ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನುವಾದ ಸಂಗಾತಿ

ಪಾತರಗಿತ್ತಿಯ ನಗು ಮೂಲ: ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್ ಕನ್ನಡಕ್ಕೆ: ಕಮಲಾಕರ ಕಡವೆ ನಮ್ಮ ಗಂಜಿಯ ಬಟ್ಟಲಿನ ಮಧ್ಯಒಂದು ನೀಲಿ ಪಾತರಗಿತ್ತಿಯ ಚಿತ್ರ;ಪ್ರತಿ ಮುಂಜಾನೆ ಅದರ ತಲುಪಿದ ಮೊದಲಿಗರಾಗಲು ನಮ್ಮ ಪ್ರಯತ್ನ.ಅಜ್ಜಿ ಹೇಳುತ್ತಿದ್ದಳು: “ಪಾಪ, ಆ ಪಾತರಗಿತ್ತಿಯ ತಿಂದುಬಿಡಬೇಡಿ!”ಹಾಗೆಂದಾಗ ನಾವು ನಗುತ್ತಿದ್ದೆವು.ಅಜ್ಜಿ ಯಾವಾಗಲೂ ಹಾಗೆ ಹೇಳುತ್ತಿದ್ದಳು, ಪ್ರತಿಸಲ ನಮಗೆ ನಗು.ಅದು ಅಷ್ಟು ಅಪ್ಯಾಯಮಾನ ಜೋಕಾಗಿತ್ತು.ನನಗೆ ಖಾತ್ರಿ ಇತ್ತು, ಒಂದು ಮುಂಜಾನೆಆ ಪಾತರಗಿತ್ತಿ ವಿಶ್ವದ ಅತ್ಯಂತ ಹಗುರ ನಸು ನಗುವ ನಗುತ್ತ,ನಮ್ಮ ಬಟ್ಟಲಿನಿಂದ ಎದ್ದು ಹಾರಿ ಹೋಗುವುದೆಂದು,ಹೋಗಿ ಅಜ್ಜಿಯ ಮಡಿಲ ಮೇಲೆ ಕೂರುವದೆಂದು. ******* “Butterfly Laughter” In the middle of our porridge platesThere was a blue butterfly paintedAnd each morning we tried who should reach thebutterfly first.Then the Grandmother said: “Do not eat the poorbutterfly.”That made us laugh.Always she said it and always it started us laughing.It seemed such a sweet little joke.I was certain that one fine morningThe butterfly would fly out of our plates,Laughing the teeniest laugh in the world,And perch on the Grandmother’s lap.

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಆರೋಪಿ!! ಚೈತ್ರ ಶಿವಯೋಗಿಮಠ ಆರೋಪಿ!! ಕಾಲನ ವಿರುದ್ಧ ಸಿಕ್ಕಾಪಟ್ಟೆ ಆರೋಪಗಳಿವೆ!! ಅವನು ಸರಿಯಿಲ್ಲ, ಕೆಟ್ಟು ಹೋಗಿದ್ದಾನೆ, ಮೋಸ ಮಾಡಿದ್ದಾನೆ… ಹೀಗೇ ಓಡುತ್ತಲೇ ಇದ್ದಾನೆ ಅವ, ಆರೋಪದ ಪಟ್ಟಿಯಿಂದ ತಪ್ಪಿಸಿಕೊಳ್ಳಲು! ಅರೆ, ಯಾರೋ ಮೊಕದ್ದಮೆ ಹೂಡೇ ಬಿಟ್ಟಿದ್ದಾರೆ… ಓಡುತ್ತಿದ್ದಾನೆ ಅಂತ!! ಇದೆಂತ ಸಂಕಷ್ಟ ಬಂದೊದಗಿತು!! ಮತ್ತಷ್ಟು ಗತಿ ಹೆಚ್ಚಿಸಿದ ಓಡುವವನ ಕಾಲ ಅಡಿಯಲ್ಲಿ ಸಿಕ್ಕು ನರಳುತ್ತಿದ್ದಾರೆ ಕೆಲರು ಮತ್ತೊಂದಷ್ಟು ಅವನ ತೆಕ್ಕೆಯಲ್ಲಿನ ಸಂಪತ್ತನ್ನ ಸಿಕ್ಕಷ್ಟು ಬಾಚಿಕೊಳ್ಳಲೆತ್ನಿಸಿದ್ದಾರೆ.. ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ!! ಆದರೆ ಆರೋಪಿಯನ್ನ ಮಾತ್ರ ಇನ್ನೂ ಬಂಧಿಸಲಾಗಿಲ್ಲ! *********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಲಂಗರು ಹಾಕಿದ ಹಡಗು ವಿಜಯಶ್ರೀ ಹಾಲಾಡಿ ಕಾಡಿಗೆ ಕಪ್ಪಿನ ಕತ್ತಲಲ್ಲಿ ಅವಳು ಬಿರಬಿರನೆ ಸಂಚರಿಸುತ್ತಿದ್ದಳು ಮಸಿ ಇರುಳಿನ ಹಾಗೆ ಚೆಲ್ಲಿಕೊಂಡ ಕೂದಲ ಕಡಲು ತೂರಾಡುತ್ತಿದ್ದವು ಕಂಪಿಸಿದ ಎಲೆಎಲೆ ಮಣ್ಣ ಕಣ ಕಣ ಉದುರುತ್ತಿದ್ದ ಧೂಳುಮಳೆ ಅಲ್ಲೇ ಯಥಾಸ್ಥಿತಿಯಲ್ಲೇ ಗಾಬರಿಬಿದ್ದು ಸ್ತಬ್ಧವಾದವು ಕಾಲ್ಗೆಜ್ಜೆಯ ರಿಂಗಣಕ್ಕೆ ಕಪ್ಪೆ ಕೀಟ ರಾತ್ರಿ ಸಡಗರಿಸಿ ಪುಳಕವಾದವು .. ನದೀ ತೀರದಲ್ಲಿ ಮರ ಗಿಡ. ತಂಗಾಳಿಯೊಂದಿಗೆ ಘಲ್ ಘಲ್ ಸಪ್ಪಳ -ವಾಲಿಸಿದ ಗೂಬೆಯೊಂದು ಬಂಡೆಯಾಚೆ ಸರಿದು ಕ್ಷಣದಲ್ಲಿ ಮರೆಯಾಯಿತು ಅದರ ಮಿದು ಕಂದಮ್ಮ -ಗಳು ತೋಳದಿಂಬೊಳಗೆ ಹುದುಗಿ ಕೂತು ಕಣ್ಣಗಲಿಸಿದವು! ಅವಳ ನೀಳ ಬೆರಳುಗಳಲ್ಲಿ ಮಿಂಚುಹುಳದ ಕಂದೀಲು ತೂಗಾಡುತ್ತಿತ್ತು …. ಚಂದಿರನಾದರೂ ತುಸು ಬಾಗಿ ಜೇನುಮರಳಿಗೆ ಮುತ್ತಿಟ್ಟು ದಾರಿ ತೋರುತ್ತ ಅನುಸರಿಸುತ್ತಿದ್ದ. ಹೂ ಪಕಳೆಯಂತಾ ತನ್ನ ಗೋಧಿ ಪಾದವ ತುಸುವೇ ನದಿ ನೀರಿಗೆ ಸೋಕಿಸಿ ಮಂದಹಾಸ -ದಲ್ಲಿ ಮಿಂದು ಸುಯ್ದಳು ತೊಯ್ಯುವ ಉಡುಪು ಲೆಕ್ಕಿಸದೆ ಕಚಗುಳಿ ಇಡುವ ಮೀನು -ಮರಿಗಳ ಸ್ಪರ್ಶಕ್ಕೆ ತೆರೆಯುತ್ತ ಇಳಿದಳು ಕೊರೆವ ನದಿಗಿಳಿದಳು …. ರೊಯ್ಯರೊಯ್ಯನೆ ಬೀಸು ಹೆಜ್ಜೆಯ ಸುಖಿಸುತ್ತ ನೀರ ಮೇಲೆ ಕಾಲೂರಿ ಲೀಲಾಜಾಲ – ಜಾಲ ದೊಳಗೆ ನಡೆದೇಬಿಟ್ಟಳು ತೀರದಿಂದ ತೀರದಾಚೆ ಗಾಳಿಯಲೆ ಎಣಿಸುತ್ತ ಲಂಗರು ಹಾಕಿದ ಹಡಗೊಂದು ಬೆಚ್ಚಿ ಪಟಪಟನೆ ರೆಕ್ಕೆಬಡಿದು ಸುಮ್ಮನಾಯಿತು ಚುಕ್ಕಿಬೆಳಕು ಸುರಿದಿದ್ದ ಕಂದೀಲು ಅಗೋ …. ಚೂರು ಚೂರೇ ದಿಗಂತ -ದಲ್ಲಿ ಮಾಯವಾಯಿತು ..! ********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸತ್ತ ದೇಹದ ಉಸಿರು ಶ್ರೀದೇವಿ ಕೆರೆಮನೆ “ನೀನು ತುಂಬ ಗಟ್ಟಿ” ಒಂದಿಷ್ಟು ಜಗಳ, ವಾದವಿವಾದ ಮುಗಿಸಿದ ನಂತರ ಎರಡು ದಿನ ಅಖಂಡ ಮೌನವೃತವನ್ನಾಚರಿಸಿ ಇನ್ನೇನು ದಿನ ಮುಗಿದು ಎಲ್ಲರೂ ನಿದ್ದೆಗೆ ಜಾರಿ ನಾನು ಮಾತ್ರ ನಿದ್ರಾಹೀನಳಾಗಿ ಹೊರಳಾಡುವ ರಾತ್ರಿಯ ಮೊದಲ ಪ್ರಹರದ ಕೊನೆಯಲ್ಲಿ ಹೇಳಿದ ನಾನು ಮಾತನಾಡಲಿಲ್ಲ “ನನ್ನ ಬಿಟ್ಟು ನೀನು ಬದುಕಬಲ್ಲೆ ಬಿಡು” ಒಂದುವರೆ ನಿಮಿಷದ ಚಿಕ್ಕ ಮೌನದ ನಂತರ ಮತ್ತೊಮ್ಮೆ ತಣ್ಣನೆಯ ದನಿಯಲ್ಲಿ ಕೂರಲಗಿನಂತೆ ಉಸುರಿದ ನಾನು ಮಾತಾಡಲಿಲ್ಲ ಆಗಲೂ ಯಾವ ಮಾತಿಂದಲೂ ಏನೂ ಪ್ರಯೋಜನವಿಲ್ಲವೆಂಬುದು ವೇದ್ಯವಾಗಿತ್ತು ಅರ್ಥ ಕಳೆದುಕೊಂಡ ಪದಗಳು ಎದೆಯೊಳಗೆ ಬಿಕ್ಕುತ್ತಿರುವುದನ್ನು ಅವನಿಗೆ ತೆರೆದು ತೋರಿಸುವುದಾದರೂ ಹೇಗೆ ಹನಿಗೊಂಡಿದ್ದ ಕಣ್ಣಂಚು ನೋಡುವ ವ್ಯವಧಾನ ಅವನಿಗಿರಲಿಲ್ಲ ಚೆನ್ನಾಗಿ ಗೊತ್ತು ನನಗೆ ಕೆಲವು ದಿನಗಳ ನಂತರ ಮತ್ತೊಮ್ಮೆ ಇಂತಹುದೇ ಜಗಳ ಮನಸ್ತಾಪದ ಸಮಯದಲ್ಲಿ ಆ ದಿನ ಹೇಳಿದ್ದೆನಲ್ಲ ನೀನು ತುಂಬ ಗಟ್ಟಿ ಎಂದು ಎನ್ನುತ್ತ ಈಗ ಹೇಳಿದ್ದಕ್ಕೆ ಅಧಿಕೃತ ಮುದ್ರೆಯೊತ್ತಿ ದೃಢಪಡಿಸಿ ಸೀಲು ಒತ್ತಬಹುದು ಎದೆಯೊಳಗೆ ಭಾವನೆಗಳೆಲ್ಲ ಮುದುಡಿ ದೇಹ ಸತ್ತು ಕೇವಲ ಉಸಿರು ತೇಕುತ್ತಿರುವುದನ್ನು ಹೇಗೆ ತೋರಿಸಲಿ ಅವನು ಮಾತಾಡದ ಒಂದೊಂದು ಕ್ಷಣವೂ ನನ್ನ ಆಯುಷ್ಯದ ಒಂದೊಂದು ವರ್ಷವನ್ನು ಕಡಿಮೆ ಮಾಡುತ್ತಿರುವುದನ್ನು ಹೇಗೆ ಪ್ರಮಾಣಿಸಲಿ ಸತ್ತ ದೇಹದ ಉಸಿರು ತಾಗಿ ಕೊಳೆತ ವಾಸನೆ ಸುತ್ತೆಲ್ಲ ಅಡರಿ ಮೌನ ಇಂಚಿಂಚಾಗಿ ಕೊಲ್ಲುತ್ತಿರುವಾಗ ಜೀವಮಾನದ ಲೆಕ್ಕ ಇಡುವುದಾದರೂ ಯಾರು? ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಕಳಿಸುವ ನಟ್ಟಿರುಳು ಬಿದಲೋಟಿ ರಂಗನಾಥ್ ನಟ್ಟಿರುಳ ಕತ್ತಲೆಯಲಿ ಎಚ್ಚರವಾಗಿ ಕೂತೆ ಕರುಳು ಕಲೆತ ಭಾವ ಉಸಿರಾಡುತ್ತಿತ್ತು ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು ನಟ್ಟಿರುಳ ಕತ್ತಲೆಯಲಿ ಎಚ್ಚರವಾಗಿ ಕೂತೆ ಕರುಳು ಕಲೆತ ಭಾವ ಉಸಿರಾಡುತ್ತಿತ್ತು ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು ಬುಡ್ಡಿ ಹಿಡಿದ ಕೈಯಲ್ಲಿ ಆತ್ಮ ಚರಿತ್ರೆಯ ಮೊದಲ ಪುಟ ಮಬ್ಬು ಬೆಳಕಿನಲ್ಲಿ ನವಿಲೊಂದರ ನಾಟ್ಯ ಅತ್ತರೆ ಕಣ್ಣೀರಲ್ಲಿ ತೊಳೆದು ಹೋಗಬಹುದೆಂದು ಬಿಡುಗಣ್ಣನು ಮುಚ್ಚಿದೆ ಚಲ್ಲಿಸುತ್ತಲೇ ಇರುವ ಚಿತ್ರದ ಹೆಜ್ಜೆ ಸಪ್ಪಳ ಕಿವಿಗಳನ್ನು ತುಂಬುತ್ತಲೇ ಇತ್ತು. ತೆರೆದ ಕಣ್ಣಲ್ಲಿ ಅಳಿಸಿಹೋಗದ ನೂರಾರು ಚಿತ್ರಗಳು ನಡೆಯುತ್ತಿದ್ದವು ಶಶಿಕರನ ಎದೆಯ ಮೇಲೆ. ನೇರಳೇ ಮರವು ಕರೆಯುವ ಕೈ ಸನ್ನೆ ಸೋತ ಕಣ್ಣುಗಳು ಕೂತ ನಟ್ಟಿರುಳು ಯಾವ ಲೋಕದ ಮಾಯೆಯೋ ಬೆರಗು ಕಾಲುಚಾಚಿಕೊಂಡು ಮೈನೆರೆಯುತ್ತಿದೆ ನೋಡು ನೋಡುತ್ತಿದ್ದಂತೆ ಕೋಲುಕುಟ್ಟುತ್ತಾ ನಡೆದು ಬರುವ ವಿಸ್ಮಯ ಚಿತ್ರ ಹೇಗಲ ಮೇಲೊಂದು ಕೆಂಪುಗಿಣಿ ವಸ್ತ್ರ ಮೈ ತುಂಬಾ ರೋಮಗಳು ಹೋಗುತ್ತಲೇ ಇದ್ದ ಕಣ್ಣೊಳಗಿನ ಹೆದ್ದಾರಿಯ ಮೇಲೆ ಕಣ್ಣ ರೆಪ್ಪೆ ಮುಚ್ಚಿ ಧ್ಯಾನಿಸಿದೆ ಜಂಬೂವೃಕ್ಷದ ಮುಂದೆ ಅಜ್ಜನ ತುಟಿಬಿಚ್ಚದ ನಗು ಭೂಮಿಯಿಲ್ಲದ ಜಲಜಂಬೂದ್ವಿಪ ಎದೆ ಚಲ್ಲಿ ಮಲಗಿದೆ.. ನಾನೂ ಮಲಗಿದೆ ಕರುಳ ದ್ವಿಪದ ಎದೆಯ ಮೇಲೆ ಮಗುವಿನಂತೆ.! ಕಣ್ಣಲ್ಲಿ ಕಣ್ಣಾದವರನ್ನು ಬೆಸೆಯಲು. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಿರಹಿಣಿ ವಿಜಯಶ್ರೀ ಹಾಲಾಡಿ (ಸುಮ್ನೇ ಹೀಗೊಂದು ಝಲಕ್) ಯಾರೋ ಕವಿ ಬರೆದವಿರಹಿಣಿಯ ಚಿತ್ರಣಕಾದು ಕಾದು ಕಾಲುಬೆರಳುಸಪೂರ ಆಗಿ ಕಾಲುಂಗುರಕಳೆದುಹೋದ ಕತೆ .. ಅಬ್ಬಎಷ್ಟೂಂತ ಕಾಯುವುದುಮೊನ್ನೆಯಿಂದ ಇದ್ದೇನೆಇಲ್ಲೇ ಆನ್ ಲೈನಲ್ಲೇ….ಮಧ್ಯರಾತ್ರಿಯ ಕೊನೆಗೆಐದು ನಿಮಿಷತೂಕಡಿಸಿದಾಗಲೂ ಸುಪ್ತಮನಸ್ಸಿನ ಎಚ್ಚರಹೃದಯ ಹಿಂಡಿದಂತೆನರನರಗಳೆಲ್ಲ ಹೊಸೆದಂತೆರಿಂಗ್ ಟೋನೇ ಕರೆದಂತೆ … ಎಲ್ಲಿ ಹೋದ ಇವನುಮರೆತನೇ ಮೊಬೈಲ್-ಕಳಕೊಂಡನೇ -ನೆಟ್ವರ್ಕ್ಇಲ್ಲದ ಕಾಡುಗಳಲ್ಲಿಅಲೆಯುತ್ತಿರುವನೇಈ ನನ್ನವನು …ಅಥವ ಇನ್ನವಳ್ಯಾರೋಶ್! ಹುಚ್ಚಿ ಹಾಗೇನಿರಲ್ಲ. ! ‘ಇವಳೇನು ಇಲ್ಲೇಬೀಡುಬಿಟ್ಟಿದ್ದಾಳೆಂದು’ಗೆಳೆಯ ಗೆಳತಿಯರೆಲ್ಲHii. ಎಂದರುಅಣಕಿಸಿ ನಕ್ಕರುಕಣ್ಣುಹೊಡೆದರುಛೆನನ್ನ ವಿರಹವನದಿಯಂತೆ ಬೆಳೆಸುತ್ತಲೇಆಫ್ ಲೈನಾದರು …. ಸಿಟ್ಟಿಗೆ ಮೊಬೈಲ್ ಕುಕ್ಕಿಜೋಡಿಸಿಟ್ಟ ಪುಸ್ತಕಬಟ್ಟೆಗಳನೆಲ್ಲ ನೆಲಕ್ಕೆಅಪ್ಪಳಿಸಿದ್ದಾಯಿತುಸಂದೇಶಗಳ ಶಬ್ದಕ್ಕೆಓಡೋಡಿ ಬಂದುಹೊಸ್ತಿಲಿಗೆ ಕಾಲೆಡವಿಮಂಡಿ ತರಚಿದ್ದಾಯಿತು ಹೋಗೆಲೋ ಹುಚ್ಚಕತ್ತೆ ಕೋತಿ ಕರಡಿಎಂದೆಲ್ಲ ಅವನಿಗೂಟೈಪಿಸಿ ಬಯ್ದದ್ದಾಯಿತುಪ್ರೀತಿಮಾತೂ ಹೇಳಿದ್ದಾಯಿತುಭಯದಿಂದಲೇ ಕಾಲ್ ಮಾಡಿಸ್ವಿಚ್ ಆಫ್ ನಾಟ್ ರೀಚೇಬಲ್ಉಲಿಗಳಿಗೆದನಿತೆಗೆದು ಅತ್ತದ್ದಾಯಿತು … ನಾಳೆಯಾದರೂ ಸಿಗುವನೆಂದುಓಹ್ನೆಟ್ ಪ್ಯಾಕ್ ಮುಗಿಯುವುದೆಂದುಪೇಟೆಗೆ ಹೋಗಿಬರುವೆತಡೆಯಿರೆಂದು …ಥೋ ! ಈಗಿನ್ನೂಹಾಲುಬೆಳದಿಂಗಳುಬೆಳಗಿನ ಜಾವದ ೩ ! **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮನದಿಂ ನಗು ರೇಖಾ ವಿ.ಕಂಪ್ಲಿ ನಗುವ ನಗು ಮನದಿಂ ಮಗುವ ನಗುವ ನಗು ನಗುವ, ನಗಲೆಂದು ನಗದಿರು ನಗುವ ನಕ್ಕರೆ ಸಕ್ಕರೆ ಗಿಂತ ಸಿಹಿಯಾದ ನಗುವ ನಗು ಮೊಗದ ಕಳೆಗಾಗಿ ನಗುವ ನಗದಿರು ಮನದ ಕೊಳೆಯನು ತೊರೆದು ನಗು ಬುದ್ಧಿ ಶುದ್ಧಿಯೊಳು ನಗುವ ನಗು ಕಿರು ನಗೆಯು ನೊರೆ ಹಾಲಿನ ನಗುವ ನಗು ಝರಿ ದಾರೆಯ ಜಳಪಿಸುವ ನಗುವ ನಗು ನಗುವ ನಗು ಮನದಿಂ ನಿನ್ನ ಮನದ ನಗೆಯ ನಗು ಎದಿರಿರುವವನ ಎದೆ ನಗುವಂತೆ ನಗು ಅಪಹಾಸ್ಯ ಮಾಡದೇ ಬರಿ ವಿನೋದಕಾಗಿ ನಗುವ ನಗು ಪರ ಮನ ಅರಿತು ನಗುವ ನಗು ನಗುವ ನಗು ಮನದಿಂ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ಪಟಿಕವಾಗಬೇಕಿದೆ ಮೂಗಪ್ಪ ಗಾಳೇರ ಹಕ್ಕಿಗಳಿಗೆ ಗೂಡ ಕಟ್ಟಲು ಯಾವ ಮರದ ಅನುಮತಿ ಬೇಕಿಲ್ಲ ಇರುವೆಗಳು ಸಾಲಾಗಿ ನಡೆಯಲು ಯಾವ ಅಭಿಯಂತರರ ನೀಲಿನಕ್ಷೆ ಬೇಕಿಲ್ಲ ಹಾಗಂತ ಈ ಹೃದಯವೇನು ಬಿಟ್ಟಿ ಬಿದ್ದಿಲ್ಲ ನಿನ್ನಿಷ್ಟ ಬಂದಾಗೆ ಬಂದು ಹೋದಾಗೆ ಹೋಗಲು………. ಶಾಂತ ಸಾಗರದಲ್ಲಿ ತೇಲುವ ನಾವೆಯಂತೆ ಈ ಹೃದಯ ಮೊದಲು ದಡ ಸೇರಬೇಕೋ ಇಲ್ಲೇ ಇದ್ದು ಸಾಗರದ ಸವಿ ಸವಿಯಬೇಕೋ……. ಎದೆಯೊಳಗೆ ನೂರೆಂಟು ತಳಮಳ ಏಕಾಂತದಲ್ಲಿ ಇದ್ದರು ನಿನ್ನದೇ ಪ್ರೀತಿಯ ಪರಿಮಳ ಮತ್ತೆ ಮತ್ತೆ ಹೃದಯದ ಕೋಣೆಯಲ್ಲಿ ನಿನ್ನದೇ ಸಡಗರ…….. ಹೆತ್ತುಹೊತ್ತ‌ ಜೀವಗಳಿಗೆಲ್ಲಾ ನನ್ನ ಏಕಾಂತದ ಅರಿವಾಗಿದೆ ಹಣತೆ ಹಚ್ಚಬೇಕಿದೆ ನನ್ನಲ್ಲಿ ನೀನು ಹಾಗೆ ಹಚ್ಚಿದ ಹಣತೆ ಪಸರಬೇಕಿದೆ; ಗಡಿ ಇಲ್ಲದ ವಿಶ್ವದ ಬೀದಿಯಂಗಳದಲ್ಲಿ………. ಒಳ ಕೋಣೆಗಳನ್ನೆಲ್ಲಾ ಚದುರಿ ಸ್ಪಟಿಕ ವಾಗಬೇಕಿದೆ; ಜಾತಿ ಧರ್ಮ ಮೀರಿದ ಹೆದ್ದಾರಿ ಪಯಣದಲ್ಲಿ………. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೋರಾಟ ಪ್ಯಾರಿ ಸುತ ದೈತ್ಯಶಹರ ರಾಜಬೀದಿಯೊಳಗೆ ಹೋರಾಟ ಮುಚ್ಚುಮರೆಯಲಿ ಜಮಾಯಿಸಿ ಇಟ್ಟ ಕಲ್ಲುಗಳತೂರಾಟ ಎತ್ತರದಲ್ಲಿ ಜೋತುಬಿದ್ದ ಮೈಕಿನಲ್ಲಿ ರಕ್ತಕುದಿಸುವ ಘೋಷಣೆಗಳ ಕೂಗಾಟ ಕಪ್ಪುನೀಲಿಶಾಯಿ,ರಕ್ತದಿಂದ ಬರೆಯಲ್ಪಟ್ಟ ರಟ್ಟು,ತಗಡು,ಬಿಳಿಬಟ್ಟೆಗಳ ಹಾರಾಟ ಗುಂಪುಗಳ ಮಧ್ಯಸಿಕ್ಕು ಕಾರು,ಬೈಕು,ಬಸ್ಸು ಲಾರಿ, ರೀಕ್ಷಾಗಳ ಚೀರಾಟ ಹಳ್ಳಿಕೇರಿಗಳಿಂದ ಸಂತೆಬಜಾರಿಗೆ ಬಂದವರ, ಊರಿಂದ ಊರಿಗೆ ಹೋಗುವವರ ಶಾಲಾಕಾಲೇಜು ಮಕ್ಕಳ,ಓಪ್ಪತ್ತು ಊಟದ ವ್ಯಾಪಾರಸ್ಥರ,ಕೂಲಿ ನಂಬಿದ ಸ್ಟೇಷನ್ ಕೂಲಿಕಾರ್ಮಿಕರ, ಊರುಕೇರಿಯ ಸಾರ್ವಜನಿಕರ ಪರದಾಟ ಅವರದೇ ಜೀವನದಲ್ಲೊಂದಿಷ್ಟು ಗೋಳಾಟ ಅರೆಸೇನೆ,ಪೊಲೀಸಪಡೆಗಳಿಂದ ಮದ್ದುಗುಂಡು, ಅಶ್ರುವಾಯುಗಳ ಎರಚಾಟ ಕಟ್ಟಾಳು ಕರೆ ತಂದವರಿಗೆ ಬಿರಿಯಾನಿ ಬಾಡೂಟ ಬೀರುಬ್ರಾಂಡಿ,ವಿಸ್ಕಿ ಕುಡಿದವರ ನಡುವೆ ಏರ್ಪಟ್ಟ ಮಂಗನಾಟ ಎಡಬಲ ನೀತಿ ನಿಯಮಗಳ ನಡುವೆ ತಿಕ್ಕಾಟ ಸಾವಿರ ಸಾವಿನ ಪ್ರತಿಫಲಕ್ಕೆ ನಡುರಾತ್ರಿ ದಕ್ಕಿದ ಸ್ವಾತಂತ್ರ್ಯಕ್ಕೆ ಶನಿಕಾಟ *******

ಕಾವ್ಯಯಾನ Read Post »

You cannot copy content of this page

Scroll to Top