ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಹೊಸ ವರ್ಷದ ಹೊಸಿಲಲ್ಲಿ…. ಡಿ.ಎಸ್.ರಾಮಸ್ವಾಮಿ ಇವತ್ತು ಈ ವರ್ಷಕ್ಕೆ ಕಡೆಯ ಮೊಳೆ ಹೊಡೆದಾಯಿತು. ಮತ್ತಷ್ಟು ಬಿಳಿಯ ಕೂದಲು ಗಡ್ಡದಲ್ಲಿ ಹಣುಕಿವೆ ತೆಲೆ ಮತ್ತಷ್ಟು ಬೊಕ್ಕಾಗಿದೆ. ಇರುವ ಸಾಲದ ಕಂತುಗಳ ಲೆಕ್ಕ ಹಾಕಿದರೆ ಬರೀ ನಿಟ್ಟುಸಿರು ಆದಾಯ ತೆರಿಗೆಯ ಸ್ಲಾಬು ಏರಿದೆ. ಎದೆ ಎತ್ತರ ಬೆಳೆದು ನಿಂತಿದ್ದಾಳೆ ಮಗಳು, ಮುಂದೆ ಹೇಗೋ ಎಂದು ತಳಮಳಿಸುವುದು ಜೀವ, ಮದುವೆಯ ಮಾತೆತ್ತಿದರೆ ಸಿಡುಕುತ್ತಾಳೆ. ಚಿನ್ನದ ಸರ ಕೊಳ್ಳುವ ಇವಳ ಮಾತು, ಅಪಥ್ಯ. ಸ್ವರ್ಣ ಬಾಂಡಿನ ಕಂತು ಮುಗಿದು ಆಭರಣಗಳ ಆಯಬೇಕಿದೆ ಅಷ್ಟೆ. ಜೊತೆಯಲ್ಲಿ ಇರದ ಸಂಜೆಗಳ ಲೆಕ್ಕ ಮಗ ಮುಂದಿಡುತ್ತಿರುವಾಗ, ತಾಳೆಯಾಗದ ಖಾತೆಗಳ ಯಾದಿಯ ಪಟ್ಟಿ ಮುಂದಿದೆ. ಅನಾರೋಗ್ಯದ ಅಮ್ಮನ ನೋಡಲು ಹೋಗದ ದಿನಗಳ ಲೆಕ್ಕ ಸಿಕ್ಕಿದರೂ ಅಂದುಕೊಂಡದ್ದೊಂದೂ ಘಟಿಸದೆ, ಬರಿಯ ನಿರಾಶೆ ಮರುಗಟ್ಟಿದೆ. ಹಳೆಯ ನಿರ್ಧಾರಗಳ ನೆನಪು ಮತ್ತೆ ಮರುಕಳಿಸಿ ತಲೆಶೂಲೆ ಗೆ ಯಾವುದು ರಾಮಬಾಣ? ಆಗೀಗ ಹುಕಿ ಹತ್ತಿದರೆ ಕರೆ ಮಾಡುವ ಗೆಳೆಯ ಇಯರ್ ಎಂಡ್ ಪಾರ್ಟಿಗೆ ಕರೆಯುತ್ತಿದ್ದಾನೆ, ಬಾರದಿದ್ದರೆ ಠೂ ಬಿಡುತ್ತೇನೆ ಎಂದಿದ್ದಾನೆ. ಹುಟ್ಟುತ್ತಿದೆ ಹೊಸ ವರ್ಷ ಬೆಚ್ಚಿಬೀಳುವ ವೇಗದಲ್ಲಿ.ಕನ್ನಡಿಯ ಹಿಂದಣ ಪಾದರಸ ಸವೆದಿದೆ ಹೊಸ ಕನ್ನಡಿ ಇನ್ನಾದರೂ ತರಬೇಕು. *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭ್ರೂಣ ಕಳಚುವ ಹೊತ್ತು ಬಿದಲೋಟಿ ರಂಗನಾಥ್ ಭ್ರೂಣ ಕಳಚುವ ಹೊತ್ತು ಗಂಡು ಕೂಸಿಗಾಗಿ ಬಯಕೆ ಬಾಯಾರಿ ಹುಟ್ಟಿದ ಹೆಣ್ಣುಕಂದಮ್ಮಗಳ ಭ್ರೂಣಗಳನ್ನು ಯಾವುದೋ ಗುದ್ದರಗಳಲ್ಲಿ ಹೂತು ಮಣ್ಣೂ ತಿನ್ನಲಾರದೆ ನಾಯಿಗಳು ವಾಸನೆ ಹಿಡಿದು ಎರಡೂ ಕಾಲುಗಳಲ್ಲಿ ಬಗೆ ಬಗೆದು ಕಚ್ಚಿ ಕಚ್ಚಿತಿನ್ನುತ್ತಿವೆ ಇಟ್ಟಾಡಿಕೊಂಡು ಹಸಿಮಾಂಸವೆಂದು.! ರಕ್ತಸೇರಿ ಮಾಂಸ ತುಂಬಿ ಆಕಾರ ಮೂಡಿ ತಾಯಿಯೊಳಗಿನ ಅಂತಃಕರಣ ತುಂಬಿ ಜೀವ ಪಡೆದು ಹೆಣ್ಣು ಕೂಸು ಅಂದಾಕ್ಷಣ ಕಣ್ಣುಗಳಲ್ಲಿ ಬೆಂಕಿಯುಂಡೆ ಉರುಳಿ ಮನಸುಗಳನ್ನು ಸುಡುವ ಮುಟ್ಟಾಳತನ ಅಳುವ ಮಗುವಿನ ದ್ವನಿ ಕೇಳಿಸಿಕೊಳ್ಳುತ್ತಲೇ ಎದೆಯಲ್ಲಿ ಉಕ್ಕುವ ಹಾಲು ಹಿಂಡುತ ಹೆತ್ತೊಡಲು ನೊಂದು ಅಯ್ಯೋ ! ಎನ್ನುವ ಆ ಮಾತೆಯ ನೋವು,ನೀಟ್ಟುಸಿರು ಎಲ್ಲ ಹೆತ್ತಮ್ಮರ ನಿಟ್ಟುಸಿರು ಯೋನಿ ಬಾಯಿಯ ನೋವು ಮಾಗುತ್ತಿರುವಾಗಲೇ ಮತ್ತೆ ನಿನ್ನ ಶಿಶ್ನದ ಆರ್ಭಟ ವಿರ್ಯ ಸುರಿಸುವ ಹಂಬಲ ಮತ್ತೆ ಮೊಳಕೆ ! ನಿನ್ನ ದುರದೃಷ್ಟವೋ ಏನೋ ಅದೂ ಹೆಣ್ಣು ಶಿಶುವೆ.. ಛೇ !ಮತ್ತೆ ಮಣ್ಣಿನ ಸ್ಪರ್ಶ ನಾಯಿ ನರಿ ಹದ್ದು ಕಾಗೆಗಳಿಗೆ ಆಹಾರ ನೋಡುವ ಕಣ್ಣುಗಳ ನರಗಳು ಸೋತು ಸುಣ್ಣವಾಗುವ ಬೆಳಗು ಹೆಣ್ಣು ಕೂಸುಗಳ ಹೂತ ಜಾಗದ ಸೆಳೆತಕೆ ಸೋತು ರಕ್ತ ಗರೆಗಟ್ಟಿ ಇನ್ನಾರೋ ನೋಡದಿರಲೆಂದು ಹೊಸಮಣ್ಣನು ಬಗೆದು ಆಲದ ಗಿಡ ನೆಟ್ಟು ಮಳೆಯೇ ಬಾ ಬಿದ್ದ ರಕ್ತ ತೊಳೆದು ಗಿಡದ ಪಾಜಿಗೆ ನೀರು ಬೀಳೆಂದು ಪ್ರಾರ್ಥಿಸಿದೆ ಮೂರ್ಖನೇ ! ನೀನೆ ಆ ಆಲದ ನೆರಳಲ್ಲಿ ಬಿಸಿಲು ತಡೆಯದೇ ನಿಂತಿದ್ದು ನೋಡಿದೆ ‘ಅಪ್ಪಾ… ‘ಅನ್ನುವ ಆ ಮಕ್ಕಳ ಕೂಗು ಬಯಲ ತುಂಬುತ್ತಲೇ ಇತ್ತು ಅದು ಬಿಡುವ ಗಾಳಿ ನೀನು ಕುಡಿಯುತ್ತಲೇ ಇದ್ದೆ ಎದೆಯಲ್ಲಿನ ಆ ಮಾಯದ ನೋವು ನನ್ನೊಳಗೆ ಇಳಿಯುತ್ತಲೇ ಇತ್ತು ಪಶು ಪಕ್ಷಿಗಳು ಆ ಮರದ ನೆತ್ತಿ ಮೇಲೆ ಕೂತು ಹಣ್ಣುಗಳ ಕುಕ್ಕಿ ತಿನ್ನುವ ದೃಶ್ಯ ಕಾಣುತ್ತಲೇ ಇತ್ತು ಕನ್ನಡಿಯಾಗಿ… ***************************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಈ ಇರುಳು ನೂರುಲ್ಲಾ ತ್ಯಾಮಗೊಂಡ್ಲು ಈ ಇರುಳು ಕಣ್ಣುಗಳಲಿ  ಸೂರ್ಯ ಉರಿಯುತಿದ್ದಾನೆ  ಲಕ್ಷ ಲಕ್ಷ ನಕ್ಷತ್ರಗಳು ದನಿ ಕೂಡಿಸಿವೆ ನವ ಸ್ವಾತಂತ್ರ್ಯದ ಮೊಳಗಿನಲಿ  ನಮ್ಮ ಯಾತನೆಗಳು ದಿಕ್ಕು ದಿಕ್ಕಿಗೂ ಒಯ್ಯುವ ಸಮೀರನೇ ನಿನಗೆ ವಂದನೆ ಅಸಮಾನತೆ ,ಶೋಷಣೆಯಲಿ ನಲುಗಿದೆ ಈ ಹೊತ್ತು ಈ ದೇಶ ನಮ್ಮ ಪಾಡಿನ ಕಿಚ್ಚು ಮೂಡಲಿ ಎಲ್ಲೆಡೆ ಬದುಕು ಶೂನ್ಯವಾಗಿದೆ ಹೆಪ್ಪುಗಟ್ಟಿದ ರಾತ್ರಿಯಲಿ ನೋವಿನ ಹಾಡು ಹೊರಡುತಿದೆ ಇದೊ! ಎದೆ ತಂತಿಯ ನರಳಿಕೆಯಲಿ ಕಣ್ಣ ಪೊರೆ ಮಂಜಾಗಿದೆ ನಾಳಿನ ಚಿಂತೆಯಲಿ ಈ ಸುದೀರ್ಘ ರಾತ್ರಿಯಲಿ  ಕನಸುಗಳು ತೇಲುತಿವೆ ಉಲ್ಕೆಗಳಾಗಿ  ತೆರೆದು ಮುಚ್ಚುವ ರೆಪ್ಪೆಗಳಲಿ ************                                                              

ಕಾವ್ಯಯಾನ Read Post »

ಕಾವ್ಯಯಾನ

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ಅವನು ನನ್ನೊಡನೆ ಇದ್ದಿದ್ದು ಅದೊಂದೇ ಸಂಜೆ ನಾನು ನನ್ನನ್ನೇ ಮರೆತಿದ್ದು ಅದೊಂದೇ ಸಂಜೆ ಹಕ್ಕಿಗಳು ಗೂಡಿಗೆ ಮರಳಿ ಬರುವ ಹೊತ್ತು ಮನಸು ಗರಿಬಿಚ್ಚಿ ಹಾರಿದ್ದು ಅದೊಂದೇ ಸಂಜೆ ಪಡುವಣದ ಕೆನ್ನೆಗೆ ರಂಗು ಬಳಿದಿದ್ದ ಸೂರ್ಯ ಕನಸುಗಳಿಗೆ ಬಣ್ಣ ಏರಿದ್ದು ಅದೊಂದೇ ಸಂಜೆ ಎಷ್ಟೊಂದು ಅಲೆಗಳು ದಡವ ಮುದ್ದಿಟ್ಟವಾಗ ಕಡಲು ಉಕ್ಕುಕ್ಕಿ ಹರಿದಿದ್ದು ಅದೊಂದೇ ಸಂಜೆ ನಮ್ಮ ಬಡಕೋಣೆಯಲಿ ಚಂದ್ರೋದಯವಾಯ್ತು ಮಧುಪ ಮಧುವೆರೆದಿದ್ದು ಅದೊಂದೇ ಸಂಜೆ ಸಂಜೆ ಇರುಳಾಗಿ ಅಯ್ಯೋ ದಿನ ಉರುಳಿತಲ್ಲ ಕಾಡುವ ನೆನಪಾಗಿ ಉಳಿದಿದ್ದು ಅದೊಂದೇ ಸಂಜೆ ಮುಂಗುರುಳ ಚುಂಬಿಸಿ ವಿದಾಯ ನುಡಿದ ಸಖ ಬದುಕಿಗೆ ಬದುಕ ತುಂಬಿದ್ದು ಅದೊಂದೇ ಸಂಜೆ

ಗಝಲ್ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮಂತ್ಲಿಪಿರಿಯಡ್ಸ್ ಮತ್ತು…. ವಿಜಯಶ್ರೀ ಹಾಲಾಡಿ ಮಂತ್ಲಿಪಿರಿಯಡ್ಸ್ ಮತ್ತು…. ರಕ್ತ ಕಂಡರೆ ಹೆದರುವಕೋಮಲೆಗೆ ಅನಿವಾರ್ಯ ಮಂತ್ಲಿ ಪಿರಿಯಡ್ಸ್ ! ಬ್ರೆಡ್ – ಜಾಮ್ ಹೋಲಿಕೆಗೆ ಲಘುವಾಗಿ ನಕ್ಕವಳೇ ಇನ್ನೀಗ ಅಳಬೇಕು ಹೆರಿಗೆ ಬೇನೆಯಾದರೂ ಮುಗಿಯುತ್ತದೆ ಒಮ್ಮೆಗೇ ಇಪ್ಪತ್ತೆಂಟರ ಸೈಕಲ್ ಇಪ್ಪತ್ತಾರು- ಇಪ್ಪತ್ತನಾಲ್ಕಕ್ಕೇ ಹಾಗಾದರೆ ವರ್ಷಕ್ಕೆಷ್ಟು ! ಟೆನ್ಷನ್ ಜಾಸ್ತಿಯಾದರೆ ಬ್ಲೀಡಿಂಗೂ ಜಾಸ್ತಿ ಪ್ಯಾಡುಗಳೂ ಇರಿಸುಮುರುಸುಗಳೂ ನೋವು ಅಪಮಾನಗಳೂ… ಐವತ್ತೋ ಐವತ್ಮೂರಕ್ಕೋ ನಿಲ್ಲುತ್ತದಂತೆ … ಅಂತೆಕಂತೆಗಳಿಗೂ ಆಚೆ ಬದುಕಿದೆ ಮೆನೋಪಾಸ್ ತೀಕ್ಷ್ಣತೆಗೆ ಡಿಪ್ರೆಶನ್ ಸುಸೈಡ್ ಉದಾಹರಣೆಗಳೂ ಉಂಟು! ಈ ನಡುವೆ ಯುಟಿರಸ್ ಒಂದಿಷ್ಟು ಗಲಾಟೆ ಮಾಡಿದರೆ ವಿಶ್ರಾಂತಿ ಬಯಸಿದರೆ ಹಿಸ್ಟರೆಕ್ಟಮಿ- ಸರ್ಜರಿ ….. ಹಾರ್ಮೋನ್ ಏರುಪೇರು ಉಫ್ ಮುಗಿವ ಕತೆಯಲ್ಲ ! ಸರ್ವಶಕ್ತನಾದ ದೇವನೇತಮಾಷೆಗೂ ಹೆಣ್ಣಾಗದಿರು !=====================

ಕಾವ್ಯಯಾನ Read Post »

ಕಾವ್ಯಯಾನ

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ತಪ್ಪು ನನ್ನದೇ ಗೆಳತಿ,ಬಿಡದೆ ಚುಂಬಿಸಿದೆ ಕೊಳ್ಳಿಯನ್ನು ಊದಿ ಊದಿ ಉರಿಸಬಾರದಿತ್ತು ಹೀಗೆ ನಿನ್ನ ಒಡಲನ್ನು ಎದೆಯ ಆಳ-ಅಗಲಗಳ ನಾನೇಕೆ ಕುಗ್ಗಿಸಿಕೊಂಡೆ ಅಗ್ಗವಾಗಿಸಬಾರದಿತ್ತು ಹೀಗೆ ನನ್ನ ನಿಲುವುಗಳನ್ನು ಕಂಬನಿಯಿಂದಲ್ಲವೇ ಕಿಲುಬೆದೆಯ ತೊಳೆಯುವುದು? ನಿಚ್ಚಳ ನೋಡಬೇಕಿನ್ನು ಹರಿದೆಲ್ಲ ಪೊರೆಗಳನ್ನು ಹಸಿದಿರುವೆನೆಂದು ಸಿಕ್ಕಿದ್ದನ್ನೆಲ್ಲ ತಿನ್ನಲಾದೀತೇನು ಉಳಿಸಿಕೊಳ್ಳಲೇಬೇಕು ನೀನು ಕೊಟ್ಟ ಒರೆಗಳನ್ನು ಬಿದ್ದಾಗಲೂ ನಾನು ನಾನೇ ಮರೆಯಬಾರದು, ಸಖೀ ಉಳಿಸುವೆ ಉಡುಗಲು ಬಿಡದೆ ಎದೆಯ ಪಿಸುದನಿಗಳನ್ನು =============

ಗಝಲ್ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಆತನೊಲವು ಆತ್ಮ ಭಲವು ಜಗವ ಪ್ರೀತಿಸಿದ ಸಂತನ ಹುಟ್ಟು ಹಬ್ಬದ ಶುಭಾಷಯಗಳು ಸತ್ಯಮಂಗಲ ಮಹಾದೇವ ಕೇಳುತ್ತೀರಿ ನೀವು ನೀನು ಯಾರು ಎಂದು ಉತ್ತರಿಸಿದರೆ ಸಾಕು ನಿಮ್ಮದೇ ಉಯಿಲು ಲೋಕದ ಪಡಸಾಲೆಯಲ್ಲಿ ಹೇಳುವುದನ್ನು ಹೇಳಲೇ ಬೇಕು ಕಲ್ಲು ಮುಳ್ಳಿನ ಹಾದಿಯಲಿ ಮುಳ್ಳಿನ ಕಿರೀಟ ಹೊತ್ತ ಸಂತ ಮೈ ತುಂಬಾ ರಕ್ತದ ಧಾರೆ ಹರಿಯುತ್ತಿರಲು ಪ್ರೇಮದ ಸಾಕ್ಷಿ ಈ ರಕುತವೆಂದ ತಿವಿದವರ ತಿಳುವಳಿಕೆಯ ಕ್ಷಮಿಸಿರೆಂದ ಸಂಕಟಪಡುವವರ ಆತ್ಮ ಸಖನಾದ ನನ್ನೊಳಗೆ ನನ್ನನ್ನು ತಿಳಿಸಿದ ನೀನು ಯಾರು ಯಾವ ಊರು, ಯಾರಮಗ, ಯಾವ ಜಾತಿ ಆತ ಯಾವುದನ್ನು ಕೇಳದೆ ನನ್ನವನು ನೀನೆಂದ ಸಂತಸವು ಏನೆಂದು ತಿಳಿಸಿಕೊಟ್ಟ ಊರ ಹೊರಗಿನ ಹಟ್ಟಿಹುಡುಗನಿಗೆ ಗೆಳೆಯನಾದ ನಿನಾದದ ನಾದದಂತಾದ ಕೊಟ್ಟಿಗೆಯಲಿ ಹುಟ್ಟಿದ ಕಟ್ಟಕಡೆಯವನ ಮುಟ್ಟಿದ ತನ್ನಂತೆ ಇತರರನು ನೋಡೆಂದ ನೋವುಂಡು ನಲಿವಿನ ರಾಜ್ಯದ ಭರವಸೆಯ ಕೊಟ್ಟ ಈತ ಹೇಳುವುದು ನಾನು ಶಾಶ್ವತ ಗೆಳೆಯ ಹುಡುಕಿ ಕೊಡಿ ಯಾರಾದರು ಇದ್ದಾರೆಯೇ ಇವನಂತೆ ನೊಂದವರಿಗೆ ಅವ ಕಣ್ಣೀರು ಒರೆಸುವ ಸೇವಕ ನಮ್ಮೂರ ಸಂತೆಯ ಗೆಣೆಕಾರ ಯಾರು ಎಂದು ಮತ್ತೆ ಕೇಳಬೇಡಿ ಆತನೊಲವು ಆತ್ಮ ಭಲವು ಬೇರೆ ಬೇಕೆ ಸಾಕ್ಷಿಗೆ. ==================================

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

” ಹಡೆದವ್ವ” ನಿರ್ಮಲಾ ಅಪ್ಪಿಕೋ ನನ್ನ ನೀ ಹಡೆದವ್ವ ಮಲಗಿಸಿಕೊ ಮಡಿಲಲಿ ನನ್ನವ್ವ ನಿನ್ನ ಮಡಿಲಲಿ ಮಲಗಿ ಜಗವ ಮರೆವೆನವ್ವ ನೀ ಮಮಕಾರದ ಗಣಿಯೇ ಕೇಳವ್ವ ಜಗದಲಿ ಸಾಟಿಯೇ ಇಲ್ಲ ನಿನ್ನೊಲವಿಗೆ ದಾರಿದೀಪವಾದೆ ನನ್ನೀ ಬದುಕಿಗೆ ಇನ್ನೊಂದು ಹೆಸರೇ ನೀನಾದೆ ಕರುಣೆಗೆ ಅಮ್ಮ ಎಂದರೆ ಎಂತ ಆನಂದ ಮನಸಿಗೆ ಭೂಮಿಯ ಮೇಲೆ ನೀ ತ್ಯಾಗದ ಪ್ರತೀಕ ನೀನಿಲ್ಲದೆ ಇಲ್ಲ ಈ ಲೋಕ ನಿನ್ನ ಮಮಕಾರವದು ಬೆಲ್ಲದ ಪಾಕ ನೀನೇ ಸರ್ವಸ್ವವೂ ನನಗೆ ಕೊನೆತನಕ ವರವಾಗಿ ನೀಡಿದೆ ನನಗೆ ಈ ಜನುಮವ ನಿನ್ನ ಋಣವ ನಾನೆಂದೂ ತೀರಿಸೆನವ್ವ ನನ್ನ ಅಳುವಿಗೆ ಸದಾ ನಗುವಾದೆ ನನ್ನವ್ವ ಏಳೇಳು ಜನ್ಮಕೂ ನೀನೇ ನನ್ನ ಹಡೆದವ್ವ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇವಳು_ಅವಳೇ ! ಹರ್ಷಿತಾ ಕೆ.ಟಿ. ಅಲಂಕಾರದ ಮೇಜಿಗೆ ಹಿಡಿದಿದ್ದ ಧೂಳು ಹೊಡೆಯುತ್ತಿದ್ದ ನನ್ನ ಶೂನ್ಯ ದೃಷ್ಟಿಗೆ ಅಚಾನಕ್ಕಾಗಿ ಕಂಡಳಿವಳು ನೀಳ್ಗನ್ನಡಿಯ ಚೌಕಟ್ಟಿನೊಳಗೆ ಒತ್ತಿ ತುಂಬಿಸಿದಂತೆ ಉಸಿರು ಕಟ್ಟಿಕೊಂಡು ನಿಂತಿದ್ದವಳು ಬೆಚ್ಚಿ ಹಿಂಜಗಿದು ಕ್ಷಣಗಳೆರೆಡು ಗುರುತು ಸಿಗದೆ ಕಣ್ಣು ಕಿರಿದು ಮಾಡಿ ದಿಟ್ಟಿಸಿದೆ ಅವಳೂ ಚಿಕ್ಕದಾಗಿಸಿದಳು ಗುಳಿ ಬಿದ್ದ ಎರಡು ಗೋಲಿಗಳನು ಅರೇ.. ನಾನೇ ಅದು! ಎಷ್ಟು ಬದಲಾಗಿದ್ದೇನೆ? ನಂಬಲಾಗದಿದ್ದರೂ ಕನ್ನಡಿಯ ಮೇಲೆ ಬೆರಳಾಡಿಸಿ ಅವಲೋಕಿಸಿದೆ ಗುಳಿಬಿದ್ದ ಕೆನ್ನೆಗಳಲಿ ಈಗ ನಕ್ಷತ್ರಗಳಿಲ್ಲ ಬರೇ ಕಪ್ಪುಚುಕ್ಕೆಗಳು, ಮೊಡವೆಯ ತೂತುಗಳು ಅವರು ದೀಪಕ್ಕೆ ಹೋಲಿಸುತಿದ್ದ ಬೆರೆಗು ಕಂಗಳಲಿ ಈಗ ಎಣ್ಣೆ ಬತ್ತಿದಂತಿದೆ ಕಾಡಿಗೆ ಮೆತ್ತಿ ವರುಷಗಳೇ ಕಳೆದಿರಬೇಕು ಅಡಿಗೆ ಕೋಣೆಯ ಗೋಡೆಗಂಟಿದ ಮಸಿ ಒರೆಸುತ್ತಾ ಮರೆತೇ ಬಿಟ್ಟಿದ್ದೆ ನೋಟ ಕೆಳಗಿಳಿಯಿತು ಸಡಿಲ ಅಂಗಿಯ ಮರೆಯಲ್ಲಿ ತೆಳ್ಳಗಿನ ದೇಹ ಇಷ್ಟು ಬಾತುಕೊಂಡಿದ್ದಾದರೂ ಯಾವಾಗ?ಅರಿವಾಗಲೇ ಇಲ್ಲ ನಡುವೆಲ್ಲಿ? ತಡಕಾಡಿದೆ ಮಗಳು ನನ್ನನ್ನು ಅಪ್ಪಿ ಟೆಡ್ಡಿ ಎಂದುದರ ಅರ್ಥ ಈಗ ತಿಳಿಯಿತು ಉಡುಗೆ ತೊಡುಗೆ ನಡಿಗೆ ಎಲ್ಲವೂ ಬದಲು ಜೋತುಬಿದ್ದ ತನುವಿನಲಿ ಇನ್ನೆಲ್ಲಿ ನಾಜೂಕು ಬಿಂಕ ಬಿನ್ನಾಣಗಳನು ಯಾವ ಧಾನ್ಯದ ಡಬ್ಬಿಯಲ್ಲಿಟ್ಟು ಮರೆತೆನೋ ನೆನಪಿಲ್ಲ ಕಣ್ಣೆದುರಿನ ಇವಳು ಕಣ್ಣೊಳಗಿದ್ದ ಆ ಅವಳ ನುಂಗಲಾರಂಭಿಸಿದಳು ಕಣ್ಣಂಚು ಕರಗತೊಡಗಿತು ಆದರೂ ನನ್ನ ಮೂಗು ಬದಲಾಗಿಲ್ಲವೆನಿಸಿ ಸಂತೈಸಿಕೊಂಡು ಮುತ್ತಿಕ್ಕುವಷ್ಟರಲ್ಲಿ ನನಗಿದು ಬೇಡವೆಂದು ರಚ್ಚೆ ಹಿಡಿದ ಮಗಳ ದನಿಗೆ ಮೊದಲಿದ್ದ ಮೂಗಿನ ತುದಿಯ ಕೋಪ ಎಂದೋ ಕರಗಿ ಹರಳಾಗಿ ಮೂಗುತಿ ಸೇರಿದ್ದು ನೆನಪಾಯಿತು ಇವಳು ನಕ್ಕಂತಾಯಿತು =======

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಥೇಟ್ ನಿನ್ನ ಹಾಗೆ! ಸಂತೆಬೆನ್ನೂರು ಫೈಜ್ನಾಟ್ರಾಜ್ ಅದೇ ಹಾಡು ತುಟಿಗೆ ಬಂದು ವಾಪಾಸಾಯಿತು ಏಕೋ ಏನೋ ಹೀಗೆ ರಸ್ತೆಯ  ಕೊನೇ ತಿರುವಲ್ಲಿ ಕಾದಿರು ಈಗ ಬಂದೆ ಎಂದು ಮಾಯವಾದ ಥೇಟ್ ನಿನ್ನ  ಹಾಗೆ! * ಕಾಫಿಯ ಘಮವೋ ಮುಡಿದ ಮಲ್ಲಿಗೆ ಗಂಧವೋ… ಉಳಿದ ಮಾತುಗಳು ಹೇಳಲಾರದೇ ಖಾಲಿಯಾದವು…. ನಿನ್ನಂತೆ! * ನೂರು ಮಾತುಗಳು ಆಡಿದರೇನು ಬರಿದೆ; ಚಹ ಪುಡಿಯಿಲ್ಲದ ಚಹ ಕುಡಿದಂತೆ ಬರಿದೆ! * ಮುಳ್ಳ ಬೆನ್ನ ಮೇಲೆಯೇ ಗುಲಾಬಿ ಕೆಸರ ಸೊಂಟದ ಪಕ್ಕದಲ್ಲೇ ಕಮಲ ಮಣ್ಣ ಕಾಲಡಿಯೇ ಚಿನ್ನ ಕೆಸರ ರಾಡಿಯಲ್ಲೇ ಅನ್ನ ಕಷ್ಟವೆಂದೇಕೆ ಅಳುವೆ; ಅದರ ಹಿಂದೆಯೇ ಅಡಗಿದೆ ಹಿತ ನಗುತ ಮುಂಸಾಗು ಅಷ್ಟೆ! * ಭೂಮಿ ದುಂಡಗೈತೆ ಅಂತ ನಮ್ಮೇಷ್ಟ್ರು ಹೇಳಿ ನಂಬಿಸಿದ್ರು ಈಗೀಗ ಈ ಅಂತರ್ಜಾಲ ದಲ್ಲಿ ಸಿಗಬಾರದವರೆಲ್ಲಾ ಸಿಕ್ರು; ಪ್ಚ್….ನೀ ಮಾತ್ರ ಕೊನಿಗೂ ಭೇಟಿ ಆಗಲೇ ಇಲ್ಲ…ನಿಜಕ್ಕೂ ಭೂಮಿ ದುಂಡಗಿದೆಯಾ….? * ಶರಾಬು ಎಲ್ಲರನ್ನೂ ಹತ್ತಿರಕ್ಕೆ ತರುತ್ತೆ ಅನ್ನೋದಾದರೆ ಸಖಿ,ಅಂಥಾ ಸಾಮಿಪ್ಯ ನನಗೆ ಬೇಡ ಜನ ದೂರಾದರೇನಂತೆ ನಾ ನಾನಾಗಿ ಉಳಿವೆ ಬೇಡವೇ ಬೇಡ ನಶೆಯ ಜಂಜಡ!

ಕಾವ್ಯಯಾನ Read Post »

You cannot copy content of this page

Scroll to Top