ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನಭದ ಕೌತುಕದ ಕಡೆಗೆ ನಾರಾಯಣಸ್ವಾಮಿ ವಿ ನಭದ ಕೌತುಕದ ಕಡೆಗೆ ಮನವ್ಯಾಕೋ ಯೋಚನಲಹರಿಯ ಕಡೆಗೆ ತಿರುಗುತಿದೆ, ಅಜ್ಞಾನದಿಂದ ವಿಜ್ಞಾನದ ಕಡೆ ಸಾಗಿದ ಮನುಜ ಮತ್ತೆಕೊ ಮರಳಿ ಅಜ್ಞಾನದ ಗೂಡಿನ ಸುತ್ತ ಸುಳಿಯುತಿರುವನೆಂದು…….. ಪ್ರಕೃತಿಯ ವಿಸ್ಮಯಕ್ಕೆ ಹೆದರಿ ದೇಗುಲ-ಗೃಹಗಳ ಕದವನೆ ಮುಚ್ಚಿ,ದೂರದರ್ಶನದ ಪರದೆಯೊಳಗೆ ನಭದ ಕೌತುಕವನು ವೀಕ್ಷಣೆ ಮಾಡುತಿಹನು……. ಆಗಸದಲಿ ಘಟಿಸುವ ಸೂರ್ಯಚಂದ್ರರ ವಿಸ್ಮಯ ರೂಪವನು ಕನ್ನಡಿಯೊಳಗಿಂದ ನೋಡಬಹುದೆಂದು,ವಿಜ್ಞಾನಿಗಳು ಸಾರಿ ಸಾರಿ ಹೇಳಿದರೂ ನಂಬಲೇ ಇಲ್ಲ ವಿಜ್ಞಾನವನು…… ಟಿವಿ ಪರದೆಯೊಳಗೆ ಕುಳಿತು ಕಟ್ಟುಕಥೆ ಸಾರುವ ಮಾತಿನಮಲ್ಲರ ಭಾಷಣವು ಹುಟ್ಟಿಸಿತು ನಿನ್ನ ಮನದೊಳಗೆ ಭಯವನು ಹುಡುಕುತಲಿರುವೆ ದಬೆ೯ಗರಿಕೆಯ ಹುಲ್ಲನು….. ಭಾನಾಡಿಯಲಿ ಹಾರುವ ಹಕ್ಕಿಗೆ ಹರಿಯುತಿರುವ ಜಲಧಾರೆಗೆ ಹೊಲದೊಳಗೆ ದುಡಿಯುತಿರುವ ರೈತನಿಗೆ ಮಣ್ಣು ಹೊರುತಿರುವ ಶ್ರಮ ಜೀವಿಗೆ ತಾಕಲಿಲ್ಲವೇಕೆ ಗ್ರಹಣ ……. ಜ್ಞಾನವ ಪಡೆದು ಅಂಧಕಾರದೊಳಗೆ ಮನವನೆಟ್ಟು,ಮೂಢಚಾರಣೆಗೆ ಬೆಂಬಲವಿತ್ತು ಸಾಗುತಿರುವ ಮನುಜನೇ,ಮುಂದಿನ ಪೀಳಿಗೆಗೆ ಯಾವುದು ನಿನ್ನ ಸಂದೇಶ ?….. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ತ್ರೀ ಹೆಜ್ಜೆ ಕವಿತಾ ಸಾರಂಗಮಠ ಸ್ತ್ರೀ ಹೆಜ್ಜೆ ಲಂಗ ದಾವಣಿ ತೊಟ್ಟ ಬಾಲೆಯರು ವಿರಳ.. ಹಿಡಿದಿದೆ ಫ್ಯಾಶನ್ನಿನ ಮರುಳ.. ಮಾಯವಾಗಿವೆ ಉದ್ದ ಜಡೆ ಮೊಗ್ಗುಗಳ.. ಕೇಶ ಕತ್ತರಿಸಿ ನಡೆಯುವರು ಸರಳ..! ಅನುಕರಣೆ ಹೆಸರಲಿ ನಡೆದಿದೆ ಅಂಧರ ಆಟ.. ತೋರುತಿದೆ ತೆಳು ಧಿರಿಸಿನಲಿ ಅವಳ ಮೈಮಾಟ.‌. ಹಗಲಿರುಳೂ ಅವಳ ಪೀಡಿಸುತ್ತಿದೆ ಕಾಮುಕರ ಕೂಟ..! ಮಾಧ್ಯಮಗಳಲ್ಲಿ ಜಾಹಿರಾತುಗಳ ದರಬಾರು.. ಮಹಿಳೆಯರ ಮನೆ-ಮನಗಳಲ್ಲಿ ಅವುಗಳದ್ದೇ ಸಂಚಾರು.. ಹೋಗುತಿರುವ ಅವಳದೇ ಮಾನಕೆ ಇಲ್ಲವೇ ಇಲ್ಲ ಕೊಂಚ ವಿಚಾರ..! *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸೀರೆಯ ಸಹವಾಸ ತ್ರಿವೇಣಿ ಜಿ.ಹೆಚ್ ಸೀರೆಯ ಸಹ ವಾಸ. ಸೆರಗು ನಿರಿಗೆಗಳ ಸಮೀಕರಿಸಿ ಉಬ್ಬಿದೆದೆ ಕಂಡೂ ಕಾಣಿಸದಂತೆ ಮಣಿಸಿ ನಡುವೆ ‌”ನಡು”ವಿನ ಆಕಾರವ ಅಂದಗಾಣಿಸಿದರೂ ಜಗ್ಗುವ ಬೊಜ್ಜು. ಒಂದೊಂದು ಸೀರೆ ಉಟ್ಟಾಗಲೂ ಮತ್ತೆಷ್ಟೋ ನೆನಪುಗಳ ಕದ ಬಡಿದು ಅಳಿಸಲಾಗದವನ್ನಲ್ಲೇ ಮುಚ್ಚಿಟ್ಟು… ಕಣ್ಣ ಕನಸುಗಳನ್ನೂ ಬೆಚ್ಚಗಿಟ್ಟು… ಜರಿ ಅಂಚಿನ ಸೀರೆ, ಅಲ್ಲಲ್ಲಿ ಸಣ್ಣ ಹೂಬಳ್ಳಿಯಂಚು, ನವಿರು ಭಾವ ಒಲವ ಮೆಲುಕು. ಚಿತ್ತಾಕರ್ಷಕ ಚಿತ್ತಾರ. ಉಟ್ಟು ತೊಟ್ಟು ಸಂಭ್ರಮಿಸಿದ ಆ ಘಳಿಗೆ. ಅಷ್ಟೊಂದು ಸುಲಭವಲ್ಲ ಸೆರಗ ತುದಿಯಲ್ಲಿ ಕನಸು ಕಟ್ಟಿಕೊಂಡೇ ಸಾಗುವುದು, ಅತ್ತಿತ್ತ ಓಲಾಡುವ ನಿರಿಗೆಗಳ ಸಂಭಾಳಿಸುತ್ತಲೇ ನಡೆಯವುದು, ಅಷ್ಟಕ್ಕೇ ಮುಗಿಯುವುದಿಲ್ಲ, ಊಹೂಂ ಸೀರೆಗೊಪ್ಪುವ ರವಿಕೆ, ಕುಚ್ಚು, ಬಿಂದಿ ಫಾಲು, ಕೇಶ ವಿನ್ಯಾಸ , ಪಿನ್ನು, ಚಪ್ಪಲಿ, ಉಫ್ ಒಂದೇ ಎರಡೇ ಸಾಲು ಸಾಲು ಸಾಲದು. ಮೊದಲ ಸಲ ಸೀರೆಯುಟ್ಟು ಮುಗ್ಗರಿಸಿದ್ದು ಅಮ್ಮನ ಕಣ್ಣು ತಪ್ಪಿಸಿ ಕ್ಲಾಸ್ ಮೇಟಿಗೆ ಸೀರೆ ಕೊಟ್ಟದ್ದು ವಾರ್ಡ್ರೋಬಿನ ತುಂಬ ತುಂಬಿರುವ ಥರಾವರಿ ಕಂಡು ತುಟಿಯಲ್ಲಿ ಮಂದಹಾಸ ಮೂಡಿದ್ದು… ಈಗಲೂ ಅಷ್ಟೇ ಅಮ್ಮನ ತಬ್ಬಿದ ಕಂದನಂತೆ ನಿರಿಗೆಗಳು ಅಪ್ಪಿವೆ. ಅದೆಂತಹ ಕಚಗುಳಿ, ಒಳಗೊಳಗೇ ಪುಳಕ. ನಿನ್ನೆಗಳ ಕಳೆದದ್ದು , ನಲ್ಲನ ಜೊತೆಗೆ ಸಾಗಿದ್ದು, ಭ್ರಮೆಯಲ್ಲಿ ತೇಲಿದ್ದು *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಾಳಿಯ ಉತ್ಸವ ಪ್ರೇಮಶೇಖರ ಗಕ್ಕನೆ ಹಾರಿ ಗಬಕ್ಕನೆ ಹಿಡಿದು ನುಂಗೇಬಿಟ್ಟಿತು ನಮ್ಮೂರ ಕೆರೆಯ ಮೀನೊಂದನು ಸಾವಿರ ಸಾವಿರ ಮೈಲು ದೂರದ ಸೈಬೀರಿಯಾ ದಿಂದ ಹಾರಿ ಬಂದು ಬೆಳ್ಳಂಬೆಳಿಗ್ಗೆ ಕೆರೆ ಏರಿ ಮೇಲಿನ ಅರಳೀಮರದ ಕೊಂಬೆಯೇರಿ ಕೂತ ಸ್ವಾಲೋ ಹಕ್ಕಿಯೊಂದು. ಇಂದು ನವೆಂಬರ್ ಒಂದು. ತುರ್ತಾಗಿ ಹೋಗ ಬೇಕಿದೆ ನಾನೀಗ ರಾಜ್ಯೋತ್ಸವದಾಚರಣೆಗೆ, ನನಗಾಗಿ ಕಾದು ನಿಂತಿದೆ ಕಾರ್ಯಕರ್ತನ ಬೈಕು, ಕೂಗಿ ಕರೆಯುತ್ತಲೂ ಇದೆ ಮೈಕು. ಭದ್ರವಾಗಿದೆ ನನ್ನ ಜೇಬಿನಲಿ ಭಾಷಣದ ಹಾಳೆ, ಸಿಕ್ಕಿನಿಂತಿದೆ ನನ್ನ ಗಂಟಲಲಿ ಸ್ವಾಲೋ ನುಂಗಿದ ಮೀನು ಮೂಳೆ. ಇದೇರೀ ಯುಗಯುಗದ ಕತೆ ಅನ್ನುತ್ತಿದ್ದಾಳೆ ಅರಳೀಮರ ಸುತ್ತಿಬಂದ ಲಲಿತೆ. ಹೌದು, ನೀರಲೊಂದು ಮೀನು ಆಡುತಿದೆ, ಮೇಲೊಂದು ಸ್ವಾಲೋ ಹೊಂಚು ಹಾಕುತಿದೆ ಅರಳೀಮರ ನಿಂತು ನೋಡುತಿದೆ. ಗಾಳಿ…? ಅದು ತನ್ನ ಪಾಡಿಗೆ ತಾನು ಬೀಸುತ್ತಿದೆ, ಇಂದಿಲ್ಲಿ, ನಾಳೆ ಇನ್ನೆಲ್ಲೋ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕ್ಷಮಿಸದಿರಿ ಸಂಕಟಗಳನ್ನು ಕವಿತೆ ಮಾಡುವುದು ಕ್ರೂರ ಅನ್ನಿಸಿ ಎಷ್ಟೋ ಸಲ ಸುಮ್ಮನಾಗುತ್ತೇನೆ.. ಇದು ಕವಿತೆಯಲ್ಲ; ಒಡಲ ಉರಿ. ವಿಜಯಶ್ರಿ ಹಾಲಾಡಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆಬೆಂದ ನರಳಿದ ನೊಂದಅಳಿಲುಗಳೇ ಮೊಲಗಳೇಜಿಂಕೆಗಳೇ ನವಿಲುಗಳೇಹುಲಿ ಚಿರತೆ ಹಾವುಗಳೇಕ್ರಿಮಿ ಕೀಟ ಜೀವಾದಿಗಳೇಮರ ಗಿಡ ಪಕ್ಷಿಗಳೇಕೆಲಸಕ್ಕೆ ಬಾರದ’ ಕವಿತೆ’ಹಿಡಿದು ನಿಮ್ಮೆದುರುಮಂಡಿಯೂರಿದ್ದೇನೆಕ್ಷಮಿಸದಿರಿ ನನ್ನನ್ನುಮತ್ತುಇಡೀ ಮನುಕುಲವನ್ನು ಹಸಿರು ಹೂವು ಚಿಗುರೆಂದುಈ ನೆಲವನ್ನು ವರ್ಣಿಸುತ್ತಲೇಕಡಿದು ಕೊಚ್ಚಿ ಮುಕ್ಕಿಸರ್ವನಾಶ ಮಾಡಿದ್ದೇವೆಇಷ್ಟಾದರೂಹನಿ ಕಣ್ಣೀರಿಗೂ ಬರಬಂದಿದೆನಮ್ಮ ನಮ್ಮ ಲೋಕಗಳುಮಹಲುಗಳನ್ನು ನಾವಿನ್ನೂಇಳಿದಿಲ್ಲ ಇಳಿಯುವುದೂ ಇಲ್ಲಕ್ಷಮಿಸಲೇಬೇಡಿ ಕೊನೆಗೊಂದು ಅರಿಕೆಪ್ರಾಣಿಪಕ್ಷಿಗಳೇಮತ್ತೊಂದು ಜನ್ಮವಿದ್ದರೆ ನನಗೆದಯಮಾಡಿ ನಿಮ್ಮ ಸಂಕುಲಕ್ಕೆಕರೆದುಕೊಳ್ಳಿ- ಇಲ್ಲವೆಂದಾದರೆನಿಮ್ಮ ಪಾದ ಸೋಕಿನಕಲ್ಲೋ ಮುಳ್ಳೋ ಮಣ್ಣೋಆಗಲಾದರೂ ಹರಸಿಬಿಡಿ ಹೆಚ್ಚು ಹೇಳುವುದಿಲ್ಲನಿಮ್ಮುಸಿರಿನ ಬೇಗುದಿನಮ್ಮೆಲ್ಲರ ಜೀವಾತ್ಮಗಳ ಬೇಯಿಸಲಿ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಓ ಸಖಿ! ನಿರ್ಮಲಾ ಆರ್. ಹೊಲದಾಗಿನ ಹಸಿರು ಎಷ್ಟು ಚೆಂದ ಓ ಸಖಿ ಪುರ್ರೆಂದು ಹಾರುವ ಹಕ್ಕಿ ತಿನ್ನುತ್ತಿತ್ತು ಮೆಕ್ಕೆ ತೆನೆಯ ಕುಕ್ಕಿ ಕುಕ್ಕಿ ಒಂದು ಬದಿ ಕರಿ ಎಳ್ಳಿನ ರಾಶಿ ಬಣ್ಣದ ಹೂಗಳು ನಲಿಯುತ್ತಿದ್ದವು ಕಂಪ ಸೂಸಿ ಬದುವಿನ ಹೂ ಬಳ್ಳಿ ಸ್ವಾಗತ ಮಾಡುತಿತ್ತು ತನ್ನ ತಾ ಹಾಸಿ ಪ್ರಕೃತಿಯ ಬಣ್ಣಿಸಲು ಪದಗಳಿಲ್ಲ ಸಖಿ ತಂಗಾಳಿಯು ಹಾದು ಹೋಗುತ್ತಿತ್ತು ನಮ್ಮ ಸೋಕಿ ರಾಶೀಯಲ್ಲಿನ ಎಳ್ಳು ತಿನ್ನುತ್ತಿದ್ದೆವು ಮುಕ್ಕಿ ಮುಕ್ಕಿ ಸಂಜೆಗೆ ವಿದಾಯ ಹೇಳಲು ಮೂಡುತ್ತಿತ್ತು ಆಗಸದಲಿ ಚುಕ್ಕಿ ಎಲ್ಲಿ ಹೋದವು ಸುಗ್ಗಿಯ ಆ ದಿನಗಳು ಸಖಿ ಹಾದಿ ತಪ್ಪಿದನಾ ಮನುಜ ಸ್ವಾರ್ಥಕೆ ತನ್ನ ತಾ ನೂಕಿ ಇನ್ನೂ ತೀರುತ್ತಿಲ್ಲ ಬರಗಾಲದ ಬಾಕಿ. *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಪ್ಪ ಅಂದರೆ ಆಕಾಶ ದೇವಿ ಬಳಗಾನೂರ ಅಪ್ಪ ಅಂದರೆ ಆಕಾಶ ಅಪ್ಪ ಅಂದ್ರೆ ಅಗೋಚರ ಪ್ರೀತಿಯ ಕಡಲು ನನ್ನಮ್ಮನಂತ ಕರುಣೆಯ ಮಡಿಲು ಮಗಳ ಸಾಧನೆಯು ಪ್ರಜ್ವಲಿಸಲು ಕಾರಣವಾದ ತಿಳಿಮುಗಿಲು ಮಗಳಿಗಾಗಿ ದಣಿದನದೆಷ್ಟೋ ಹಗಲು ಅವಳಿಗಾಗಿಯೇ ಕಾಯ್ದಿರಿಸಿದನು ತನ್ನ ಇರುಳು ಅಪ್ಪ ಅಂದ್ರೆ ಮಗಳ ಪಾಲಿನ ನಾಯಕ ಅವಳ ಬದುಕ ದೋಣಿಯ ನಿಜ ನಾವಿಕ ಮಗಳ ಮುಗ್ದ ನಗುವಿಗಾಗಿ ಕಾದ ಅಮಾಯಕ ಅವಳ ಬದುಕ ರೂಪಣೆಯ ನಿಜ ಮಾಲಿಕ ಅಪ್ಪ ಅಂದ್ರೆ ಮಗಳಿಗಾಗಿಯೇ ಬದುಕೋ ಜೀವ ಅವಳ ಖುಷಿಯಲ್ಲೆ ಮರೆವನು ತನ್ನೆಲ್ಲ ನೋವ ಮಗಳೇ ತನ್ನ ಅತಿದೊಡ್ಡ ಸಂಪಾದನೆಯೆಂಬ ಭಾವ ಮತ್ತೊಮ್ಮೆ ಮಗದೊಮ್ಮೆ ಹೇಳುವೆನು ಕೇಳಿ ಅಪ್ಪ ಅಂದ್ರೆ ಆಕಾಶ ಅಪ್ಪ ಅಂದ್ರೆ ತಾಯಿಯೆಂಬ ಭೂಮಿಗೇ ಒಡಲು ಮಗಳಿಗವನೇ ಪ್ರೀತಿಯ ಕಡಲು

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ಯಶು ಬೆಳ್ತಂಗಡಿ ಮೊದಲು ಶಿಶುವಾಗಿ ಭುವಿ ಸ್ಪರ್ಶಿಸಿ,, ಮೊದಲ ಉಸಿರಾಟ ನಡೆಸಿ,, ಮೊದಲ ಕಣ್ಣೀರ ಸುರಿಸಿ,, ಮೊದಮೊದಲು ಕಂಡ ತೊದಲು ಮಾತಿನ ಕನಸು… ಮೊದಲ ತರಗತಿಗೆ,, ಮೊದಲ ಹೆಜ್ಜೆಯಿಟ್ಟಾಗ,, ಭಯದಲ್ಲೇ ಕಂಡ ನೂರೊಂದು ಕನಸು.. ಮೊದಲ ಬಾರಿ ರಾಷ್ಟ್ರನಾಯಕರ ಕಥೆ ಕೇಳಿದಾಗ,, ಮೊದಲು ಸ್ವಾತಂತ್ರ್ಯದ ಘಟನೆ ಓದಿದಾಗ,, ಅರಳಿದ ದೇಶಪ್ರೇಮದ ಕನಸು… ಮೊದಲು ಚಲನಚಿತ್ರದಿ ಮಧ್ಯಪಾನ ನೋಡಿದಾಗ,, ಮೊದಮೊದಲು ಗಲಾಟೆ ದೊಂಬಿಗಳ ನೋಡಿದಾಗ,, ಅವರಂತೆ ನಾಯಕನಾಗಬೇಕೆಂದು ಕಂಡ ಹುಚ್ಚು ಕನಸು.. ಅವನ ಸುಂದರ ಕಣ್ಣು ಕಂಡಾಗ,, ಅವನು ಮೌನದಿ ಮಾತಾಡಿದಾಗ,, ಅವನ ಸ್ಪರ್ಶದಿ ಜಗವನ್ನೇ ಮರೆತ ಸುಂದರ ಕನಸು.. ಅವನ ಹಸ್ತದಿ ತಾಳಿ ಕಟ್ಟಿಸಿಕೊಂಡಾಗ,, ಕಂಡ ಹತ್ತಾರು ಕನಸು.. ತಾಳಿ ಬೆಲೆಕಳೆದುಕೊಂಡಾಗ,, ನುಚ್ಚುನೂರಾದ ಬದುಕಿನ ಕನಸು.. ಊಟ ತಿಂಡಿ ಬಿಟ್ಟು ಆರೋಗ್ಯ ಹದೆಗೆಟ್ಟಾಗ,, ಜೀವದ ಆಸೆ ಮರೆತಾಗ,, ಸಕಲವ ತೊರೆದು ಸಾವಿನ ಮನೆಗೆ ಹೊರಟಾಗ,, ಕನಸಾಗೇ ಉಳಿದ ಸಾವಿರ ಕನಸು.. ಕನಸಾಗೇ ಉಳಿದ ಬದುಕಿನ ಕನಸು.. ಕಣ್ಣೀರಲ್ಲೇ ಕೊಚ್ಚಿಹೋದ ನೂರೊಂದು ಕನಸು.. ========

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಂಕ್ರಾಂತಿ ಅನಿಲ್ ಕರೋಲಿ ಸಂಕ್ರಾಂತಿ ಸಡಗರ ಪ್ರೀತಿಯ ಉಡುಗೊರೆ ಹಳ್ಳಿ ಹಳ್ಳಿಯು ಹಬ್ಬವೂ ..ಹಬ್ಬವೊ.. ರೈತರ ಪ್ರತಿ ಮನೆಯಲ್ಲೂ ಸಂಭ್ರಮ ಸಾಗರ ದನ-ಕರುಗಳು ಹೊಸ ಬಗೆಯ ಶೃಂಗಾರ ರೈತರು ಸಂಕ್ರಾತಿಯಲ್ಲಿ ಬೆಳೆದ ಬೆಳಯ ನಿರೀಕ್ಷೆಯಲ್ಲಿ ಎಲ್ಲರೂ ಏಳ್ಳು-ಬೆಲ್ಲ ಹಂಚಿ ಖುಷಿಯ ಹಂಚುವರು ಹಳ್ಳಿಗಳಲ್ಲಿ ಇದೊಂದು ವಿಶೇಷ ಹಬ್ಬವು ಜಗಳ ಮನಸ್ಥಾಪ ಮಾಡಿಕೊಂಡವರನ್ನು ಒಬ್ಬರನ್ನೊಬ್ಬರು ರಾಜಿಮಾಡಿಸುವುದು ನಮ್ಮಿ ಹಳ್ಳಿ ಹಬ್ಬ ಪ್ರೀತಿಯು ಇಲ್ಲಿ ಲಭ್ಯ ಖುಷಿಯಲೇ ನಾವು ತೇಲುವೆವು ಇಂದು ========

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾಕು ಬಿಡು ಸಖಿ ಬಸವರಾಜ ಜಿ ಸಂಕನಗೌಡರ ಸೂರ್ಯ ಚಂದ್ರರಿಬ್ಬರನೂ ಮಧುಶಾಲೆಯಲೇ ಕಾಣುತ್ತಿರುವೆ ಸಾಕು ಬಿಡು ಸಖಿ . ನನ್ನೆದೆಯ ನೋವ ನೀ ಸುರಿಸೋ ಕಣ್ಣೀರು ತಣ್ಣಗಾಗಿಸಲಾರದು ಸಾಕು ಬಿಡು ಸಖಿ ಊರ ಮುಂದಿನ ಅಗಸಿ ಕಲ್ಲು ನೀ ಹೋದದ್ದಕ್ಕೆ ಸಾಕ್ಷಿ ಕೊಟ್ಟಿದೆ. ಮತ್ತೇಕೆ ಕನಸಲಿ ಕಾಡುವೆ ಸಾಕು ಬಿಡು ಸಖಿ. ನೀ ಬರುವ ಹಾದಿಗೆ ಬೇಲಿ ಬೆಳೆದಿದೆ. ನಾನೀಗ ಮಧುಶಾಲೆಯ ಖಾಯಂ ಗಿರಾಕಿ ಕಾಡಬೇಡ ಸಾಕು ಬಿಡು ಸಖಿ ಡೋಲಿಯಲಿ ಮಲಗಿದ ಹೆಣದ ಮೇಲೆ ನೀ ಒಂದು ಹೂ ಹಾಕಲಿಲ್ಲ ನನ್ನವರು ಮಣ್ಣು ಹಾಕಲಿ ಬಿಡು ಸಖಿ ಊರ ಬೀದಿಯಲಿ ಹೊರಟಿದೆ ಬಸವರಸನ ಹೆಣದ ಮೆರವಣಿಗೆ ಮತ್ತೇಕೆ ಕಣ್ಣೀರು ಕೊನೆಗೊಮ್ಮೆ ನಕ್ಕು ಬಿಡು ಸಖಿ ========

ಕಾವ್ಯಯಾನ Read Post »

You cannot copy content of this page

Scroll to Top