ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಆತನೊಲವು ಆತ್ಮ ಭಲವು ಜಗವ ಪ್ರೀತಿಸಿದ ಸಂತನ ಹುಟ್ಟು ಹಬ್ಬದ ಶುಭಾಷಯಗಳು ಸತ್ಯಮಂಗಲ ಮಹಾದೇವ ಕೇಳುತ್ತೀರಿ ನೀವು ನೀನು ಯಾರು ಎಂದು ಉತ್ತರಿಸಿದರೆ ಸಾಕು ನಿಮ್ಮದೇ ಉಯಿಲು ಲೋಕದ ಪಡಸಾಲೆಯಲ್ಲಿ ಹೇಳುವುದನ್ನು ಹೇಳಲೇ ಬೇಕು ಕಲ್ಲು ಮುಳ್ಳಿನ ಹಾದಿಯಲಿ ಮುಳ್ಳಿನ ಕಿರೀಟ ಹೊತ್ತ ಸಂತ ಮೈ ತುಂಬಾ ರಕ್ತದ ಧಾರೆ ಹರಿಯುತ್ತಿರಲು ಪ್ರೇಮದ ಸಾಕ್ಷಿ ಈ ರಕುತವೆಂದ ತಿವಿದವರ ತಿಳುವಳಿಕೆಯ ಕ್ಷಮಿಸಿರೆಂದ ಸಂಕಟಪಡುವವರ ಆತ್ಮ ಸಖನಾದ ನನ್ನೊಳಗೆ ನನ್ನನ್ನು ತಿಳಿಸಿದ ನೀನು ಯಾರು ಯಾವ ಊರು, ಯಾರಮಗ, ಯಾವ ಜಾತಿ ಆತ ಯಾವುದನ್ನು ಕೇಳದೆ ನನ್ನವನು ನೀನೆಂದ ಸಂತಸವು ಏನೆಂದು ತಿಳಿಸಿಕೊಟ್ಟ ಊರ ಹೊರಗಿನ ಹಟ್ಟಿಹುಡುಗನಿಗೆ ಗೆಳೆಯನಾದ ನಿನಾದದ ನಾದದಂತಾದ ಕೊಟ್ಟಿಗೆಯಲಿ ಹುಟ್ಟಿದ ಕಟ್ಟಕಡೆಯವನ ಮುಟ್ಟಿದ ತನ್ನಂತೆ ಇತರರನು ನೋಡೆಂದ ನೋವುಂಡು ನಲಿವಿನ ರಾಜ್ಯದ ಭರವಸೆಯ ಕೊಟ್ಟ ಈತ ಹೇಳುವುದು ನಾನು ಶಾಶ್ವತ ಗೆಳೆಯ ಹುಡುಕಿ ಕೊಡಿ ಯಾರಾದರು ಇದ್ದಾರೆಯೇ ಇವನಂತೆ ನೊಂದವರಿಗೆ ಅವ ಕಣ್ಣೀರು ಒರೆಸುವ ಸೇವಕ ನಮ್ಮೂರ ಸಂತೆಯ ಗೆಣೆಕಾರ ಯಾರು ಎಂದು ಮತ್ತೆ ಕೇಳಬೇಡಿ ಆತನೊಲವು ಆತ್ಮ ಭಲವು ಬೇರೆ ಬೇಕೆ ಸಾಕ್ಷಿಗೆ. ==================================

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

” ಹಡೆದವ್ವ” ನಿರ್ಮಲಾ ಅಪ್ಪಿಕೋ ನನ್ನ ನೀ ಹಡೆದವ್ವ ಮಲಗಿಸಿಕೊ ಮಡಿಲಲಿ ನನ್ನವ್ವ ನಿನ್ನ ಮಡಿಲಲಿ ಮಲಗಿ ಜಗವ ಮರೆವೆನವ್ವ ನೀ ಮಮಕಾರದ ಗಣಿಯೇ ಕೇಳವ್ವ ಜಗದಲಿ ಸಾಟಿಯೇ ಇಲ್ಲ ನಿನ್ನೊಲವಿಗೆ ದಾರಿದೀಪವಾದೆ ನನ್ನೀ ಬದುಕಿಗೆ ಇನ್ನೊಂದು ಹೆಸರೇ ನೀನಾದೆ ಕರುಣೆಗೆ ಅಮ್ಮ ಎಂದರೆ ಎಂತ ಆನಂದ ಮನಸಿಗೆ ಭೂಮಿಯ ಮೇಲೆ ನೀ ತ್ಯಾಗದ ಪ್ರತೀಕ ನೀನಿಲ್ಲದೆ ಇಲ್ಲ ಈ ಲೋಕ ನಿನ್ನ ಮಮಕಾರವದು ಬೆಲ್ಲದ ಪಾಕ ನೀನೇ ಸರ್ವಸ್ವವೂ ನನಗೆ ಕೊನೆತನಕ ವರವಾಗಿ ನೀಡಿದೆ ನನಗೆ ಈ ಜನುಮವ ನಿನ್ನ ಋಣವ ನಾನೆಂದೂ ತೀರಿಸೆನವ್ವ ನನ್ನ ಅಳುವಿಗೆ ಸದಾ ನಗುವಾದೆ ನನ್ನವ್ವ ಏಳೇಳು ಜನ್ಮಕೂ ನೀನೇ ನನ್ನ ಹಡೆದವ್ವ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇವಳು_ಅವಳೇ ! ಹರ್ಷಿತಾ ಕೆ.ಟಿ. ಅಲಂಕಾರದ ಮೇಜಿಗೆ ಹಿಡಿದಿದ್ದ ಧೂಳು ಹೊಡೆಯುತ್ತಿದ್ದ ನನ್ನ ಶೂನ್ಯ ದೃಷ್ಟಿಗೆ ಅಚಾನಕ್ಕಾಗಿ ಕಂಡಳಿವಳು ನೀಳ್ಗನ್ನಡಿಯ ಚೌಕಟ್ಟಿನೊಳಗೆ ಒತ್ತಿ ತುಂಬಿಸಿದಂತೆ ಉಸಿರು ಕಟ್ಟಿಕೊಂಡು ನಿಂತಿದ್ದವಳು ಬೆಚ್ಚಿ ಹಿಂಜಗಿದು ಕ್ಷಣಗಳೆರೆಡು ಗುರುತು ಸಿಗದೆ ಕಣ್ಣು ಕಿರಿದು ಮಾಡಿ ದಿಟ್ಟಿಸಿದೆ ಅವಳೂ ಚಿಕ್ಕದಾಗಿಸಿದಳು ಗುಳಿ ಬಿದ್ದ ಎರಡು ಗೋಲಿಗಳನು ಅರೇ.. ನಾನೇ ಅದು! ಎಷ್ಟು ಬದಲಾಗಿದ್ದೇನೆ? ನಂಬಲಾಗದಿದ್ದರೂ ಕನ್ನಡಿಯ ಮೇಲೆ ಬೆರಳಾಡಿಸಿ ಅವಲೋಕಿಸಿದೆ ಗುಳಿಬಿದ್ದ ಕೆನ್ನೆಗಳಲಿ ಈಗ ನಕ್ಷತ್ರಗಳಿಲ್ಲ ಬರೇ ಕಪ್ಪುಚುಕ್ಕೆಗಳು, ಮೊಡವೆಯ ತೂತುಗಳು ಅವರು ದೀಪಕ್ಕೆ ಹೋಲಿಸುತಿದ್ದ ಬೆರೆಗು ಕಂಗಳಲಿ ಈಗ ಎಣ್ಣೆ ಬತ್ತಿದಂತಿದೆ ಕಾಡಿಗೆ ಮೆತ್ತಿ ವರುಷಗಳೇ ಕಳೆದಿರಬೇಕು ಅಡಿಗೆ ಕೋಣೆಯ ಗೋಡೆಗಂಟಿದ ಮಸಿ ಒರೆಸುತ್ತಾ ಮರೆತೇ ಬಿಟ್ಟಿದ್ದೆ ನೋಟ ಕೆಳಗಿಳಿಯಿತು ಸಡಿಲ ಅಂಗಿಯ ಮರೆಯಲ್ಲಿ ತೆಳ್ಳಗಿನ ದೇಹ ಇಷ್ಟು ಬಾತುಕೊಂಡಿದ್ದಾದರೂ ಯಾವಾಗ?ಅರಿವಾಗಲೇ ಇಲ್ಲ ನಡುವೆಲ್ಲಿ? ತಡಕಾಡಿದೆ ಮಗಳು ನನ್ನನ್ನು ಅಪ್ಪಿ ಟೆಡ್ಡಿ ಎಂದುದರ ಅರ್ಥ ಈಗ ತಿಳಿಯಿತು ಉಡುಗೆ ತೊಡುಗೆ ನಡಿಗೆ ಎಲ್ಲವೂ ಬದಲು ಜೋತುಬಿದ್ದ ತನುವಿನಲಿ ಇನ್ನೆಲ್ಲಿ ನಾಜೂಕು ಬಿಂಕ ಬಿನ್ನಾಣಗಳನು ಯಾವ ಧಾನ್ಯದ ಡಬ್ಬಿಯಲ್ಲಿಟ್ಟು ಮರೆತೆನೋ ನೆನಪಿಲ್ಲ ಕಣ್ಣೆದುರಿನ ಇವಳು ಕಣ್ಣೊಳಗಿದ್ದ ಆ ಅವಳ ನುಂಗಲಾರಂಭಿಸಿದಳು ಕಣ್ಣಂಚು ಕರಗತೊಡಗಿತು ಆದರೂ ನನ್ನ ಮೂಗು ಬದಲಾಗಿಲ್ಲವೆನಿಸಿ ಸಂತೈಸಿಕೊಂಡು ಮುತ್ತಿಕ್ಕುವಷ್ಟರಲ್ಲಿ ನನಗಿದು ಬೇಡವೆಂದು ರಚ್ಚೆ ಹಿಡಿದ ಮಗಳ ದನಿಗೆ ಮೊದಲಿದ್ದ ಮೂಗಿನ ತುದಿಯ ಕೋಪ ಎಂದೋ ಕರಗಿ ಹರಳಾಗಿ ಮೂಗುತಿ ಸೇರಿದ್ದು ನೆನಪಾಯಿತು ಇವಳು ನಕ್ಕಂತಾಯಿತು =======

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಥೇಟ್ ನಿನ್ನ ಹಾಗೆ! ಸಂತೆಬೆನ್ನೂರು ಫೈಜ್ನಾಟ್ರಾಜ್ ಅದೇ ಹಾಡು ತುಟಿಗೆ ಬಂದು ವಾಪಾಸಾಯಿತು ಏಕೋ ಏನೋ ಹೀಗೆ ರಸ್ತೆಯ  ಕೊನೇ ತಿರುವಲ್ಲಿ ಕಾದಿರು ಈಗ ಬಂದೆ ಎಂದು ಮಾಯವಾದ ಥೇಟ್ ನಿನ್ನ  ಹಾಗೆ! * ಕಾಫಿಯ ಘಮವೋ ಮುಡಿದ ಮಲ್ಲಿಗೆ ಗಂಧವೋ… ಉಳಿದ ಮಾತುಗಳು ಹೇಳಲಾರದೇ ಖಾಲಿಯಾದವು…. ನಿನ್ನಂತೆ! * ನೂರು ಮಾತುಗಳು ಆಡಿದರೇನು ಬರಿದೆ; ಚಹ ಪುಡಿಯಿಲ್ಲದ ಚಹ ಕುಡಿದಂತೆ ಬರಿದೆ! * ಮುಳ್ಳ ಬೆನ್ನ ಮೇಲೆಯೇ ಗುಲಾಬಿ ಕೆಸರ ಸೊಂಟದ ಪಕ್ಕದಲ್ಲೇ ಕಮಲ ಮಣ್ಣ ಕಾಲಡಿಯೇ ಚಿನ್ನ ಕೆಸರ ರಾಡಿಯಲ್ಲೇ ಅನ್ನ ಕಷ್ಟವೆಂದೇಕೆ ಅಳುವೆ; ಅದರ ಹಿಂದೆಯೇ ಅಡಗಿದೆ ಹಿತ ನಗುತ ಮುಂಸಾಗು ಅಷ್ಟೆ! * ಭೂಮಿ ದುಂಡಗೈತೆ ಅಂತ ನಮ್ಮೇಷ್ಟ್ರು ಹೇಳಿ ನಂಬಿಸಿದ್ರು ಈಗೀಗ ಈ ಅಂತರ್ಜಾಲ ದಲ್ಲಿ ಸಿಗಬಾರದವರೆಲ್ಲಾ ಸಿಕ್ರು; ಪ್ಚ್….ನೀ ಮಾತ್ರ ಕೊನಿಗೂ ಭೇಟಿ ಆಗಲೇ ಇಲ್ಲ…ನಿಜಕ್ಕೂ ಭೂಮಿ ದುಂಡಗಿದೆಯಾ….? * ಶರಾಬು ಎಲ್ಲರನ್ನೂ ಹತ್ತಿರಕ್ಕೆ ತರುತ್ತೆ ಅನ್ನೋದಾದರೆ ಸಖಿ,ಅಂಥಾ ಸಾಮಿಪ್ಯ ನನಗೆ ಬೇಡ ಜನ ದೂರಾದರೇನಂತೆ ನಾ ನಾನಾಗಿ ಉಳಿವೆ ಬೇಡವೇ ಬೇಡ ನಶೆಯ ಜಂಜಡ!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಅರುಣ್ ಕೊಪ್ಪ ನೀನು ನಗುತ್ತಿಲ್ಲ,ತಾರೆಯಾ ಹೊದ್ದು ಭೂಪನಂತಿದ್ದರೂ ಅಹಂಕಾರವಿಲ್ಲದ ನಿಗರ್ವಿ ನೀನು ನಿನಗಾಗಿ ಅಲ್ಲವೆ ನೀನು ಕಪ್ಪಾದ ಪಂಜರದಲ್ಲಿ ಮೌನ ಸಾಕಿ ಬೀಗುವದಿಲ್ಲ ಬಡಾಯಿ ಕೊಚ್ಚೊ ಬೊಗಳೇದಾಸನಾ ನೀನು ನಿನಗಾಗಿ ಅಲ್ಲವೆ ಮುಳ್ಳು ಮೈಗೆ ಆವರಿಸಿದರೂ ಮೊಗ ನಗು ಮೊಗ್ಗು ಹೂವುಗಳು ಕೆಲ ತಾವುಗಳಲಿ ಸುರಸುಂದರಿ ನೀನು ನಿನಗಾಗಿ ಅಲ್ಲವೆ ಸುತ್ಮೂರು ಹಳ್ಳಿಗಳ ಹಿಶೆ, ನ್ಯಾಯಕೆ ಜಗರಿ ಕೂರುವ ಒಂಟಿ ಸಲಗದಂತೆ ಬೇಕು ಬೇಡಗಳ ನುಂಗಿ, ತಂಪು ಚೆಲ್ಲುವ ತಂಗಾಳಿ ಆಲ ನೀನು ನಿನಗಾಗಿ ಅಲ್ಲವೆ ಭಕ್ತರ ಹೂವು ,ಹಾಲು ,ಗಂಧ ಸುಗಂಧಗಳ ಮೆಂದು ಬೆಳಗಿನಿಂದ ಇಡಿ ದಿನ ಒಂಟಿಯಾಗಿ ಕೂತ ದೇವ ಯೆನ್ನುವ ಮೌನ ಮುರಿಯದ ನೀನು ನಿನಗಾಗಿ ಅಲ್ಲವೇ =======

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನದ ಹಾಡು ದೇವು ಮಾಕೊಂಡ, ಸಿಂದ್ಗಿ ಇಳಿಸಂಜೆಯ ಒಬ್ಬಂಟಿತನದಲಿ ಮೈನೆರೆದು ನಿಂತ ಮುಳ್ಳುಕಂಟಿಗಳ ನಡುವೆ ಬೆಣ್ಣೆಯುಂಡೆಯಾಗಿದ್ದೇನೆ ಹೆಪ್ಪುಗಟ್ಟಿವೆ ಕ್ರೀಯೆಗಳು ಬಂಡೆಗಲ್ಲಿನ ಹಾಗೆ ಪತರಗುಟ್ಟುತ್ತಿವೆ ಭಾವಗಳು ಚಪ್ಪರದಂತೆ ನಿಷ್ಕ್ರೀಯಗೊಂಡಿದೆ ಚಲನೆ ಸೀಮೆಗಲ್ಲಿನಷ್ಟು ಮಧು ಕುಡಿದು ಎದೆಚುಚ್ಚುವ  ರಣಹದ್ದುಗಳದ್ದೇ ಕಾರುಬಾರುವಿಲ್ಲಿ ಅದಕ್ಕೆಂದೆ ಹೂವುಗಳು ರಾತ್ರಿಯೆದ್ದು ಹಗಲು ಮಲಗುತ್ತವೆ ಕರಾಳ ಬೆಳಕಿಗಂಜಿ ಹೆಪ್ಪುಗಟ್ಟಿದ ಬೆಳಕಿಗೆ ನೆರಳುಗಳಾಡಿಸುವ  ಹಗಲು ರಾತ್ರಿಗಳ ಪಂಜೆಗಳು ವಿಭೇದಿಸುವ ಕಪ್ಪು ನೆಲವೇ ರೂಪರೇಖೆ ನಮ್ಮೊಳಗಿನ ಮೌನದ ಹಾಡೆ ಸುಖದ ಹೆರಿಗೆ

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಗಝಲ್ ಸುಜಾತ ರವೀಶ್ ಬಾಳಬಾನಲಿ ಹೊಂಬೆಳಕಾಗಿ ಬಂದೆ ಏನಿರಲಿಲ್ಲ ಕಾರಣ ಇಂದೀಗ ಅಮಾವಾಸ್ಯೆಯ ಕಗ್ಗತ್ತಲು ತಿಳಿಯುತ್ತಿಲ್ಲ ಕಾರಣ ಜೀವನವನದಿ ಅರಳಿ ನಗುತ್ತಿದ್ದವು ಸುಂದರ ಹೂಗಳು ಈಗೆಲ್ಲಾ ಬರೀ ಬೋಳು ಬರಡು ಅರಿಯಲಾಗುತ್ತಿಲ್ಲ ಕಾರಣ ಜೀವ ವೀಣೆ ಮಿಡಿದು ಅಂದು ಹೊರಟಿತ್ತು ಒಂದು ಸುಶ್ರಾವ್ಯ ಗಾನ ತಂತಿ ಏಕೋ ಮುರಿದು ಅಪಸ್ವರ ಕೇಳಲಾಗುತ್ತಿಲ್ಲ ಕಾರಣ ಹೊಸ ಹೊಸ ಆಸೆ ತರಂಗಗಳು ಗಗನದೆತ್ತರ ವಿಸ್ತಾರ ಅಗಲಿಕೆಯ ಬಿರುಗಾಳಿ ಏಕೆ ಹೇಳಲಾಗುತ್ತಿಲ್ಲ ಕಾರಣ ಹಂಬಲಗಳ ನವ ಕನಸುಗಳು ಮೂಡಿಸಿದ್ದವು ಚಿತ್ತಾರ ದುಃಖಿತೆ ವಿರಹಿಣಿ ಸುಜಿಗೆ ನೀ ಹೇಳಿಹೋಗಲಿಲ್ಲ ಕಾರಣ

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಪುಣ್ಯವಂತೆ… ಅವ್ಯಕ್ತ ಕಾಣಲಿರುವ ಒಡನಾಟದ ಚುಕ್ಕಿಯಾಗಿ ಬಂದಳು ಕನಸುಗಳ ಹೊತ್ತು ನನಸ ಮಾಡುವ ಬಿರುಸಿನಲಿ ಮಿಡಿಯೋ ಮನಸುಗಳಿಗೆ ಮಿಲನದ ಔತಣವನಿಟ್ಟು ಮುಗಿಲೆತ್ತರದ ಭಾವಗಳ ಮುಟ್ಪಿಬರುವ ರೆಕ್ಕೆ ಹೊತ್ತು ನೋವುಗಳ ನುಂಗಿ ನಗುತ ನಲಿಸುವ ಕಲೆಯೇ ಸುಂದರ ಅಂತ್ಯದೆಡೆಗೆ ಹೂಹಾಸಿ ನಲಿಯುತ ಹರಿಯುವುದೇ ಸುಂದರ ತುಸು ಕ್ಷಣದ ಹನಿಗಳಲಿ ,ಮೈಮರೆತು ಲೀನಳಾಗಿ.. ನಿನ್ನಲ್ಲೆಲ್ಲೋ ನನ್ನ ಕಂಡೆ ನನ್ನಲ್ಲೆಲ್ಲೋ ನಿನ್ನ ಕಂಡೆ. ಕಣ್ರೆಪ್ಪೆ ಮಿಟುಕಿಸುವಷ್ಟರಲ್ಲಿ ಹೇಳದೇ ಮಾಯವಾಗುವವರಲ್ಲಿ, ಹೇಳಿಹೋದ ಸೌಂದರ್ಯ ಕನಿಕೆ.. ಸಾಧನೆಯ ಪುಟಗಳಲ್ಲಿ ಮಿನುಗುನಕ್ಷತ್ರ.. ನೀನಿಲ್ಲದೆ ನೀನಿಲ್ಲಿರುವೆ, ನೀನಳಿದರು ಅಳಿಯದೆ ಹೊಳೆಯುತಿರುವೆ, ತಂಪಾದ ಗಾಳಿಯಲ್ಲಿ ಸೊಂಪಾದ ಪರಿಮಳದಂತೆ, ತಿಳಿ ನೀರಿನಲಿ ಅಡಗಿರುವ ಸವಿರುಚಿಯಂತೆ, ಕಣ್ಣೀರಿನ ಅಂಚಿನಲಿ ಸಿಹಿ ನೆನಪುಗಳ ನಗುವಿನಂತೆ, ನೀನೆ ಪುಣ್ಯವಂತೆ…. ಅತಿ ವಿರಳ ಉಡುಗೊರೆ ನಿನ್ನದಾಗಿದೆ.. ಮನಗಳ ಅರಮನೆಯಲ್ಲಿ ನಿನಗೊಂದು ಶಾಶ್ವತ ಸ್ಥಾನವಿದೆ! ಆತ್ಮಕ್ಕಿಂದು ಎನ್ನ ಮನದಾಳದ ನಮನ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತುಂಬು ಡಾ.ಗೋವಿಂದ ಹೆಗಡೆ ನಾನೂ ರಂಗವೇರಿದ್ದೇನೆ ನಿನ್ನೊಂದಿಗೆ ನರ್ತಿಸಲಲ್ಲ.. ಮೂಲೆಯಲ್ಲಿ ನಿಂತು ಕುಣಿಯುವ ನಿನ್ನ ಬಿಂಬವ ಎದೆ ತುಂಬಿಕೊಳ್ಳಲಿಕ್ಕೆ ಗೆಜ್ಜೆಯಿಂದ ಉದುರುವ ಕಿರುಗಂಟೆಯೊಂದನ್ನೆತ್ತಿ ಚುಂಬಿಸಲಿಕ್ಕೆ ನೆನಪಿನಂಗಳದಲ್ಲಿ ತೂಗಿಬಿಡಲಿಕ್ಕೆ- ಅನಂತದವರೆಗೆ…

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಕ್ತಿ ಅವ್ಯಕ್ತ ಸೃಷ್ಟಿ-ಸ್ಥಿತಿ-ಲಯ ಗರ್ಭದ ಮುಕ್ತ ರಹಸ್ಯ ರಾಣಿ ನಾ! ಹರಿವ ಜ್ವಾಲಾ ಶಕ್ತಿಯೊಳು ತಂಪೆರೆವ ವಿಮುಕ್ತಿ ನಾ! ಸಖಿ,ಕಾಮಿನಿ, ಧರ್ಮಿಣಿ, ಸಂಹಾರಿಣಿ, ವೈಷ್ಣವಿ ನಾ! ಸುಳಿಗಳೊಳು ಸಿಲುಕದಂತೆ ಗರಿಚಾಚಿ ಹೊಳೆವೆ ನಾ! ಪ್ರೀತಿಯ ಕಾಮನ ಬಿಲ್ಲಲಿ ಕಣ್ಣುಗಳ್ನಲಂಕರಿಸುವೆ, ಸಿಹಿಕನಸಮಳೆಯ ಮೌನ ಮುಗುಳ್ನಗೆಯೋರಳಿಸುವೆ, ಗಂಭೀರ ಮೂಗುತಿಯನ್ನು ಏರಿಸಿ ಕಾಂತಿಯ್ನ್ಹೆಚ್ಚಿಸುವೆ, ಸುಪ್ತ ಜ್ಞಾನ, ಮುಕ್ತ ಪ್ರೇಮ, ನಿರ್ಲಿಪ್ತ ಮನದ ಕುಂಕುಮ ಧರಿಸುವೆ. ವಜ್ರಕಲ್ಲಾಗಿ, ಗುಪ್ತಗಾಮಿನಿಯಾಗುವೆ ಕೇಸರಿದಾರಿಣಿಯಾಗಿಬಿಡುವೆ, ನೋಡದಿರು ಬಿಲೋಳಗಿನ ಆಳದ ಪ್ರೀತಿಯ, ಸವಿಯಲಿಚ್ಚಿಸದ್ದಿದ್ದರೆ.. ಕೇಳದಿರು ಮೌನ ದೇಗುಲದೊಳಿರುವ ಹಾಡ, ಕನಸಕಿನ್ನರನಲ್ಲದಿದ್ದರೆ.. ಮುಟ್ಟದಿರು ಮೂಗುತಿಯ, ಮುಗ್ಧತೆಗೆ ಒಲಿವ ಹರಿಯಾಗದಿದ್ದರೆ.. ಪ್ರೀತಿ, ಪ್ರೇಮ, ಸ್ನೇಹ, ತಾಳ್ಮೆ, ತ್ಯಾಗ, ಜ್ಞಾನ, ಮೌನ.. ಎರಡಕ್ಷರದ ಆಭರಣಗಳೇ ಇಡೆಯಿಂದ ಮುಡಿಗೆ.. ನಗ್ನ ನೋಟಕೆ ಎನ್ನಯ ಶಕ್ತಿಕಾಂತಿಯ ಮೂಲವಾಗಿರಲಿ

ಕಾವ್ಯಯಾನ Read Post »

You cannot copy content of this page

Scroll to Top