ಡಿಸೆಂಬರ್ – 10 ಮಾನವ ಹಕ್ಕುಗಳ ರಕ್ಷಣಾ ದಿನ. ಈ ಹಕ್ಕುಗಳ ರಕ್ಷಣೆ ಅರ್ಥಪೂರ್ಣವಾಗಿ ಸಾಕಾರಗೊಳುತ್ತಿದೆಯೇ..? ಅಲ್ಲದೇ ಭಾರತದಲ್ಲಿ ‘ಮಾನವ ಹಕ್ಕು’ಗಳ ಸ್ಥಿತಿ ಹೇಗಿದೆ..!? ಕೆ.ಶಿವು.ಲಕ್ಕಣ್ಣವರ ಇದೇ ಡಿಸೆಂಬರ್ 10ರಂದೇ ಈ ಮಾನವ ಹಕ್ಕುಗಳ ರಕ್ಷಣಾ ದಿನದ ಈ ಲೇಖನ ಬರೆಯಬೇಕಾಗಿತ್ತು ನಾನು. ಅಲ್ಲದೇ ಇನ್ನೂ ಒಂದಿಷ್ಟು ಸಾಂದರ್ಭಿಕ ಲೇಖನಗಳನ್ನೂ ಬರೆಯಬೇಕಾಗಿತ್ತು. ಆದರೆ ಈ ಯಾವುದೋ ಲೇಖನಗಳ ಮಾಹಿತಿ ಸಂಗ್ರಹಕ್ಕಾಗಿ ಹೀಗೆಯೇ ಸಿರಿಗೆರೆ ಹೋಗಿದ್ದೆ. ಹಾಗಾಗಿ ಈ ಡಿಸೆಂಬರ್ 10ರ ಈ ಮಾನವ ಹಕ್ಕುಗಳ ರಕ್ಷಣಾ ದಿನದ ಮಾಹಿತಿ ಲೇಖನ ಬರೆಯಲಾಗಲಿಲ್ಲ. ಅದಕ್ಕಾಗಿ ಈಗ ಬರೆಯುತ್ತಿದ್ದೇನೆ… ಪ್ರಪಂಚದ ಎಲ್ಲಾ ನಾಗರಿಕರಿಗೆ ಮಾನವ ಹಕ್ಕುಗಳು ದೊರಕುವುದನ್ನು ಖಾತ್ರಿಪಡಿಸುವ ಹೊಣೆ ವಿಶ್ವಸಂಸ್ಥೆಯದು. ಈ ಹಕ್ಕುಗಳು ಎಲ್ಲರಿಗೂ ದೊರಕಿವೆಯೆ? ಮನುಷ್ಯರು ಇರುವ ಎಲ್ಲಾ ಕಡೆ ಅವರಿಗೆ ಹಕ್ಕುಗಳು ಇರುತ್ತವೆ. ಇಂದಿನ ಸಮಾಜದಲ್ಲೂ ಮನುಷ್ಯರ ಹಕ್ಕುಗಳಿಗೆ ಮಾನ್ಯತೆಯನ್ನು ಕೊಡಲಾಗಿದೆ… ಪ್ರಪಂಚದಲ್ಲಿ ಡಿಸೆಂಬರ್ ಹತ್ತನೇ ತಾರೀಖನ್ನು ವಿಶ್ವಾದ್ಯಂತ ‘ಮಾನವ ಹಕ್ಕುಗಳ ದಿನ’ ಎಂದು ಆಚರಿಸಲಾಗುತ್ತಿದೆ. ಡಿಸೆಂಬರ್ 10, 1948ರಂದು ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಚಾರ್ಟರ್‍ಗೆ ಮನ್ನಣೆಯನ್ನು ನೀಡಿತು. ಇದನ್ನು ವಿಶ್ವಸಂಸ್ಥೆಯು ತನ್ನ ಎಲ್ಲಾ ಸದಸ್ಯ ದೇಶಗಳನ್ನು ಕಡ್ಡಾಯಗೊಳಿಸಿದೆ. ಈ ಹಕ್ಕುಗಳ ಬಗ್ಗೆ ಎಲ್ಲಾ ಸದಸ್ಯ ರಾಷ್ಟ್ರಗಳು ತಮ್ಮಲ್ಲಿನ ವಿದ್ಯಾರ್ಥಿ ಸಮುದಾಯಕ್ಕೆ, ಯುವಜನರಿಗೆ ತಿಳುವಳಿಕೆ ನೀಡಬೇಕೆಂದು ಕಡ್ಡಾಯಗೊಳಿಸಿದೆ… ಮಾನವ ಹಕ್ಕುಗಳ ದಿನ ಆಚರಿಸುವುದರ ಹಿಂದಿನ ಪ್ರಮುಖ ಉದ್ದೇಶ ಎಂದರೆ, ಪ್ರಪಂಚದಲ್ಲಿ ಮನುಷ್ಯರು ಮೂಲಭೂತ ಸೌಲಭ್ಯಗಳನ್ನು, ನ್ಯಾಯವನ್ನು ಮತ್ತು ಶಾಂತಿಯನ್ನು ಪಡೆದುಕೊಳ್ಳಲು ಹುಟ್ಟಿದಾಗಿನಿಂದಲೇ ಹಕ್ಕುಳ್ಳವರಾಗಿದ್ದಾರೆ; ಈ ಹಕ್ಕುಗಳನ್ನು ಹೊಸಕಿ ಹಾಕುವ ಅಧಿಕಾರವು ಪ್ರಪಂಚದ ಯಾವ ಶಕ್ತಿಗೂ ಇಲ್ಲ. ಎಲ್ಲಾ ದೇಶಗಳ ನಾಗರಿಕರಿಗೆ ಮಾವನ ಹಕ್ಕುಗಳು ಕಡ್ಡಾಯವಾಗಿ ದೊರಕಬೇಕು ಎಂಬುದನ್ನು ತಿಳಿಸಿ ಕೊಡುವುದು… ಮಾನವ ಹಕ್ಕುಗಳ ಚಾರ್ಟರ್‍ನಲ್ಲಿ ಅನುಚ್ಛೇದ-1, ಪ್ರತಿಯೊಬ್ಬ ಮನುಷ್ಯರಿಗೆ ಗೌರವ ಮತ್ತು ಹಕ್ಕು ಸಮಾನವಾಗಿ ದೊರಕಬೇಕು ಎಂದು ಹೇಳುತ್ತದೆ. ಅನುಚ್ಛೇದ-2, ಎಲ್ಲಾ ಮನುಷ್ಯರಿಗೆ ಅವರ ಬಣ್ಣ, ಜಾತಿ, ವಂಶ, ಲಿಂಗ, ಭಾಷೆ, ಪ್ರದೇಶ ಮತ್ತು ರಾಜಕೀಯ ವಿಚಾರಗಳ ಆಧಾರದಲ್ಲಿ ತಾರತಮ್ಯ ಮಾಡದೆ, ಮಾನವ ಹಕ್ಕುಗಳನ್ನು ಒದಗಿಸತಕ್ಕದ್ದು ಎಂದು ಹೇಳುತ್ತದೆ. ಅನುಚ್ಛೇದ-5, ಮನುಷ್ಯರ ವಿಷಯದಲ್ಲಿ ಅಮಾನವೀಯವಾಗಿ ಯಾರೂ ವರ್ತಿಸತಕ್ಕದ್ದಲ್ಲ ಎನ್ನುತ್ತದೆ. ಅನುಚ್ಛೇದ-12, ವ್ಯಕ್ತಿಯ ವೈಯಕ್ತಿಯ ಮತ್ತು ಸಾಂಸಾರಿಕ ಜೀವನದಲ್ಲಿ ಯಾವುದೇ ಅಡ್ಡಿಯನ್ನು ಯಾರೂ ಉಂಟು ಮಾಡತಕ್ಕದ್ದಲ್ಲ ಎನ್ನುತ್ತದೆ. ಈ ಪ್ರಕಾರ, ಒಟ್ಟು 30 ಅನುಚ್ಛೇದಗಳಲ್ಲಿ ಮನುಷ್ಯರಿಗೆ ಮುಕ್ತವಾಗಿ, ಸಮಾನವಾಗಿ ಮತ್ತು ಗೌರವದಿಂದ ಬದುಕುವ ಎಲ್ಲಾ ಹಕ್ಕುಗಳನ್ನು ಒದಗಿಸಲಾಗಿದೆ… ಇಷ್ಟೆಲ್ಲಾ ಹಕ್ಕುಗಳನ್ನು ಮನುಷ್ಯರಿಗೆ ಒದಗಿಸಿದ್ದರೂ, ಪ್ರಪಂಚಾದ್ಯಂತ ಇಂದು ಅನ್ಯಾಯ, ಅಶಾಂತಿ, ಆಕ್ರಮಣ ಎಡೆಬಿಡದೆ ನಡೆಯುತ್ತಿರುವುದು ಅತ್ಯಂತ ಕಳವಳದ ವಿಷಯವಾಗಿದೆ. ವಿಶ್ವದಲ್ಲಿ ಮಾನವ ಹಕ್ಕುಗಳ ಸಂಘಟನೆಗಳು ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ನಾಗರಿಕ ಸಂಘಟನೆಗಳು ಮೇಣದ ಬತ್ತಿ ಹಚ್ಚಿ, ಸರ್ಕಾರಗಳು ವಿಚಾರ ಸಂಕಿರಣಗಳನ್ನು ಏರ್ಪಡಿಸುವ, ಜಾಹೀರಾತು ನೀಡುವ, ಭಾಷಣ ಏರ್ಪಡಿಸುವುದು, ನ್ಯಾಯ ಮತ್ತು ಶಾಂತಿ ಎಲ್ಲೆಡೆ ಖಾಯಂ ಆಗಿ ಇರಬೇಕು ಎಂದು ಪ್ರತಿಪಾದಿಸುವುದು, ಮಾನವ ಹಕ್ಕುಗಳ ರಕ್ಷಣೆ ಮಾಡಬೇಕೆಂಬ ಭರವಸೆ ನೀಡುವುದು… ಇತ್ಯಾದಿಗಳು ನಡೆಯುತ್ತವೆ. ಆದರೂ, ಪ್ರಸ್ತುತ ಸಮಾಜ ಅನೇಕ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದರೂ, ಸಾಮಾನ್ಯ ಜನರಿಗೆ ಮಾತ್ರ ಯಾವ ಮಾನವ ಹಕ್ಕುಗಳೂ ದೊರಕುತ್ತಿಲ್ಲವಲ್ಲ. ಪ್ರಪಂಚದಲ್ಲಿ ಎಲ್ಲರೂ ನಿರ್ಭಯವಾಗಿ ಜೀವಿಸಬೇಕು. ಜೀವನಾವಶ್ಯಕ ವಸ್ತುಗಳನ್ನು ಅಂದರೆ ಆಹಾರ, ಬಟ್ಟೆ, ವಸತಿ ಪಡೆದುಕೊಳ್ಳಬೇಕು; ಆದರೆ, ಬಹುಸಂಖ್ಯೆ ಜನರಿಗೆ ಇವುಗಳು ಯಾವುವೂ ಸಿಕ್ಕುತ್ತಿಲ್ಲ. ಅದೇ ರೀತಿ, ಮನುಷ್ಯರು ಮುಕ್ತವಾಗಿ ಯೋಚಿಸುವ ಮತ್ತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಕೂಡ ಮಾನವ ಹಕ್ಕುಗಳಲ್ಲಿ ಸೇರಿದೆ. ಆದರೆ, ಇದಕ್ಕೂ ಕೂಡ ವಿಶ್ವದಲ್ಲಿ ಯಾವುದೇ ಅವಕಾಶ ಇಲ್ಲ… ನಮ್ಮ ದೇಶದಲ್ಲೂ ಮಾನವ ಹಕ್ಕುಗಳ ಸ್ಥಿತಿ ಹೀನಾಯ ಮಟ್ಟ ಮುಟ್ಟಿದೆ. ದೇಶದ ನೂರಾರು ಹಳ್ಳಿಗಳಲ್ಲಿ ಕೋಟ್ಯಂತರ ಜನರು ಇಂದಿಗೂ ಮೂಲಹಕ್ಕುಗಳಿಂದ ವಂಚಿತರಾಗಿದ್ದಾರೆ. ವಿಶ್ವಸಂಸ್ಥೆಯ ಅನುಚ್ಛೇದ-5ರ ಪ್ರಕಾರ, ಮನುಷ್ಯರ ಮೇಲೆ ದೌರ್ಜನ್ಯ ಅಥವಾ ಅಮಾನುಷ ಕೃತ್ಯಗಳಿಗೆ ಮನುಷ್ಯರನ್ನು ಗುರಿಪಡಿಸುವುದು ಅಪರಾಧ. ಆದರೆ, ಪ್ರಪಂಚದ ಹಲವಾರು ದೇಶಗಳನ್ನು ಅಮೆರಿಕಾ ಭೀತಿಯಲ್ಲಿ ಇಟ್ಟಿದೆ; ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಚಾರ್ಟರ್‍ನಲ್ಲಿ ಇರುವ ಎಲ್ಲಾ ಹಕ್ಕುಗಳನ್ನು ಅಮೆರಿಕಾ ಉಲ್ಲಂಘಿಸಿಕೊಂಡೇ ಬಂದಿದೆ. ಈ ಕುರಿತು ವಿಶ್ವಸಂಸ್ಥೆ ಕೂಡ ಏನು ಕ್ರಮ ಕೈಗೊಳ್ಳಬೇಕೊ, ಅದನ್ನು ಕೈಗೊಂಡಿಲ್ಲದಿರುವುದು ವಿಷಾದದ ವಿಷಯವೇ ಸರಿ… ಬಂಡವಾಳಶಾಹಿ ವ್ಯವಸ್ಥೆ, ಜಾತಿ ವ್ಯವಸ್ಥೆ, ಜಮೀನ್ದಾರಿ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ಇಲ್ಲಿನ ನಾಗರಿಕರಲ್ಲಿ ಭೀತಿಯನ್ನು ಹುಟ್ಟಿಸಿವೆ; ಅಮಾಯಕರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿವೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಬಡವರು ಮತ್ತು ಮಹಿಳೆಯರು ಭಾರತದಲ್ಲಿ ಗೌರವದಿಂದ ಬದುಕುವುದು ದುಸ್ತರವಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಚಾರ್ಟರ್‍ನ ಅನುಚ್ಛೇದ -25ರ ಪ್ರಕಾರ, ಇಲ್ಲಿ ಎಲ್ಲಾ ಮಾನವರಿಗೆ ತಮ್ಮ ಕುಟುಂಬ ಸಮೇತ ಆಹಾರ, ಆರೋಗ್ಯ, ಗೌರವದೊಂದಿಗೆ ಜೀವಿಸುವ ಹಕ್ಕು ದೊರಕಿದೆ. ಎಲ್ಲಾ ನಾಗರಿಕರಿಗೆ ಈ ಮೂಲಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ನಮ್ಮ ದೇಶವು ಕೂಡ ಮಾನವ ಹಕ್ಕುಗಳನ್ನು ಉಳಿಸುವ ನಿಟ್ಟಿನಲ್ಲಿ ತನ್ನ ದಾಖಲೆಯನ್ನು ಸುಧಾರಿಸಿಕೊಳ್ಳಬೇಕಿದೆ… ಮತ್ತದೇ ಇಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರಿಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ. ಇನ್ನೋರ್ವರ ಸ್ವಾತಂತ್ರಯವನ್ನು ಗೌರವಿಸಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಲು ಈ ದಿನದ ಸಂದೇಶ ಪೂರಕವಾಗಲಿ ಎಂಬುದೇ ಸದಾಶಯ… ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸ್ವತಂತ್ರವಾಗಿ ಜೀವಿಸುವ ಹಕ್ಕು ಹೊಂದಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವ ಮತ್ತು ಆದರದಿಂದ ಕಂಡರೆ ಅದೇ ನಾವು ಮಾನವ ಹಕ್ಕುಗಳಿಗೆ ನೀಡುವ ಗೌರವ. ಸಮಾಜದಲ್ಲಿ ದುರ್ಬಲರು, ಶೋಷಿತರನ್ನು ರಕ್ಷಿಸುವಲ್ಲಿ ಮಾನವ ಹಕ್ಕುಗಳು ಅತ್ಯಂತ ಗಮನಾರ್ಹ ಪಾತ್ರ ವಹಿಸಿವೆ… ಜಗತ್ತಿನಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅದರ ರಕ್ಷಣೆಗಾಗಿ ದಿನನಿತ್ಯ ಹೋರಾಟಗಳು ನಡೆಯುತ್ತಲೇ ಇವೆ. “ಜನರ ಹಕ್ಕುಗಳನ್ನು ನಿರಾಕರಿಸಿದರೆ ಅದು ಅವರ ಮನುಷ್ಯತ್ವವನ್ನು ತಿರಸ್ಕರಿಸಿದಂತೆ’ ಎಂದು ದಕ್ಷಿಣ ಆಫ್ರಿಕಾದ ಗಾಂಧಿ ಎಂದು ಕರೆಸಿಕೊಳ್ಳುವ ನೆಲ್ಸನ್ ಮಂಡೇಲಾ ಮಾನವ ಹಕ್ಕುಗಳ ಕುರಿತು ಹೇಳಿದ್ದಾರೆ… ವಿಶ್ವದಲ್ಲಿ ಮಾನವ ಹಕ್ಕುಗಳ ಜಾರಿ– 1948ರ ಜಾಗತಿಕ ಮಹಾಯುದ್ಧದಲ್ಲಿ ಸಂಭವಿಸಿದ ಆಪಾರ ಸಾವುನೋವಿನಿಂದ ಮನನೊಂದು ಜಗತ್ತು ಹಿಂಸೆಯನ್ನು ತ್ಯಜಿಸಬೇಕು ಎಂಬ ನಿಲುವಿಗೆ ಬಂತು. ಈ ವಿಚಾರವಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮಾನವ ಹಕ್ಕುಗಳನ್ನು ಜಾರಿಗೊಳಿಸಲು ಒಮ್ಮತ ಸೂಚಿಸಿದವು. ಇದರ ಪರಿಣಾಮವಾಗಿ 1948ರ ಡಿ. 10ರಂದು ವಿಶ್ವ ಸಂಸ್ಥೆಯಲ್ಲಿ ಮಾನವ ಹಕ್ಕುಗಳನ್ನು ಘೋಷಣೆ ಮಾಡಲಾಯಿತು. ಇದರ ಮುಖ್ಯ ಕಚೇರಿ ಜಿನೆವಾದಲ್ಲಿದೆ. ಅಂದಿನಿಂದ ವಿಶ್ವಾದ್ಯಂತ ವರ್ಣ, ಧರ್ಮ, ಲಿಂಗ, ಭಾಷೆ, ಅಂತಸ್ತು, ಸಾಮಾಜಿಕ, ರಾಷ್ಟ್ರೀಯತೆ ಹಿನ್ನೆಲೆಯಲ್ಲಿ ನಡೆಯುವ ತಾರತಮ್ಯ, ದೌರ್ಜನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಘೋಷಣೆಯಾಗಿ 71 ವರ್ಷಗಳು ಕಳೆದರೂ ಇಂದಿಗೂ ತನ್ನ ಪ್ರಾಮುಖ್ಯವನ್ನು ಉಳಿಸಿಕೊಂಡಿರುವುದು ಗಮನಾರ್ಹ ಸಂಗತಿ… ಆಯೋಗದ ಕಾರ್ಯಗಳು– 1 ವಿಶ್ವದ 78 ರಾಷ್ಟ್ರಗಳ 40,000 ಜನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ. 2 27 ರಾಷ್ಟ್ರಗಳಿಂದ 10,000 ಜನರಿಗೆ ಗುಲಾಮಗಿರಿ ಯಿಂದ ಮುಕ್ತಿ 3 2,101 ಬಂಧನ ಸ್ಥಳಗಳಿಗೆ ಭೇಟಿ ನೀಡಿದೆ. 4 7,504 ವಿಶ್ವಾದ್ಯಂತ ಮಾನವ ಹಕ್ಕುಗಳ ಪರಿಸ್ಥಿತಿ ತನಿಖೆ ಮತ್ತು ದಾಖಲೆಗಾಗಿ ಸ್ಥಾಪಿಸಲಾದ ಮೇಲ್ವಿಚಾರಣೆ ಮಿಶನ್‌ಗಳು. 5 692 ದಾಖಲಾದ ಹೊಸ ಆರೋಪಗಳು… 1 2016ರಿಂದ 2019ರಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ಅಲ್ಪಸಂಖ್ಯಾಕರು ಹಾಗೂ ದಲಿತರ ಮೇಲೆ ಗುಂಪು ಥಳಿತ ಮತ್ತು ದೌರ್ಜನ್ಯದ ಬಗ್ಗೆ ದಾಖಲಾದ ಅಪರಾಧಗಳ ಸಂಖ್ಯೆ -2,008. ಅತೀ ಹೆಚ್ಚು ಉ.ಪ್ರದೇಶ- 869 2 ಭಾರತದಲ್ಲಿ ಒಟ್ಟು 25 ರಾಜ್ಯಗಳಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ರಚಿಸಲಾಗಿದೆ. 3 ಅಸ್ಸಾಂ ಮೊದಲ ರಾಜ್ಯವಾಗಿದೆ (ಜನವರಿ 19, 1996) 4 ಕರ್ನಾಟಕದಲ್ಲಿ ಜೂನ್ 25, 2005ರಂದು ರಚನೆಯಾಗಿದೆ. 5 ರಾಜ್ಯದಲ್ಲಿ ಇದುವರೆಗೆ ಏಳು ಜನ ಅಧ್ಯಕ್ಷರು ಕಾರ್ಯನಿರ್ವಹಿಸಿದ್ದಾರೆ. ನ್ಯಾ| ರಂಗನಾಥ್ ಮಿಶ್ರಾ ಮೊದಲಿಗರು… ಪ್ರಮುಖವಾಗಿ ಪ್ರಜ್ಞಾವಂತರು ಜನರಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಬೇಕಿದೆ; ಸರ್ಕಾರಗಳ ಮೇಲೆ ಒತ್ತಡ ಹೇರಿ, ಜನರಿಗೆ ಮಾನವ ಹಕ್ಕುಗಳು ದೊರಕುವಂತೆ ನೋಡಿಕೊಳ್ಳಬೇಕು. ಈ ಮೂಲಕ ಮಾನವ ಹಕ್ಕುಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು… ಆಗ ಮಾತ್ರ ವಿಶ್ವ ಮಾನವ ಹಕ್ಕುಗಳ ದಿನಾಚರಣೆಗೆ ನಿಜವಾದ ಅರ್ಥ ಬರುವುದು… ಹೀಗೆಯೇ ಈಗ ಭಾರತದಲ್ಲಿ ‘ಮಾನವ ಹಕ್ಕು’ಗಳ ಸ್ಥಿತಿಯ ಬಗೆಗೆ ನೋಡೋಣ… ಭಾರತದಲ್ಲಿ ‘ಮಾನವ ಹಕ್ಕು’ಗಳು– ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು (ವಸ್ತುಸ್ಥಿತಿ) ಬಹಳ ಸಂಕೀರ್ಣ ರಚನೆಯಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂ ಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯ ಪರಿಣಾಮವಾಗಿ, ಇದರ ಸ್ಥಾನವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ಗಣರಾಜ್ಯ ರಾಷ್ಟ್ರವಾಗಿದ್ದು, ಮತ್ತು ಇತಿಹಾಸವನ್ನು ದಾಖಲಿಸಿದ್ದ ಹಳೆಯ ವಸಾಹತುಶಾಹಿ ಪ್ರಾಂತ್ಯಗಳಂತಿದೆ. ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳ ನೀಡಿಕೆಯ ಜೊತೆ, ಧಾರ್ಮಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಟ್ಟಿದೆ. ವಾಕ್ಯಾಂಗದ ಉಪ ನಿಯಮಗಳು ಮಾತನಾಡುವ (ಹಕ್ಕು)ಸ್ವಾತಂತ್ರ್ಯತೆಯನ್ನು ಒದಗಿಸಿದೆ. ಕಾರ್ಯಾಂಗ ಮತ್ತು ನ್ಯಾಯಾಂಗ ಬೇರೆ ಬೇರೆಯಾಗಿದ್ದು, ದೇಶದ ಒಳಗೆ ಮತ್ತು ಹೊರಗೆ ಎಲ್ಲಾ ರೀತಿಯ ಚಲನೆಯ ಸ್ವಾತಂತ್ರ್ಯವನ್ನೂ ನೀಡಲಾಗಿದೆ… ಮತ್ತೆ ಮತ್ತೆ ಹೇಳುವಂತೆ, ಅದರಲ್ಲಿಯೂ ಭಾರತೀಯ ಮಾನವ ಹಕ್ಕುಗಳ ತಂಡವು ಮತ್ತು ಕ್ರಿಯಾಶೀಲರು ಹೇಳುವಂತೆ, ದಲಿತ ಸಂಘದ ಸದಸ್ಯರು ಅಥವಾ ಅಸ್ಪೃಶ್ಯರು ಬಹಳ ಕಷ್ಟ ಅನುಭವಿಸಿದ್ದು, ಈಗಲೂ ಅನುಭವಿಸುತ್ತಿದ್ದು, ಗಣನೀಯ ತಾರತಮ್ಯದ ವಿವೇಚನೆಯಿಂದ ಇನ್ನೂ ತೊಳಲಾಡುತ್ತಿದ್ದಾರೆ. ಭಾರತದಲ್ಲಿ ಮಾನವ ಹಕ್ಕುಗಳು ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಈ ದೇಶವು ಸಾಮಾನ್ಯವಾಗಿ ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ ಗಮನಕೊಡುವಂತಹದ್ದಲ್ಲ,ಬೇರೆ ದೇಶಗಳಲ್ಲಿರುವಂತೆ ದಕ್ಷಿಣ ಏಷ್ಯದಲ್ಲಿ . ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು, ವಿಶ್ವ ೨೦೦೬ರ ಸ್ವಾತಂತ್ರ್ಯ ವರದಿಯ ಅನ್ವಯ, ಸ್ವಾತಂತ್ರ್ಯದ ಮನೆಯು, ಭಾರತಕ್ಕೆ ರಾಜಕೀಯ ಹಕ್ಕಿಗೆ ೨ನೇ ಸ್ಥಾನವನ್ನು ಹಾಗೂ ನಾಗರೀಕ ಸ್ವಾತಂತ್ರಕ್ಕೆ ೩ನೇ ಸ್ಥಾನವನ್ನು ಕೊಟ್ಟು , ಸ್ವಾತಂತ್ರತೆಯಲ್ಲಿ ಅತ್ಯಂತ ಉನ್ನತ ದರ್ಜೆಯ ಸ್ಥಾನವನ್ನು ಪಡೆಯಿತು… ಭಾರತದಲ್ಲಿ ಮಾನವ ಹಕ್ಕುಗಳ ಕಾಲಗಣನೆಯ ಘಟನೆಗಳು– ೧೮೨೯ – ಸಾಂಪ್ರದಾಯಿಕ ಹಿಂದೂ ಅಂತ್ಯ ಸಂಸ್ಕಾರದ ಆಚರಣೆಯ ವಿರುದ್ಧ, ಅಂದರೆ ಗಂಡನ ಸಾವಿನ ನಂತರ ವಿಧವೆಯರು ಸ್ವತಃ ಅಗ್ನಿಗಾಹುತಿಗೆ ಒಳಗಾಗುವ ಅಥವಾ ಸತಿ ಸಹಗಮನದಂತಹ ಕೆಟ್ಟ ಸಂಪ್ರದಾಯವನ್ನು ತೊಡೆದು ಹಾಕುವ ನಿಟ್ಟಿನಲ್ಲಿ,ಹಿಂದೂ ಧರ್ಮ ಸುಧಾರಣಾ ಚಳುವಳಿಗಳಂತಹ, ಬ್ರಹ್ಮಸಮಾಜದ ಸ್ಥಾಪಕರಾದ ರಾಜಾ ರಾಮ್ ಮೋಹನ್ ರಾಯರ ನೆರವಿನಿಂದ, ಬದಲಾವಣೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಅಂದಿನ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್‌ನು ಭಾರತದ ಹಿಂದೂ ಧರ್ಮದಲ್ಲಿ ಜಾರಿಯಲ್ಲಿದ್ದ ‘ಸತಿ’ ಪದ್ಧತಿಯನ್ನು, ಆಡಳಿತಾತ್ಮಕವಾಗಿ, ತೊಡೆದು ಹಾಕಿದನು/ ರದ್ದುಗೊಳಿಸಿದನು. ೧೯೨೯ – ಬಾಲ್ಯ ವಿವಾಹ ನಿಷೇಧ ಕಾಯಿದೆ , ೧೪ ವರ್ಷ ತುಂಬಿದ ಎಲ್ಲಾ ಚಿಕ್ಕ ವಯಸ್ಸಿನವರ ವಿವಾಹವನ್ನು ನಿಷೇಧಿಸುವುದು… ೧೯೪೭ – ಬ್ರಿಟಿಷ್ ರಾಜರಿಂದ ರಾಜಕೀಯ ಸ್ವತ್ರಂತ್ರವನ್ನು ಭಾರತ ಪಡೆಯಿತು. ೧೯೫೦ – ಭಾರತದ ಸಂವಿಧಾನದ ರಚನೆಯಿಂದಾಗಿ, ಪ್ರಜಾಪ್ರಭುತ್ವದ ಸಾರ್ವಭೌಮತ್ವದ ಗಣರಾಜ್ಯವಾಗಿ ಶ್ರೀಸಾಮಾನ್ಯರಿಗೆ ಮತದಾನ ಮಾಡುವ ಹಕ್ಕು. ಸಂವಿಧಾನದ ೩ನೇ