ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ವಾರದ ಕವಿತೆ

ಗಝಲ್

ಗಝಲ್ ಪ್ರೇಮಾ ಹೂಗಾರ ಬೀದರ ನೀ ಇಲ್ಲದೆಯು ನಾ ಬದುಕಬಲ್ಲೆ ಈ ಗಜಲ್ ನ ಧ್ಯಾನದಲಿಸಣ್ಣಗೆ ಮೌನದಿ ಕುದಿಯುವ ಎದೆಯ ದನಿಯ ರಾಗದಲಿ ಕುಸಿದು ಬೀಳಿಸುವ ಆ ಮಾತು,ನೋಟ್,ಸ್ಪರ್ಷ ಮರೆತಿಲ್ಲಗುಟುಕುವ ಚೇತನವೇ ಆ ಸೂರ್ಯನ ಸಾವು ಈ ಜೀವದಲಿ ಒಂಟಿತನದ ಹೆಜ್ಜೆಯೊಳಗೆ ಬಿಕ್ಕಳಿಕೆ ಮಲಗುತ್ತವೆ ಎನ್ನಬೇಡಎಂದೂ ಬತ್ತದ ನಿನ್ನ ಪ್ರೀತಿಯ ಜೋಳಿಗೆ ಇದೆ ನನ್ನ ಮೌನದಲಿ ಉರಿಯುತ್ತಿರುವ ದೀಪ ಆರುವ ಸತ್ಯ ಎಂದೋ ಅರಿತವಳು ನಾಕಲ್ಪನೆಗೂ ಮೀರಿ ಕತ್ತಲೆ ಜೊತೆ ನೀಡಿತು ನೀನಿಲ್ಲದ ಈ ಭವದಲಿ ನನ್ನೊಳಗಿನ ಹೆಜ್ಜೆಗಳಿಗೆ ಹೊಸ ನಾದದ ಅರಿವು ಮೂಡುತ್ತಿದೆಸಮಾಧಿಯಾದ ನೆನಪುಗಳೆಲ್ಲ ದನಿ ಮುರಿದಿವೆ ಹೊಸ ಮೋಹದಲಿ ಗಜಲ್ ಎಂದರೆ ನನ್ನ ಧ್ಯಾನ್,ಮೌನ ‘ಪ್ರೇಮ’ದ ಸಂಕೇತಬಿಟ್ಟೆನೆಂದರೂ ಬಿಡದು ಈ ಬಂಧ ಗಜಲ್ ನಾದದಲಿ ***************************************

ಗಝಲ್ Read Post »

ವಾರದ ಕವಿತೆ

ವಾರದ ಕವಿತೆ

ಮಕ್ಕಳಹಾಡು ದೂರವಿರಲಾಗದ ಹಾಡು ಶ್ರೀದೇವಿ ಕೆರೆಮನೆ ಶಾಲೆಗೆ ಬರಲೇ ಬೇಕು ಅಂತಕರೆದರೆ ಹೋಗದೇ ಏನು ಮಾಡೋದುದೂರದೂರ ಕುಳಿತುಕೋ ಅಂದರೆಒಬ್ಬಳೇ ಹೇಗೆ ಕೂರೋದು ಅಕ್ಕಪಕ್ಕ ಗೆಳತಿಯರಿಲ್ಲ ಅಂದ್ರೆಅಕ್ಕೋರು ಹೇಳೋ ಪಾಠ ತಿಳಿಯೋದು?ಅದು ಹೇಗೆ ನಾವು ಗೆಳತಿಯರೇ ಇದ್ರೆಮಾತಾಡುವಾಗಲೂ ದೂರ ನಿಲ್ಲೋದು ಮುಖಕ್ಕೆ ಮಾಸ್ಕು ಹಾಕ್ಕೋಂಡಿದ್ರೆಗೊತ್ತಾಗಲ್ಲ ರಾಣಿ ನಗೋದುಮೂಗು ಬಾಯಿ ಮುಚ್ಕೊಂಡಿದ್ರೆಶುದ್ಧಗಾಳಿ ಹೇಗೆ ಸಿಗೋದು ಅಣ್ಣನಿಗೆ ಪರೀಕ್ಷೆಯಂತೆ ಮುಂದಿನವಾರಹೆದರಿಕೆಲ್ಲಿ ಓದಿದ್ದು ಹೇಗೆ ನೆನಪಿರೋದುಪರೀಕ್ಷೆ ಬರೆಯೋಕೆ ಭಯ ಇಲ್ಲವಂತೆಬರೋದಿಲ್ಲ ಮಾಸ್ಕು ಹಾಕಿ ಉಸಿರಾಡೋದು ಶಾಲೆಗೆ ಹೋಗು ಅಂತ ಬೈಯ್ತಿದ್ದ ಅಮ್ಮಂಗೆಬೇಡವಂತೆ ಶಾಲೆ ಶುರುವಾಗೋದುಮನೆಲಿರು ಸಾಕು ಕೇಳಿದ್ದು ಕೊಡಿಸ್ತೀನಿಅಂತಿದ್ದಾರಪ್ಪ ಈಗೇನು ಮಾಡೋದು? ಆಟ ಇಲ್ಲ, ಓಟ ಇಲ್ಲ, ಯಾವ ಖುಷಿಯೂ ಇಲ್ಲಸುಮ್ಮನೆ ಕುಳಿತುರು ಅಂದರೇನು ಮಾಡೋದುಹಾಡೂ ಬೇಡ, ಕುಣಿತವೂ ಬೇಡ ಅಂತಾರಲ್ಲ  ಆಗೋದಿಲ್ಲ ದಿನವಿಡಿ ಪಾಠ ಕೇಳೋದು ಗೆಳತಿಯರ ಮುಖ ನೋಡೋಕಾಗದೆಮೊಬೈಲ್ ಪಾಠ ಹೇಗೆ ನೋಡೋದು  ಮುಟ್ಟಿ ಚಿವುಟಿ ಮಾಡಲಾಗದೇಹೇಗೆ ಮುಸಿಮುಸಿ ನಗುವುದು? ಮುಗಿದು ಹೋಗಿ ಬಿಡಲಿ ಒಂದ್ಸಲಈ ಕರೋನಾ ಎಷ್ಟು ಕಾಡೊದುಬೇಗ ಬರಲಿ ಜೊತೆಗಿರುವ ಕಾಲಒಟ್ಟಿಗೆ ಹಾಡಿ ಕುಣಿಯೋದು   ***************************************

ವಾರದ ಕವಿತೆ Read Post »

ವಾರದ ಕವಿತೆ

ವಾರದ ಕವಿತೆ

ವಾರದ ಕವಿತೆ ಮೋಹ ಮಾಲತಿ ಶಶಿಧರ್ ಅಕಸ್ಮಾತಾಗಿ ಸಿಕ್ಕಿಬಿದ್ದೆಮೋಹದ ತೆಕ್ಕೆಯೊಳಗೆಮೋಹನರಾಗವ ಆಲಿಸುತಅದರ ಜಾಡು ಹಿಡಿದು ಹೊರಟಿರುವೆಮೂಲ ಹುಡುಕುತ್ತ ನಮ್ಮೂರಿನಾಚಿನ ಗುಡ್ಡದ ಬಂಡೆಯಮೇಲೆ ಯಾವತ್ತೋ ಗೀಚಿದ್ದನೆಚ್ಚಿನ ನಟನ ಹೆಸರು, ಅಲ್ಲೇಮುರಿದು ಬಿದ್ದ ಪಾಳು ಮಂಟಪನೂರು ಕನಸು ಅದರೊಳಗೆಸುತ್ತಲೂ ಘಮ್ಮೆನ್ನುವ ಹೂಗಳು ಇವೆಲ್ಲವಕ್ಕೂ ಸರಿದೂಗುವನೀನು ಕಣ್ಮುಂದೆ ನಿಂತಾಗಬಾಯಿ ಪೂರ್ಣವಾಗಿ ಒಣಗಿಮೈ ಬೆವರಿನಿಂದ ತೊಯ್ಯುತ್ತದೆತೊಟ್ಟಿಕ್ಕುವ ಬೆವರ ಹನಿಗೆನನ್ನೊಳಗಿನ ಬಿಂಕಕ್ಕೊಂದುಹೊಸ ನಾಮಕರಣ ಮಾಡುವಹಂಬಲ.. ಮೆಲ್ಲಗೆ ಕಾಲು ಜಾರುವೆ ಹೊಸಮೋಹದ ತೆಕ್ಕೆಗೆ ನನ್ನೊಳಗಿನಸೊಕ್ಕನ್ನೆಲ್ಲ ಒಂದೆಡೆ ಅಡಗಿಸಿನಿನ್ನ ನಸೆಯ ನೋಟ ಅಂಕುಡೊಂಕು ಹಾದಿ ತುಂಬಾಓಡಾಡುವಾಗ ಕಣ್ಮುಚ್ಚಿಕಳೆದುಹೋಗುವೆ. ಕಣ್ಬಿಟ್ಟರೆ ಬಟ್ಟಲು ಕಂಗಳಮದಿರೆ ಒಳಗಿಳಿದು ನೇಸರನಿಲ್ಲದಹೊತ್ತಲ್ಲಿ ನಿನ್ನುಸಿರ ಏರಿಳಿತಗಳನಡುವೆ ಸಿಕ್ಕಿ ಬಿಡಿಸಿಕೊಳ್ಳಲಾಗದೆಮಿಸುಕಾಡಿ ಮೈ ಕೊಡವಿಬಿಡುವೆ ಹೇಳು ಬಯಕೆಗಳ ನೆರಿಗೆ ಹಿಡಿದುಸಿಕ್ಕಿಸುವ ಸಾಹಸಕ್ಕೆಹಾರುವ ಸೆರಗ ಒಪ್ಪ ಮಾಡಿಸುಮ್ಮನಿರಿಸುವ ತಪ್ಪಿಗೆ ಕೈ ಹಾಕಲೇ?ಇಲ್ಲ ಕೊನೆಯಿರದ ನಿನ್ನ ಸಾಗರಕ್ಕಿಳಿದುಈಜಲೇತುದಿ ಇರದ ನಿನ್ನ ಆಗಸಕ್ಕೇರಿಹಾರಲೇ? *********************************

ವಾರದ ಕವಿತೆ Read Post »

ವಾರದ ಕವಿತೆ

ವಾರದ ಕವಿತೆ

ಕವಿತೆ ಹಳೆಯ ಮನೆ ಮೇಗರವಳ್ಳಿ ರಮೇಶ್ ಅದೊ೦ದು ವೈಭವದ ಹಳೆಯಕಾಲದಹೆ೦ಚಿನ ಮಹಡಿ ಮನೆ. ನಿತ್ಯ ದೇವರ ಪೂಜೆ, ಹಬ್ಬ ಹರಿದಿನಗ೦ಟೆ ಜಾಗಟೆ ಶ೦ಖ.ಮದುವೆ ಮು೦ಜಿ ನಾಮಕರಣ ಹುಟ್ಟಿದ ಹಬ್ಬಕಿವಿ ತು೦ಬುವ ನಾದಸ್ವರ.ನೀರೆಯರ ಸ೦ಭ್ರಮದ ಸೀರೆಯ ಸರಬರಬಳೆಗಳ ಘಲ ಘಲ.ತೂಗುವ ತೊಟಿಲುಗಳಕ೦ದಮ್ಮಗಳ ಕಿಲ ಕಿಲಮನೆ ಮನಗಳ ತು೦ಬಿ ಹರಿವಜೋಗುಳದ ಮಾಧುರ್ಯ.ಗ೦ಡಸರ ಗತ್ತು, ಗೈರತ್ತುಜಗಲಿಯ ಮೇಲೆ ಊರ ಪ್ರಮುಖರೊಡನೆಹಿರಿಯರ ಒಡ್ಡೋಲಗ.ಮಹಡಿಯ ಹಜಾರದಲ್ಲಿ ಇಸ್ಪೀಟು , ಸಿಗರೇಟು ಬೀಡಿಅಡಿಕೆ ಚಪ್ಪರಕೊಟ್ಟಿಗೆಯ ತು೦ಬ ದನ ಕರ.ಹಜಾರದಲ್ಲಿ ಪೇರಿಸಿಟ್ಟ ಅಡಿಕೆ ಮೂಟೆಪಣತ ತು೦ಬಿದ ಭತ್ತಉಪ್ಪಿನ ಕಾಯಿ ಜಾಡಿ, ಜೋನಿ ಬೆಲ್ಲದ ಮಡಕೆ. ಅದೊ೦ದು ವೈಭವದ ಹಳೆಯ ಕಾಲದಹೆ೦ಚಿನ ಮಹಡಿ ಮನೆ.* ಮುಚ್ಚಿದ ಬಾಗಿಲಿಗೆ ಬಿದ್ದ ಬೀಗಕ್ಕೀಗ ತುಕ್ಕುಅ೦ಗಳದ ತು೦ಬ ಗಿಡ ಗ೦ಟೆ ಲ೦ಟಾನ ಪಾರ್ಥೇನಿಯ೦ಜಗಲಿಯಲ್ಲಿ ಬಿಡಾಡಿ ದನ ಕರು ಎಮ್ಮೆ ಗಳಸಗಣಿ ಗ೦ಜಲಗಳ ದುರ್ನಾತಶ್ವಾನಗಳ ರೆಸ್ಟ್ ಹೌಸು.ಹೆ೦ಚಿನ ಮೇಲೆ ಬೆಳೆದ ಪಾಚಿ, ಹುಲ್ಲುಕಳಚಿ ಬೀಳುತ್ತಿರುವ ಜ೦ತಿ.ಬಣ್ಣ ಮಾಸಿ ಹಕ್ಕಳಿಕೆ ಎದ್ದಗೋಡೆಗಳ ತು೦ಬ ಗಾಯಸುಳಿವ ಗಾಳಿಯಲ್ಲಿ ನಿಟ್ಟುಸಿರಿನ ಸುಯ್ಲು. ಮುಚ್ಚಿದ ಬಾಗಿಲೊಳಗಿನ ಗವ್ವುಗತ್ತಲಲ್ಲಿಚೆಲ್ಲಾ ಪಿಲ್ಲಿ ಬಿದ್ದಿರುವಆ ಹಳೆಯ ಮನೆಯ ಹಳೆಯ ಮ೦ದಿಉಳಿಸಿ ಹೋಗಿರುವ ಕನಸುಗಳು. ************************

ವಾರದ ಕವಿತೆ Read Post »

ವಾರದ ಕವಿತೆ

ವಾರದ ಕವಿತೆ

ಕವಿತೆ ನಿದ್ದೆ ಬರುತ್ತಿಲ್ಲ! ಕಾತ್ಯಾಯಿನಿ ಕುಂಜಿಬೆಟ್ಟು ನಿದ್ದೆ ಬರುತ್ತಿಲ್ಲ!ಆದರೆ…ನಿದ್ದೆ ಮಾಡದಿದ್ದರೆಒಳಗಿರುವ ಆತ್ಮಿಣಿ ಅಲಂಕರಿಸಿಕೊಂಡುಶತಪಥ ಸುತ್ತುತ್ತಾಳೆ ಪಂಜರದ ಗಿಳಿಯಂತೆಹೊರಹಾದಿ ಅರಸುತ್ತ! ಆಗ…ಪಕ್ಕದಲ್ಲಿರುವ ಪುರುಷಾಕಾರಲಂಘಿಸಿ ರಾವಣನಾಗುತ್ತದೆನನ್ನನ್ನು ಅಪಹರಿಸಿ ಅಶೋಕವನದಲ್ಲಿಡಲು!ಅಥವಾ…ಗುಟುರು ಹಾಕುತ್ತ ರಕ್ಕಸನಾಗುತ್ತದೆಹೊತ್ತೊಯ್ದು ಏಳುಕೋಟೆಯೊಳಗೆಬಂಧಿಸಿಡಲು! ನಿದ್ದೆಯೇ ಬಾರದಿದ್ದರೆನಾನು ಸೀತೆಯಾಗಬೇಕಾಗುತ್ತದೆ!ಆಗ…ಕನಸುಗಳನ್ನು ಹತ್ತುತಲೆಗಳಇಪ್ಪತ್ತು ಕಣ್ಣುಗಳುನೋಟದಲ್ಲೇ ಬೂದಿ ಮಾಡುತ್ತವೆಹತ್ತು ಮೂಗುಗಳು ಇಪ್ಪತ್ತು ಕಿವಿಗಳುಕಿಟಕಿ ಕಿಂಡಿಗಳಾಗಿಹೋದೆಯ ಪಿಶಾಚಿ ಎಂದರೆಬಂದೆ ನಾ ಗವಾಕ್ಷಿಯಲ್ಲಿ! ಎಂದರಚುತ್ತಹತ್ತು ದಳಬಾಯಿಗಳುಕೋಟೆಯ ಮಹಾದ್ವಾರಗಳಾಗಿಅಶೋಕವನದ ಮರಗಳನ್ನುಹೊರದೂಡುತ್ತವೆಅವು ಎಲೆಗಳ ಕಣ್ಣುಗಳನ್ನುಗಾಳಿಗೆ ಮುಚ್ಚಿ ತೆರೆಯುತ್ತಕಣ್ಸನ್ನೆಯಲ್ಲೇಕೋಟೆಯ ಹೊರಗಿಂದಲೇಬಾ ಬಾ ಎಂದು ಬಳಿಕರೆಯುತ್ತವೆ ಶೋಕಿಸಲು ಅಶೋಕವನದಆ ಮರ ಇಲ್ಲವಾದರೆಸೀತೆ ಸೀತೆಯೇ ಅಲ್ಲ!ರಾಮರಾಮರಾಮರಾ… ಎನ್ನುತ್ತಶೋಕಿಸಲು ಹೆಣ್ಣಿಗೆರಾಮನಂಥದ್ದೇ ಮರವೂ ಬೇಕು… ಕಾರಣ!ರಾವಣನಂಥ ಕೋಟೆಯೂ… ಪರಿಣಾಮ! ಒಂದುವೇಳೆ ಸೀತೆಯಾಗದಿದ್ದರೆ…ಏಳುಸುತ್ತಿನ ಕೋಟೆಯಲ್ಲಿ ರಾಕ್ಷಸಸೆರೆಹಿಡಿದ ಅನಾಮಿಕ ರಾಜಕುಮಾರಿಯಂತೆಒಳಗೇ ಬಾಯ್ಬಿಟ್ಟು ರೋಧಿಸುತ್ತಆತ ಏಳು ಕಡಲಾಚೆ ಗಿಳಿಯೊಳಗೇ ತನ್ನ ಜೀವವನ್ನುಬಚ್ಚಿಟ್ಟು ಮೊಸಳೆಯಂತೆ ಕೋಟೆಬಾಗಿಲಲ್ಲೇ ನಿದ್ರಿಸುವಾಗನಿದ್ದೆಯೇ ಬಾರದ ನಾನುಇದುವರೆಗೂ ಕಣ್ಣಲ್ಲೇ ಕಂಡಿರದ ರಾಜಕುಮಾರನನ್ನುಕಾಯುತ್ತ ಕಂಬನಿಯ ಕಡಲಲ್ಲಿಬಂಡೆಯಂತೆ ಈಜುತ್ತಿರಬೇಕು!ಅಜ್ಜಿಯು ಬೊಚ್ಚುಬಾಯಲ್ಲಿ ಕಟ್ಟಿದ ದಂತಕತೆಯಲ್ಲಿ ಉಳಿಯುವ ನಾಸ್ತಿತ್ವದಅನಾಮಧೇಯ ಪಾತ್ರವದು! ನಿದ್ದೆಯೇ ಬಾರದಿದ್ದರೆ…ಏನಾದರೊಂದು ಆಗಲೇಬೇಕಾಗುತ್ತದೆ!ರಾಮಾಯಣದ ಸೀತೆಯಾದರೆಕೋಟೆಯಾಚಿನ ಅಶೋಕವನದಲ್ಲಿಇಡೀ ಲೋಕಕ್ಕೇ ಕಾಣುವ ಹಾಗೆರಾಮಾ ರಾಮಾ ಸೀತಾರಾಮಾ ಎಂದುಬಾಯ್ಬಿಟ್ಟು ಎದೆಬಡಿದು ರೋಧಿಸುತ್ತಮಹಾನಾರೀ ಪತಿವೃತಾಶಿರೋಮಣಿಯಂತೆಕೊರಳ ತಾಳಿ ಹೆರಳ ಚೂಡಾಮಣಿಯನ್ನುಪದೇ ಪದೇ ಕಣ್ಣಿಗೊತ್ತಿಕೊಳ್ಳುತ್ತಅಶೋಕವನದ ನೆರಳಲ್ಲಿಶೋಕ ಕವನವಾಗಬಹುದುಸೀತೆಯ ಕವನ!ಆದರೆ ಶೀರ್ಷಿಕೆ… ಸೀತಾಯಣವಲ್ಲ ರಾಮಾಯಣ!ರಾಮಾಯಣದ ಸೀತೆ… ಗಂಡು ವಾಲ್ಮೀಕಿನುಡಿಸಿದಂತೆ ನುಡಿಯುವ ಹೆಣ್ಣು ಸೀತೆ!ರಾಮನು ಗೆದ್ದ ಸೊತ್ತು ಸೀತೆ!ರಾಮಾ ರಾಮಾ ಅನ್ನುತ್ತಲೇ ಹೋಮಾಗ್ನಿ ಸುತ್ತಿಅಯೋಧ್ಯಾ ಪ್ರವೇಶಅಲ್ಲಿಂದ ವನಪ್ರವೇಶ… ಕಾಡ್ಗಿಚ್ಚು!ಅಲ್ಲಿಂದ ಲಂಕಾಗ್ನಿಅಗ್ನಿಯಿಂದ ಅರಮನೆಅರಮನೆಯಿಂದ ಕಾನನಕಾನನದಿಂದ ಅವನಿ..ಕಾವ್ಯದಿಂದ ಕಾವ್ಯ… !ಅಗ್ನಿ ತಪ್ಪುವುದೇ ಇಲ್ಲ! ಮಂಥರೆಯ ಜಲಪಾತ್ರೆಯಲ್ಲೇಚಂದ್ರನನ್ನು ಪಡೆದು ರಾಮಚಂದ್ರನಾದವನಿಗೆಬಾಳಿಡೀ ಸುಳ್ಳಲ್ಲೇ ನಿಜದ ಭ್ರಮೆ!ನಿದ್ದೆಯೇ ಬಾರದಿದ್ದರೆ…ಭ್ರಮಾಯಣವೇ ಶುರುವಾಗುತ್ತದೆ!ಸೀತೆ ಮಿಥಿಲೆಯ ಜನಕನ ನೇಗಿಲ ಬಾಯಿಗೆ ಸಿಕ್ಕುಕೊನೆಗೆ ರಾಮನ ಬದಿಯಲ್ಲಿ ಸ್ಥಾಪಿತ ಮೂರ್ತಿಯಾಗಿಸುಳ್ಳಲ್ಲೇ ನಿಜವಾಗುತ್ತಾಳೆ…ಅಶ್ವಮೇಧ ಯಾಗದ ಹೊಗೆಯಲ್ಲಿನಹುಷ ಯಯಾತಿ ಪುರುವಂಶದಯುದ್ಧ ಹಿಂಸೆಗಳ ನೆತ್ತರ ಪುಣ್ಯತೀರ್ಥದಲ್ಲಿಮಿಂದು ಗಂಗೆಯಾಗುತ್ತಾಳೆ! ನಿದ್ದೆಯೇ ಬರುತ್ತಿಲ್ಲ!ಓಹ್! ಏನಾಶ್ಚರ್ಯ! ಅಗ್ನಿ! ಅಗ್ನಿ!ವಾಲ್ಮೀಕಿ ರಾಮಾಯಣದಅಗ್ನಿಕುಂಡದ ಅಗ್ನಿದಿವ್ಯದಿಂದೆದ್ದ ಸೀತೆಯು…ಕುವೆಂಪು ರಾಮಾಯಣದರ್ಶನಂನಹೊಸದರ್ಶನದ ಅಗ್ನಿಯೊಳಗೆರಾಮನೊಂದಿಗೇ ಪ್ರವೇಶಿಸಿಅವನು ಅವಳು ಬೇಧವಳಿದುಎದೆಯ ಅಗ್ನಿಕುಂಡದಿಂದೆದ್ದು ಬಂದೇಬಿಟ್ಟರಲ್ಲ! ಅದ್ವೈತ! ಇನ್ನಾದರೂ ನಿದ್ದೆ ಮಾಡಬೇಕು!ಅಯ್ಯೋ! ನನ್ನ ಎದೆಯನ್ನೇ ಸೀಳಿಕೊಂಡು ಹೊರಹೊಮ್ಮುತ್ತಿದೆತುಂಬು ಬಸುರಿಯ ಅರಣ್ಯರೋಧನ!ರಾಮದೇವರೇ!ಉತ್ತರ ರಾಮಚರಿತಕ್ಕೆ ಉತ್ತರ?ಅಲ್ಲೇ ನಿಲ್ಲು ಸೀತೇ!ಹೆಣ್ಣಿನ ಪಾತ್ರವನ್ನು ಇನ್ನು ಹೆಣ್ಣೇ ಬರೆಯಬೇಕು! ***********************************

ವಾರದ ಕವಿತೆ Read Post »

ವಾರದ ಕವಿತೆ

ವಾರದ ಕವಿತೆ

ಕಿಟಕಿ -ಗೋಡೆ ವಾರದ ಕವಿತೆ(ಪ್ರತಿ ಶುಕ್ರವಾರ) ವಸುಂಧರಾ ಕದಲೂರು ನಾನೊಂದು ಕಿಟಕಿ; ಮುಚ್ಚಿಯೇಇದ್ದೇನೆ ಶತಮಾನಗಳಿಂದಗತಕಾಲದ ಗಾಳಿ ಒಳಗೆಸುಳಿದಾಡುತ್ತಾ ಕತ್ತಲ ಘಮಲಿನಅಮಲಲಿ ಉರುಳಾಡುತ್ತಾಎದ್ದೆದ್ದು ಕುಣಿಯುವಆತ್ಮಗಳೂ ಅಸ್ಥಿಪಂಜರಗಳೂನನ್ನೊಳಗಿವೆ. ವಿಶಾಲ ಬಿಳಲುಗಳ ಆಲದಮರವೊಂದು ಟಿಸಿಲೊಡೆದುತೊಗಟೆ ಕಳಚಿಕೊಳ್ಳದೆ ಬೇರೂರಿಮುಚ್ಚಿದ ಕಿಟಕಿಯಾಚೆಸ್ವಚ್ಛ ಗಾಳಿಗೆ ಚಿಗುರು ಚಿಗಿಸಿಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.ಒಂದೊಂದು ಟೊಂಗೆಗೂಗೂಡು. ಗೂಡೊಳಗೆ ಕಾವುಕೂತ ಹಸಿ ಬಾಣಂತಿ ಹಕ್ಕಿಕಿಟಕಿ ಕುಟುಕಿದ ಸದ್ದು;ಚಾಚಿದ ಟೊಂಗೆಯೋಚೈತನ್ಯದ ಹಕ್ಕಿಯೋ ತಿಳಿಯದು.ಪ್ರತೀ ಶಬ್ದ ಮಾಡುವ ಹಕ್ಕಿಗೂಅದೇನು ರಾಗವೋಸುಮ್ಮಗೆ ಬೀಸುವ ಗಾಳಿಗೆತಲೆದೂಗುವ ಟೊಂಗೆಗಳಿಗೂಅದೇನು ಹೊಸ ರಂಗೋ ನಾನು ಮಾತ್ರ ತೆರೆಯುವುದಿಲ್ಲ. ಶತಮಾನಗಳಿಂದ ಮುಚ್ಚಿದಕಿಟಕಿ. ನನ್ನಾಚೆ ನನಗೆ ಅರಿವಾಗದೇಒಳಗಿನ ಗವ್ವುಗತ್ತಲೆಕಮಟು ವಾಸನೆ ಕತ್ತು ಹಿಸುಕಿ ಕುತ್ತುತರುತ್ತಿವೆ. ಕಾಲದ ಅಲೆ ಉರುಳಿತನ್ನೊಡನೆ ತಂದಿಟ್ಟ ಮರಳುತನಕ್ಕೆಈಗ ಕಿವೂಡೂ ಕುರುಡೂಸಾತ್ ಕೊಡುತ್ತಾ ಕೂಡುತ್ತಿವೆಜತನ ಮಾಡುತ್ತಾ ಗತವನ್ನು. ನನ್ನ ಚೌಕಟ್ಟಿನಾಚೆ ನಿಂತಗಟ್ಟಿ ಗೋಡೆ ಆಗಾಗ್ಗೆ ಅಪಾರವೇದನೆಯಲಿ ಮುಖಕಿವುಚಿ ನರಳಿ ನುಡಿಯುತ್ತದೆಯಾರೋ ಈಗಷ್ಟೆ ಕೆತ್ತಿಹೋದರೆಂದು ಮೊಳೆ ಜಡಿದುಭಾರಗಳನು ತೂಗುಹಾಕಿಭಾವನೆಗಳನು ಹೇರಿದರೆಂದುಆಕ್ರಮಿಸಿಕೊಂಡ ಆಕ್ರಂದನದದನಿಯಲಿ.. ನೆಟ್ಟಗೆ ನಿಂತ ಪಾಪದ ಗಟ್ಟಿಗೋಡೆ ; ಹೊಸ ಬಣ್ಣ ಬಳಿದರೂಬದಲಾಗದ ಹಳೆಯ ಹಣೆಬರಹ.ನವೀನತೆಗೆ ಒಡೆಯಬೇಕು, ಕುಟ್ಚಿಕೆಡವಿ ಪುಡಿಗಟ್ಟಬೇಕು. ಅಸ್ತಿತ್ವದನಿರಾಕರಣೆ ಆಗಲೇಬೇಕು. ನನಗಾದರೂ ಬಾಗಿಲುಗಳಿವೆ ತೆರೆಯಬಹುದುಒಮ್ಮೆ ಜಗ್ಗನೆ ಹೊಳೆವ ಮಿಂಚುಪಕ್ಕನೆ ಹಾರುವ ಹಕ್ಕಿ ಸಾಲನುನಾನಾದರೂ ಕಾಣಬಹುದು.ನಿಧಾನದ ಆಲಾಪಕ್ಕೆ ತೆರೆದುತಲೆತೂಗಬಹುದು.ಯಾರಾದರು ಒಮ್ಮೆನನ್ನೊಳಗೆ ಹಣಕಿ ಈ ಓಲಾಡುವಆತ್ಮಗಳನೂ ಕಿಲುಬುಗಟ್ಟಿದಅಸ್ಥಿಪಂಜರಗಳನೂ ಒಮ್ಮೆ ಜಾಡಿಸಿಓಡಿಸಿ ಬಿಡಬಹುದು. ಗೋಡೆ ಕೆಡವಲುವಿಳಾಸ ಹುಡುಕಿ ಬರುವವರುಬಣ್ಣ ಮಾಸಿ ಸಡಿಲಾದ ನನ್ನಬಾಗಿಲುಗಳನುದೂಡಲಿ ಪರದೆ ಹರಿದು ಹೊಸಜೇಡ ಮತ್ತೆ ಬಲೆ ಹೆಣೆಯದಂತೆಮಾಡಲಿ ಎಳೆ ಬಿಸಿಲುಹೊಸ ಗಾಳಿ ತುಂಬಿ ಬರಲಿ ನಾನು ತೆರೆದುಕೊಳ್ಳುವ ಕಿಟಕಿ ವಸುಂಧರಾ ಕದಲೂರು

ವಾರದ ಕವಿತೆ Read Post »

ಕಾವ್ಯಯಾನ, ವಾರದ ಕವಿತೆ

ವಾರದ ಕವಿತೆ

ಬದುಕುಮರುಗುತ್ತಿದೆ ಸುಜಾತಾ ಲಕ್ಮನೆ ಬದುಕು ಮರುಗುತ್ತಿದೆಕನಸುಗಳು ಶಿಥಿಲಗೊಂಡು ರಚ್ಚೆ ಹಿಡಿದುಮುರುಟ ತೊಡಗಿದಂತೆಲ್ಲಬದುಕ ಭಿತ್ತಿಯ ಆಚೀಚೆ ನೀನು ಎಗ್ಗಿಲ್ಲದೇ ಜಡಿದ ಮೊಳೆಗಳುಆಳಕ್ಕಿಳಿದಂತೆಲ್ಲಾ ಹೊರಳಿ ನರಳಿ ಅನಾಮತ್ತಾಗಿ ಹರಡಿಬೆದರುಬೊಂಬೆಗಳಾಗಿ ನಿಲ್ಲುತ್ತವೆ ಭಾವಗಳು !!ದಿಕ್ಕೆಟ್ಟು, ಸೋತು ಹೆಜ್ಜೆ ಮೂಡಿಸಲಾಗದ ಕೊರಗು ತುಂಬಿ ನಿಂತಈ ಭಾವಗಳ ತಬ್ಬಿದರೆಬರೀ ನಿಟ್ಟುಸಿರ ಮೇಳಗಳು !!ಧೂಳು ಹೊದ್ದು ಮಸುಕಾದ ಗೋಡೆಗಂಟಿದ ನಮ್ಮೀವಿವಾಹದ ಜೋಡಿ ಪಟದಿಂದ ಒಳಗೊಳಗೇ ನಕ್ಕು ಸೂಸುವ ಹಳವಂಡಗಳು!ಜೇಡ ನೇಯ್ದ ಬಲೆಯೊಳಗೆ ಬಿದ್ದು ಹೊರಳಾಡುವ ಪಟದ ಬಗ್ಗೆ ನಮಗೇಕೆ ಚಿಂತೆ?ಬದುಕೇ ಚೌಕಟ್ಟು ಮೀರಿ ಮೂರಾಬಟ್ಟೆಯಾದ ಮೇಲೆ ಇನ್ನೇನಂತೆ ?ಅದೆಷ್ಟು ಬೆಳ್ಳಗೆಯಲ್ಲಿ ಮುಖವಾಡ ಹೊದ್ದು ಹಗಲು ತಳ್ಳಿದರೂಎದೆ ಸುಡುವ ಮಂಚದ ಮೇಲೆರಾಗ ಲಯಗಳು ಸತ್ತ ಬಾಳು ರಿಕ್ತಗೊಂಡ ಸತ್ಯದರ್ಶನ !ನಿದ್ದೆ ತಬ್ಬದ ರಾತ್ರಿಗಳಲ್ಲಿ ಕಣ್ಣಾಲಿಗಳ ಸುತ್ತ ಸತ್ತ ಕನಸುಗಳ ಒಸರುಗಿರಕಿ ಹೊಡೆಯುವ ತವಕ-ತಲ್ಲಣ !!ಈ ಉತ್ಕಲಿಕೆ ತಾಳಲಾರದೇ ತಟ್ಟಿ ಮಲಗಿಸಿದಂತೆಲ್ಲಾಉಟ್ಟ ಸೀರೆಯ ಸೆರಗಿನಂಚೇ ಪಿಸುಗುಡಲು ಶುರುವಿಟ್ಟುಕೊಳ್ಳುತ್ತದೆ ನನ್ನಲ್ಲಿ !ಎದೆಯ ಬೀದಿಯ ಮೇಲೆ ಗೀಚಿದ ಒಲುಮೆ ಅಕ್ಷರಗಳುಇದ್ದಕ್ಕಿದ್ದಂತೆ ಮಾಯವಾಗಿದ್ದಾದರೂ ಎಲ್ಲಿ?ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಹೋಗುವ ಈ ಅನಿವಾರ್ಯತೆಯಆರ್ತನಾದಕ್ಕೆ ಕೊನೆಯಲ್ಲಿ ?ಸಾಲ್ಗೊಳಿಸಲಾಗದ ಪ್ರೀತಿಯ ವ್ಯಾಖ್ಯೆ ಎಡವಿದಂತೆಲ್ಲಸುಕರಗೊಳ್ಳದ ಬದುಕು ಅನಂತ ಸುಳ್ಳುಗಳಿಂದ ತುಂಬಿ ಅಣಕಿಸುತ್ತಿದೆ!!ನಿನ್ನ ಮೆಲ್ನುಡಿ, ಮೆಲ್ದನಿ, ಮೆಲ್ನಗೆಗೆ ಹಾತೊರೆದು ಹೀಗೆ ಗೀಚುವ ಕವನ ಕನಲುತ್ತಿದೆ: ಕರಗುತ್ತಿದೆ: ಕನವರಿಸುತ್ತಿದೆ!!ಕಂಡೂ ಕಾಣದ ಆಸೆ ಕುಡಿಯು ಚಿಗುರಲಾರದೇ ಇತ್ತ ಸಾಯಲಾರದೇ-ಗೆಜ್ಜೆಕಟ್ಟಿದ ಹೆಜ್ಜೆ ಪ್ರೀತಿಯ ರಂಗಸ್ಥಳದಲ್ಲಿ ನರ್ತಿಸಲಾರದೇಬದುಕೇ ಮರುಗುತ್ತಿದೆ : ನರಳುತ್ತಿದೆ : ನೋಯುತ್ತಿದೆ !!ಸಾಂಗತ್ಯ ಗೊಳ್ಳದ ಬದುಕ ಪದುಳಿಸಲು ಒಮ್ಮುಖವಾಗಿನಾನು ಹೆಣಗಿದಂತೆಲ್ಲ ನಿನ್ನ ವಿಮುಖತೆಯೇ ಮೂರ್ತೀಭವಿಸಿದಿನ-ರಾತ್ರಿಗಳು ಬಸವಳಿದು ಚಾದರ ದಡಿಯಲ್ಲಿ ಬಿಕ್ಕುತಿವೆ!!ನಾನು ನೀನು ದಾಂಪತ್ಯದಲ್ಲಿ ಕಾಲಿಟ್ಟ ಸಂಭ್ರಮದ ಆ ದಿನಕ್ಕೆಬೇಕಿತ್ತೇ ದಿಬ್ಬಣ ಒಡ್ಡೋಲಗ ಮಂತ್ರಗಳ ಘೋಷ ಹೂ ಮಾಲೆ?ಸನಿಹವಿದ್ದೂ ನಿನ್ನ ಬಿಸುಪೇ ತಾಗದೆ ಸಾಯುವ ನನ್ನ ಭಾವಲಹರಿಯ ಬಿಕ್ಕಿಗೆಇನ್ನೆಷ್ಟು ತೇಪೆ ಹಚ್ಚುವ ಶ್ರಮ –ಮನಸ್ಸಿಗೆ ಮನಸ್ಸೇ ಬೆಸೆಯದಿದ್ದ ಮೇಲೆ?ಪ್ರೀತಿ ಇಲ್ಲದ ಮೇಲೆ ಎಲ್ಲ ತೊರೆದು ಕಾರಣವ ಕೊಟ್ಟು ಹೊರಟು ಬಿಡು !ವಿಕ್ಷೋಭ ವಿಕ್ಲಬಗಳೆಲ್ಲ ದೂರಾಗಿ ಹೋಗಲಿನನ್ನ ಬಿಸಾಕಿ ಬಿಡು ನಿನ್ನ ಬಾಳಿಂದಒಳ ಕುದಿತ ತಹಬಂದಿಗೆ ಬಂದುಇನ್ನುಳಿದ ಎನ್ನ ಬಾಳಾದರೂ ಆಗಲಿ ಅಂದ ಚಂದ !! *******************

ವಾರದ ಕವಿತೆ Read Post »

ವಾರದ ಕವಿತೆ

ವಾರದ ಕವಿತೆ

ಮುಕ್ತತೆಯ ಹಂಬಲ ಪೂರ್ಣಿಮಾ ಸುರೇಶ್ ಹೊರಟಿದ್ದೇನೆ ಎಂದಿನಂತೆಬರಿಗಾಲಿನಲ್ಲಿನಿನ್ನ ಪದತಳದ ಧೂಳು ತಾಕಿದವರಹುಡುಕಲಿಕ್ಕೆ ಕಣ್ಣಲ್ಲಿ ಮುಸುಕು ಹಾಕಿ ಕೂತಿರುವಮೃದು ಹೂವಿನಂತಹಮುದ್ದು ಮೊಲದಂತಹ ಸುಕೋಮಲಪ್ರೀತಿ ಗಂಧ ಹಿಡಿದು ತುಸುತುಸು ತೆರೆದ ಕದಗುಸುಗುಸು ಮಾತಿನಲಿಆಟವಾಡುತ್ತಿದೆಹದಬೆಂಕಿ ಹೊಗೆಯಧೂಪ ಪರಿಮಳಕೆ ಎಲ್ಲವೂ ಕಾದಷ್ಟುಬೇಯುವಷ್ಟುಘಮಘಮಿಸಿಸುಡುವಷ್ಟು ಬತ್ತಿ ಮಹಾಪೂಜೆ ಕಟ್ಟುಗಳ ಬಿಚ್ಚಿ ಕಡಮೆ ದಾಟಿಜಗಳವಾಡಬೇಕು ಅನಿಸುತ್ತದೆ ದೇವರಾದರೆ ಏನಂತೆ.. ಶಿಲೆಯೊಡಲಲ್ಲೇ ಬೆಂಕಿದೇವರಾಗಿಸಿದ ಮೊಗಗಳಲಿಮೌನ ಹೀರಿ ನಗು.. ಗರ್ಭಗುಡಿಯ ಹೊರಗೆಆವರಣದಲಿಭಕ್ತರ ಪ್ರಾರ್ಥನೆಯ ಕಂಬನಿಹೆಪ್ಪುಗಟ್ಟಿದೆ ಇದು ಶಬರಿತನ ಪಾದಗಳು ನಿಶ್ಯಕ್ತವಾಗಿದೆಮಹಾಶೂನ್ಯತೆ ಆವರಿಸಿದೆನನ್ನನು ಮಂಜಿನಂತಹ ಮರೆವಿಗೆಸರಿಸಿಬಿಡು ಬೆಂಕಿಯನ್ನು ಒಡಲುಗೊಂಡವನೇಮುಕ್ತಳಾಗಬೇಕು ನಿನ್ನಿಂದ.

ವಾರದ ಕವಿತೆ Read Post »

ಕಾವ್ಯಯಾನ, ವಾರದ ಕವಿತೆ

ವಾರದ ಕವಿತೆ

ಹೆಸರಿಲ್ಲದ ಕವಿತೆ ಸ್ಮಿತಾಅಮೃತರಾಜ್. ಸಂಪಾಜೆ ಹೆಸರಿಲ್ಲದ ಕವಿತೆ ನಾನು ಹಠಕ್ಕೆ ಬಿದ್ದವಳಂತೆ ತಾಳ್ಮೆಯಿಂದ ಕಾಯುತ್ತಲೇ ಇದ್ದೇನೆ ಹಾಗೇ ಬಂದು ಹೀಗೇ ಹೋದ ಕವಿತೆಯನ್ನೊಮ್ಮೆ ಎಳೆದು ತಂದೇ ತೀರುವೆನೆಂಬಂತೆ. ಗೊತ್ತಿದೆ, ಬಲವಾದ ಕಾರಣವಿಲ್ಲದೆ ಕವಿತೆ ಕಾಣೆಯಾಗುವುದಿಲ್ಲ. ಅಥವಾ ಮತ್ಯಾವುದೋ ಗಳಿಗೆ ಸದ್ದಿಲ್ಲದೇ ಪಕ್ಕಕ್ಕೆ ಬಂದು ಆತುಕೊಳ್ಳುವ ಅದರ ಆತುರಕ್ಕೆ ಅವಸರ ಸಲ್ಲವೆಂಬುದೂ.. ಕಾಡಿದ್ದು ಒತ್ತರಿಸಿ ಬಂದು ಯಾವುದೋ ಒಂದು ಕ್ಷಣದಲ್ಲಿ ಪದಗಳಾಗಿದ್ದಕ್ಕೆ.. ನಿನಗೆ ಪದ್ಯ ಹೊಸೆಯುವುದೊಂದೇ ಕೆಲಸವಾ? ನಮಗೆ ನೋಡು ಓದೋಕ್ಕಾದರೂ ಪುರುಸೊತ್ತು ಬೇಡವಾ? ಪಾಪ! ಹೌದಲ್ವಾ! ಅವರ ನಿರ್ಭಾವುಕ ಪ್ರಶ್ನೆಗೆ ಕವಿತೆಯೂ ಬೆಚ್ಚುತ್ತಿದೆ. ಈಗೀಗಲಂತೂ ನಮ್ಮೂರ ಹಸಿರ ಕಡೆಗೆ ಎಲ್ಲರ ಕಣ್ಣು . ಕವಿತೆ ಅದಕ್ಕೆ ಇಲ್ಲೇ ಬೇರು ಬಿಟ್ಟಿದೆ ಅಂತ ತಾರೀಫು ಬೇರೆ. ಬೀಜ ಬಿತ್ತಿ, ಮೊಳಕೆ ಚಿಮ್ಮಿ, ರೆಕ್ಕೆ ಹಾಯುವವರೆಗೂ ನಮ್ಮ ಕಣ್ಣನ್ನೇ ಕಾವಲಿಗಿಟ್ಟದ್ದರ ಕುರಿತು ಅವರಿಗೆ ಕುತೂಹಲವೇ ಇಲ್ಲ. ಹಸಿರು ಫಲಬಿಡಲು ಗೊಬ್ಬರವೂಡದಿದ್ದರೆ ನಡೆದೀತೇ? ಇವತ್ತೂ ಅಷ್ಟೆ, ಹತ್ತಾಳು ಕೆಲಸಕ್ಕೆ ಸಂಬಳ ಕಡಿಮೆ; ಕೆಲಸ ಜಾಸ್ತಿ ಹೆಂಗಳೆಯರೇ ಸೈ ಅಂತ ಒಳಗಿನ ಮಾತು ಹೊರಕ್ಕೆ ಬರುವುದಿಲ್ಲ. ಬೆಳಗಿನೊಂದಾರ‍್ತಿಯದ್ದು ಲಗುಬಗೆಯಲಿ ಮುಗಿಸಿ ಈಗ ಮಧ್ಯಾಹ್ನಕ್ಕೆ ಏದುಸಿರಿನ ತಯಾರಿ ದೊಡ್ಡ ಹಂಡೆಯ ನೀರು ಬಿಸಿಯಾಗುತ್ತಿದೆ ಒಲೆ ಉರಿ ಹೆಚ್ಚುತ್ತಿದೆ ಅಕ್ಕಿ ಕುದಿ ಹತ್ತುತ್ತಿದೆ. ಹೊರಗಿನ ತುರ್ತು; ಒಳಗಿನ ಒತ್ತಡಕ್ಕೆ ಒಗ್ಗಿಕೊಳ್ಳುತ್ತಲೇ ಹದಗೊಳ್ಳುತ್ತಿದೆ ಧ್ಯಾನ. ಎರಡರ ಕುದಿ ಒಳಕ್ಕಿಳಿದಾಗ ಆಳದಿಂದ ಮುಗುಳೊಡೆಯುತ್ತಿದೆ ಹೆಸರಿಲ್ಲದ ಹೊಸತೊಂದು ಭಾವ. ಅಕಾ! ಹೊತ್ತು ಗೊತ್ತು ಬೇಡವಾ? ಕವಿತೆ ಈ ಹೊತ್ತಲ್ಲದ ಹೊತ್ತಿನಲ್ಲಿ ಹೀಗೆ ಬಂದು ಕೂಡುವುದಾ?!.

ವಾರದ ಕವಿತೆ Read Post »

You cannot copy content of this page

Scroll to Top