ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವ್ಯಾಲಂಟೈನ್ಸ್ ಡೇ ವಿಶೇಷ

ವ್ಯಾಲಂಟೈನ್ಸ್ ಡೇ ಗಝಲ್ ಎ.ಹೇಮಗಂಗಾ ಗಝಲ್ ಬೆಳದಿಂಗಳ ರಾತ್ರಿಯೊಂದನು ನಿನ್ನ ಜೊತೆಯಲಿ ಕಳೆಯಬೇಕಿದೆ ತಿಂಗಳ ತಿಳಿಬೆಳಕ ತಂಪಲಿ ಹರವಾದ ನಿನ್ನೆದೆಗೆ ಒರಗಬೇಕಿದೆ ಕಣ್ಣ ಸನ್ನೆಯಲೇ ಪ್ರೀತಿ ನಿವೇದಿಸಿ ಒಲಿಸಿ ಒಲಿದು ನಲಿವ ತಂದೆ ಸಂವೇದಿಸುವ ನಿನ್ನೆದುರು ಹೂತ ಭಾವಗಳ ತೆರೆದು ಇಡಬೇಕಿದೆ ಒಡ್ಡನ್ನೊಂದನು ಕಟ್ಟಿದ್ದೇನೆ ಅಂತರಾಳದ ನೂರು ನೋವ ತೊರೆಗೆ ಜಗದ ಜಂಜಡವನ್ನೆಲ್ಲಾ ನಿನ್ನ ತೋಳ್ಸೆರೆಯಲಿ ಮರೆಯಬೇಕಿದೆ ಬಲವೆಲ್ಲಿದೆ ತನುವಲಿ ವಿರಹಾಗ್ನಿ ಅಣುಅಣುವನೂ ಸುಡುತಿರಲು ? ಅಧರ ಮಧುಪಾನದಿ ಪ್ರಾಣಕೆ ತ್ರಾಣವನು ತುಂಬಿಕೊಳ್ಳಬೇಕಿದೆ ಬದುಕ ಹಾದಿಯಲಿ ನಿನ್ನೊಲವ ಹಸಿರೊಂದಿರೆ ನಿತ್ಯೋತ್ಸವವೆನಗೆ ಕಲ್ಲು ಮುಳ್ಳುಗಳ ಬದಿಗೊತ್ತಿ ಕೈಗೆ ಕೈ ಬೆಸೆದು ನಡೆಯಬೇಕಿದೆ ಮರಣ ಬರುವುದೇ ಆದರೆ ಬರಲಿಬಿಡು ನಿನ್ನ ಅಕ್ಕರೆ ಉಡಿಯಲಿ ‘ಕಾಲ ನನಗಾಗಿ ನಿಂತಲ್ಲೇ ನಿಲ್ಲಲೆಂ’ದು ದೈವದಿ ಪ್ರಾರ್ಥಿಸಬೇಕಿದೆ ತಿಳಿಯದು ‘ ಹೇಮ’ಳಿಗೆ ವಿಧಿಲಿಖಿತ ಏನೆಂದು ಭವಿತವ್ಯದಲಿ ಪ್ರೇಮ ಸಂಯೋಗದಿ ನಿನ್ನಲ್ಲೇ ಶಾಶ್ವತವಾಗಿ ಲೀನವಾಗಬೇಕಿದೆ *********

ವ್ಯಾಲಂಟೈನ್ಸ್ ಡೇ ವಿಶೇಷ Read Post »

ಕಾವ್ಯಯಾನ

ಕಾವ್ಯಯಾನ

ಶಾಪ ಡಾ.ಗೋವಿಂದ ಹೆಗಡೆ ಶಾಪ ಸಣ್ಣ ಪುಟ್ಟವು ಸಾಲುವುದಿಲ್ಲ ಅಂತ ದೊಡ್ಡ ಹಂಡೆ, ಬಾನಿ, ಕೊಪ್ಪರಿಗೆ ಗಳನ್ನೇ ಆಳಕ್ಕಿಳಿಸಿದೆ ಕವಿತೆಗಳ ತುಂಬಿ- ಕೊಂಡು ಬರಲೆಂದು ಒಡಲ ತುಂಬ ಖಾಲಿ ಖಾಲಿ ಹೊರಳಿ ಬಂದಿವೆ ಬಾವಿಲಿ ಜಲ ಬತ್ತಿ ಹೋಯ್ತೆ ಈಗ ನಡೆದಿದೆ ಕವಿತೆಯ ಸುಳಿವೇ ಇರದ ಪೊಳ್ಳು ಪದಗಳ ಸಂತೆ ( ಇದೂ ಅವುಗಳಲ್ಲಿ ಒಂದಂತೆ?!) ** ಭಾರೀ ಜರಿ ಪೋಷಾಕು ಆಳೆತ್ತರದ ಹೂ ಹಾರ ಮಸ್ತು ಗುಲಾಲು ಬಾಜಾ ಬಜಂತ್ರಿ ಗಳಲ್ಲಿ ನಡೆದಿದೆ ಶವದ ಮೆರವಣಿಗೆ ಮೆರೆಸೋದು ಅಂದರೆ ಹಾಗೇ! ಪಾಪ,ಕವಿತೆ ಉಡಲು ಸ್ವರಗಳ ಪತ್ತೆಯೇ ಇರದೆ ( ಉಣಲು ವ್ಯಂಜನ ಸಿಗದೆ- ಹಸಿದೇ) ಬತ್ತಲಾಗಿಯೇ ಉಳಿದು ಮರೆಯಾಗಿದೆ ಮೆರವಣಿಗೆಯತ್ತ ಇಣುಕಲೂ ಹೋಗದೇ… **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಯಾಕಿಷ್ಟು ಬೇಸರ? ದೀಪಿಕಾ ಬಾಬು ಯಾಕಿಷ್ಟು ಬೇಸರ ಈ ಮನಸಿಗೆ ನೀ ಬಾರದೆ ಹೋದರೆ ನನ್ನ ಕನಸಿಗೆ..! ಉಳಿಗಾಲ ವಿಲ್ಲ ಈಗ ಆ ನಿದೆರೆಗೆ ನೀ ಬೇಗ ಬರುವೆಯಾ ನನ್ನ ಮನಸಿಗೆ…!! ದೂರದ ‌ಪರಿಚಯ ನಮ್ಮದು ಆದೇವೂ ಆತ್ಮೀಯರಿಂದು, ಕಾರಣವೇ ಬೇಕೆಯೆಂದು ಬಯಸದು ಮನಸಿದು ಇಂದು..!! ನಮ್ಮಯ ಸಲ್ಲಾಪದ ಪ್ರೀತಿಗೆ ಸಿಕ್ಕಿದೆ ಮನೆಯಲ್ಲಿ ಒಪ್ಪಿಗೆ ಮದುವೆ ದಿಬ್ಬಣದ ಹೊತ್ತಿಗೆ ಆಗುವೆವು ಆದರ್ಶದ ಜೋಡಿಗೆ..!! ಮೋಡಿ ಯದು ಮಾಡಿದೆ ನೋಡು ನಿ‌ನ್ನೆದೆಯ ಉಸಿರಿನ ಹಾಡು..! ಹಿಡಿದಿರುವ ಪ್ರೀತಿಯ ಜಾಡು ಆಗಿಹುದು ನನ್ನಯ ಪಾಡು..! ಬದುಕಿನ ಜೀವಾಳ ನೀನು ಮೀಸಲಿಡುವೆ ಪ್ರತಿ ಜನುಮವ ನಾನು ಕಾದಿರಿಸು ನನ್ನಗಾಗಿ ಇನ್ನು ಪ್ರತಿ ಜೀವನ… ನಮ್ಮ ಪ್ರೀತಿ ಸವಿ ಜೇನು..!! *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾಲಿನ ಜಾಡು ಹಿಡಿದು ಡಾ.ಗೋವಿಂದ ಹೆಗಡೆ “ಕತ್ತಲಿನ ಮುಖ ಮೀಸೆ…” ಮತ್ತು “ರೆಪ್ಪೆಗಳ ತಂತಿಯ ಮೇಲೆ…” ಸುಮಾರು ೧೯೮೭- ೮೮ ಇರಬೇಕು. ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದೆ .ತಿಂಗಳ ತುಷಾರ ಮಾಸ ಪತ್ರಿಕೆಯ ಚಿತ್ರ ಕವನ ಸ್ಪರ್ಧೆಯ ಬಹುಮಾನಿತ ಕವನ ಮನಸೆಳೆಯಿತು. ಮೊದಲಿಗೆ ಚಿತ್ರದ ಬಗ್ಗೆ ಹೇಳಬೇಕು. ಕತ್ತಲಿನಲ್ಲಿ ದೀಪದ ಕಂಬ, ಉರಿಯುತ್ತಿರುವ ದೀಪದ ಕುಡಿ, ಸೊಡರು. ಅದನ್ನು ತಿದ್ದಲು ಮುಂದೆ ಬಂದಿರುವ ಹೆಣ್ಣಿನ, ತುಂಬು ಬಳೆಗಳಿರುವ ಅಂದದ ಕೈ.ಚಿತ್ರ ‘ಯಜ್ಞ’ ಮಂಗಳೂರು ಅವರದು ಇರಬೇಕು, ಖಾತ್ರಿಯಾಗಿ ನೆನಪಿಲ್ಲ. ಬಹುಮಾನಿತ ಕವಿತೆ ಆಗಲೇ ಕಥೆಗಾರ್ತಿಯಾಗಿ ಹೆಸರು ಮಾಡಿದ್ದ ಶ್ರೀಮತಿ ಭಾಗೀರಥಿ ಹೆಗಡೆಯವರದು. ಕವಿತೆಯ ಒಂದು ಸಾಲು, ಹೀಗೆ- ‘ಕತ್ತಲಿನ ಮುಖ ಮೀಸೆ ತಿದ್ದಿ ನೋಡುವ ತವಕ..’ ಓದಿ ರೋಮಾಂಚನಗೊಂಡಿದ್ದೆ. ಆ ಸನ್ನಿವೇಶವನ್ನು ಎಷ್ಟೊಂದು ವಿನೂತನವಾಗಿ ವಿಶೇಷವಾಗಿ ಹೇಳುತ್ತದೆ ಈ ಸಾಲು! ೧೯೯೩ರಲ್ಲಿ ಶಿರಸಿಯಲ್ಲಿ ಭಾಗೀರಥಿ ಹೆಗಡೆಯವರ ಮೊದಲ ಭೇಟಿ, ಅವರ ಮನೆಯಲ್ಲಿ. ಮಾತಿನ ನಡುವೆ ಈ ಚಿತ್ರ ಕವನ ಸ್ಪರ್ಧೆಯಲ್ಲಿ ಬಹುಮಾನಿತವಾದ ಅವರ ಕವನವನ್ನು ನೆನಪಿಸಿ ಈ ಸಾಲನ್ನು ಉದ್ಧರಿಸಿ ‘ತುಂಬಾ ತುಂಬಾ ಇಷ್ಟವಾಯಿತು’ ಎಂದೆ. ಭಾಗೀರಥಿಯವರ ಸಂತಸ, ಅದರಿಂದಾಗಿ ಹನಿದ ಕಣ್ಣೀರು ಇಂದಿಗೂ ಕಣ್ಣಿಗೆ ಕಟ್ಟಿದೆ. ಅವರು ‘ಹೀಗೆ ನಾಲ್ಕಾರು ವರ್ಷಗಳ ನಂತರವೂ ಅಪರಿಚಿತ ಓದುಗನ ಮನದಲ್ಲಿ ಒಂದು ಸಾಲು ಉಳಿದಿದೆ ಎಂದರೆ ಬರೆದದ್ದು ಸಾರ್ಥಕವಾಯಿತು’ ಎಂದರು. ಅದರ ಶ್ರೇಯ ಅವರಿಗೆ, ಅವರ ಕವಿತೆಗೆ ಸಲ್ಲಬೇಕು. ನನಗಲ್ಲ. ಈಗೇಕೆ ಇದನ್ನು ನೆನಪಿಸಿಕೊಂಡೆ ಎಂದರೆ ಮೊನ್ನೆ ಇನ್ನೊಂದು ವಿಶಿಷ್ಟ ಚಿತ್ರ( ಸಾಲು) ಮನಸ್ಸನ್ನು ಸೆಳೆಯಿತು. ಶ್ರೀಮತಿ ಶೀಲಾ ಭಂಡಾರ್ಕರ್ ನನ್ನೊಂದಿಗೆ ಒಂದು ವಾಟ್ಸಾಪ್ ಗುಂಪಿನಲ್ಲಿ ಇದ್ದಾರೆ. ಅವರ ಇತ್ತೀಚಿನ ಒಂದು ಕವನದಲ್ಲಿ ಸಂಜೆಯನ್ನು ಅವರು ವರ್ಣಿಸುವುದು ಹೀಗೆ- ‘ರೆಪ್ಪೆಗಳ ತಂತಿಯ ಮೇಲೆ ಒಣಹಾಕಿದ್ದ ಸಾಯಂಕಾಲ…’ ಈ ಸಾಲಿನ ವಿವರಣೆಗೆ ನಾನು ಹೋಗುವುದಿಲ್ಲ. ಮೌನದೊಳೊಲಿವುದೇ ಸಮ್ಮಾನ ! ಬೇಂದ್ರೆ ಕವನವನ್ನು ‘ಭುವನದ ಭಾಗ್ಯ’ ಎಂದರು ಹಿರಿಯ ವಿಮರ್ಶಕ ಡಾ. ಜಿಎಸ್ ಅಮೂರ ಅವರು. ನಾವು-ನೀವು ಬೇಂದ್ರೆ ಅಲ್ಲದಿರಬಹುದು. ಆದರೆ ವಿಶಿಷ್ಟ ಹೊಳಹುಗಳನ್ನು ಪಡಿಮೂಡಿಸುವ ಪ್ರತಿಯೊಂದು ಸಾಲು ಬರೆದವರ ಭಾಗ್ಯ, ಓದಿದವರ ಭಾಗ್ಯವೂ ಹೌದು! ಇಂದು ಬರೆಯುತ್ತಿರುವ ಹಿರಿಯ-ಕಿರಿಯ ಬರಹಗಾರರು ಇಂಥ ಸವಿಗಾಳುಗಳನ್ನು ಕನ್ನಡದ ಕಣಜಕ್ಕೆ ಸದಾ ತುಂಬುತ್ತಿರಲಿ. ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೇಕಿತ್ತ..? ಮದುಸೂದನ ಮದ್ದೂರು ಬೇಕಿತ್ತ..? ತಂಗಾಳಿಗೆ ಮೈಯೊಡ್ಡಿದೆ ಬಿರು ಬಿಸಿಲಲಿ ಬಸವಳಿದೆ ತೆರೆದ ಮನದ ಕಿಟಕಿಗಳ ಮುಚ್ಚಿದೆ ಹಳೆಯ ನೆನಪುಗಳ ಕಸ ಗುಡಿಸಿದೆ ಉಸ್ಸೆನ್ನುತಾ ಹಾಸಿಗೆಗೆ ಅಡ್ಡಾದೆ ಕಂಬಳಿ ಕವುಚಿ ಕಣ್ಮುಚ್ಚಿದೆ ನಿದ್ದೆ ಬರುತ್ತಿಲ್ಲ….. ಹೃದಯದೀ ನಿನ್ನ ಪಿಸುದನಿ ಮಾರ್ದನಿ ನೆನಪುಗಳ ಮೆರವಣಿಗೆ ನಿನ್ನ ಮರೆವಣಿಕೆಗೆ ಇಷ್ಟೇಲ್ಲಾ ಬೇಕಿತ್ತ…. ಗೊತ್ತಾಗುತ್ತಿಲ್ಲ… ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೀವಾತ್ಮಕ್ಕೆಲ್ಲ ದೀಪಿಕಾ ಬಾಬು ಮನದುಂಬಿ ಬರೆದಿಹೆನು ಇದನು ನಾನೂ ನೀವು ಓದಿದರೆ ಸಾರ್ಥಕವು, ನನಗೆ ಇನ್ನೂ….!! ನನ್ನ ಬರಹಗಳೆನು ಶ್ರೇಷ್ಠ ಕಾವ್ಯಗಳಲ್ಲಾ, ನೀವೆಳುವ ಮುನ್ನ ತಿಳಿದಿಹೆನು ನಾನೆಲ್ಲಾ….!!. ಬರೆದ ಸಾಲಿನ ನಡುವೆ ಮೂಡಿದ ಭಾವಗಳೆಲ್ಲಾ ನಿಮ್ಮನು ಒಮ್ಮೆ ಹೀಗೆ ತಲ್ಲಣ ಗೊಳಿಸುವವೆಲ್ಲಾ..!! ಅಕ್ಷರ ಪಾತ್ರದ ಒಳಗೆ ನೂರಾರು ದುಗುಡವನೆಲ್ಲಾ ಗೀಚಿಬರದೆ ನಾನು ನಿಕ್ಷಲ್ಮಶ ಹೃದಯದ ಹೊನಲಾ..!! ಏನಿದೇ ನಿನ್ನಯ ಒಳಗೆ ಅರ್ಥವಿರದ ಪದಗಳೆಲ್ಲಾ, ಸಹನೆ ಎಂಬುದೇ ಬೇಕು ತಿಳಿಯುವ ಉದ್ದೇಶವಲ್ಲಾ..!! ನೂರಾರು ಸಾವಿರಾರು ಕಲ್ಪನೆಯ ಕುಸುಮಗಳಿಗೆಲ್ಲಾ ಬರಹದ ರೂಪದಲ್ಲಿ ಇನ್ನೂ ಜೀವನದ ಕಳೆ ಹೊಂದಿರುವವೆಲ್ಲಾ.!! ನಿನ್ನಯ ಬಗೆಗೆ ಹೇಳಲು ಏನಿದೇ ನೀನೇ ನನ್ನ ಜೀವನದ ಮೂಲಾ ಕೊನೆಯವರೆಗೂ ನೀನೇ ನನ್ನಯ ಉಸಿರಿನ ಹಸಿರಾಗುವೆಯಲ್ಲಾ…!! ಓದುವ ಮಿತ್ರರು ಮರು ಜೀವನ ‌ಕೊಟ್ಟರು ನನ್ನೆದೆಯ ಒಳಗೆ ಇರುವ ಪದಪುಂಜವನ್ನು ಒಪ್ಪಿ ಎಲ್ಲಾ‌..!! ಬೇಡೆನು ಬೇರೆನನೂ ಸಾಕು ನನಗಿನ್ನೆಲ್ಲಾ, ಸಾಹಿತ್ಯವೇ ನನಗೆ. ಸ್ಪೂರ್ತಿಯ ಜೀವಾತ್ಮಕ್ಕೆಲ್ಲಾ… **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತೋಳ ಉಯ್ಯಾಲೆ ಶಾಂತಾ ಜೆ ಅಳದಂಗಡಿ ತೋಳ ಉಯ್ಯಾಲೆ ಅಂದದ ಸುಂದರ ಬಂಧುರ ಭಾವದ ಕವಿತೆಯ ಬರೆದನು ನನ್ನೀ ಬಾಳಿನ ಪುಟದಲ್ಲಿ ಕಾವ್ಯದ ನವ್ಯತೆ ಬಲು ನಾವೀನ್ಯತೆ ಬೆಳಗಿತು ನನ್ನಯ ಹೃದಯದ ಹಣತೆ ಚೆಲ್ಲುವೆ ನನ್ನವ ನಡೆಯುವ ಹಾದಿಗೆ ಘಮ ಘಮ ಅನ್ನುವ ಮನಸ್ಸಿನ ಮಲ್ಲಿಗೆ ತೋಳ ಉಯ್ಯಾಲೆ ಪ್ರೇಮದೆ ಕಟ್ಟುವೆ ಜತೆಯಾಗಿ ಕುಳಿತು ಜೋಕಾಲಿ ಆಡುವೆ ಸ್ವರ್ಗವೆ ಇರಲಿ ನರಕವೆ ಬರಲಿ ಹೂವು ನಾರಿನ ಬಂಧವು ಬೆಸೆಯಲಿ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಾಗಿಯ ಪದ್ಯ ಮಾಗಿಯ ಪದ್ಯ ಮಾಗಿಯ ಪದ್ಯ ಕೌದಿ ಕವುಚಿ ಕಂಬಳಿ ಹುಳುವಾದರೂ ಅಡಗಲೊಲ್ಲದ ಚಳಿ ಬೆಳಗಾಗ ಬರುವ ಚುರುಕು ಬಿಸಿಲಿನ ನೆನಪೇ ಬಿಸಿ ಹುಟ್ಟಿಸ ಬಲ್ಲದು ಒಳಗೆ ಉರಿ ಮುಖದ ಸೂರ್ಯ, ನಿನ್ನ ಆಗಮನ ಅದೆಷ್ಟು ಬೆಚ್ಚಗೆ , ಜಡ ಮಾಗಿಗೆ!!! *******************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸೋತ ಪ್ರೇಮಿ ಪ್ಯಾರಿಸುತ ಸೋತಪ್ರೇಮಿ ನಾನು ಸಹಿಸಲಾರದ ಸೋಲಿನೊಂದಿಗೆ ನಿಂತಿದ್ದೇನೆ. ನೀ ಬಿಟ್ಟು ಹೋದ ದಾರಿಯಲಿ ಒಬ್ಬಂಟಿಯಾಗಿ ಅಷ್ಟೇ…! ಇನ್ನೆಷ್ಟು ಬದುಕು ಉಳಿದಿದೆ ಕಾಲಮಾನ ದೂಡಲು…! ನಾವಿಬ್ಬರು ಕೂಡಿ ತೆಗಿಸಿದ ಫೋಟೋವನ್ನ ಕಟ್ಟಾಕಿಸಿ ಜೋಪಾನವಾಗಿ ಇಡಬಲ್ಲೆ…! ಆದರೆ ..? ನಿನ್ನ ಮೇಲಿರುವ ಪ್ರೀತಿ ಯಾವುದರಲ್ಲಿ ಇಡಲಿ…? ಇದ್ದೊಂದು ಹೃದಯ ಚುಚ್ಚಿ ನೀನೇ ಹಾಳು ಮಾಡಿದ್ದು ಆಗಿದೆ… ನಿನ್ನೆಲ್ಲ ಸೌಂದರ್ಯವನ್ನ ಕಣ್ಣಲ್ಲಿ ಜೋಪನವಾಗಿಸಿದ್ದೆ. ನೀ ಕೊಟ್ಟ ನೋವಿಗೆ ಕಣ್ಣೀರಾಗಿ ಹರಿದು ಹೋಗಿದೆ. ಹೇಳಿಹೋಗಬೇಕಿತ್ತು. ಇಲ್ಲವೇ …? ಮುನ್ಸೂಚನೆ ಕೊಟ್ಟಿದ್ದರೆ..? ನನ್ನ ಹೃದಯವನ್ನಾದರೂ ಕಲ್ಲಾಗಲು ಪ್ರೇರೇಪಿಸುತ್ತಿದ್ದೆ! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಏಕೆ ಕಾಡುವೆ ಶಾಂತಾ ಜೆ ಅಳದಂಗಡಿ ಏಕೆ ಕಾಡುವೆ ಮಾರುದ್ದ ಒಲವಿನೋಲೆ ಬರೆದು ಹೃದಯದೊಳಗೆ ನನ್ನ ಸೆಳೆದು ತಡವಿಲ್ಲದೆ ತಾಳಿಯ ಬಿಗಿದು ದೂರವಾದೆ ಬಾಳಿಗಂತ್ಯ ಬರೆದು ಮುಗ್ಗರಿಸಿ ಸಾಗಿದೆ ನನ್ನ ಬದುಕಿಂದು ಗಾಲಿಕಳಚಿದ ಗಾಡಿ ಈ ಬಾಳು ಕಣ್ಣೆವೆಯಲೆ ಕುಳಿತು ಕಾಡುವೆ ನನ್ನ ಅಳಿಸಲಾಗದ ಪ್ರೇಮಬರಹ ಬರೆದು ಹೂ ದುಂಬಿಗಳ ಒಲವಿನಾಟದಿ ಕಾಣುವೆ ನನ್ನ ನಿನ್ನ ಅನುಬಂಧ ಏಕೆ ಸರಿದೆ ನೇಪಥ್ಯಕೆ ಅವಸರದೆ ಮನೋಮಂದಿರಕೆ ಒಡೆಯನಾಗಿದ್ದೆ ದಿಗಂತದಾಚೆಗಿರುವೆ ನನ್ನ ನಿರೀಕ್ಷೆಯಲ್ಲಿ ಬಂದೇ ಬರುವೆ ಅತಿಶೀಘ್ರದಲ್ಲಿ ರಕ್ತಧಮನಿಗಳೆ ಬಿರಿವಂಥ ಓಲೆಬರೆದೆ ********

ಕಾವ್ಯಯಾನ Read Post »

You cannot copy content of this page

Scroll to Top