ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮೂಕವಾಯಿತು ರೇಖಾ ವಿ.ಕಂಪ್ಲಿ ಮೂಕವಾಯಿತು ಮೂಕವಾಯಿತು ಕೋಗಿಲೆ ವಸಂತನಾಗಮನವಿರದೆ ತನ್ನ ಗಾನವ ಮರೆತು ನಿನ್ನದೇ ಚಿಂತೆ ಯೊಳಗೆ…….. ಮೂಕವಾಯಿತು ವೀಣೆ ಮೀಟದ ಬೆರಳುಗಳಿರದೆ ತನ್ನ ರಾಗವ ಮರೆತು ನಿನ್ನ ಬೆರೆಯಲರಿಯದೆ…….. ಮೂಕವಾಯಿತು ಓಲೆಯೊಂದು ರವಾನಿಸುವ ಹಂಸವಿರದೆ ತನ್ನ ಪದವ ಮರೆತು ನಿನ್ನ ಅರಿಯಲಾರದೆ……. ಮೂಕವಾಯಿತು ಕನಸೊಂದು ನನಸಾಗದ ಮನಸ್ಸಿರದೆ ತನ್ನ ಊಹೆ ಮರೆತು ನಿನ್ನ ಮರೆಯಲಾರದೆ…. ಮೂಕವಾಯಿತು ಕವಿತೆ ಬರೆಯುವ ಕವಿಯೊರ್ವನಿರದೆ ತನ್ನ ಯಾನವ ಮರೆತು ನಿನ್ನ ಮನವರಿಯದೆ….. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಈ ಚಳಿಗೆ ದಯೆಯಿಲ್ಲ. ದಾಕ್ಷಾಯಿಣಿ ವಿ ಹುಡೇದ ಈ ಚಳಿಗೆ ದಯೆಯಿಲ್ಲ… ಈ ಚಳಿಗೆ ದಯೆಯಿಲ್ಲ ;ಬೀಸಿ ತಂಗಾಳಿಮಂಜನು ಉದುರಿಸಿಪಕ್ಕೆಲುಬುಗಳಲಿ ನಡುಕ ಹುಟ್ಟಿಸಿಹೊಕ್ಕಳ ನಡು ಮಧ್ಯದಿಂದ ನಿನ್ನ ನೆನಪಿಗೆ ಆಹ್ವಾನ ನೀಡಿದೆ. ಈ ಚಳಿಗೆ ದಯೆಯಿಲ್ಲ ;ನಿನ್ನ ಬಿಸಿಯಪ್ಪುಗೆಯಬಿಸುಪಿಗೆ ಸವಾಲೊಡ್ಡಿಸೆಣಸಾಡಿ ಸೋತದ್ದಕ್ಕೀಗಸೇಡು ತೀರಿಸಿಕೊಳ್ಳುತ್ತಿದೆ,ಒಂಟಿ ಹೆಣ್ಣ ಕಣ್ಣ ಕಾಡಿದೆಅಪ್ಪಿ ನನ್ನನೇ ಬೇಡಿದೆ. ಈ ಚಳಿಗೆ ದಯೆಯಿಲ್ಲ ;ನೀನಿಲ್ಲದ ಈ ಘಳಿಗೆಗಳಲ್ಲಿಇದನ್ನೆಲ್ಲ ಎದುರಿಸುವವಿಫಲ ಯತ್ನ ನಡೆದೇ ಇದೆ ;ವ್ಹಿಸ್ಕಿ, ರಮ್ಮು, ಟಕೀಲಾಗಳ ಜೊತೆ ನಿನ್ನ ಬೆರೆಸಿ ಕುಡಿದು ಸೋತಿದ್ದೇನೆ. ಈ ಚಳಿಗೆ ದಯೆಯಿಲ್ಲ ;ಮೈ ಮೇಲೆ ದಾಳಿ ಮಾಡಿಸೊಕ್ಕಿದೆದೆಗಳ ಮೇಲೆ ಪತಾಕೆ ಹಾರಿಸಿದೆ ;ನಿನ್ನ ನೆನಪ ಮೆರವಣಿಗೆಯ ದೊಂದಿ ಹಿಡಿದಿದೆ. ಈ ಚಳಿಗೆ ದಯೆಯಿಲ್ಲ ;ವಿರಹದುರಿಗೆ ಸಿಲುಕಿದವಳ ಅಣಕಿಸಿದೆ,ಏನು ಕುಡಿದರೇನು? ಕುಡಿಯಬೇಕಿದ್ದವನನ್ನು ಕುಡಿದಿದ್ದರೆಹೀಗೆ ನಡುಗಬೇಕಿರಲಿಲ್ಲ ಎಂದು ಚಾಡಿ ಹೇಳಿದೆ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇನ್ನೂ ಬರಲಿಲ್ಲ ಕೃಷ್ಣಮೂರ್ತಿ ಕುಲಕರ್ಣಿ ಇನ್ನು ಬರಲಿಲ್ಲ…. ಬರ್ತಿನಂತ ಹೇಳಿದ ಗೌಡ ಇನ್ನೂ ಬರಲಿಲ್ಲ.! ಬಸ್ಸಿನ ಗದ್ದಲ, ಟ್ರಾಫಿಕ್ ಕಿರಿಕಿರಿ ಎನೊಂದು ತಿಳಿಲಿಲ್ಲ !! ಮಿಶ್ರಾ ಫೇಡ, ಬಿಗ್ ಬ್ರೇಡ್ ತರ್ತಿನಿ ಅಂದಾವ! ರಾತ್ರಿ ಊಟಕ ಪಂಜೂರ್ಲಿಗೆ ಹೋಗೋಣಾಂತ ಮೇಜೇಜ್ ಹಾಕಿದವ! ಬಟರ್ ನಾನ್ ಕಾಜೂ ಸ್ಪೇಶಲ್ ತಿನ್ನೋಣ ಅಂದಾವ! ಮಸಾಲಿ ಪಾಪಡ್ ಗೋಬಿ, ಗಡಬಡ ಐಗೆ ಕಾದೈತೆ ಜೀವ! ಕುಡ್ತಾ ಜುಬ್ಬಾ ಕೊಡಸ್ತಿನಂತ ಹೇಳಿ ಹೋದಾವ!! ಶೋಚ್ ನ್ಯಾಗ ತರಬೇಕಂತ ಬಯಸೇದ ಜೀವ!! ಬರ್ತಾನಂತ ಕಾದು ಕಾದು ಸುಸ್ತಾತ ಜೀವ! ಎಲ್ಲಿದ್ದಾನಂತ ತಿಳಿಬೇಕಂದ್ರ ನೆಟ್ ವರ್ಕ ಇಲ್ಲವ್ವ!! ಇವತ್ತು ಬಾರದಿದ್ರೂ ನಾಳೆ ಬರ್ಲಿ ಸುಖವಾಗಿರಲಿ ಜೀವ! ತಿನಿಸು ಬಟ್ಟೆ ಮುಖ್ಯವಲ್ಲ ಉಳಿಲೆವ್ವ ನನ್ನ ಗೌಡನ ಜೀವ!! **********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಾನಾಡಿಗಳೇ ಕೇಳಿ ಸಂಜಯ್ ಮಹಾಜನ ಬಾನಾಡಿಗಳೇ ಕೇಳಿ ಈ ವಿಶಾಲ ನೀಲಿ ಆಗಸ ನಿಮ್ಮದು ಈ ತಂಗಾಳಿಯ ಸ್ಪರ್ಶ ನಿಮ್ಮದು ಈ ಶಾಂತ ಸಮುದ್ರ ನಿಮ್ಮದು ಈ ಹಸಿರು ಹೊದಿಕೆ ನಿಮ್ಮದು ಈ ಹೂವ ಕಂಪು ನಿಮ್ಮದು ಈ ಹಣ್ಣ ಸಿಹಿ ನಿಮ್ಮದು ಈ ಸಿರಿಧಾನ್ಯ ನಿಮ್ಮದು ಈ ಪ್ರಕೃತಿಯ ಸರ್ವ ಸ್ವಭಗು ನಿಮ್ಮದು ಆದೆರೆ..? ಇದನ್ನೆಲ್ಲ ನಿಮ್ಮಿಂದ ಕಸಿದುಕೊಳ್ಳುವ ಸ್ವಾರ್ತ, ಕ್ರೋಧ, ಕಷ್ಠಾಗ್ನಿಯ ಮನಸ್ಸುಳ್ಳ ಮಾನವ ನಿನ್ನವನಲ್ಲಾ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತೆನೆ ರಾಮಾಂಜಿನಯ್ಯ ವಿ. ತೆನೆ ಅಪ್ಪ ಸಣ್ಣರೈತ. ಗಿಳಿ,ಅಳಿಲು,ಕಾಗೆಗಳ ಹಾವಳಿ ಸದಾ ಇದ್ದೇ ಇರುತ್ತಿತ್ತು; ಇದ್ದ ಒಂದೂವರೆ ಎಕರೆಯಲ್ಲಿ ಬೆಳೆಯುತ್ತಿದ್ದ ಜೋಳಕ್ಕೆ! ‘ಬೇಳೆಕಾಳುಗಳ ರಾಣಿ’ ಇವಳು! ಉದ್ದ ಜಡೆಯ ನಾರಿ, ಹಾಲುಕ್ಕಿಸುವ ಶೋಡಷಿ, ‘ಟಸೆಲ್ ಕೂದಲುಳ್ಳ ಗಂಡು’ ಇವಳು! ಅರೆ, ಇವಳೇನು ಜೀನ್ಸ್ ಗಳ ವ್ಯತ್ಯಾಸದಂತ ಮಂಗಳಮುಖಿಯಲ್ಲ. ಗಿಳಿ ಪ್ರಿಯೆ! ನಮ್ಮೂರಿನ ಮಲ್ಲಮ್ಮಾ, ಮುನೆಮ್ಮಾ ಹುಲ್ಲಿಗಂತ ಬಂದು ತೆನೆ ಮುರಿದು ರವಿಕೆಯೊಳಗೆ ಅಡಗಿಸಿದಾಗ, ಎದೆ ಮುಂದೆ ಉಬ್ಬುತ್ತಿತ್ತು ಆಗ ಅಲ್ಲಿ ‘ಟಸೆಲ್’ ಉದುರುತ್ತಿತ್ತು! ಕೆಲವೊಮ್ಮೆ ತೆನೆ ಬೆತ್ತಲಾಗಿ ಅದರ ಬಟ್ಟೆ ಹುಲ್ಲಾಗುತ್ತಿತ್ತು. ಚಾಟರಿ ಬಿಲ್ಲಿನ ಕಲ್ಲು ಗಿಳಿಯ ಓಡಿಸುವಾಗ ಓಯ್ಃ ಶಬ್ದ ಮೊಳಗಿ ಹಕ್ಕಿಗಳು ಹಾರುತ್ತಿದ್ದವು ಉಳಿದ ತೆನೆಗಳು ನಗುತ್ತಿದ್ದವು. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ದಾಕ್ಷಾಯಣಿ ವೀ ಹುಡೇದ. ಗಜಲ್ ಕರಗಿ ನೀರಾದ ನೆನಪುಗಳಲಿ ಚಂದ್ರನ ಹುಡುಕುವುದನು ನಿಲ್ಲಿಸು ಸಖಿನಿರ್ಜೀವ ದಿಂಬಿನೊಡನೆ ಮಾತಾಡಿ ನೋವ ಕಳೆಯುವುದನು ನಿಲ್ಲಿಸು ಸಖಿ ಜಗಕೆ ತಿಳಿದೀತೆಂದು ಕದವಿಕ್ಕಿ ಸದ್ದಿಲ್ಲದೇ ಅತ್ತ ಘಳಿಗೆಗಳ ಲೆಕ್ಕವಿಟ್ಟಿಲ್ಲ ಯಾರೂಕುದಿವ ಮನಸಿಗೆ ಕದ್ದು ಅಳುವ ರೂಢಿಯನು ನಿಲ್ಲಿಸು ಸಖಿ ಅತ್ತು ಹಗುರಾಗು,ಬಚ್ಚಿಟ್ಟ ಸತ್ಯಗಳು ಬೆತ್ತಲಾಗಲಿಅವನ ವಂಚನೆಗಳಿಗೆ ಪರದೆ ಹಾಕುವುದನು ನಿಲ್ಲಿಸು ಸಖಿ ಸಖನ ಲೋಕದಲಿ ಜಾಗ ಹುಡುಕುವ ಪ್ರಯತ್ನ ಮೂರ್ಖತನದ್ದುರಮಿಸಲಿ ಎಂದು ಬೆನ್ನು ಬಿದ್ದು ಕಾಡುವುದನು ನಿಲ್ಲಿಸು ಸಖಿ. ಸಖನ ಕಣ್ಣುಗಳಲ್ಲಿ ಹದ್ದೊಂದು ಹಾರುವುದ ಕಂಡೆಯಾಅವನಿಲ್ಲದಾಗ ದಿಕ್ಕೆಟ್ಟು ಮನಸಿಗೆ ಪಾತಕ ಅಂಟಿಸಿಕೊಳ್ಳುವುದನು ನಿಲ್ಲಿಸು ಸಖಿ ಹೆರಲಾಗದ ಹೊರಲಾಗದ ಪುರುಷನ ಹೆಗಲ ಮೇಲೆ ಜವಾಬ್ದಾರಿಅವಸರದ ಸಡಗರಕೆ ಸಬೂಬಿನ ಮಾತಿಗೆ ಮರುಳಾಗುವುದನು ನಿಲ್ಲಿಸು ಸಖಿ ಮಧುವಂತಿ ದಾಚಿಯ ಸಂಘರ್ಷದ ಪಯಣಕೆ ಜೊತೆಯಾಗು ನೀನು ಸಖಿಇನ್ನಾದರೂ ಈ ಸಂಚಿಗೆ ಬಲಿಯಾಗುವುದನು ನಿಲ್ಲಿಸು ಸಖಿ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸುಡುಗಾಡು ರಾಜು ದರಗಾದವರ ಸುಡುಗಾಡು ನೀನೆಷ್ಟು ಸಹೃದಯಿ, ಭೇದಭಾವವಿಲ್ಲದ ನಿನ್ನಲ್ಲಿ ಅದೆಂತಹ ತಿಳಿಮೌನ. ಮೇಲುಕೀಳು ಕಾಣದ ನಿನ್ನಲ್ಲಿ ಹೋಲಿಕೆಗೆ ಸಿಗದ ಐಕ್ಯತೆ. ದೊಡ್ಡವ ಚಿಕ್ಕವ ಅನ್ನೋ ತಾರತಮ್ಯವಿಲ್ಲದ, ಎಲ್ಲರನ್ನು ಸಮಾನಭಾವದಿಂದ ಸ್ವಾಗತಿಸುವ ನಿನ್ನದು ಅದೆಂತಹ ಧರ್ಮ…! ವೀರರನ್ನು ,ಹೇಡಿಗಳನ್ನು ಪುಣ್ಯವಂತರನ್ನು,ಪಾಪಿಗಳನ್ನು ಬೇರ್ಪಡಿಸುವ ಬುದ್ಧಿಯೆಂತು ಇಲ್ಲ. ಹೆಣ್ಣು,ಗಂಡು ಒಂದೇ ಎಂದು ಸಮಾನಕಾಣೋ ಹೃದಯವಂತಿಕೆ ನಿನ್ನಲ್ಲಿ ಬಿಟ್ಟು ಮತ್ತ್ಯಾರಲ್ಲಿ ಬರಲು ಸಾಧ್ಯ ಹೇಳು…? ಓ ಸ್ಮಶಾನವೇ…ನಿನಗೆ ನೀನೇ ಆದರ್ಶ…! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೊನೆಯೂ ಅಲ್ಲ! ರೇಖಾ ವಿ.ಕಂಪ್ಲಿ ನಾವು ಇಲ್ಲಿ ಮೊದಲು ಅಲ್ಲ ಕೊನೆಯು ಅಲ್ಲ ಮೊದಲಾದೊಡೆ ಮೊದಲಿಗರು ಕೊನೆಯಾದಡೆ ಕೊನೆಗಿರುವ ಎಮ್ಮ ಜೀವದಾಟದಲ್ಲಿ ನಾವೇ ಮೊದಲಿಗರು, ಕೊನೆಯವರು ಎಮ್ಮ ದುಃಖ ಎಮಗೆ ಹಿರಿದು ತಮಗೆ ಕಿರಿದು ಕಾಲನುರುಳಲಿ ಕವಿಯು ಬರೆಯಲಿ ಮೊದಲು ಕೊನೆಯ ನಡುವಿನಲಿ ಜೀವದೂಟದ ಎಲೆಯಲಿ ಕಾವ್ಯ ಕಥನವು ಉಳಿಯಲಿ ಕವಿ ಕಾಣದೇ ಅಳಿಯಲಿ ನಾವು ಇಲ್ಲಿ ಮೊದಲು ಅಲ್ಲ ಕೊನೆಯು ಅಲ್ಲ… ***********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಲಕ್ಷ್ಮಿಕಾಂತ ಮಿರಜಕರ ಮನೆಗಳು ,ಗದ್ದೆಗಳು ಮಳೆಗೆ ಕೊಚ್ಚಿ ಹೋದವು,ಮುಳುಗಿಲ್ಲ ಬದುಕು ಊರಿಗೆ ಊರುಗಳೇ ನೆರೆಗೆ ನಲುಗಿ ಹೋದವು ಮುಳುಗಿಲ್ಲ ಬದುಕು ಕನಸು ಮುರಿದಿದೆ ಮನಸು ಮುರಿದಿಲ್ಲ ರಟ್ಟೆ ಗಟ್ಟಿಯಿದೆ ಇನ್ನೂ ಕೆಸರು ತುಂಬಿದ ಭೂಮಿಯಲ್ಲೇ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು ಕಣ್ಣಾಲಿ ತುಂಬೆಲ್ಲ ದುಡಿದು ಕೂಡಿಸಿ ಕಾಪಿಟ್ಟ ಬದುಕಾಧಾರಗಳ ಅವಶೇಷಗಳು ಭರವಸೆಯ ಬಣ್ಣ ತುಂಬಿ ವಿಶೇಷ ಮಾಡುವೆವು ಮುಳುಗಿಲ್ಲ ಬದುಕು ಕೈ ಹಿಡಿದಿಲ್ಲ ಪ್ರಭುತ್ವ,ಗಾಳಿಯಲ್ಲೇ ತೇಲಾಡುತ್ತಿವೆ ಸುಳ್ಳು ಆಶ್ವಾಸನೆಗಳು ಬಂದೇ ಬರ್ತಾರೆ ಒಂದಿನ ಬುದ್ಧಿ ಕಲಿಸುವೆವು ಮರೆಯದೆ, ಮುಳುಗಿಲ್ಲ ಬದುಕು ಇರಲು ಸೂರಿಲ್ಲ,ತಿನ್ನಲು ಕಾಳಿಲ್ಲ ಕೂಳಿಲ್ಲ ಆದರೂ ಚಿಂತೆಯಿಲ್ಲ ನಮ್ಮ ಪಾಲಿನ ಬೆಳಕನ್ನು ನಾವೇ ಸಂಪಾದಿಸುವೆವು ಮುಳುಗಿಲ್ಲ ಬದುಕು. ಬೇಡದೆ ಇದ್ದರೂ ತಾವಾಗಿಯೇ ಕಷ್ಟಕ್ಕೆ ಮಿಡಿದಿವೆ ಕೆಲ ಭೂ ನಕ್ಷತ್ರಗಳು ಕಳೆಗುಂದಿದ್ದ ಜೀವಕ್ಕೆ ಚೈತನ್ಯ ತುಂಬಿ ಬಂದಿದೆ “ಕಾಂತ”,ಮುಳುಗಿಲ್ಲ ಬದುಕು. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇವನಾರವ ಇವನಾರವ ರಾಜು ದರಗಾದವರ ಅಂದು ಇವ ನಮ್ಮವ, ಇವ ನಮ್ಮವ ಅಂದವನು; ಇಂದು ಇವನಾರವ,ಇವನಾರವ ಎನ್ನುತಿರುವನಲ್ಲ….! ಅಂದೇ ಕೇಳಿದ್ದರೆ ? ನಮ್ಮ ಅಜ್ಜನೋ ಅವರ ಅಜ್ಜನೋ ಗುನುಗುತ್ತಿದ್ದ. ರಕ್ತ ಚೆಲ್ಲಿದ ಭೂಮಿ ಹೇಳುತ್ತಿತ್ತು. ಕೇಳುವುದಾದರೆ ಜಂಗು ಹಿಡಿದ ಬಂದೂಕು ಕೇಳು, ಎದೆ ಸೀಳಿ ಕುಡಿದ ರಕ್ತದಾವುದು…!? ಹರಿದು ಮೂಲೆ ಸೇರಿದ ಬೂಟನ್ನ ಕೇಳು ವದಿಕೆ ತಿಂದ ಕಾಯದಾವುದು..!? ಅವರಿವರೆನ್ನದೆ ಒಡಲಬಳ್ಳಿ ಹಬ್ಬಿದ ಮೂಲ ಸಿಗುವುದಾದರೂ ಯಾರಿಗೆ..? **************

ಕಾವ್ಯಯಾನ Read Post »

You cannot copy content of this page

Scroll to Top