ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮಳಗೊಬ್ಬ

ಸಂತೆಬೆನ್ನೂರು ಫೈಜ್ನಟ್ರಾಜ್

ಮನಸಲ್ಲಿ
ಕೋಟಿ ಕೋಟಿ

ಯುದ್ಧ  ಸಾಮಗ್ರಿಗಳನ್ನು
ಹೊತ್ತು

ಕಡಲ ದಡದಿ ನೆಮ್ಮದಿ ಹುಡುಕ್ತಿದ್ದ!

*

ಎದುರಿಗೇ
ಎಲ್ಲಾ ಐತೆ

ಏನೋ ಮಿಸ್ಸಾಗಿದೆ ಅಂತ

ಎದ್ದು ನಡೆದ ಇದ್ದುದನ್ನ ಬಿಟ್ಟು!

*

ಕಣ್ಣೆದುರು
ಇದ್ರೆ ಕಣ್ ಕೆಂಪು..ಉರಿ
ಉರಿ

ಮರೆಯಾದ್ರೆ
ಕಳ್ಕಂಡೋರ ತರ

ಅಂಡ್ ಸುಟ್ ಬೆಕ್ಕು!

*

ಹಾಡ್ತಾನೆ,ಕುಣಿತಾನೆ,ನಗ್ತಾನೆ,ಅಳ್ತನೆ

ಎಲ್ಲಾ ಸರಿ ಮತ್ ಎದುರಿರೋ

ಬಳಿ ಏನೈತ್ರಿ ಈ ಬಾಳ್ನಾಗೆ….ರಾಗ

*

ನಾಯಿ ಬಾಲ ನೇರ ಮಾಡಬಹುದಂತೆ

ಹೆಂಗೋ ನಮ್ಮೊಳಗಿದ್ದಾನಲ್ಲಾ ಅವನ್ನ

ಊಹ್ಞುಂ….ಗುಂಡ್ಕಲ್ಲದು!!

About The Author

Leave a Reply

You cannot copy content of this page

Scroll to Top