ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
person's hands

ಆತ್ಮದ ಮಾತುಗಳು

woman dancing time lapse photography

ಈಗ ಹಗಲನ್ನು
ಇರುಳನ್ನೂ ಕಳೆದುಕೊಂಡೆ

ಹೊಂಬಣ್ಣದ ಸಂಜೆಯೊಳಗೆ ತುಂಗೆಯ ಮರಳುರಾಶಿಯಲ್ಲಿ ಮೂಡಿದ
ನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆ ಕಾಲುಗಳು
ಹೂತುಹೋದದ್ದು ಗೊತ್ತಾಗಲೇ ಇಲ್ಲ

ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯ
ನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿ
ಕಳೆದುಕೊಂಡಿದ್ದೆ ನಿನ್ನನೂ

ಕವಿತೆಯ ಪ್ರತಿಸಾಲನ್ನೂ ನೀನು ಆಕ್ರಮಿಸುವಾಗ
ಪ್ರತಿ ಶಬುದವನ್ನೂ ಜತನದಿಂದ ಕಂಠಪಾಠ

ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲು
ಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನು ಮುಸುಕಿದ ಕತ್ತಲ ಕಂಡು
ತಿರುಗಿ ನೋಡುವಷ್ಟರಲ್ಲಿ ನೀನಾಗಲೇ ವಿದಾಯ ಹೇಳಿಯಾಗಿತ್ತು

ಯಾಕೆ ಹೋದೆ ಎಲ್ಲಿ ಹೋದೆ ಯಾರಿರುವರು ಜೊತೆಗೆ
ಕೇಳಬಾರದ ಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿ
ಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರ
ಬಯಲು ಸೀಮೆಯ ಕುರುಚಲು ಬಯಲುಗಳಲ್ಲಿ

ಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇ
ರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ!

******************************

About The Author

Leave a Reply

You cannot copy content of this page

Scroll to Top