ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ತಾಮ್ರದ ಕೊಡ ಸಂಜಯ ಮಹಾಜನ ತಾಮ್ರದ ಕೊಡ ಭಾರವಾದವೋ ತಾಮ್ರದ ಕೊಡ ತಲೆಯ ಮೇಲೆ ಭಾರದಾದವೋ ತಾಮ್ರದಕೊಡ ಕಾಣದಾದವೋ ನುರು ವರುಷ ಹೊಳಪು ತಾಳಿತಾದರೂ ತಲೆಯಮೇಲೆ ಹೊತ್ತು ಭಾರ ತಾಳದಾದವೋ ತಾಮ್ರದಕೊಡ ಕಾಣದಾದವೋ ಆರೋಗ್ಯ ವೃದ್ಧಿಸಿದರೂ ತಾಂಮ್ರದ ಕೊಡ ವೃದ್ಧಿಯಾಗಲಾರವೋ ತಾಮ್ರದಕೊಡ ಕಾಣದಾದವೋ ತೂತುಬಿದ್ದ ಕರಳುಗಳಿಗೆ ಅಮೃತ ಬಿಂದು ನೀಡಿತಾದರೂ ಕೊಡದ ತಳಕೆ ಬಿದ್ದ ತೂತು ತುಂಬದಾದವೋ ತಾಮ್ರದಕೊಡ ಕಾಣದಾದವೋ ಹಳೆಯ ಕೊಡ ಅಟ್ಟದಲಿ ಉಳಿಯಿತಾದರೂ ಹೊಳಪು ಕಳೆದುಕೊಂಡು ಕಪ್ಪಾಗಿ ಮಾತನಾಡದಾದವೋ ತಾಮ್ರದಕೊಡ ಕಾಣದಾದವೋ ತವರಿನಿಂದ ಉಡುಗೊರೆಯಾಗಿ ಬಂದಿತಾದರೂ ತವರ ಸಿರಿಯ ನೆನಪು ಮಾಸದಾದವೋ ತಾಮ್ರದಕೊಡ ಕಾಣದಾದವೋ ಶುಭ ಸಮಾರಂಭದಲ್ಲಿ ಅಲ್ಪ ಬಳಕೆಯಾರೂ ಶುಭಾರಂಭಗಳಲ್ಲಿ ಮೊದಲಾದವೋ ತಾಮ್ರದಕೊಡ ಕಾಣದಾದವೋ ವರುಷಗಳ ಹಿಂದೆ ಮೌಲ್ಯ ಕಡಿಮೆಯಾಗಿದ್ದರೂ ವರುಷ ವರುಷ ಉರುಳಿದರೂ ಮೌಲ್ಯ ಕಳೆದುಕೋಳ್ಳದಾದವೋ ತಾಮ್ರದಕೊಡ ಕಾಣದಾದವೋ ***********

ಕಾವ್ಯಯಾನ Read Post »

ಕಾವ್ಯಯಾನ

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಗಝಲ್ ಎ.ಹೇಮಗಂಗಾ ಪ್ರೇಮಿಗಳ ದಿನವೇಕೆ ? ನಾವಿಬ್ಬರೂ ಪ್ರೇಮಿಸದ ದಿನವೇ ಇಲ್ಲ ಪ್ರೀತಿಯ ಅಭಿವ್ಯಕ್ತಿಯೇಕೆ ? ಉತ್ಕಟವಾಗಿ ಪ್ರೀತಿಸದ ದಿನವೇ ಇಲ್ಲ ಸಪ್ತಪದಿಯಲಿ ಒಂದಾದ ನಮಗೆ ಬಾಳು ದೈವ ನೀಡಿದ ಕೊಡುಗೆ ಬೇರೆ ಉಡುಗೊರೆಯೇಕೆ? ಮುತ್ತಿನ ವಿನಿಮಯವಿರದ ದಿನವೇ ಇಲ್ಲ ನಿನ್ನೊಲವ ಸಾಗರದಿ ಎಲ್ಲ ಮರೆತು ಮುಳುಗಿಹೋಗಿರುವೆ ಹೊನ್ನಿನ ತೋಳಬಂದಿಯೇಕೆ? ತೋಳ್ಸೆರೆಯಿರದ ದಿನವೇ ಇಲ್ಲ ಮಧುಶಾಲೆಯ ಬಾಗಿಲು ಕರೆದರೂ ನೀನತ್ತ ಇನ್ನು ಸುಳಿಯಲಾರೆ ಮಧುಪಾನದ ಅಮಲೇಕೆ? ಪ್ರೀತಿ ನಶೆಯಿರದ ದಿನವೇ ಇಲ್ಲ ಪವಿತ್ರ ಬಂಧನದಿ ಬೆಸೆದುಹೋಗಿರೆ ಅಂತರವೆಲ್ಲಿ ನಮ್ಮ ನಡುವೆ? ಕಾಣದ ಸಗ್ಗದ ಮಾತೇಕೆ? ಮಿಲನ ಸುಖವಿರದ ದಿನವೇ ಇಲ್ಲ *****************

ವ್ಯಾಲಂಟೈನ್ಸ್ ಡೇ ಸ್ಪೆಶಲ್ Read Post »

ಕಾವ್ಯಯಾನ

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಅಧರಂ-ಮಧುರಂ ತುಟಿ ಜೇನು, ಮೊಗ ಜೇನು, ಸಕಲವೂ ಸವಿ ಜೇನು! (ವಲ್ಲಭಾಚಾರ್ಯರ “ಅಧರಂ ಮಧುರಂ” ಕನ್ನಡ ಭಾವಾನುವಾದದ ಪ್ರಯತ್ನ. ಪರಂಪರೆ ಕೂಡ ಹೇಗೆ ಪ್ರಿಯತಮನನ್ನು ಆರಾಧಿಸಿ ಭಜಿಸುತ್ತಿತ್ತು ಎನ್ನುವುದಕ್ಕೊಂದು ಪುರಾವೆ. ) ರಾಮಸ್ವಾಮಿ ಡಿ.ಎಸ್. ತುಟಿ ಜೇನು ಮೊಗ ಜೇನುಕಣ್ಣ ನೋಟವೆ ಜೇನು, ನಗೆ ಜೇನುಎದೆಯೊಳಗೆ ಸುರಿವ ಜೇನು, ನಡಿಗೆಗೆ ಸೋತೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಮಾತಲ್ಲಿ ಜೇನು,ಚರಿತೆ ಚಪ್ಪರಿಸಿದರೆ ಜೇನು,(ಉಟ್ಟ) ಬಟ್ಟೆ ಸವಿ ಜೇನು, ಸಂಕೇತದೊಳಗೆ ಜೇನುನೀನಿತ್ತ ಬರುವುದು ನನ್ನ ಸುತ್ತುವುದಂತೂ ತಿಳಿಜೇನುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಕೊಳಲುಲಿಯಲಿ ಜೇನು, ಪಾದಧೂಳಿಯಲಿ ಜೇನುಕೈ ಕಾಲುಗಳಲ್ಲೆಲ್ಲ ಎನಿತು ಸಿಹಿಯುನಾಟ್ಯದಲಿ ಸಿಹಿ ನೀನು, ನಿನ್ನ ಸಖ್ಯವೇ ಸಿಹಿ ಜೇನುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಹಾಡಲ್ಲಿ ಮಾಧುರ್ಯ, ಕುಡಿವಲ್ಲಿ ಚಾತುರ್ಯಉಣುವುದು ರಸಗವಳ, ಮಲಗಿದರೆ ತಿಳಿನಿದ್ರೆಕಾಯಕ್ಕೆ ತಕ್ಕ ಪರಿವೇಷ ನಿನ್ನೊಲವುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ನಿನ್ನ ಕಾರ್ಯಗಳೇಸು, ನಿನ್ನ ಭಾದ್ಯತೆಗಳೇಸುಕಾಯ್ದು ಕೊಲ್ಲುವ ಹಾಗೇ ನೆನಪು ಅಧಿಕನೀನಿತ್ತ ಉಡುಗೊರೆಯು, ನಿನ್ನ ಹೊಳಪಿನ ಹಾಗೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ನಿನ್ನ ಕುತ್ತಿಗೆಯ ಸುತ್ತ ನನ್ನ ಬಾಹುವಿನ ಹಾರಯಮುನಾ ತಟದಲೆಗಳಲ್ಲೆಲ್ಲ ಮಧು ರಾಶಿಹರಿವ ನೀರಲ್ಲೂ ಅರಳಿರುವ ಹೂವಲ್ಲೂ ನೀನೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಗೋಪಿಕೆಯರೆಲ್ಲ (ನಿನ್ನ) ಲೀಲೆಗೆ ಮಣಿದುಕೂಡಿದ್ದು ಏನು ಬಿಟ್ಟದ್ದು ಏನುಕಂಡದ್ದು ಏನು, ವಿನೀತನಾಗಿ ಬೇಡಿದ್ದು ಏನುಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಗೆಳೆಯರೊಡಗೂಡಿ ರಾಸುಗಳನೊಟ್ಟಿದ್ದುಬೆತ್ತ ಬೀಸದೆಯೂ ಜಾನುವಾರು ಹೆಚ್ಚಿದ್ದುಕಾಯುವಿಕೆಗೊಳಗಾಗಿ ಪರಿಪಕ್ವವಾದದ್ದುಸವಿಯರಸನೇ ನೀನು, ಸಕಲವೂ ಸಿಹಿ ಜೇನು. *********************************

ವ್ಯಾಲಂಟೈನ್ಸ್ ಡೇ ಸ್ಪೆಶಲ್ Read Post »

ಕಾವ್ಯಯಾನ

ವ್ಯಾಲಂಟಯನ್ಸ್ ಡೇ ಸ್ಪೆಶಲ್

ಪ್ರೇಮದ ಹನಿಗಳು ಎ.ಹೇಮಗಂಗಾ ಯಾವ ಆಚರಣೆಯೂ ನಮ್ಮ ಪ್ರೇಮಕ್ಕೆ ಬೇಕಿಲ್ಲ ಕಾರಣ, ನಾನೂ ನೀನೂ ಪ್ರೇಮಿಸದ ದಿನವೇ ಇಲ್ಲ ! ಆದ ನನ್ನ ಇನಿಯ ನೊಂದ ಬಾಳಿಗೆ ಒತ್ತಾಸೆ ನನಗೋ ಅವನ ಕೆನ್ನೆಗೆ ಕೆನ್ನೆ ಒತ್ತುವ ಆಸೆ ! ಸ್ವಭಾವದಲ್ಲಿ ನನ್ನ ನಲ್ಲ ನಿಜಕ್ಕೂ ವಾಚಾಳಿ ಬಿಡುವುದಿಲ್ಲ ಪರಿಪರಿಯಾಗಿ ನನ್ನ ಕಾಡಿಸುವ ಚಾಳಿ ಹೆದರುವುದಿಲ್ಲ ನಾನು ದಿನವೂ ಬರುವ ಇರುಳಿಗೆ ಇದೆಯಲ್ಲಾ ಪ್ರಿಯಸಖನ ಕಣ್ಬೆಳಕಿನ ದೀವಿಗೆ ! ಬೇಕಿಲ್ಲ ನನಗೆಂದಿಗೂ ಮಧುಶಾಲೆಯ ಮಧುಪಾತ್ರೆ ನೀಡು ಕೊನೆತನಕ ನಿನ್ನಧರದ ಮಧುವಿನ ಅಕ್ಷಯಪಾತ್ರೆ ! *******

ವ್ಯಾಲಂಟಯನ್ಸ್ ಡೇ ಸ್ಪೆಶಲ್ Read Post »

ಕಾವ್ಯಯಾನ

ಕಾವ್ಯಯಾನ

ಹೆಂಗಳೆಯರ ತರಲೆ ಹಾಡು ಅವ್ಯಕ್ತ ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ಮದುವೆ ಆದಮ್ಯಾಗೇ! ನಿನ್ನ ಹೆಸರು ಮರೆಯುತಾರ! ಮದುವೆ ಆದಮ್ಯಾಗೇ! ನಿನ್ನ ಹೆಸರು ಮರೆಯುತಾರ! ರಾತ್ರಿಗ ಬಾರೇ ಅನ್ನುತಾರಾ, ಹಗಲಲಿ ಬೇರೆ ಹೆಣ್ಣಿಗ ಹಲ್ಕಿರಿತಾರಾ ಕಾಪಿ ತಿಂಡಿ ಎಂದು ಕೂಗುತಾರ ನಿನ್ನ, ಚಡ್ಡಿಇಂದ ಟೈವರೆಗೂ ಕೂತಲ್ಲಿ ತರಿಸುತಾರ , ನಿನ್ನ ಪ್ರಾಣ ತಿನ್ನುತಾರಾ!!! ನಿನ್ನ ಗೇಲಿ ಮಾಡುತ್ತಾರಾ!!! ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ವಾರಪೂರ್ತಿ ಉಣ್ಣಾಕ ನೀನೇ ಮಾಡಬೇಕಾ ನಿನ್ನನೀ ಮರೆತು ಅವರಿಷ್ಟದ್ ಕಾಳಜಿ ವಹಿಸಬೇಕ, ಶಾಪಿಂಗ್ ಎಲ್ಲರದ ನೀ ಒಬ್ಬಾಕಿ ಮಾಡಬೇಕ, ಆಫೀಸಿಗೂ ಹೋಗಿ ನೀನು ಕೆಲಸ ಮುಗಿಸೀ ಮುಂದಾ.. ಬಿರ್ರನೆ ಮನೆಯಾಗ ಬಂದು ಓಟಿ ಮಾಡಬೇಕ! ಆಫೀಸಿಗೂ ಹೋಗಿ ನೀನು ಕೆಲಸ ಮುಗಿಸೀ ಮುಂದಾ.. ಬಿರ್ರನೆ ಮನೆಯಾಗ ಬಂದು ಓಟಿ ಮಾಡಬೇಕ! ನೀನು ಈಗಿರೋದು ಬಾಡಿಗೆ ಮನೆಯೊಳಗೆ, ಸ್ವಂತ ಮನೆಯ ಕನಸ ನನಸ ಮಾಡಬೇಕು ನೀನೇ.! ಗಂಡ ಬ್ಯಾoಕು ಸಾಲ ತಂದ, ತೀರ್ಸಕ್ಕೆ ಆಗ್ದೆ ನಿಂದ! ಹೊಟ್ಟೆ ಬಟ್ಟೆ ಕಟ್ಟಿ ಕಷ್ಟ ಸೆರಗಲಿ ಬಚ್ಚಿಟ್ಟಿ ಸಾಲ ತೀರಿಸ ಬೇಕ! ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಪುರುಷಿ! ಇಲ್ಲೇ ಕಾಣುಸ್ತಾರ ಮದವ್ಯಾದ ಮರು ನಿಮಿಷಾಕ! ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಪುರುಷಿ! ಇಲ್ಲೇ ಕಾಣುಸ್ತಾರ ಮದವ್ಯಾದ ಮರು ನಿಮಿಷಾಕ! ಮದುವೆ ಮದುವೆ ಎಂದು ನೀ ಮುಲುಕಬ್ಯಾಡ ಮೂಢಿ! ಮದುವೆ ಎಂಬುದೇ ಮಾಯೇ ನೀ ಮರೆತು ಹೋಗಬೇಡ! ಮದುವೆ ಮದುವೆ ಎಂದು ನೀ ಮುಲುಕಬ್ಯಾಡ ಮೂಢಿ! ಮದುವೆ ಎಂಬುದೇ ಮಾಯೇ ನೀ ಮರೆತು ಹೋಗಬೇಡ! ಪ್ರೀತಿಯ ಕೆಡ್ಡವಿದು ತಾಯಿ ಬೀಳುವ ಮುನ್ನ ತಿಳಿದಿರು ಇದರ ಮಾಯೆ! ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ!😆😆 ಎಲ್ಲಾ ಹೆಂಗಳೆಯರಿಗೆ, ಹಾಗು ಫನ್ಲವಿಂಗ್ ಗಂಡಸರಿಗೆ!! ****** ಅವ್ಯಕ್ತ…

ಕಾವ್ಯಯಾನ Read Post »

ಕಾವ್ಯಯಾನ

ವ್ಯಾಲಂಟೈನ್ಸ್ ಡೇ ಸ್ಪೆಶಲ್

ನನ್ನ ಕನಸಿನ ಹುಡುಗಿಗೆ ಒಂದು ಕವಿತೆ ಮೂಗಪ್ಪ ಗಾಳೇರ ನನ್ನ ಕನಸಿನ ಹುಡುಗಿಗೆ ಒಂದು ಕವಿತೆ ನನ್ನೆಲ್ಲಾ ಒಂದೊಂದು ಕನಸುಗಳಿಗೆ ಬಣ್ಣ ಹಚ್ಚಿದವಳು ನೀನು ರೆಕ್ಕೆಪುಕ್ಕ ಕಟ್ಟಿದವಳು ನೀನು ಆ ಕನಸುಗಳಿಗೆ ಜೀವ ತುಂಬಿದ ರಮಣೀಯ ಕಾಮ ದೇವಿಯ ಪುತ್ರಿ ನೀನು ನಿನ್ನ ಕಂಡೊಡನೆ ನನ್ನ ಹೃದಯದ ಇಂಚರದ ಮೇಳ ತಾನು ತಾನಾಗಿ ನುಡಿಯದೆ ಹೊಸದೊಂದು ಸಂಗೀತ ಸ್ವರ ಲೋಕ ಸೃಷ್ಟಿಸುತ್ತದೆ ನಿನ್ನ ಮಾತುಗಳೆಲ್ಲವು ಒಂದೊಂದು ಬಾರಿ ಅದೆಂತಾ ಮೌನ ಲೋಕ ಸೃಷ್ಟಿಸುತ್ತವೆ ಆ ಲೋಕದಲ್ಲಿ ಹೃದಯದ ನಾದವೊಂದೆ ಮಾತಾಗಿರುತ್ತದೆ ಅಂತ ಚೆಲುವು ನನ್ನುಡುಗಿ ಎಂದೆಳಲು ನನ್ನ ಕವನ ಮಿಡಿಯುತಿದೆ ಕನಸಲ್ಲಿ ಹೃದಯ ಕದಿಯುವ ಆ ನನ್ನ ಪ್ರೇಮ ಕಳ್ಳಿಗೆ ಪ್ರೇಮಿಗಳ ದಿನದ ಶುಭಾಶಯಗಳು **********

ವ್ಯಾಲಂಟೈನ್ಸ್ ಡೇ ಸ್ಪೆಶಲ್ Read Post »

ಕಾವ್ಯಯಾನ

ವ್ಯಾಲಂಟೈನ್ಸ್ ಡೇ ಸ್ಪೆಶಲ್

ನವಿಲನು ಮುಟ್ಟಿದ ಚಿತ್ರ ಬಿದಲೋಟಿ ರಂಗನಾಥ್ ನವಿಲನು ಮುಟ್ಟಿದ ಚಿತ್ರ ಅವಳ ನಿಟ್ಟುಸಿರ ಸದ್ದಿನಲಿ ಬೆವತ ಹೃದಯದ ಬಾಗಿಲು ಗೆದ್ದಲಿಡಿದು ನೋವಿನಲಿ ಮುಕ್ಕಾಗುತ್ತಿದೆ ಹಿಡಿದಿದ್ದ ಗುಲಾಬಿಯ ಬಣ್ಣದ ಗುರುತಿನ ಭಾವ ಗಾಳಿ ಮಳೆ ಬಿಸಿಲಿಗೆ ನಲುಗಿದರೂ ಅಳಿಸುತ್ತಿಲ್ಲ ಕಾಮನ ಬಿಲ್ಲಿನ ಮೇಲೆ ಇಬ್ಬರೂ ಕೂತು ನವಿಲನು ಮುಟ್ಟಿದ ಚಿತ್ರ ಮುಗಿಲ ಮೇಲೆ ಹಾಗೇ ಇದೆ ತಣ್ಣನೆಯ ಸ್ಪರ್ಶದ ಆ ನಿನ್ನ ನಗು ಮುಂಗುರುಳ ಮೇಲೆ ಆಡಿಸಿದ ಬೆರಳ ಆಟ ಕತ್ತಲೆಯಲಿ ಕರಗಿದ ನಮ್ಮಿಬ್ಬರ ಚಿತ್ತ ದಾರಿಯ ಪಯಣ ರೆಪ್ಪೆಯಡಿಯ ಗೂಡಲ್ಲಿ ಅವಿತು ಕೂತಿದೆ ನಮ್ಮಿಬ್ಬರ ನಡುವೆ ಅಡ್ಡಲಾಗಿ ನಿಂತಿದ್ದ ಆ ಸಣ್ಣ ಗೆರೆಯ ಮೇಲೆ ಯಾವುದೋ ಹೆಜ್ಜೆಯ ಸಪ್ಪಳ ನೆಲದ ನಡಿಗೆಯ ಬಿರುಸಿಗೆ ಕೊಂಡಿ ಕಳಚಿಕೊಂಡ ಸಂಬಂಧ. ***********

ವ್ಯಾಲಂಟೈನ್ಸ್ ಡೇ ಸ್ಪೆಶಲ್ Read Post »

ಕಾವ್ಯಯಾನ

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಗಝಲ್ ಡಾ.ಗೋವಿಂದ ಹೆಗಡೆ ಗಜಲ್ ನನ್ನದೆಲ್ಲವನ್ನೂ ಅಪಹರಿಸಿದ್ದಾನೆ ಈ ಸಖ ಜೀವದ ಜೀವವೇ ಆಗಿಬಿಟ್ಟಿದ್ದಾನೆ ಈ ಸಖ ಕುಡಿನೋಟ ಬೀರಿ ಹೇಗೆ ಕರೆಯುತ್ತಾನೆ! ನೋಟದಲ್ಲೇ ನನ್ನ ಕುಡಿಯುತ್ತಾನೆ ಈ ಸಖ ಕುಡಿಮೀಸೆಯ ಅವನ ಮುಖವೆಷ್ಟು ಚಂದ! ಮುಖಕ್ಕೆ ಮುಖವಿಟ್ಟು ‌ಮೈಮರೆಸಿದ್ದಾನೆ ಈ ಸಖ ಅವನ ಪಿಸುನುಡಿಗೇ ಮೈತುಂಬ ಮಿಂಚು ಬೇಸಗೆಯಲ್ಲೂ ನವಿಲ ಕುಣಿಸಿದ್ದಾನೆ ಈ ಸಖ ಬರ ಬಿದ್ದ ಎದೆಯಲ್ಲಿ ಸುಗ್ಗಿ ಬಂದಿದೆ ಹೇಗೆ ಸಗ್ಗವಿದ್ದರೆ ಅದನು ಇಳಿಸಿದ್ದಾನೆ ಈ ಸಖ **************************

ವ್ಯಾಲಂಟೈನ್ಸ್ ಡೇ ಸ್ಪೆಶಲ್ Read Post »

ಕಾವ್ಯಯಾನ

ವ್ಯಾಲಂಟೈನ್ ಸ್ಪೆಶಲ್

ಗಝಲ್ ಮಾಲತಿ ಹೆಗಡೆ ಗಜಲ್ ಅವನ ಕಣ್ಣಲ್ಲಿ ‌ನನ್ನ ಬಿಂಬ ಕಂಡಾಗ ಮೂಡಿತ್ತು ಪ್ರೀತಿ ಮನಸೆಳೆವ ಮಾತಿಗೆ ಮರುಳಾದಾಗ ಮೂಡಿತ್ತು ಪ್ರೀತಿ ಪ್ರತಿದಿನವೂ ಕನಸಲ್ಲೂ ನನಸಲ್ಲೂ ಕಾಡಿದ್ದೇನೂ ಸುಳ್ಳಲ್ಲ ಕಾಯಾ ವಾಚಾ ಮನಸಾ ನಿನ್ನವನೆಂದಾಗ ಮೂಡಿತ್ತು ಪ್ರೀತಿ ನಮ್ಮಿಚ್ಛೆಯಂತೆ ಮದುವೆಯಾಗುವುದು ಏನು ಹುಡುಗಾಟವೇ? ನಾನೆಲ್ಲ ನೋಡಿಕೊಳುವೆ ಭಯಬೇಡವೆಂದಾಗ ಮೂಡಿತ್ತು ಪ್ರೀತಿ ದೇವರು ಗುರುಹಿರಿಯರು ಅಗ್ನಿ ಸಾಕ್ಷಿಯಾಗಿ ಕಟ್ಟಿದ ಮಾಂಗಲ್ಯ ಉರುಳಾಗದಂತೆ ಬಲು ಕಾಳಜಿ ಮಾಡಿದಾಗ ಮೂಡಿತ್ತು ಪ್ರೀತಿ ಈ ‘ಮಾಲಿ”ಗೆ ಒಲಿದವನೊಂದಿಗೆ ಬದುಕುವ ಸುಯೋಗ ಸುಖ ದುಃಖದಲಿ ಜೊತೆಗೂಡಿದಾಗ ಮೂಡಿತ್ತು ಪ್ರೀತಿ *********

ವ್ಯಾಲಂಟೈನ್ ಸ್ಪೆಶಲ್ Read Post »

ಕಾವ್ಯಯಾನ

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಪ್ರೀತಿಯೆಂದರೆ ಹೀಗೇ ಏನೋ!!?? ಸೌಜನ್ಯ ದತ್ತರಾಜ ಪ್ರೀತಿಯೆಂದರೆ ಹೀಗೇ ಏನೋ!!?? ಮೊದಮೊದಲು ನಿದ್ದೆ ಕೆಡಿಸಿ, ನೆಮ್ಮದಿ ಕಳೆದು ಸಾವಿರ ಪ್ರಶ್ನೆಗಳ ಸುಳಿಯೊಳಗೆ ಸಿಲುಕಿಸಿ ಅವಗಣನೆಯೋ, ಅವಮಾನವೋ ಎಂದೆಲ್ಲಾ ಅನುಮಾನಗಳ ಹುಟ್ಟಿಸಿ ಸ್ವಾಭಿಮಾನ, ಸ್ವಾರ್ಥಗಳೆಲ್ಲವ ಮಧ್ಯೆ ತೂರಿಸಿ ನಂಬದ ದೇವರನ್ನೂ ಮತ್ತೆ ಮತ್ತೆ ನೆನೆಸಿ ನಿರ್ಧಾರಗಳೆಲ್ಲವ ಏರುಪೇರಾಗಿಸಿ ಭೂಮಿ ಬಾನುಗಳ ತಲೆಕೆಳಗಾಗಿಸಿ ಅಬ್ಬಬ್ಬಬ್ಬಾ……. ಅವೆಷ್ಟೆಲ್ಲಾ ಚಿತ್ರ ವಿಚಿತ್ರ ಭಾವನೆಗಳು ಒಮ್ಮೆ ಪ್ರೀತಿ ನಮ್ಮೆಡೆ ತಿರುಗಿ ನಕ್ಕರೆ ಆಯ್ತು ಒಪ್ಪಿಕೊಂಡರಂತೂ ಸರ್ವಸ್ವವೂ ಸುಂದರ ಅರಳುವ ಮನ, ನೆಮ್ಮದಿಯ ನಿದ್ದೆ ಪ್ರಶ್ನೆಗಳಿಗೆಲ್ಲಾ ಪೂರ್ಣ ವಿರಾಮ ಅನುಮಾನ, ಸ್ವಾಭಿಮಾನಗಳ ಜಾಗದಲ್ಲಿ ಮನದ ತುಂಬಾ ಕನಸುಗಳದ್ದೇ ರಾಜ್ಯಭಾರ ಜೊತೆ ಜಾರದಂತೆ ದೇವನೊಲಿಯಲೆಂಬ ಸ್ವಾರ್ಥ ನಿರ್ಧಾರಗಳಿಗೆಲ್ಲ ಮತ್ತೊಂದು ಹೆಗಲ ಖಾತ್ರಿ ದಿನದಿನಕ್ಕೂ ಅರಳುವ ಜೀವನ ಪ್ರೀತಿ ಇದೇ ಅಲ್ಲವೇ ಸತ್ಯ ಸುಂದರ ಪ್ರೇಮದ ರೀತಿ…… **********

ವ್ಯಾಲಂಟೈನ್ಸ್ ಡೇ ಸ್ಪೆಶಲ್ Read Post »

You cannot copy content of this page

Scroll to Top