ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೆಳೆಯರೆ,

ಸಂಗಾತಿ ಪತ್ರಿಕೆಯನ್ನು ಕೇವಲ ರಂಜನೆಗಾಗಿ ರೂಪಿಸಿಲ್ಲ-ಜೊತೆಗೆ ಕೇವಲ ಕತೆ-ಕತೆಗಳಿಗೆ ಮಾತ್ರ ಮೀಸಲಿರಿಸಿಯೂ ಇಲ್ಲ.
ಪತ್ರಿಕೆಯಲ್ಲಿ ಪ್ರಖರವಾದ ವೈಚಾರಿಕ ಲೇಖನಗಳನ್ನು,ಸಮಕಾಲೀನ ಸಮಸ್ಯೆಗಳ ಬಗ್ಗೆ ವಸ್ತುನಿಷ್ಠ ವಿಮರ್ಶಾತ್ಮಕ, ಬರಹಗಳನ್ನು ಪ್ರಕಟಿಸಬೇಕೆಂಬುದು ನಮ್ಮಬಯಕೆ. ಈ ವಿಷಯಗಳಬಗ್ಗೆ ಬರೆಯುವವರು ಸಾಕಷ್ಟು ಜನ ಲೇಖಕರಿದ್ದರೂ ಅವರಿನ್ನೂ ನಮ್ಮ ಪತ್ರಿಕೆಗೆ ಬರೆಯುವ ಮನಸ್ಸು ಮಾಡಿಲ್ಲ. ಬಹುಶ: ಪತ್ರಿಕೆಯ ನಡೆಯನ್ನು ಕಾದುನೋಡುವ ಉದ್ದೇಶವಿದ್ದರೂ ಇರಬಹುದೇನೊ. ಈ ದಿಸೆಯಲ್ಲಿ ಬಹಳಷ್ಟು ಲೇಖಕರನ್ನು ಈಗಾಗಲೇ ಸಂಪರ್ಕಿಸಿ ಬರೆಯಲು ಕೋರಿದ್ದೇನೆ.ಜನಪ್ರಿಯತೆಗಾಗಿ ಸಂಗಾತಿ ತನ್ನಗುಣಮಟ್ಟ ಮತ್ತು ಸ್ವಂತಿಕೆಯನ್ನುಯಾವತ್ತಿಗೂ ಬಿಟ್ಟು ಕೊಡುವುದಿಲ್ಲೆಂದು ಈ ಮೂಲಕ ತಮಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ. ಅದಕ್ಕೆ ತಕ್ಕಂತೆ ಹಿರಿಯ ಬರಹಗಾರರುಸಹ ನಮಗೆ ಬರೆಯುತ್ತಾರೆಂದು ಆಶಿಸುತ್ತೇನೆ

ಕು.ಸ.ಮಧುಸೂದನರಂಗೇನಹಳ್ಳಿ

About The Author

Leave a Reply

You cannot copy content of this page

Scroll to Top