ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನಿನ್ನ ನೆನಪಿನ ಮೀನು..! ಡಾ.ಜಯಪ್ಪ ಹೊನ್ನಾಳಿ(ಜಯಕವಿ) ನಿನ್ನ ನೆನಪಿನ ಮೀನು ಎಷ್ಟೊಂದು ಬಣ್ಣದಲಿ ಆಡುತಿವೆ ಎದೆಗೊಳದ ತಿಳಿಯಾಳದಲ್ಲಿ..! ಕನಸ ರೆಪ್ಪೆಯ ತೆರೆದು ಕನವರಿಕೆಯಲೆ ನೆರೆದು ಮಳೆಬಿಲ್ಲ ಮಿಂದಂತೆ ಮಧು ಮೇಳದಲ್ಲಿ..! ಹೊಸಿಲ ಚುಂಬಿಸುತಿಹುದು ಹೊಂಬಿಸಿಲಿನೊಡಗೂಡಿ ಹೊಸತೊಂದು ಹಾರೈಕೆ ಹಳೆ ನೋವ ಕೊಂದು..! ನಗುವ ನಂದನದೊಲವು ತಂಗಾಳಿ ತೊಟ್ಟಿಲಲಿ ಪರಿಮಳದಿ ತಾ ತುಂಬಿ ನವ ಭಾವ ತಂದು..! ಬಣಗುಡುವ ಬದುಕಲ್ಲಿ ನೀ ಬಂದು ನಕ್ಕಂದು ಮರಳಿ ಬಂದಿತು ಮನಕೆ ಮತ್ತೆ ಮಲೆನಾಡು..! ಜೀವವಾಯಿತು ಜಿಂಕೆ ರೆಕ್ಕೆ ಬಿಚ್ಚಿತು ನವಿಲು ನಲಿದು ಉಲಿಯಿತು ಕುಕಿಲು ಬಂತು ಹೊಸ ಹಾಡು.. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನೆಯುವೆ ಕವಿತೆಯಲಿ ತ್ರಿವೇಣಿ ಜಿ.ಹೆಚ್. ಮಾತು ಮಾತಿಗೂ ಕೋಪ ಮನಸು ಮುನಿದ ರೂಪ.. ಈಗ ಕೇಳು! ರಾಧೆಯ ಮನದಲಿ ಪರಿತಾಪ… ಸರಿಸು ಮೌನವ ಕೊಳಲ ಆಲಾಪದಲಿ. ಆದರೀಗ, ರಾಧೆ ಒಲವ ಹಾಸಿ ನಿನ್ನ ಅರಸಿ ಭಜಿಸಿ ಪೂಜಿಪಳು… ಮರಳಿ ಬಿಡು ಬಿದಿರ ಕೊಳಲು ನುಡಿಸಲು.. ಹುಸಿ ಮುನಿಸು ತಣಿಸಲು ಮಾತು ಮೌನ ಬೆಸೆದು ಒಳಗೆ.. ಶರಣಾಗಲಿ ಮನದೊಳಗೆ. ಮಾಧವ, ಬಾರದೆ ಸರಿಯದಿರು… ಬರೆದು ನೆನೆಯುವೆ ಕವಿತೆಯಲಿ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನೆವರಾರು ನಿನ್ನ ಮಧು ವಸ್ತ್ರದ್ ಮುಂಬಯಿ ಓ ಅಂಬಿಗಾ..ಬೇಗ ಬೇಗನೆ ಮುನ್ನೆಡೆಸು ದೋಣಿಯ.. ತೀರದಾಚೆಯ ಹಳ್ಳಿ ಹೊಲದಲಿ‌ ಕಾಯುತಿಹನು ನನ್ನಿನಿಯ.. ಅಂಬಿಗಣ್ಣಾ ಶಾಲೆಯ ಸಮಯ ಆಯ್ತು ನಡೆ ಬೇಗ.. ಎಲವೋ ಅಂಬಿಗ ದಡದಾಚೆಯ ಜನರ ಓಟುಬೇಕು ನಡೆ ಈಗ.. ತಮ್ಮ ತಮ್ಮದೇ ಲೋಕದಲಿ ವಿಹರಿಸುತಿಹರು ಎಲ್ಲರು.. ಹೊಳೆಯ ದಾಟಿದ ನಂತರ ಬಡ ಅಂಬಿಗನ ನೆನೆವರಾರು.. ಬಿಸಿಲು ಮಳೆ ಗುಡುಗುಸಿಡಿಲು ಕತ್ತಲಾದರೆ ಸುತ್ತಲು.. ಈಜುಬಾರದವರಿಗೆಲ್ಲ ಆಧಾರ ನೀನೆ ಗುರಿ ಮುಟ್ಟಲು.. ಶಾಂತಚಿತ್ತದಿ ಹೊಣೆಯ ಹೊತ್ತಿದೆ ನಿನ್ನಯ ಬಾಗಿದ ಹೆಗಲು.. ಕಾಯಕ ಯೋಗಿಯತ್ತ ಗಮನ ಕೊಡಲುವೇಳೆಯಿಲ್ಲ ಯಾರಲು.. ತಂತ್ರಜ್ಞಾನ ಬೆಳೆದಂತೆ ದೋಣಿ, ಅಂಬಿಗನ ಮರೆವರೆಲ್ಲ.. ಭವ ಸಾಗರ ದಾಟಲು ಕಾಣದ ದೇವರ ಬೇಡುವರೆಲ್ಲ.. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿ ಸಾಗರದಲಿ ಅವ್ಯಕ್ತ ಕಂಡೆನಾ ಸಿರಿಯ ಅಯ್ಸಿರಿಯ ಮಾಲೆ , ಮುದುಡಿದ ಮನದ ಅಂಗಳ ಅರಳುತಲಿ… ಹಚ್ಚಹಸಿರ ಹಾಸಿಗೆಯ ಮೇಲೆ , ಹೊಸದಾಗಿ ಹಾಸಿದ ಬಿಳಿ ಮೋಡಗಳ ಸಾಲೆ. ಅಲ್ಲೊಂದು ಇಲ್ಲೊಂದು ನಿಂತಿರುವ ತಲೆಗಳು, ಕಣ್ಣಾಮುಚ್ಚಾಲೆ ಆಡುತ್ತಾ ನಲಿವ ಕಿರಣಗಳು. ||೧|| ಕೈ ಚಾಚಿ ,ಆಲಂಗಿಸಿ ಕರೆಯುತಲಿ, ಹೇಳಿತೇನೋ ಪಿಸು ಮಾತುಗಳಲಿ, ಎಲ್ಲೆಲ್ಲೂ ನಾನಿರುವೆ ಹಂಚುತ ಸವಿಗಳ, ಪ್ರೀತಿ, ನೆಮ್ಮದಿ, ಸುಖಸಂತೋಷಗಳ. ||೨|| ನನ್ನಲ್ಲಿ ನೀನಿರಲು, ನಿನ್ನಲ್ಲಿ ನಾನಿರಲು ಮಿಡಿಯುವ ಕಂಗಳು, ಮನದಾಳದ ಮಾತುಗಳು, ಪೃಕ್ರತಿಯ ಪ್ರಕೃತಿ ನನ್ನೊಳಗೆ ಹರಿದಿರಲು ಶಾಂತವಾಯಿತು ಪುಟ್ಟ ಮಗುವಿನಂತೆ ಕರುಳು.||೩|| ಹರಸುತ ಹಾರೈಸುತ ಹಗಲಿರುಳು ಕಳೆವೆನು ಓಂದಾಗುತಾ ಪ್ರೀತಿಯ ಸಾಗರದಲಿ….. *******

ಕಾವ್ಯಯಾನ Read Post »

ಕಾವ್ಯಯಾನ

ಅನುವಾದ ಸಂಗಾತಿ

ಚೇಳು ಕಡಿದ ರಾತ್ರಿ ಇಂಗ್ಲೀಷ್ ಮೂಲ:ನಿಸ್ಸಿಮ್ ಏಜೇಕಿಲ್ ಕನ್ನಡಕ್ಕೆ: ಕಮಲಾಕರ ಕಡವೆ ನೆನಪಾಗುತ್ತದೆ ನನಗೆ ಒಂದು ಚೇಳುನನ್ನ ಅಮ್ಮನ ಕಡಿದ ರಾತ್ರಿ. ಹತ್ತು ತಾಸುಗಳಕಾಲ ಜಡಿದ ಸುರಿಮಳೆ ಆ ಚೇಳನ್ನುಅಕ್ಕಿ ಮೂಟೆಯಡಿ ಓಡಿಸಿತ್ತು.ವಿಷ ಕಾರಿ ಅದು – ಅಂಧಕಾರ ತುಂಬಿದಕೋಣೆಯಲ್ಲಿ ಫಕ್ಕನೆ ಕುಣಿದ ಕುಟಿಲ ಬಾಲ –ಮತ್ತೆ ಮಳೆಯಲ್ಲಿ ಮರೆಯಾಯಿತು. ನೊಣಗಳ ಹಿಂಡಿನಂತೆ ಬಂದರು ರೈತರುಮಣಮಣಿಸುತ್ತ ನೂರು ಸಲ ದೇವರ ನಾಮಕೇಡು ಕಳೆಯಲಿ ಎಂದು ಕೇಳಿಕೊಳ್ಳುತ್ತ. ಮೊಂಬತ್ತಿ, ಲಾಟೀನುಗಳ ಹಿಡಿದುಮಣ್ಣ ಗೋಡೆಗಳ ಮೇಲೆದೈತ್ಯ ಜೇಡನಂತ ನೆರಳುಗಳ ಮೂಡಿಸುತ್ತಅವರು ಹುಡುಕಿದರು ಅದರ. ಕಾಣಲಿಲ್ಲ ಎಲ್ಲಿಯೂ.ಲೊಚಗುಟ್ಟಿದರು ಅವರು.ಚೇಳಿನ ಪ್ರತಿ ಚಲನೆಯ ಜೊತೆಅಮ್ಮನ ದೇಹದಲ್ಲಿ ವಿಷ ಹರಿಯುತ್ತದೆ, ಅವರೆಂದರುಅದು ಸುಮ್ಮನೆ ಕೂರುವಂತಾಗಲಿ, ಅವರೆಂದರುಹಿಂದಿನ ಜನ್ಮದ ಪಾಪಗಳೆಲ್ಲ ಈ ರಾತ್ರಿಉರಿದು ಹೋಗಲಿ, ಅವರೆಂದರುನಿನ್ನ ಈ ಸಂಕಟ ಮುಂದಿನ ಜನ್ಮದ ದುರ್ಭಾಗ್ಯಗಳನ್ನುಕಡಿಮೆಯಾಗಿಸಲಿ, ಅವರೆಂದರುಈ ಕ್ಷಣಿಕ ಜಗತ್ತಿನ ಎಲ್ಲ ಕೆಡುಕುಗಳ ಮೊತ್ತಒಳಿತುಗಳ ಮೊತ್ತಕ್ಕೆ ಸರಿಹೊಂದಿಸಿನಿನ್ನ ನೋವನ್ನು ಕ್ಷೀಣಿಸಲಿ.ವಿಷವು ನಿನ್ನ ದೈಹಿಕ ಬಯಕೆಗಳನ್ನುಮತ್ತು ನಿನ್ನ ಮಹತ್ವಾಕಾಂಕ್ಷೆಗಳನ್ನು ಶುದ್ಧೀಕರಿಸಲಿಅವರೆಂದರು, ಮತ್ತೂ ನನ್ನ ಅಮ್ಮನ ಸುತ್ತಲೂಅವರು ನೆಲದ ಮೇಲೆ ಕುಳಿತುಕೊಂಡರುಮುಖದಲ್ಲಿ ಪೂರ್ಣ ಅರಿವಿನ ಶಾಂತಿ ಹೊತ್ತು.ಮತ್ತಷ್ಟು ಮೊಂಬತ್ತಿಗಳು, ಮತ್ತಷ್ಟು ಲಾಟೀನುಗಳು, ಮತ್ತಷ್ಟು ನೆರೆಯವರುಮತ್ತಷ್ಟು ಕೀಟಗಳು, ಮತ್ತೂ ಕೊನೆಯಿರದ ಮಳೆ.ನನ್ನ ಅಮ್ಮ ಚಾಪೆಯ ಮೇಲೆಉರುಳುತ್ತ ನರಳುತ್ತ ಸಂಕಟ ಪಟ್ಟಳು.ಅಪ್ಪ, ಸಂದೇಹಿ, ತರ್ಕವಾದಿ,ವರ, ಶಾಪ, ಪುಡಿ, ಮಿಶ್ರಣ, ನಾರುಬೇರುಎಲ್ಲವನ್ನೂ ಪ್ರಯತ್ನಿಸುತ್ತಿದ್ದಚೇಳು ಕಚ್ಚಿದ ಜಾಗಕ್ಕೆ ಸ್ವಲ್ಪ ಪೇರಫಿನ್ ಸುರಿದುಕಡ್ಡಿಯನ್ನೂ ಗೀರಿದ.ಅದರ ಬೆಂಕಿಯಲ್ಲಿ ಅಮ್ಮ ಜ್ವಲಿಸುವುದ ನೋಡಿದೆ.ಪೂಜಾರಿಯೊಬ್ಬ ಮಂತ್ರ ಪಠಿಸಿ ವಿಷವ ತಡೆಯಲು ಮಾಡುತ್ತಿದ್ದ ಆಚರಣೆ ನೋಡಿದೆ.ಇಪ್ಪತ್ತು ತಾಸುಗಳ ನಂತರಕಡಿತದ ವಿಷ ಹೋಯಿತು. ಅಮ್ಮ ಮಾತ್ರ ಇಷ್ಟೇ ಹೇಳಿದಳುದೇವರ ದಯದಿಂದ ಚೇಳು ನನ್ನ ಕಡಿಯಿತುಮಕ್ಕಳನ್ನಲ್ಲ. ******* The Night of the Scorpion” I remember the night my motherwas stung by a scorpion. Ten hoursof steady rain had driven himto crawl beneath a sack of rice. Parting with his poison – flashof diabolic tail in the dark room –he risked the rain again. The peasants came like swarms of fliesand buzzed the name of God a hundred timesto paralyse the Evil One. With candles and with lanternsthrowing giant scorpion shadowson the mud-baked wallsthey searched for him: he was not found.They clicked their tongues.With every movement that the scorpion made his poison moved in Mother’s blood, they said. May he sit still, they saidMay the sins of your previous birthbe burned away tonight, they said.May your suffering decreasethe misfortunes of your next birth, they said.May the sum of all evilbalanced in this unreal world against the sum of goodbecome diminished by your pain.May the poison purify your flesh of desire, and your spirit of ambition,they said, and they sat aroundon the floor with my mother in the centre,the peace of understanding on each face.More candles, more lanterns, more neighbours,more insects, and the endless rain.My mother twisted through and through,groaning on a mat.My father, sceptic, rationalist,trying every curse and blessing,powder, mixture, herb and hybrid.He even poured a little paraffinupon the bitten toe and put a match to it.I watched the flame feeding on my mother.I watched the holy man perform his rites to tame the poison with an incantation.After twenty hoursit lost its sting. My mother only saidThank God the scorpion picked on meAnd spared my children. — Nissim Ezekiel *********

ಅನುವಾದ ಸಂಗಾತಿ Read Post »

ಕಾವ್ಯಯಾನ

ನಿನ್ನ ಮೌನಕೆ ಮಾತ…

ನಿನ್ನ ಮೌನಕೆ ಮಾತ….…… ಜಯಕವಿ ಡಾ.ಜಯಪ್ಪ ಹೊನ್ನಾಳಿ ನಿನ್ನ ಮೌನಕೆ ಮಾತ ತೊಡಿಸಬಲ್ಲೆನು ನಾನು ನೀ ಹೇಳದಿರೆ ಮುಗುಳು ತುಟಿಯ ತೆರೆದು..! ಹೂಗನಸುಗಳ ಬರೆದು ನಿನ್ನ ಕಣ್ಣಲೆ ಒರೆದು ಚೈತ್ರ ಚಿಗಿದಿದೆ ತಾನು; ಚಿಗರೆ ನೆರೆದು..! ಕಡಿದ ಬುಡದಲೆ ನೆನಪು ಹೊಂಬಾಳೆಯಾಗುತಿವೆ ಕತ್ತರಿಸಿದೆಡೆಯೆ; ತತ್ತರಿಸುತೆದ್ದು..! ವಿಧಿಯು ಮರೆತಿದೆ ಜಿದ್ದು ನೋವು ಸೇರಿದೆ ಗುದ್ದು ಆನಂದ ಬಾಷ್ಪಕಿದೆ ಬೆರಗ ಮುದ್ದು..! ಹೊಸ ಹಾದಿ ಹಾರೈಸಿ ಹೊಸ ಬೆಳಕು ಕೋರೈಸಿ ಹೊಸ ಜೀವ ಭಾವದಲಿ ಯುಗಳ ವಾಣಿ..! ಬೀಸಿದೆಲರಲೆ ಯಾನ ತಾರೆಗಳೆ ಬಹುಮಾನ ಕಡಲೊಡಲಿನಲಿ ಒಲವ ಚಂದ್ರ ದೋಣಿ..! ************

ನಿನ್ನ ಮೌನಕೆ ಮಾತ… Read Post »

ಕಾವ್ಯಯಾನ

ಜಾತಿ ಬೇಡ

ನಿರ್ಮಲಾ ಆರ್. ಜಾತಿ ಬೇಡ” ಮಡಿ ಮಡಿ ಅಂತ ಮೂರು ಮಾರು ಸರಿಯುವಿರಲ್ಲ ಮೈಲಿಗೆಯಲ್ಲೆ ಬಂತು ಈ ಜೀವ ಎನ್ನುವುದ ಮರೆತಿರಲ್ಲ ಜಾತಿ ಬೇಡ,ಜಾತಿ ಬೇಡ ಎಂದು ಬೊಬ್ಬೆ ಹೊಡೆಯುವಿರಲ್ಲ ಜಾತಿ ಬೇಡ ಎಂದ ಮಹಾತ್ಮರನ್ನೆ ಜಾತಿಗೆ ಸೇರಿಸಿ ಮೆರೆಸುತಿರುವಿರಲ್ಲ ಪವಿತ್ರವಾದ ಜ್ಞಾನ ದೇಗುಲಗಳಲ್ಲಿ ಜಾತಿ ರಾಜಕೀಯ ಮೀಲಾಯಿಸುವಿರಲ್ಲ ಜಾತಿ ಕಾರ್ಯಗಳಿಗೆ ಮುಗ್ದ ಮನಸುಗಳ ಬಳಸಿ ಜಾತಿಯ ವಿಷಬೀಜ ಬಿತ್ತುತಿರುವಿರಲ್ಲ. ಜಾತಿ ಬೇಡ ಜಾತಿ ಬೇಡ ಎಂದು ಜಾತಿ ಗಣನೆ ಮಾಡಿಸಿ ಧರ್ಮದ ಹೆಸರಲಿ ವೋಟ್ ಬ್ಯಾಂಕಿನ ಬೇಳೆ ಬೇಯಿಸಿಕೊಳ್ಳುವಿರಲ್ಲ ಜಾತ್ಯಾತೀತ ರಾಷ್ಟ್ರದ ಕಲ್ಪನೆಯ ಬಗೆಗೆ ಗಂಟೆಗಟ್ಟಲೆ ಭಾಷಣ ಬಿಗಿಯುವಿರಲ್ಲ ಬಾಪೂ ಅಂದು ಗುಂಡಿಕ್ಕಿ ಮಾಡಿದರು ನಿನ್ನ ಹತ್ಯೆ ಇಂದು ಮಾಡುತಿಹರು ನಿನ್ನ ರಾಮರಾಜ್ಯದ ಕಲ್ಪನೆಯ ಹತ್ಯೆ ಕ್ಷಮಿಸಿಬಿಡು ಮಹಾತ್ಮ ಬಹುಶಃ ನೊಂದು ಕೊಳ್ಳುತ್ತಿರಬಹುದು ನಿನ್ನಾತ್ಮ. *******

ಜಾತಿ ಬೇಡ Read Post »

ಕಾವ್ಯಯಾನ

ಕನ್ನಡಿಗೊಂದು ಕನ್ನಡಿ

ಡಾ.ಗೋವಿಂದ ಹೆಗಡೆ ಕನ್ನಡಿಗೊಂದು ಕನ್ನಡಿ ಕನ್ನಡಿಯೆದುರು ನಿಂತೆ ಬುದ್ದಿ ಕಲಿಸಲೆಂದೇ ಬಿಂಬಕ್ಕೆ- ಹೊಡೆದೆ ಈಗ ಕೆನ್ನೆಯೂದಿದೆ ! •• ಕೋಪದಲ್ಲಿ ಹೋಗಿ ನಿಂತೆ ಕನ್ನಡಿಯೆದುರು ಉರಿದೆ, ಕೂಗಾಡಿದೆ. ಸರಿ- ಬಿಂಬಕ್ಕೆ ಕೋಪ ಬಂದರೆ ಏನು ಮಾಡುತ್ತದೆ ಹೇಗೆ ಇದಿರು ನಿಲ್ಲುತ್ತದೆ ?! **********

ಕನ್ನಡಿಗೊಂದು ಕನ್ನಡಿ Read Post »

ಕಾವ್ಯಯಾನ

ಕಾವ್ಯಯಾನ

ಇನ್ನೇನು ಬೇಕಿದೆ. ಪ್ರಮಿಳಾ ಎಸ್.ಪಿ. ಇನ್ನೇನು ಬೇಕಿದೆ. ಒಡೆದ ಹಿಮ್ಮಡಿಯೂರಿ ನಿಂತು ಎನ್ನ ಹೆಗಲಮೇಲಿರಿಸಿ ತಾನು ಕಾಣದ ಪರಪಂಚವ ನನಗೆ ತೋರಿಸಿದವ ನನ್ನಪ್ಪ. ಕುದಿಯುವ ಸಾರಿನೊಂದಿಗೆ  ಕುಳಿತ ಹೆಂಡತಿಯನು ತಣ್ಣೀರಿನೊಂದಿಗಾಡುವ ಮಕ್ಕಳನು ಮುದ್ದಾಡಿ ಬೆಳೆಸಿದ್ದ ನನ್ನಪ್ಪ. ಮಕ್ಕಳನು ಓದಿಸಲೇಬೇಕೆಂದು ಹಠಹಿಡಿದವಳು ….ನಾವು ಓದಿಕೊಂಡದ್ದು ಏನೆಂದು ತಿಳಿಯದವಳು ನನ್ನವ್ವ. ಕವಿತೆ ಬರೆಯಲು ಬಾರದವಳು ಮಕ್ಕಳ ಬದುಕನ್ನೇ ಸುಂದರ ಕವಿತೆಯಾಗಿಸಲು  ಭಾವವಾದವಳು ನನ್ನವ್ವ. ಹೀಗೆಲ್ಲಾ ಹೊಗಳಿ ಬರೆದ ನನ್ನ ಪ್ರಾಸವಿರದ ಕವಿತೆಗಳು ಬೇಕಿಲ್ಲಾ ಈಗ ಅವರಿಗೆ…! ಪಿಂಚಣಿ ಬಂದಿತೆ ಮಧುಮೇಹ ಮರೆಯಾಯಿತೆ ರಕ್ತದೊತ್ತಡ ಹೇಗಿದೆ ಎಂದೆಲ್ಲಾ  ಜಂಗಮ ಗಂಟೆ ಭಾರಿಸುವದು ಬೇಕಿಲ್ಲ ಅವರಿಗೆ…! ಇಳಿ ವಯಸ್ಸಿನವರ ಸನಿಹ  ಕುಳಿತು ಒಡಲಾಳದ ಮಾತನಾಡಿ ಮೊಮ್ಮಕ್ಕಳ ನಗುವಿಗೆ ನಗುವ ಬೆರೆಸಲು ನನ್ನುಪಸ್ಥಿತಿ ಬೇಕಿದೆ ಅವರಿಗೆ. ಕಾಣಬೇಕಿದೆ ನಾನು ಅವರಿಗೆ ಬೇಕಾಗಿದ್ದಾದರೂ ಇನ್ನೇನು!? ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭರವಸೆ ನಾಗಶ್ರೀ ಸಾವಿರ ಬಾರಿ ಸೋತರು ಭರವಸೆಯೊಂದಿದೆ ಕಾಯುವ ಕನವರಿಕೆಯಲು ನಿನ್ನದು ಬರೀ ಹುಂಬತನ ಅರಿವಾಗುವುದು ಅಂತರ ಕಾಯ್ದುಕೊಳ್ಳಲು ಅದೆಷ್ಟು ಚಡಪಡಿಕೆಯೆಂದು ಅರಿಯಬೇಕಿತ್ತು ಅಂತರಾತ್ಮವ ಕಾದು ಕಾದು ಬೆಂಡಾದ ಭಾವನೆಗಳಿಗೆ ಸಮಯವೂ ಸೊಪ್ಪಾಕುತಿದೆ ನನ್ನ ನಾ ಅರಿಯದ ಇರಾದೆಗೆ ಅರ್ಥೈಸಲು ನೂರು ಬಾರಿ ಹೇಳುವ ಅವಶ್ಯಕತೆಯಾದರೂ ಇಲ್ಲವಲ್ಲ ಅರ್ಥಮಾಡಿಕೊಳ್ಳಲು ಒಂದು ಘಳಿಗೆ ಸಾಕಲ್ಲ ನಂಬಿಕೆಯ ಕವಲೊಳಗೆ ಅಪನಂಬಿಕೆಯ ಟಿಸಿಲುಗಳು ಮತ್ತೆದೆ ಹುಸಿಯ ನಂಬುವ ಹಂಬಲದತ್ತ ವಾಲುವ ಮನ ಕರುಳಿನ ನೋವು ಕಣ್ಣವರೆಗೂ ತಲುಪಿ ಕಣ್ಣರೆಪ್ಪೆಗೂ ನೋವಂತೆ ಕಣ್ತೆರೆಯಲಾಗದ ಮೋಸದ ಪ್ರಪಂಚಾವ ನೋಡಲು….. *******

ಕಾವ್ಯಯಾನ Read Post »

You cannot copy content of this page

Scroll to Top