ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕೊಡುವುದಾದರೂ ಯಾರಿಗೆ? ವಿಜಯಶ್ರೀ ಹಾಲಾಡಿ ಹೌದು ಈ ಪ್ರೀತಿಯನ್ನು ಮೊಗೆಮೊಗೆದು ಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆ ಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದ ಮುಖ –ಮುಖವಾಡಗಳು … ರಾತ್ರಿ -ಹಗಲುಗಳನ್ನು ಗೆಜ್ಜೆಕಾಲಿನಲ್ಲಿ ನೋಯಿಸಲೆ … ಯಾತನೆಯನ್ನು ನುಂಗುತ್ತಿರುವೆ ಸಂಜೆಯ ಏಕಾಂತಗಳಲ್ಲಿ ಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆ ಮಂಡಿಯೂರಿದ್ದೇನೆ ಹಟಮಾರಿ ಕಡಲಾಗಿದ್ದೇನೆ.. ತರ್ಕಕ್ಕೆ ನಿಲುಕದ ಗಳಿಗೆ -ಗಳಲ್ಲಿ ಒಂಟಿಹೂವಂತೆ ನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆ ಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನು ಮತ್ತೆ ಹುಟ್ಟಿಸಿಕೊಳ್ಳಲು ಸಾಧ್ಯವಾಗುವುದಾದರೆ ಪ್ರೀತಿಯಿಂದ ಆರ್ತಳಾಗಿದ್ದೇನೆ. (ಚಿತ್ರಕೃಪೆ-ವಿಜಯಶ್ರೀ ಹಾಲಾಡಿ)

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತುಮುಲ ಬಿ.ಎಸ್.ಶ್ರೀನಿವಾಸ್ ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು ತನ್ನಷ್ಟಕ್ಕೆ ತಾನೇ ತಿಳಿಯಾಗಿ ಪ್ರತಿಬಿಂಬ ತೋರಿಸುವವರೆಗೂ ಹರಿಯಬಿಡಬೇಕು  ಯೋಚನೆಗಳ ಕಡಿವಾಣವಿಲ್ಲದ ಕುದುರೆಯನ್ನು ಓಡಲಾಗದೆ ತಾನೇ ನಿಲ್ಲುವವರೆಗೂ ಸುರಿಸಿಬಿಡಬೇಕು ಕಂಬನಿ ಮನದ ಬೇಗುದಿಯೆಲ್ಲ ಕರಗಿ ಶಾಂತಿ ನೆಲೆಸುವವರೆಗೂ ನಡೆದು ಹೋಗಲಿ ಪ್ರಳಯ ಪರಶಿವನ ತಾಂಡವ ನೃತ್ಯ ಭ್ರಮೆಗಳೆಲ್ಲ ಭಸ್ಮವಾಗುವವರೆಗೂ ಕರಗಿದಾ ಕತ್ತಲಲಿ ಬಸವಳಿದ ಮೈಮನಕೆ ಗಾಢನಿದ್ರೆಯು ಆವರಿಸಬೇಕು ಮುಂಜಾನೆ ಹಕ್ಕಿ ಚಿಲಿಪಿಲಿ ಅರುಣೋದಯ ರಾಗದಲಿ ಹೊಸಬೆಳಕು ಮೂಡಬೇಕು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಅವಳ ತನ್ಮಯತೆಗೆ ಸ್ವಲ್ಪವೂ ಭಂಗ ಬಾರದಿರಲಿ ಕಡಲು ಅಷ್ಟೊಂದು ಜೋರಾಗಿ ಮೊರೆಯದಿರಲಿ ಚರಿತ್ರೆಯಲಿ ಕಾಲು ಹೂತು ಕೂತಿದ್ದಾಳೆ ಅವಳು ವಿವಶತೆಯಲ್ಲೂ ಮುಂಗುರುಳು ನಲುಗದೆ ಇರಲಿ ಮಧುಶಾಲೆಯೇಕೆ ಹೀಗೆ ಪಾಳು ಬಿದ್ದಿದೆ ಗೆಳೆಯ ಒಡಲ ತಣಿಸುವ ಮಧುಭಾಂಡ ಬರಿದಾಗದಿರಲಿ ಅದೆಂಥ ಕ್ಷುಬ್ಧತೆಯಲ್ಲಿ ದಾರಿ ಸವೆಸುವೆ ನೀನು ಸೈರಿಸಿ ಪಾಲಿಸುವ ಮಡಿಲು ಮುಕ್ಕಾಗದಿರಲಿ ಎದೆಗುದಿಗೇಕೆ ಬಿಡದೆ ತುಪ್ಪ ಸುರಿಯುವೆ ‘ಜಂಗಮ’ ತಡೆ,ಕಾಪಿಡುವ ರೆಪ್ಪೆ ನಡುವೆ ಬದುಕು ವಿಶ್ರಮಿಸಲಿ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬದುಕುವ ರೀತಿಗೆ! ಲೋಕೇಶ್ ಮನ್ವಿತ್ ಬದುಕುವ ರೀತಿಗೆ ಬುದ್ದನನ್ನಿರಿಸಿಕೊಂಡರೆ ಬುದ್ದಿಯಲ್ಲಿ ಅಂಗುಲಿಮಾಲ ಹೆಜ್ಜೆ ಇರಿಸುವವನೇನು? ನಿನ್ನ ಹಾದಿಯಲ್ಲಿ. ದಯೆಯಿರಲು ದೀನನಲ್ಲಿ ದಿನವೆಲ್ಲಾ ಸಂತಸವಷ್ಟೇ ಮನಸ್ಸಿಗೆ ಬೇಕಾದರೊಮ್ಮೆ ಅಂಗೈಯನ್ನೊಮ್ಮೆ ತಿರುಗಿಸಿವುದು ರೂಡಿಯಾಗಿಸಿಕೋ ಜಾತಿ ಮತಗಳ ಚೂರಾಗಿಸಿ ಎದೆಯ ಗುಡಿಯಲ್ಲೊಮ್ಮೆ ದೀಪವಿರಿಸು ಬೆಳಕು ಚಿಕ್ಕದಿರಬಹುದು ಜೀವವಿರುವವರೆಗೂ ನೀನು ಕಾಣುವೆ ಪ್ರತಿ ಜೀವಕ್ಕೂ ಬೆಳಕಾಗಿ ಬದುಕುವುದು ಸುಲಭ ಬೇಲಿಗಿಡಗಳು ತಾಕಿದವೆಂದು, ರಕ್ತ ಹರಿಯಿತೆಂದು, ನಿಲ್ಲದೆ ಅಲ್ಲಿ, ನೋವನ್ನೇ ನೆಪವಾಗಿಸಿಕೊಂಡು ಸಾಗಿಬಿಡು ತಡೆದು. ಮುಂದೆ ಹೂಗಳು ಅರಳಿ ನಿಂತಿವೆ ಸ್ವಾಗತವ ಕೋರಿ . ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಾಸ್ತವ ದೀಪಿಕಾ ಬಾಬು ವಾಸ್ತವ ಜೀವ ಇರುವ ಅವನನ್ನು ನಾನು ಪ್ರೀತಿಸಿದೆ, ಪ್ರೀತಿಯ ಮುಖವಾಡ ಧರಿಸಿದ ನನ್ನ ನಂಬಿಕಯೇ ಮೋಸವಾಯಿತು..! ಚಿಕ್ಕ ಪುಟ್ಟ ಹಕ್ಕಿ  ಪಕ್ಷಿಗಳ ತಂದು ನಾನು ಪ್ರೀತಿಸಿದೆ, ನಿನ್ನ ಸ್ವಾರ್ಥಕ್ಕೆ,ನನ್ನ ಬಂಧಿಸಿದೆಯಾ ಎಂದು ಹಾರಿ ಹೋಯಿತು..! ಬಾಲ್ಯದಲ್ಲೇ ಸಾವಿರಾರು ಕನಸನ್ನು ನಾನು ಪ್ರೀತಿಸಿದೆ, ನನಸಾಗದ ಬದುಕಿನ ನೈಜತೆಯ ಅರಿತು ಬಾಲ್ಯದಲ್ಲಿಯೇ ನುಚ್ಚು ನೂರಾಯಿತು…!! ಗುರು ಹಿರಿಯರನ್ನು, ಹೆತ್ತವರನ್ನು ನಾನು ಪ್ರೀತಿಸಿದೆ, ನೀನು ಹೆಣ್ಣು ಇಷ್ಟೇ ನಿನ್ನ ಬದುಕೆಂದು ಮದುವೆಯ ಬಂಧನದಲ್ಲಿಟ್ಟರು..!! ಗಂಡನನ್ನು, ಮಕ್ಕಳನ್ನು, ಮನೆಯನ್ನು ನಾನು ಪ್ರೀತಿಸಿದೆ, ನಮ್ಮ ಸೇವೆಯೇ ನಿನ್ನ ಕರ್ತವ್ಯ ಎಂದೆಳಿ ಸಂಸಾರದ ಜವಾಬ್ದಾರಿ ಹೊರಿಸಿದರು…!! ನಾನು ಈಗ ಯಾರನ್ನು ಪ್ರೀತಿಸಲಿ, ಆಸಕ್ತಳು ನಾನೀಗ, ಹುಟ್ಟು ಸಾವಿನ ಮಧ್ಯದಲ್ಲಿ ಸಾಗುವ ಈ ಜೀವನವನ್ನು, ನಾನು ಪ್ರೀತಿಸಲೇಬೇಕು…… ಇದೇ ಹೆಣ್ಣಿನ ವಾಸ್ತವದ ಪ್ರತಿರೂಪ….!! ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಾಲ್ಯ ವಿವಾಹ. ಜ್ಯೋತಿ ಡಿ.ಬೊಮ್ಮಾ ಬಾಲ್ಯ ವಿವಾಹ . ಮರುಗಲಾಗದೆ ಮತ್ತೆನು ಮಾಡಲಾಗದು ಮಗು ನಿನ್ನ ವಿಧಿ ಬರಹಕ್ಕೆ ಹೆತ್ತವರ ಆಶಾಢಭೂತಿತನದಿಂದ ಬಾಲ್ಯದ ಬಾಳಿಗೆ ಮದುವೆ ಬಂಧನ ವಿಧಿಸಿದ್ದಕ್ಕೆ… ಮದುವೆ ಮಾಡಿ ಜವಾಬ್ದಾರಿಯಿಂದ ಕಳಚಿಕೊಳ್ಳುವದೊಂದೆ ಅವರ ಪರಮೋದ್ದೇಶ. ಮಗಳ ಚಿಕ್ಕ ವಯಸ್ಸು ಲೆಕ್ಕಿಸದೆ ಧಾರೆ ಎರೆದು ಕೈ ತೊಳೆದುಕೊಳ್ಳುವ ಧಾವಂತ.. ಆಡುತ್ತ ಓದುತ್ತ ನಲಿಯಬೇಕಾದ ಮಗು ಹೊತ್ತುಕೊಂಡಿತು ಸಂಸಾರದ ನೋಗ ಸರೀಕರೆಲ್ಲ ನಕ್ಕು ನಲಿವಾಗ ಆಕೆ ಧರಿಸಿದಳಾಗಲೆ ಗ್ರಹಿಣಿಯ ಗಂಭಿರ ಮೊಗ.. ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ ನಲುಗಿತು ಬಾಲಿಕೆಯ ಶರೀರ ಇಷ್ಟರಲ್ಲೆ ಹೋರಬೇಕಾಯಿತು ಬಸಿರ ಭಾರ… ನಿರಾಕರಿಸತೊಡಗಿತು ಚಿಕ್ಕ ಗರ್ಭಾಶಯ ಪೋಷಿಸಲು ಮತ್ತೊಂದು ಜೀವ ಮಗುವಿನೊಳಗೊಂದು ಮಗು ಬೆಳೆಯುವದು ಸಹಿಸದಾಯಿತು ಇಡೀ ದೇಹ.. ಕುಗ್ಗತೊಡಗಿತು ಬಾಲಿಕೆ ತಾಳದೆ ವಯಸ್ಸಿಗೆ ಮೀರಿದ ಭಾರ ಹೊತ್ತು ಹೆತ್ತವರೇ ಈಗೇನು ಮಾಡುವಿರಿ ! ಕಂಡು ಈ ವಿಪತ್ತು.. ಪ್ರಸವ ವೇದನೆ ಸಹಿಸದಾಯಿತು ಚಿಕ್ಕ ಕೋಮಲ ಶರೀರ ದೇಹ ಬಿಟ್ಟು ಹೊರಟಿತು ಜೀವ ಬೇಡವೆಂದು ಈ ಬದುಕ ಭಾರ.. ಬಾಲ್ಯದಲ್ಲಿ ವಿವಾಹ ಮಾಡದಿರಿ ಮಗಳಿಗೆ.. ಗೊತ್ತಿದ್ದು ಪರಿಣಾಮ… ಕೈಯಾರೆ ಕೊಲ್ಲದಿರಿ ನಿಮ್ಮ ಕರುಳಿನ ಕುಡಿಗೆ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಗ್ಗದ ಬಾಗಿಲು ನಿರ್ಮಲ ಆರ್. ವಸಂತಕೆ ಹೊಸ ಚಿಗುರು,ಹೊಸ ಯೌವ್ವನ ನಿಸರ್ಗ ಸೌಂದರ್ಯಕೆ ಮನ ತಾಳಿತು ಮೌನ ನಭದಲಿ ನಗುತಿಹನು ರವಿ ಹಸಿರಿನಿಂದ ಕಂಗೊಳಿಸುತಿಹುದು ಭುವಿ ಅಲ್ಲಲ್ಲಿ ಹಕ್ಕಿಗಳ ಇಂಚರ ಸೃಷ್ಟಿಯೊಂದು ಬನದೇವಿಯ ಭವ್ಯ ಮಂದಿರ ಇರುಳಲಿ ಉಲ್ಲಸಿತನಾದ ಚಂದಿರ ತಾಯ ಕಂಕುಳಲಿರುವ ಕಂದನಿಗವನೇ ಸುಂದರ ಕಪ್ಪು ಮೋಡವ ಹೊತ್ತುತರುವ ಮಳೆರಾಯ ದುಯ್ ಎನ್ನುತ ತೊಳೆವ ಇಳೆಯ ಮೇಲಿನ ಕೊಳೆಯ ಮಳೆಯ ಜಿನುಗಿಗೆ ನವಿಲ ನರ್ತನ ಕಂಡೆಯ ಮನ ಅಚ್ಚರಿಗೊಂಡಿತು ಕಂಡು ಬನಸಿರಿಯ ಪ್ರಕೃತಿ ಸೌಂದರ್ಯ ನೋಡುತಿರೆ ಮೈ, ಮನ ವಿಹರಿಸಲು ಹೊರಟಂತೆ ಬೇರೆಡೆ ಸಗ್ಗವ ಹುಡುಕ ಹೊರಡುವುದೆಂತು ಸಗ್ಗದ ಬಾಗಿಲು ಇಲ್ಲಿಯೇ ತೆರೆದಂತೆ. ***************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆ ಗುಡಿಗಳಲ್ಲಿ ಜ್ಯೋತಿ ಡಿ.ಬೊಮ್ಮಾ. ಆ ಗುಡಿಗಳಲ್ಲಿ.. ಪರದೆ ಹಾಕಿದ ಗರ್ಭಗುಡಿಯೊಳಗೆ ಅರ್ಚಕರು ದೇವಿಯ ಮೈ ಮುಟ್ಟಿ ಬಟ್ಟೆ ಬದಲಾಯಿಸಿ ,ಬೊಟ್ಟಿಟ್ಟು,ಸಿಂಗರಿಸಿ ಹೊರಗೆ ದರ್ಶನಕ್ಕೆ ನಿಂತ ಸ್ತ್ರೀಯರನ್ನೂ ಮುಟ್ಟಿಸಿಕೊಳ್ಳದೆ ಮೆಲಿಂದಲೆ ಎಸೆದ ಪ್ರಸಾದವನ್ನೂ ಭಕ್ತಿಯಿಂದ ಸ್ವೀಕರಿಸಿ,ಕಣ್ಣಿಗೊತ್ತಿಕೊಂಡು ಪರವಶರಾಗಿ ದೇವಿಯೆಡೆ ನೋಡಿದಾಗ.. ಮೂಕಳಾಗಿ ನಿಂತ ದೇವಿಯೂ ನಿಟ್ಟುಸಿರು ಹಾಕುತಿದ್ದಳು ಒಳಗೊಳಗೆ ಬೇಯುತ್ತ ಕೇಳುವಂತಿತ್ತು ನೋಟ ನಿಮ್ಮೊಳಗಿರದ ಅದಾವ ಶಕ್ತಿ ದೇವಾಲಯದಲ್ಲಿದೆ. ಮುಟ್ಟಾದವರೂ ದೇವರನ್ನೂ ಮುಟ್ಟಬಾರದು ಎಂಬ ಸಂಪ್ರದಾಯದಿಂದ ದೇವಿಯೂ ನಡುಗುವಳು ತನ್ನೊಳಗೂ ಸ್ರವಿಸುವ ಸ್ರಾವ ಕಾಣದಂತೆ ತಡೆಗಟ್ಟುವದು ಹೇಗೆಂದು ತಿಳಿಯದೆ.. ಹೋಗಲಿ ಬಿಡಿ ಮುಟ್ಟಬೇಡವೆಂದಮೇಲೆ ಮುಟ್ಟುವ ಹಠವೇಕೋ ಮುಟ್ಟಿದ ತಕ್ಷಣ ಸಮತೆ ಕನಸು ನನಸಾಗುವದೇ..! ಮುಟ್ಟಿನ ಮಡುವಿನಲ್ಲಿ ಈಜಾಡಿ ಧರೆಗೆ ಬಿದ್ದ ಕ್ಷಣದಿಂದಲೆ ಶ್ರೇಷ್ಠರೆನಿಸಿಕೊಂಡ ಅವರೇ ತುಂಬಿರಲಿ ದೇವಸ್ಥಾನದೋಳಗೆ. ಆ ಗುಡಿಗಳಲ್ಲಿ ಅರ್ಚಕರ ಆಟದ ಬೋಂಬೆಯಾದ ಶಿಲೆಗಳು ಸನ್ನೆ ಮಾಡುತಿವೆ ನಮಗೆ.. ಹೋಗು ಬರದಿದ್ದರೆ ನಷ್ಟವೇನಿಲ್ಲ.. ನಿನ್ನ ದೇಹವೇ ದೇಗುಲವಾಗಿಸಿಕೋ.. ನನ್ನನ್ನು ಅಲ್ಲೆ ಪ್ರತಿಸ್ಟಾಪಿಸು..ಎಂದು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೆಂಚಬೆಕ್ಕಿಗೆ ಏನಾಯ್ತು ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿ ಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಇರುವೆ ಸಾಲನು ಹಾ….ರಿ ನೆಗೆದು ಪುಟ್ಟಿಯ ಮನೆಗೆ ಬಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಟ್ರಾಫಿಕ್ ಜಾಮಲಿ ರಸ್ತೆಯ ಕಾದು ಬೋರೂ ಬೋರು ಹೊಡೆದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ನೆತ್ತಿಗೆ ಸಿಟ್ಟು ಸರ್ರನೆ ಏರಿ ಬಾಗಿಲು ಜಡಿದು ಮಲಗಾಯ್ತು.. ********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನಪಾಗಿಸು.. ಲೋಕೇಶ್ ಮನ್ವಿತ್ ನೆನಪಾಗಿಸು…. ಮುಲಾಮು ಹಚ್ಚಲಾಗದ ಜಾಗದಲ್ಲಿ ಗಾಯ. ಕಾರಣ ಹೊಸದೇನಲ್ಲ ಅರಚುತ್ತೇನೆ ಚೀರುತ್ತೇನೆ ನರಳುತ್ತೇನೆ ಕಾಣಿಸುವುದಿಲ್ಲ ಜಗದ ಕಣ್ಣುಗಳಿಗೆ ಕೇಳಿಸುವುದಿಲ್ಲ ಜಗದ ಕಿವಿಗಳಿಗೆ ನಗುವಿನ ಮುಖವಾಡ ಬದುಕು ಸಾಗಿದೆ ಕೊನೆಯ ಬಿನ್ನಹವಿಷ್ಟೇ ಗಾಯಕ್ಕಿಷ್ಟು ಮುಲಾಮು ಬೇಡ ನಂಜನ್ನಿಟ್ಟು ನೆನಪಾಗಿಸು ನನ್ನವರ ಹೃದಯದಲ್ಲಿ. **********

ಕಾವ್ಯಯಾನ Read Post »

You cannot copy content of this page

Scroll to Top