ಕಾವ್ಯಯಾನ
ಥೇಟ್ ನಿನ್ನ ಹಾಗೆ! ಸಂತೆಬೆನ್ನೂರು ಫೈಜ್ನಾಟ್ರಾಜ್ ಅದೇ ಹಾಡು ತುಟಿಗೆ ಬಂದು ವಾಪಾಸಾಯಿತು ಏಕೋ ಏನೋ ಹೀಗೆ ರಸ್ತೆಯ ಕೊನೇ ತಿರುವಲ್ಲಿ ಕಾದಿರು ಈಗ ಬಂದೆ ಎಂದು ಮಾಯವಾದ ಥೇಟ್ ನಿನ್ನ ಹಾಗೆ! * ಕಾಫಿಯ ಘಮವೋ ಮುಡಿದ ಮಲ್ಲಿಗೆ ಗಂಧವೋ… ಉಳಿದ ಮಾತುಗಳು ಹೇಳಲಾರದೇ ಖಾಲಿಯಾದವು…. ನಿನ್ನಂತೆ! * ನೂರು ಮಾತುಗಳು ಆಡಿದರೇನು ಬರಿದೆ; ಚಹ ಪುಡಿಯಿಲ್ಲದ ಚಹ ಕುಡಿದಂತೆ ಬರಿದೆ! * ಮುಳ್ಳ ಬೆನ್ನ ಮೇಲೆಯೇ ಗುಲಾಬಿ ಕೆಸರ ಸೊಂಟದ ಪಕ್ಕದಲ್ಲೇ ಕಮಲ ಮಣ್ಣ ಕಾಲಡಿಯೇ ಚಿನ್ನ ಕೆಸರ ರಾಡಿಯಲ್ಲೇ ಅನ್ನ ಕಷ್ಟವೆಂದೇಕೆ ಅಳುವೆ; ಅದರ ಹಿಂದೆಯೇ ಅಡಗಿದೆ ಹಿತ ನಗುತ ಮುಂಸಾಗು ಅಷ್ಟೆ! * ಭೂಮಿ ದುಂಡಗೈತೆ ಅಂತ ನಮ್ಮೇಷ್ಟ್ರು ಹೇಳಿ ನಂಬಿಸಿದ್ರು ಈಗೀಗ ಈ ಅಂತರ್ಜಾಲ ದಲ್ಲಿ ಸಿಗಬಾರದವರೆಲ್ಲಾ ಸಿಕ್ರು; ಪ್ಚ್….ನೀ ಮಾತ್ರ ಕೊನಿಗೂ ಭೇಟಿ ಆಗಲೇ ಇಲ್ಲ…ನಿಜಕ್ಕೂ ಭೂಮಿ ದುಂಡಗಿದೆಯಾ….? * ಶರಾಬು ಎಲ್ಲರನ್ನೂ ಹತ್ತಿರಕ್ಕೆ ತರುತ್ತೆ ಅನ್ನೋದಾದರೆ ಸಖಿ,ಅಂಥಾ ಸಾಮಿಪ್ಯ ನನಗೆ ಬೇಡ ಜನ ದೂರಾದರೇನಂತೆ ನಾ ನಾನಾಗಿ ಉಳಿವೆ ಬೇಡವೇ ಬೇಡ ನಶೆಯ ಜಂಜಡ!









