ಆಯ್ಕೆ
ಅವ್ಯಕ್ತ

ನನ್ನಹೆಚ್ಚಿನ
ಸಮಯವನ್ನು ನಾನು ಮಕ್ಕಳೊಂದಿಗೆ ಕಳೆಯುತ್ತಿರುವುದು.ಅವರೊಂದಿಗೆ ಆದ ಅನುಭವಗಳನ್ನು ಸಣ್ಣ ಸಣ್ಣ ಕಥೆಗಳ ಮೂಲಕ ಬರೆಯುತ್ತೇನೆ. ಅಂತ ಕಥೆಗಳಲ್ಲಿ ಇದೂ ಒಂದು)
ಆಯ್ಕೆ
ಒಳಗೆ ತಲೆಯಾಡಿಸುತ್ತಾ ನಡೆದು ಬಂದ್ಲು. ನಾನು ನೋಡಿ ಮುಗುಳ್ನಗೆ ಬೀರಿದೆ. ಜ್ವಾಲಾಮುಖಿ
ಬಚ್ಚಿಟ್ಟಿದ್ದಂತೆ“ನಾನು ಅವರನ್ನೆಲ್ಲ
ದ್ವೇಷಿಸುತ್ತೇನೆ”, “ಇನ್ಯಾವತ್ತೂ
ಅವರೊಂದಿಗೆ ಮಾತಾಡೋದಿಲ್ಲ”. ನಾನು ತಾಳ್ಮೆಯಿಂದ
“ಏನಾಯ್ತೆ ನನ್ ರಾಣಿ?”. ಅಂತ ಕೇಳ್ದೆ. ನನ್ನ ಪ್ರಶ್ನೆಗೆ ಕಾಯ್ತಿದ್ಲೆನೋಅನ್ನೋ
ಹಾಗೆ“ನನಗೆ ನೋವಾಗಿದೆ, ನನ್ನ ಆಡ್ಕೋತಾರೆ,ನನ್ನ ನೋಡಿ
ನಗ್ತಾರೆ,ನಾನು…. ನನ್ನ…. ನನಗೆ…”ನಿಲ್ಲೋಮಾತೇ ಇಲ್ಲ !
ನಾನುಸ್ವರ ಸ್ವಲ್ಪ ಏರಿಸಿ, ಮೃದುವಾಗಿ ಹೇಳಿದೆ “ಸ್ಟಾಪ್!”. ಅವಳ ಕಣ್ಣಂಚಲ್ಲಿ ನೋವು ಸಿಟ್ಟು ಎರಡೂ ಸೇರಿ ಕಣ್ಣೀರು
ಬರದಷ್ಟು ನಿರಾಸೆ ನನಗೆ ಭಾಸವಾಗಿತ್ತು! ಮೆಲ್ಲನೆ ನಾನೇ
ಹತ್ತಿರ ಹೋಗಿ ಮುದ್ದಾಗಿ ತಲೆಸವರಿ ಕೇಳಿದೆ. “ಸರೀ…ಅವರು ಎಷ್ಟು ಸಾರಿ ನಿನ್ನ ನೋಡಿ ನಕ್ಕರು? ಎಷ್ಟು ಸಾರಿಛೇಡ್ಸಿದ್ರು?”ಸಿಟ್ಟಿನಲ್ಲಿ “ಒಂದು ಸಾರಿ ಅಲ್ಲ ಎರಡು ಅಲ್ಲ ಮೂರು ಅಲ್ಲ…” ಲೆಕ್ಕ ಮಾಡಲು ಶುರುಮಾಡಿದಳು.“10 ಬಾರಿ”ಎನ್ನುವಷ್ಟರಲ್ಲಿ ಸ್ವಲ್ಪ ಶಾಂತಿ ತುಂಬಿತ್ತು ಅವಳ್ಮನ್ಸಲ್ಲಿ.
ನಾನು ಸುಮ್ಮ್ನೆ“ಈಗ ನಿನ್ನ
ಮನಸ್ಸಲ್ಲಿ ಅದೇ ವಿಷಯ ಎಷ್ಟು ಬಾರಿ ನೆನೆಸಿಕೊಂಡು ಸಿಟ್ ಮಾಡ್ಕೊಂಡೆ?” ಅಂತ ಕೇಳ್ದೆ.
ಯೋಚಿಸಿ ಅಳೆದು ಸುರಿದು ಲೆಕ್ಕ ಮಾಡಿ ಅವರು ಇವರು ಕಥೆ ಹೇಳ್ತಾ
ಕೊನೆಗೆ 25 ಎಂದ್ಲು.
ನಾನು ೨೫+೧೦+೨ಬಾರಿನನ್ಹತ್ರ,ಒಟ್ಟು ೩೭ ಬಾರಿ…ಈಗ ಹೇಳು “ನಿನ್ನನ್ನು ಹೆಚ್ಚು
ನೋವಿಸಿದ್ದು ಯಾರು ಬಂಗಾರಿ?”
ಸ್ವಲ್ಪ ಹೊತ್ತು ಸುಮ್ಮನೇ ನಿಂತು ಮತ್ತೆ ನಾಚಿಕೆಯಿಂದ“ನಾಆಆಆನೇಏಏಏಏಎಂದು ಹೇಳಿ ನಕ್ಕುಬಿಟ್ಟಳು.
ನಾನು ಎಲ್ಲರ ಕಡೆ ತಿರುಗಿ ಹೇಳಿದೆ..
“ಸಂತೋಷವಾಗಿರುವುದು ನಮ್ಮ ಆಯ್ಕೆ ಯಾಗಿರಲಿ…,
ಕ್ಷಮಿಸಿಬಿಡಿ…
ಆದರೆ,ನೋವುತಂದಅನುಭವ ಮರೆಯದಿರಿ!”
====================================
ಪರಿಚಯ:
ವಿದ್ಯಾಭ್ಯಾಸ: ಎಂ.ಎಸ್ಸಿ.(ರಸಾಯನಶಾಸ್ತ್ರ) ಬಿ.ಎಡ್, ವೃತ್ತಿ: MAGMA COACHING ZONE ನನಡೆಸುತ್ತಿದ್ದೇನೆ. (ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಾಡಿರುವಂತಹ ತಾಣ)ಹವ್ಯಾಸಗಳು: ಬರೆಯೋದು, ಪ್ರಕೃತಿಗೆ ಹತ್ತಿರವಾಗುವಂಥ ತಾಣಗಳಿಗೆ ಹೋಗುವುದು, ಹಾಡು ಕೇಳುವುದು, ಕರಕುಶಲ ಕೆಲಸಗಳನ್ನು ಮಾಡುವುದು,ಇತ್ಯಾದಿ.




ತುಂಬಾ ಚೆ್ನಾಗಿದೆ
ಧನ್ಯವಾದಗಳು