ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Silhouette of Couple Standing during Nighttime

ಮತ್ತೆಂದೂ ಮಂಡಿಗೆ ಮೆಲ್ಲಲಿಲ್ಲ

white rose flower bouquet flower

ಕತ್ತಲಾಗಲೆಂದೆ ಬೆಳಗಾಗುವುದು

ಆರಲೆಂದೇ ದೀಪ ಉರಿಯುವುದು
ಬಾಡಲೆಂದೇ ಹೂವು ಅರಳುವುದು

ಕಮರಲೆಂದೆ ಕನಸು ಹುಟ್ಟುವುದು

ಗೊತ್ತಿದ್ದರೂ  ಹಣತೆ ಹಚ್ಚಿಟ್ಟಳು

ಬರಲಿರುವ ಸಖನಿಗಾಗಿ.

ಮಲ್ಲೆ ಮೊಗ್ಗ ಮಾಲೆ ಹೆರಳಿಗೆ ಮುಡಿದು ನಿಂತಳು

ಬರಲಿರುವ ಸಖನ ಮೂಗಿಗೆ ಘಮಿಸಲೆಂದು

ಬರಡು ಎದೆಗೆ ವಸಂತನ ಕನವರಿಸಿ

ಹೊಸ ಕನಸು ಚಿಗುರಿಸಿಕೊಂಡಳು

ಬರುವ ಸಖನಿಗೊಂದಿಗೆ ಹಂಚಿಕೊಳ್ಳಲೆಂದು

ಮುಸ್ಸಂಜೆಗೆ ಬಂದ ಸಖ

ಹಚ್ಚಿಟ್ಟ ಹಣತೆ ಆರಿಸಿದ

ಮಲ್ಲೆ ಮಾಲೆಯ ಹೊಸಕಿಹಾಕಿದ

ಅದಾಗತಾನೆ ಚಿಗುರೊಡೆದಿದ್ದ ಕನಸುಗಳ ಚಿಗುರ  ಚಿವುಟಿ

ಹಸಿಯೆದೆಯ ಮತ್ತೆ ಬರಡಾಗಿಸಿ

ನಡೆದ ಮತ್ತೊಂದು ಎದೆಬಯಲ ಅರಸಿ

ಅದೇ ಕಡೆ

ಮತ್ತವಳೆಂದು ಹಣತೆ ಹಚ್ಚಿಡಲಿಲ್ಲ

ಗಿಡದಿಂದ ಮಲ್ಲಿಗೆಯ ಬಿಡಿಸಿ ತರಲಿಲ್ಲ

ಒಣಗಿದೆದೆಗೆ ನೀರು ಹಾಯಿಸಲಿಲ್ಲ

ಕನಸಿರಲಿ ಮನಸಲ್ಲೂ ಮಂಡಿಗೆ ತಿನ್ನಲಿಲ್ಲ


About The Author

2 thoughts on “ಕವಿತೆ ಕಾರ್ನರ್”

Leave a Reply

You cannot copy content of this page

Scroll to Top