ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Photo of Couple Standing on Wooden Planks

ಶಾಂತ ಜೆ ಅಳದಂಗಡಿ

ನೀಡೆನಗೆ ನನ್ನೊಡೆಯ ನಿನ್ನೊಲುಮೆ
ಬಾಳ ಪಥದಲಿ ಆಗಲೆನಗದು ಹಿರಿಮೆ
ನಿನಗಾಗಿ ಮಿಡಿಯುತಿದೆ ಸಂತಸದೆ ನಾಡಿ
ಬಾಳದಾರಿಯಲಿ ಅನುಕ್ಷಣ ಸಂತಸ

ದೇವನಿತ್ತ ವರದೊಲುಮೆ
ಬದುಕ ದಾರಿಯಲಿ ನೀ ಮಾರ್ಗಸೂಚಿ
ಸಪ್ತನಾಡಿಗಳೂ ಅರಸುತಿವೆ ದಾರಿ
ದೊರೆತರದುವೆ ಮನಕೆ ಸಂತಸ

Man in Black Long-sleeved Shirt and Woman in Black Dress

ನಿನ್ನೊಲವು ಜೀವಕದು ಗರಿಮೆ
ಆಸೆ ಒಲೆ ಹೂಡಿ ಹಿಡಿದು ಅಗ್ನಿ ನಾಡಿ
ಪ್ರೇಮ ಪ್ರೀತಿಯ ಪಾಕ ನಿನಗಾಗಿ
ಅಟ್ಟಡಿಗೆ ಉಂಡರದುವೆನಗೆ ಸಂತಸ

ಗಮ್ಯ ಸೇರಲು ಇದೆ ಪಯಣವೊಮ್ಮೆ
ನಡೆವ ದಾರಿಗೆ ಚೆಲ್ಲುವೆ ಮಲ್ಲಿಗೆ ನಿನಗಾಗಿ
ದೃಷ್ಟಿ ಸರಿಸದಿರು ಗೆಲುವ ನಾಡಿ ಮಿಡಿತವಿದು
ಒಂದಾಗಿರಲು ಗಮ್ಯ ಸೇರೋ ಸಂತಸ

About The Author

Leave a Reply

You cannot copy content of this page

Scroll to Top