಇಲ್ಲ. ಆದರೆ ತಮ್ಮ ಟ್ಯಾಬು–ಫೋನುಗಳ ಮೂಲಕ,ಪ್ರಯಾಣ ಮಾಡುತ್ತಾ, ಮನೆಗೆಲಸ ಮಾಡುತ್ತಾ, ತಮ್ಮ ವೃತ್ತಿಯಲ್ಲಿತೊಡಗಿಸಿಕೊಂಡಿರುತ್ತಲೆ ಓದುವ ಅಭ್ಯಾಸಕ್ಕೆ ಜನ ಒಗ್ಗಿ ಹೋಗುತ್ತಿದ್ದಾರೆ.       ಇಂತಹ ಸನ್ನಿವೇಶದಲ್ಲಿ ಜನ ಮುದ್ರಿತ ಸಾಹಿತ್ಯವನ್ನೇ ಓದಬೇಕು, ಅದರಲ್ಲಿ ಸಿಗುವ ಓದಿನ ಸುಖವೇ ಬೇರೆ ಎಂಬ ಮಾತೂ ಹಳಹಳಿಕೆಯ ಮಾತು ಕೇಳಿಬರುತ್ತಿದೆಯಾದರೂ, ಜನರ ವೇಗದ ಬದುಕಿನಲ್ಲಿ ಡಿಜಿಟಲ್ ಪತ್ರಿಕೆಗಳು,ಇ–ಪುಸ್ತಕಗಳು ಸೇರಿ ಹೋಗುತ್ತಿವೆ.        ಜನರ ಇಂತಹ ಸಾಹಿತ್ಯದ ಓದಿನ ಅಗತ್ಯಕ್ಕಾಗಿಯೇ ಸಂಗಾತಿ ಪತ್ರಿಕೆಯನ್ನು ರೂಪಿಸಲಾಗಿದೆ. ಇದು ನಮ್ಮ ಮೊದಲ ಪ್ರಯತ್ನವಾಗಿದ್ದು ನಿಮಗಿಷ್ಟವಾಗಬಹುದೆಂದು ನಂಬಿದ್ದೇನೆ. ಈ ಮೊದಲ ಸಂಚಿಕೆಯಲ್ಲಿ ಆಗಿರಬಹುದಾದ ನ್ಯೂನತೆಗಳನ್ನು  ಸರಿಪಡಿಸಿಕೊಂಡು ಮುನ್ನಡೆಯ ಬೇಕೆಂಬ ಅರಿವು ನನಗಿದೆ. ಈನಿಟ್ಟಿನಲ್ಲಿ ನಿಮ್ಮ ಸಲಹೆ ಸಹಕಾರಗಳು ಬೇಕಿವೆ.   ಸಂಗಾತಿಗೆ ಹಿರಿಯರು ಕಿರಿಯರು ಎಂಬ ಬೇಧವಿಲ್ಲ.ಇಲ್ಲಿಎಲ್ಲರ ಬರಹಗಳೂ ಸಮಾನವಾಗಿ ಪ್ರಕಟವಾಗುತ್ತವೆ.  ಆದರೆ ಇಂತಹ ಹೊಸ ಪತ್ರಿಕೆಯಲ್ಲಿ ಬರೆಯುವ ಉಧಾರತೆಯನ್ನು ಪ್ರಸಿದ್ದಬರಹಗಾರರು ತೋರುತ್ತಾರೆಂದು ನಂಬಿಕೊಂಡಿದ್ದೇನೆ. ಈದಿಸೆಯಲ್ಲಿ ಹಿರಿಯ ಬರಹಗಾರರನ್ನು ಸಂಪರ್ಕಿಸಲಾಗುತ್ತಿದೆ…     ರಾಜ್ಯದ ಮಲೆನಾಡಿನ ಮೂಲೆಯ ಹಳ್ಲಿಯೊಂದರಲ್ಲಿ ಕೂತು  ಇಂತಹ ಪತ್ರಿಕೆ ನಡೆಸುವುದು ಕಷ್ಟವೇ ಸರಿ. ದಿನದ ಬಹುತಾಸು ವಿದ್ಯುತ್ ನಿಲುಗಡೆಯಾಗುವ,ಆಗಾಗ ಮೊಬೈಲ್ ಟವರುಗಳು ಕೈ ಕೊಡುವ  ಹಳ್ಲಿಯಲ್ಲಿ ಕೂತು ಪ್ರತಿದಿನ  ಈ   ಬ್ಲಾಗನ್ನು ಅಪ್ ಡೇಟ್ ಮಾಡುವುದು ಕಷ್ಟದ ಕೆಲಸ.  ಹಾಗಾಗಿ ಮೊದಲ ಕೆಲವು  ತಿಂಗಳುಗಳ ಕಾಲ ವಾರದಲ್ಲಿ ಒಂದು ದಿನ ಅಂದರೆ ಪ್ರತಿ  ಶನಿವಾರ ಅಪ್ ಡೇಟ್ ಮಾಡಲಾಗುವುದು…….      ಇದೆಲ್ಲಕ್ಕೂ ಮುಖ್ಯವಾಗಿ ನಿಮ್ಮಲ್ಲಿ ಹೇಳಬೇಕಾಗಿರುವುದು ಕ್ಷಮಿಸಿ, ಕೇಳಬೇಕಾಗಿರುವುದು ಸಹೃದಯ ಓದುಗರಾಗಿ ಸಂಗಾತಿಯನ್ನು ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ಸೂಕ್ತ ಸಲಹೆಗಳನ್ನು ನೀಡಿ….     ನೀವುಗಳು ನಮ್ಮ ಜೊತೆಗಿರುತ್ತೀರೆಂಬ ನಂಬಿಕೆಯೇ ನಮ್ಮಿ ಪ್ರಯತ್ನದ ಹಿಂದಿರುವ ಪ್ರೇರಣೆ.

ನಿಮ್ಮೊಂದಿಗೆ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ!

ಸಂಪಾದಕರ ಮಾತು….. ಕು.ಸ.ಮಧುಸೂದನರಂಗೇನಹಳ್ಳಿ ಪ್ರಿಯರೆ,          ‘ಸಂಗಾತಿ’ ಡಿಜಿಟಲ್  ಕನ್ನಡ ಸಾಹಿತ್ಯ ಪತ್ರಿಕೆಯನ್ನು ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ.          ಇವತ್ತು ಮುದ್ರಣ ಮಾಧ್ಯಮದಿಂದ ಜನ ದೂರ ಸರಿಯುತ್ತಿದ್ದರೆ, ಅದಕ್ಕೆ ಕಾರಣ ವೇಗ ಹೆಚ್ಚಿಸಿಕೊಳ್ಳುತ್ತಿರುವ ಜನರ ಜೀವನ ಶೈಲಿ ಮತ್ತು ಅಗ್ಗದ ದರದಲ್ಲಿ ದೊರೆಯುತ್ತಿರುವ ಅಂತರ್ಜಾಲ ಸಂಪರ್ಕಗಳು,ಪ್ರತಿಯೊಬ್ಬರ ಕೈಲೂ ಇರುವ ಸ್ಮಾರ್ಟ್ ಪೋನುಗಳೇ ಕಾರಣ. ಇದರ ಜೊತೆಗೆ ದುಬಾರಿಯಾಗುತ್ತಿರುವ ಪುಸ್ತಕಗಳ ಬೆಲೆಯೂ ಒಂದು ಕಾರಣ!      ಮೊದಲಿನ ಹಾಗೆ ಪುಸ್ತಕವೊಂದನ್ನು ಕೈಲಿಹಿಡಿದು  ಕೂತಲ್ಲೇ ಬೇರು ಬಿಟ್ಟು ಓದುವ ಪುರಸೊತ್ತು ಯಾರಿಗೂ ಇಲ್ಲ. ಆದರೆ ತಮ್ಮ ಟ್ಯಾಬು–ಫೋನುಗಳ ಮೂಲಕ,ಪ್ರಯಾಣ ಮಾಡುತ್ತಾ, ಮನೆಗೆಲಸ ಮಾಡುತ್ತಾ, ತಮ್ಮ ವೃತ್ತಿಯಲ್ಲಿತೊಡಗಿಸಿಕೊಂಡಿರುತ್ತಲೆ ಓದುವ ಅಭ್ಯಾಸಕ್ಕೆ ಜನ ಒಗ್ಗಿ ಹೋಗುತ್ತಿದ್ದಾರೆ.       ಇಂತಹ ಸನ್ನಿವೇಶದಲ್ಲಿ ಜನ ಮುದ್ರಿತ ಸಾಹಿತ್ಯವನ್ನೇ ಓದಬೇಕು, ಅದರಲ್ಲಿ ಸಿಗುವ ಓದಿನ ಸುಖವೇ ಬೇರೆ ಎಂಬ ಮಾತೂ ಹಳಹಳಿಕೆಯ ಮಾತು ಕೇಳಿಬರುತ್ತಿದೆಯಾದರೂ, ಜನರ ವೇಗದ ಬದುಕಿನಲ್ಲಿ ಡಿಜಿಟಲ್ ಪತ್ರಿಕೆಗಳು,ಇ–ಪುಸ್ತಕಗಳು ಸೇರಿ ಹೋಗುತ್ತಿವೆ.        ಜನರ ಇಂತಹ ಸಾಹಿತ್ಯದ ಓದಿನ ಅಗತ್ಯಕ್ಕಾಗಿಯೇ ಸಂಗಾತಿ ಪತ್ರಿಕೆಯನ್ನು ರೂಪಿಸಲಾಗಿದೆ. ಇದು ನಮ್ಮ ಮೊದಲ ಪ್ರಯತ್ನವಾಗಿದ್ದು ನಿಮಗಿಷ್ಟವಾಗಬಹುದೆಂದು ನಂಬಿದ್ದೇನೆ. ಈ ಮೊದಲ ಸಂಚಿಕೆಯಲ್ಲಿ ಆಗಿರಬಹುದಾದ ನ್ಯೂನತೆಗಳನ್ನು  ಸರಿಪಡಿಸಿಕೊಂಡು ಮುನ್ನಡೆಯ ಬೇಕೆಂಬ ಅರಿವು ನನಗಿದೆ. ಈನಿಟ್ಟಿನಲ್ಲಿ ನಿಮ್ಮ ಸಲಹೆ ಸಹಕಾರಗಳು ಬೇಕಿವೆ.   ಸಂಗಾತಿಗೆ ಹಿರಿಯರು ಕಿರಿಯರು ಎಂಬ ಬೇಧವಿಲ್ಲ.ಇಲ್ಲಿಎಲ್ಲರ ಬರಹಗಳೂ ಸಮಾನವಾಗಿ ಪ್ರಕಟವಾಗುತ್ತವೆ.  ಆದರೆ ಇಂತಹ ಹೊಸ ಪತ್ರಿಕೆಯಲ್ಲಿ ಬರೆಯುವ ಉಧಾರತೆಯನ್ನು ಪ್ರಸಿದ್ದಬರಹಗಾರರು ತೋರುತ್ತಾರೆಂದು ನಂಬಿಕೊಂಡಿದ್ದೇನೆ. ಈದಿಸೆಯಲ್ಲಿ ಹಿರಿಯ ಬರಹಗಾರರನ್ನು ಸಂಪರ್ಕಿಸಲಾಗುತ್ತಿದೆ…     ರಾಜ್ಯದ ಮಲೆನಾಡಿನ ಮೂಲೆಯ ಹಳ್ಲಿಯೊಂದರಲ್ಲಿ ಕೂತು  ಇಂತಹ ಪತ್ರಿಕೆ ನಡೆಸುವುದು ಕಷ್ಟವೇ ಸರಿ. ದಿನದ ಬಹುತಾಸು ವಿದ್ಯುತ್ ನಿಲುಗಡೆಯಾಗುವ,ಆಗಾಗ ಮೊಬೈಲ್ ಟವರುಗಳು ಕೈ ಕೊಡುವ  ಹಳ್ಲಿಯಲ್ಲಿ ಕೂತು ಪ್ರತಿದಿನ  ಈ   ಬ್ಲಾಗನ್ನು ಅಪ್ ಡೇಟ್ ಮಾಡುವುದು ಕಷ್ಟದ ಕೆಲಸ.  ಹಾಗಾಗಿ ಮೊದಲ ಕೆಲವು  ತಿಂಗಳುಗಳ ಕಾಲ ವಾರದಲ್ಲಿ ಒಂದು ದಿನ ಅಂದರೆ ಪ್ರತಿ  ಶನಿವಾರ ಅಪ್ ಡೇಟ್ ಮಾಡಲಾಗುವುದು…….      ಇದೆಲ್ಲಕ್ಕೂ ಮುಖ್ಯವಾಗಿ ನಿಮ್ಮಲ್ಲಿ ಹೇಳಬೇಕಾಗಿರುವುದು ಕ್ಷಮಿಸಿ, ಕೇಳಬೇಕಾಗಿರುವುದು ಸಹೃದಯ ಓದುಗರಾಗಿ ಸಂಗಾತಿಯನ್ನು ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ಸೂಕ್ತ ಸಲಹೆಗಳನ್ನು ನೀಡಿ….     ನೀವುಗಳು ನಮ್ಮ ಜೊತೆಗಿರುತ್ತೀರೆಂಬ ನಂಬಿಕೆಯೇ ನಮ್ಮಿ ಪ್ರಯತ್ನದ ಹಿಂದಿರುವ ಪ್ರೇರಣೆ.

ನಿಮ್ಮೊಂದಿಗೆ! Read Post »

You cannot copy content of this page

Scroll to Top