ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ವರ್ಕ್ ಫ್ರಂ ಹೋಂ ಸುಜಾತಾಗುಪ್ತ ವರ್ಕ್ ಫ್ರಂ ಹೋಂ ವರ್ಕ್ ಫ್ರಂ ಹೋಂ ಕೇಳಲು ಖುಷಿಯಾಯಿತು ಕರೋನ ಬಿಸಿಯಲು ಮನ ತಂಪಾಯ್ತು ಪತಿರಾಯನ ಸಾಂಗತ್ಯಕೆ ವಾರಾಂತ್ಯವೇ ಬೇಕಿಲ್ಲ ಅಹಾ..ಎನಿಸಿತು ಆ ಕ್ಷಣ. ಮನೆಯಲ್ಲೇ ಇದ್ದರೂ ಕಂಪ್ಯೂಟರ್ ಸಂಗ ಉಷೆ ಸಂಧ್ಯೆಯ ಸ್ವಾಗತಿಸೋತನಕ ತಪ್ಪದ ಬವಣೆ.. ಆಯ್ತು ಮನೆಯೇ ಕಛೇರಿ.. ಕರೋನ ಬೆನ್ನಲೆ ಬಂತು ಮಕ್ಕಳಿಗೆ ಬೇಸಿಗೆ ರಜೆ ಶಾಲೆಯು ಸ್ವೇಚ್ಛೆಯ ನೀಡಿತ್ತು ಕರೋನ ಅದ ನುಂಗಿತ್ತು ರಜೆಯ ಮಜದ ಮೂಡಲ್ಲಿದ್ದ ಮಕ್ಕಳಿಗೆ ಗೃಹ ಬಂಧನ… ಅದೆಂಥ ವಿಪರ್ಯಾಸ.. ಮೌನದೆ ಕೂರಲು ಗೊಂಬೆಗಳಲ್ಲ ಸ್ವಾಮಿ.. ಅವರು ಚಿನ್ನದಂತ ಚಿಣ್ಣರು ಆಡಿ ಕುಣಿದು ಕಿರುಚಾಡಿದರೆ ಪತಿರಾಯರಿಗೆ ಕಿರಿಕಿರಿ ಬಾಯ್ಮುಚ್ಚಿ ಕೂರಲು ಪುಟಾಣಿಗಳಿಗೆ ಕಸಿವಿಸಿ ಎಲ್ಲಿಯದು ಈ ಪರಿತಾಪ.. ಗಂಟೆಗೊಮ್ಮೆ ಬಿಸಿ ಕಾಫಿ- ಚಹ ಇಲ್ಲದಿರೆ ಪತಿಗೆ ತಲೆ ಬಿಸಿಯಂತೆ ಮಾಡು ತೊಳೆ ಮಾಡು ತೊಳೆ ನಂಗೆ ಮೈಯೆಲ್ಲಾ ಬಿಸಿ ಬಿಸಿ .. ಬೇಸರ ಕಳೆಯೆ ಅಪ್ಪಮಕ್ಕಳಿಗೆ ಕುರುಕುಲು ತಿಂಡಿ ಬೇಕಂತೆ ರೇಷನ್ನೇ ಮುಗಿದಿರೆ ನಾ ತರಲಿ ಎಲ್ಲಿಂದ ನೀವು ಹೇಳಿ ಸ್ವಾಮಿ.. ವರ್ಕ್ ಫ್ರಾಂ ಹೋಂ ಲಿ ನಾ ಅಡುಗೆ ಮನೆಯಲ್ಲಿ ಬಂಧಿ ಅಪ್ಪ ಮಕ್ಕಳನಡುವೆ ಬಡವಾದೆ ಟಿ.ವಿ ಬಂದ್ ಆಯ್ತು ಮೊಬೈಲ್ ಪೂರ್ತಿ ಕಟ್ ಆಯ್ತು ಗೆಳತಿಯರ ಸಂಗ ಮರೆತೋಯ್ತು ವರ್ಕ್ ಫ್ರಂ ಹೋಂಸಾಕಾಯ್ತು.. ಶ್ರೀ ರಘುರಾಮ ನಿನಗೆ ಶರಣು ಮಹಾಮಾರಿಯ ಸಂಹರಿಸು ಜಗಕೆ ಆರೋಗ್ಯ ನೀಡು ಪತಿಯ ಕಛೇರಿಗೆ ಕಳುಹಿಸು ಮಕ್ಕಳ ಶಾಲೆಗೆ ಕಳುಹಿಸು ನಂಗೆ ನೆಮ್ಮದಿ ನೀಡೋ ಕರುಣಾಮಯಿ ಶ್ರೀ ರಾಮ.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪದ್ಯ ಸೌತೇಕಾಯಿ ಅಶ್ವಥ್ ಪದ್ಯ ಸೌತೇಕಾಯಿ ರಾಮನವಮಿಗೆಂದೇ ಪೋಷಿಸಿ ಪಾಲಿಸಿ ಬೆಳೆಯಿಸಿದ ಸೌತೇಬಳ್ಳಿ ನೀರುಣಿಸಿ ಹೂವರಳಿ, ಈಚು ಕಾಯಾಗಿ ಹೊರಳಿ ಮರಿ ಮುನ್ನೂರೆಣಿಸುವ ಉದ್ದ ಬಳ್ಳಿ ರುಚಿಯಲ್ಲೆಣೆಯಿಲ್ಲ ಹೋಲಿಕೆಯೆಲ್ಲಾ ಸಣ್ಣ ಹೇಳತೀರದ ಹೊಳಪು, ಕೆನೆಯಂಥಾ ಬಣ್ಣ ಬಾಯಿ ತಾಕಿದರಾಗ ಗರಿಗರಿಯಾದ ಸದ್ದು ನಾಲಗೆಯು ಬಾಚಿ ಮಾಡುವುದು ಮುದ್ದು ತಣ್ಣನೆಯ ಆ ಅನುಭವ ತರಿಸುವುದು ಮುಗುಳ್ನಗೆ ಹೊತ್ತ ಮುಖವನ್ನೊಂದು ಎಂಥಾ ಬದಲಾವಣೆ , ಮನ ಧಿಮ್ಮಗೆ ಸಾಧ್ಯವುಂಟೇ ಒಂದು ಸೌತೇಕಾಯಿಗೆ ನುಂಗಿಯಾದ ಮೇಲೆ ರುಚಿಯೆಲ್ಲ ಮಾಯ ಆದರೂ ಮುಗಿದೇ ಹೋಯಿತೆನ್ನುವ ಗಾಯ ಬಾಯಿರುಚಿಗೆ ಕಚ್ಚಿದ ಈ ಕಾಯಿಪಲ್ಯ ಇದಕೂ ಬೇಕೇ ಒಂದು ದಿಟವಾದ ಪದ್ಯ? ಎಲ್ಲ ಸರಿಯಿದ್ದರೆ ಆಗಬೇಕಿತ್ತು ಇಂದು ಹೆಸರುಬೇಳೆ ಜೊತೆಗೆ ಕೊತ್ತಂಬರಿ ತಂದು ಹಣ್ಣು ಹೊಳೆಸಿದ ಬಣ್ಣ ಕನಕಾಂಬರಿ ಪಾನಕದ ಜೊತೆಗೆ ಕೊಡುವ ಕೋಸಂಬರಿ! ಸೀತಾಪತಿ ಹೆಸರಲಿ ಎಂಥಾ ಯೋಜನೆಯಿತ್ತು ಕಿತಾಪತಿಯ ಜೊತೆ ಅಮಲು ಏರಿಸಲಿತ್ತು ರಾಮನವಮಿಗೆಂದೆಣಿಸಿದ್ದ ಕೋಸಂಬರಿ ಬುಸುಗುಡುತಲಾಯ್ತು ದುಷ್ಟ ಕಾದಂಬರಿ! ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಾರ್ಕೆಟ್ಟು, ಮಾತು ಮತ್ತು ಶಬರಿ ಅಂಜನಾ ಹೆಗಡೆ ಬ್ರ್ಯಾಂಡೆಡ್ ಶರ್ಟು ತೊಟ್ಟು ಸರ್ವಾಲಂಕೃತನಾದ ರಾಮ ಮಾರ್ಕೆಟ್ಟಿನಲ್ಲಿ… ಇದೇ ಮೊದಲಭೇಟಿ!! ಕಣ್ಣಗಲಿಸಿ “ಹೌ ಆರ್ ಯೂ” ಎಂದು ಕೈ ಕುಲುಕಿದೆ ಥಟ್ಟನೆ ಪ್ರತ್ಯಕ್ಷನಾಗಿದ್ದಕ್ಕೆ ಒಂದು ಪ್ರೀತಿಯ ಆಲಿಂಗನ… ಬಿಲ್ಲು ಬಾಣಗಳೆಲ್ಲಿ ಎಂದೆ… ಉತ್ತರವಿಲ್ಲ ಕಣ್ಣು ಮಿಟಕಿಸಿದ ಥೇಟು ಕಮರ್ಷಿಯಲ್ ಸಿನೆಮಾವೊಂದರ ನಾಯಕನಂತೆ… ಕಣ್ತಪ್ಪಿಸಿಕೊಂಡಿದ್ದ ಟೀನೇಜಿನ ಕನಸೊಂದು ವನವಾಸದಿಂದ ಮಾರ್ಕೆಟ್ಟಿಗೆ… ಮಿಟಕಿಸಿದ್ದು ಎಡಗಣ್ಣೋ ಬಲಗಡೆಯದೋ ಗೊಂದಲ… ಕೌಸಲ್ಯೆ ಸುಮಿತ್ರೆ ಅಹಲ್ಯೆ ಸೀತೆ…. ಎಲ್ಲರ ಪ್ರೀತಿಯ ರಾಮ ಅದ್ಯಾರ ಹಂಬಲಗಳ ಉತ್ಸವಮೂರ್ತಿ ಯಾರ ಕಳವಳಗಳ ಉತ್ತರ ಯಾವ ಯುಗಕ್ಕೆ ಯಾರು ಕೊಟ್ಟ ಜನ್ಮ… ದಪ್ಪಮೀಸೆಯ ದೇವಮಾನವ!! ನಾನಿವತ್ತು ಉದ್ದನೆಯ ಮೀಸೆಯ ಜಿರಲೆಯೊಂದನ್ನು ಬಾತ್ರೂಮಿನಲ್ಲಿ ಸಾಯಿಸಿಬಿಟ್ಟೆ “ನಡಿ ಕಾಫಿ ಕುಡಿಯೋಣ” ಎಂದವನ ಮಾತನ್ನೇ ಹಿಂಬಾಲಿಸಿದೆ ಮಾರ್ಕೆಟ್ಟಿನ ತುಂಬೆಲ್ಲ ಮಾತುಗಳು… ಕೊನೆಯಿಲ್ಲದ ಗುರಿಯೂ ಇಲ್ಲದ ಬರಿದೇ ಮಾತುಗಳ ವಿಧವಿಧ ಅವತಾರದ ಒಂದೊಂದು ಮುಖಕ್ಕೂ ಒಂದೊಂದು ರೂಪ… ಸುತ್ತ ಕಣ್ಣಾಡಿಸಿದೆ… ಮೌನಕ್ಕೆ ಶರಣಾಗಿ ನಿಂತಲ್ಲೇ ಶಬರಿಯಾದೆ!! **********

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಗಝಲ್ ವಿನಿ ಬೆಂಗಳೂರು ಒಲವ ಬಂಧದಲಿ ಮನವು ಉಲ್ಲಾಸದಿ ತೇಲುತಿದೆಯಲ್ಲ ಗೆಳತಿ ಬಾಳ ಪಯಣದಲಿ ಸಂತಸವೆ ತುಂಬುತಿದೆಲ್ಲ ಗೆಳತಿ ಪ್ರಕೃತಿಗೆ ಮತ್ತೆ ಚೈತ್ರ ಮೂಡಿಸಿ ವಸಂತ ನಗುತಿದೆಯಲ್ಲ ನೋಡು ಕವಿ ಮನದಲಿ ಶೃಂಗಾರ ಕಾವ್ಯಕೆ ಮುನ್ನುಡಿ ಬರೆದಿದೆಯಲ್ಲ ಗೆಳತಿ ಮೊದಲ ಮಳೆಗೆ ಹೂಗಳರಲಿ ಸುಗಂಧವನು ಬಿರುತಿದೆಯಲ್ಲ ಇಲ್ಲಿ ಭೃಂಗವದು ಮಕರಂದ ಬಯಸಿ ಹೂಗಳಲಿ ಮಧುವ ಹೀರುತಿದೆಯಲ್ಲ ಗೆಳತಿ ಬೀಸುವ ಗಾಳಿಯಲಿ ಮಾಧುರ್ಯ ತುಂಬಿ ಸೆಳೆಯುತಿದೆಯಲ್ಲ ತಂಪಾದ ಮನದಲಿ ಹೊಸ ಕನಸುಗಳು ಮೂಡುತಿದೆಯಲ್ಲ ಗೆಳತಿ ಕಣ್ಗಳು ತುಂಬಿ ಬಯಕೆಗಳನು ಹೇಳಲಾರದೆ ತವಕದಲಿ ಕಾಯುತಿದೆಯಲ್ಲ ಇನಿಯನಾಗಮನವು ವಿಜಯಳ ಬಾಳಿಗೆ ಬೆಳಕಾಗಿ ಚಿಮ್ಮಿದೆಯಲ್ಲ ಗೆಳತಿ *********

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಬರಿಗಾಲಿನ ಭಾರತ ಶಿವಶಂಕರ ಸೀಗೆಹಟ್ಟಿ. ಹಸಿವು ಇವರ ಹೊಟ್ಟೆಗಿದೆ ಬಟ್ಟೆ ಜೋಳಿಗೆಗಳು ಇವರ ಹೆಗಲಿಗಿವೆ ಅರಸಿ ಹೊರಟಿದ್ದಾರೆ ಊರ ಹಾದಿ ದಾರಿ ಸಾಗುತ್ತಿಲ್ಲ ದಿನವೂ ಮೂರು ಮೈಲಿ ಕಾಲಿಗೂ ಕಾಲಕ್ಕು ಹೊಂದಾಣಿಕೆ ತಪ್ಪಿ ಹೋಗಿದೆ ನಡೆಯುವವರ ಕಾಲುಗಳು ಬಿಗಿಯುತ ರಕ್ತ ಸುರಿಸುತ್ತಿವೆ ಅಲ್ಲಲ್ಲಿ ಕಂಡು ಕೇಳುವ ಬೂಟುಗಾಲಿನ ಸದ್ದುಗಳು ಗಾಬರಿ ಹುಟ್ಟಿಸುತ್ತಿವೆ ಹಸಿವು ಕಾಣದವರು ಆಹಾರದ ಉಸ್ತುವಾರಿಗಳಾಗಿದ್ದಾರೆ ದೂರದೂರಿಗೆ ಹೊಟ್ಟೆ ಹೊರೆಯಲು ಬಂದವರು ಒಟ್ಟಿಗೆ ನಡೆಯುತ್ತಿದ್ದಾರೆ ಹೊತ್ತು ಹೊತ್ತಿಗೂ ಇಲ್ಲಿ ಹೊಟ್ಟೆ ಸಾಕದವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ ನಡೆಯುವರಿಗೆ ಕಾಲು ಸೋತು ದೇವರ ಕರೆಯುತ್ತಿದ್ದಾರೆ ಹಿಟ್ಟು ಇರದೆ ಹೊರಟ ಜನ ಹಟ್ಟಿ ಕಡೆಗೆ ಹೊರಟಿದ್ದಾರೆ ಕಟ್ಟಿದ ಕಟ್ಟಡಗಳೆಲ್ಲ ಇವರನ್ನೆ ನೋಡುತಿವೆ ಹಾಕಿದ ಟಾರು ಮಾಡಿದ ರೋಡುಗಳಲ್ಲ ಇವರಿಗಾಗಿ ಕಾಯುತ್ತಿವೆ ಬೀದಿ ಬದಿಯ ಜನರು ಕರಗಿ ಬಡಕಲಾಗಿದ್ದಾರೆ ಬದುಕಿನ ಏರು ಪೇರುಗಳು ಇವರ ಲೆಕ್ಕಕ್ಕೆ ಸಿಗುತಿಲ್ಲ ಹೊಟ್ಟೆ ತುಂಬಿದವರು ಕೂಸಿಗೆ ಕುಲಾಯಿ ಹೊಲಿಸುವ ತಯಾರಿಯಲ್ಲಿದ್ದಾರೆ ಸಾವು ನೋವುಗಳ ನಗಾರಿ ತನ್ನನ್ನೆ ಬಡಿದುಕೊಳ್ಳುತ್ತಿದೆ ಬದುಕಿರುವ ಮನುಷ್ಯರೀಗ ಭೂಮಿಗಿಳಿದ್ದಿದ್ದಾರೆ ಎಲ್ಲಾ ಸಾಂತ್ವನದ ಕೂಗುಗಳು ಮೂಕವಾಗಿವೆ ಇದು ಬರಿಗಾಲಿನ ಭಾರತ ಇಲ್ಲಿ ಬವಣೆಗಳು ಸದಾ ಶಾಶ್ವತ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನ ದನಿ ವೀಣಾ ನಿರಂಜನ ‘ನಿನ್ನನ್ನು ಬಂಧಿಸಲು ಆಜ್ಞೆಯಾಗಿದೆ. ನೀನು ಯಾರು?’ ಕೇಳಿದರವರು ‘ನಾನು ಕವಿತೆ’ ಎಂದೆ. ಅವರೆಂದರು – ‘ಹಾಗಾದರೆ ನಿನ್ನ ನಾಲಿಗೆ ಸೀಳಬೇಕು.’ ನಾನು ತಣ್ಣಗೆ ‘ಉಸಿರು’ ಎಂದೆ. ಅವರು ಮತ್ತೆ ನಿನ್ನ ಕತ್ತು ಹಿಸುಕಬೇಕು’ ಎಂದರು ನನ್ನುಸಿರು ಗಾಳಿಯಲ್ಲಿ ಬೆರೆತು ಹೋಗಿದೆ’ ಎಂದೆ! ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ !! ಎಲ್ಲೋ ದೂರದಲ್ಲಿ ಯಾರೋ ಅಳುವ ದನಿ ನಾನು ತಟ್ಟಿ ಮಲಗಿಸುತ್ತಿದ್ದೇನೆ ನನ್ನ ಮಗುವನ್ನು ಎದೆಯ ಬೇಗುದಿಗೆ ಸಾಂತ್ವನ ಹೇಳಬೇಕಿತ್ತಲ್ಲ! ** ನಾನು ಮೌನಿಯಾಗಿದ್ದೆ. ಅವರು ನನ್ನನ್ನು ಹೇಡಿ ಎಂದರು ! ನಾನು ಮಾತಾಡ ತೊಡಗಿದೆ ಈಗ ಅವರು ನನ್ನನ್ನು ದ್ರೋಹಿ ಎನ್ನುತ್ತಿದ್ದಾರೆ !! ವೀಣಾ ನಿರಂಜನ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಬರಿ ಡಾ.ಗೋವಿಂದ ಹೆಗಡೆ ಯಾವುದೋ ಬೇಡರ ಹುಡುಗಿ ಹೆಸರಿಲ್ಲದೇ ಮರೆಗೆ ಸಲ್ಲುವ ಬದಲು ‘ಶಬರಿ’ ಎನಿಸಿ ತಪಕೆ ಹೆಸರಾಗಿ ನಿಂತಿದ್ದು ರಾಮನ ಮಹಿಮೆಯೇ ಶಬರಿಯದೇ ಕನಸ ಕಂಡಿರಬಹುದೇ ಹುಡುಗಿ ಕುದುರೆಯೇರಿ ಬರುವ ಯಾವುದೋ ಉತ್ತರದ ರಾಜಕುವರನದು ಹುಡುಗಿ ಹೆಣ್ಣಾಗಿ ಹಣ್ಣಾಗಿ ಹಪ್ಪು ಮುದುಕಿಯಾಗುವವರೆಗೂ ಕಾದು ಕಾದು ಪಾತ್ರ ಬದಲಿಸಿ ಹರಿದಿರಬೇಕು ನದಿ ಕಾದ ಕಾಯುವ ಕಾವಿನಲ್ಲಿ ಕಾಮನೆಗಳು ಕರಗಿ ನೋಡುವ ಊಡುವ ಬಯಲ ಬಯಕೆ ಉಳಿದು ಕಣ್ಣು ಮುಚ್ಚುವ ಮೊದಲು ಕಂಡೇನೇ ಎಂದು ಕಣ್ಣ ಕೊನೆಯಲ್ಲೆ ಜೀವವನಿರಿಸಿ ಕಾದಿದ್ದಕ್ಕೆ ಬಂದ ಉತ್ತರವಾಗಿ ಅರಸುಮಗನಾಗಲ್ಲ ತಾಪಸಿಯ ವೇಷದಲ್ಲಿ ಕೊನೆಗೂ ಬಂದ ಘನಿತ ಮೋಡ ಎಂಥ ಮಳೆ ಬಂದಿರಬೇಕು ಆಗ! ಯಾವ ಹಣ್ಣನ್ನು ಯಾರು ತಿಂದಿರಬೇಕು ಕಳಿತ ನೇರಳೆಯಂಥವನಿಗೆ ನೇರಳೆಯ ಕೊಟ್ಟಳೇ ಮುದುಕಿ ಕಚ್ಚಿದ್ದಳಂತೆ, ಎಂಜಲು ಹಣ್ಣು ಹಿಡಿದು ಕಾದಿದ್ದಳಂತೆ -ಆಹಾ! (ರಾಮಫಲವನ್ನು ಸವಿದಳೇ ಕಣ್ಣಲ್ಲೇ) ನಡುಗು ಕೈ ಮೈಗಳಲ್ಲಿ ಏನು ಕೊಟ್ಟಳೋ ಪಡೆದಳೋ ಯಾರಿಗೆ ಗೊತ್ತು ವಿರಹ ತಪ್ತ ರಾಮ ; ರಾಮ ತಪಿತೆ ಶಬರಿ ಇದ್ದೀತು ಅವನಿಗದು ಎಂದಿನಂಥದೇ ಇನ್ನೊಂದು ಹಗಲು ಶಬರಿಗೋ ಸಂಜೆಯರಳಿ ಹಗಲು ಸಂಜೆಯಿರದ ಹಗಲು *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಉರಿಪಾದವ ಊರಿನಿಂತ ಹೆಜ್ಜೆಗೆ ಎಸ್.ಕೆ.ಮಂಜುನಾಥ್ ಇಟ್ಟಿಗೆ ಕಲ್ಲು ಹೊತ್ತು ಕಟ್ಟಿದ ಯಾವ ಮಹಲು ನಮ್ಮದಲ್ಲ ನೆರಳನು ನೀಡುತ್ತಿಲ್ಲ ಕೈಬೀಸಿ ಕರೆದ ನಗರ ಕತ್ತು ಹಿಡಿದು ನೂಕಿತ್ತಲ್ಲ ಹಸಿವೆಂದು ಬಂದೆವು ಹಸಿವಿಗಾಗಿ ದುಡಿದೆವು ಮತ್ತೆ ಮತ್ತೆ ಹಸಿವ ಹೊಟ್ಟೆ ಬೆನ್ನ ಮೇಲೆ ಹೊರೆಯ ಕಟ್ಟೆ ಹಸಿವಿನಿಂದ ಅಳುವ ಮಗು ಬೀದಿಬದಿಯ ಅನ್ನದೊಡೆಯ ಕಾಣದಾದನು ಎಲ್ಲಿಗೋದನು ಕರೆತಂದು ಬಿಟ್ಟ ಯಾವ ಬಸ್ಸು ರೈಲು ಕಾಣುತ್ತಿಲ್ಲ ಈ ಹೆಜ್ಜೆಗೂ ಈ ದಾರಿಗೂ ನಂಟು ಇನ್ನು ಮುಗಿದಿಲ್ಲ ಹಸಿವ ಗಂಟುಮೂಟೆ ಕಟ್ಟಿಕೊಂಡು ತಲೆಯ ಮೇಲೆ ಹೊತ್ತುಕೊಂಡು ತಾವೇ ಮಾಡಿದ ಹೆದ್ದಾರಿಯ ಮೇಲೆ ಮೈಲುಗಲ್ಲು ಎಣಿಸುತ್ತ ಹೆಜ್ಜೆ ಇಟ್ಟುಕೊಂಡು ಭಾರತ ಬರಿಗಾಲಲಿ ನಡೆಯುತ್ತಿದೆ ಬಿಟ್ಟುಬಂದ ಹುಟ್ಟಿದೂರ ದಾರಿ ಹಿಡಿದು ಹೊರಟರು ಯಾರಾದರು ಅಪ್ಪತಪ್ಪಿ ಅಲ್ಲಿ ಕೇಳದಿರಲಿ ಇವರ ಹೆಸರು (ಅಲೆಮಾರಿ ಪಾದಗಳಿಗೆ ಅರ್ಪಿತ) **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ವಿನಿ (ಬೆಂಗಳೂರು) ಮಾಮರದಲಿ ಕುಳಿತ ಕೋಗಿಲೆಯ ದನಿ ಮಧುರವಂತೆ ಗೆಳೆಯಾ ಭೃಂಗವದು ಗೂಯ್ ಎನುವ ಝೇಕಾರ ಸೆಳೆದಂತೆ ಗೆಳೆಯಾ ಭೋರೆನುವ ಜಲಪಾತದ ರಮಣೀಯ ದೃಶ್ಯವದು ಮನಮೋಹಕವಂತೆ ಕಾನನದ ರೌದ್ರ ಮೌನವದು ಎದೆನಡುಗಿಸಿದಂತೆ ಗೆಳೆಯಾ ಬೇಲೂರ ಹಳೇಬೀಡಿನ ಶಿಲ್ಪವದು ಶಿಲ್ಪಿಯ ಅದ್ಭುತ ಕೈಚಳಕವಂತೆ ಒಂದೊಂದು ಮದನಿಕೆಯರು ಸೌಂದರ್ಯದ ಪ್ರತೀಕದಂತೆ ಗೆಳೆಯಾ ಪ್ರಕೃತಿಯ ಮಡಿಲಲಿ ಮೈಮರೆತು ಸಂತಸವನು ಆಸ್ವಾದಿಸಿದಂತೆ ಹುಣ್ಣಿಮೆಯ ಪೂರ್ಣಚಂದಮನು ಸೊಗಸಾಗಿ ಕಣ್ಮನ ಸೆಳೆದಂತೆ ಗೆಳೆಯಾ ಸಪ್ತಸ್ವರಗಳ ನಾದದಲಿ ವಿಜಯಳು ದನಿಗೂಡಿಸಿದಂತೆ ಬಾಳ ಪಲ್ಲವಿಗೆ ನಿನ್ನೊಲವಿನ ಸಾಲುಗಳೆ ಭಾವಗೀತೆಯಂತೆ ಗೆಳೆಯಾ ******************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಾರು ಗರಿ ಬಿಚ್ಚಿ ಡಾ.ಗೋವಿಂದ ಹೆಗಡೆ ಏನಾದರೂ ಆಗಬೇಕು ಬಾಂಬಿನಂತಹ ಏನೋ ಒಂದು ಸ್ಫೋಟಿಸಿ ಹೊಗೆಯಲ್ಲಿ ಅಥವಾ ಅಗ್ನಿಗೋಲದಲ್ಲಿ ಮರೆಯಾಗಿ ಬೇಡ, ಚಾಚಿದ ಕಾಲಿಗೆ ಅಲ್ಲೆಲ್ಲೋ ಮರಳಲ್ಲಿ ಓಡುವ ಇರುವೆ ಕಚ್ಚಿ ‘ಹ್ಹಾ’ ಎಂದು ಏನಾದರೂ ನಡೆಯಲಿ ಇಲ್ಲಿ ಈ ನಿಷ್ಕ್ರಿಯತೆಯನ್ನು ಹೇಗೆ ಸಹಿಸುವುದು +++ ನಿಷ್ಕ್ರಿಯತೆ ನಿರಾಕರಣೆಯೇ ಅನುಭವವೇ ಆಭಾಸವೇ ಅಲ್ಲೆಲ್ಲೋ ಕೋಗಿಲೆ ಕೂಗಿದೆ ಹಕ್ಕಿ ಜೋಡಿ ಸಂಜೆ ಆಗಸವ ಸೀಳಿ ಹಾರಿವೆ ಎಲೆಯೊಂದು ಟಕ್ಕೆಂದು ತೊಟ್ಟು ಕಳಚಿದೆ ತುಸು ಆಲಿಸಿದರೆ ಕೊಂಬೆಯೊಳಗೆ ಹರಿವ ಜೀವರಸದ ಸದ್ದೂ ಕೇಳಬಹುದು ಆದರೂ ಐಸಿಯು ನಲ್ಲಿರುವ ಬಾಲೆಯ ಸ್ತಬ್ಧ ಕಣ್ಣುಗಳ ಶೂನ್ಯ ನೋಟ ಮಾತ್ರ… +++ ಸೂರ್ಯ ಎಂದಿನಂತೆ ಬೆಳಗುತ್ತ ಈ ಗಿಡ ಮರ ಎಲ್ಲ ಹಸಿರುಟ್ಟು ಬೀಗುತ್ತ ಹೊಂಗೆ ಮತ್ತಾವುದೋ ಗಿಡ ಹೂತೇರು ಕಟ್ಟಿ ನಾನು ನಾಲ್ಕು ಗೋಡೆಗಳ ಒಳಗೆ ಹರಿವ ನೀರಿಗೆ ಬಿಚ್ಚಿ ಹಾರಲಾರೆ ಗುಡ್ಡ ಹತ್ತಲಾರೆ ಮರ ಏರಲಾರೆ ಬಯಲಲ್ಲಿ ಕುಣಿಯಲಾರೆ ಆಜೀವ ಶಿಕ್ಷೆಗೆ ಪಕ್ಕಾದ ಕೈದಿಯಂತೆ ಗೋಡೆ ಬಾಗಿಲುಗಳ ನಿರುಕಿಸುತ್ತ.. +++ ಬೋಳು ರಸ್ತೆಗಳು ಹೆಜ್ಜೆ ಸದ್ದಿಗೆ ತವಕಿಸಿರಬಹುದು ಪುಚ್ಚ ಕುಣಿಸಿ ಹಾರುವ ಹಕ್ಕಿ ಓಡುತ್ತ ಏರುವ ನಡುವೆ ಗಕ್ಕನೆ ನಿಂತ ಅಳಿಲಿಗೆ ಇರಬಹುದು ಅಗತ್ಯ ನನ್ನ ನೋಟವೊಂದರ ಸಾಂಗತ್ಯ ಮತ್ತೆ ಚಕ್ರ ತಿರುಗಿ ರಸ್ತೆ ಕಲಕಲ ಎನ್ನುವಾಗ ಮರೆಯದೆ ಐಸಿಯು ನ ಆ ಬಾಲೆಯ ಕೈಯಲ್ಲಿ ಕೈಯಿಡಬೇಕು ಹೂ ರೆಪ್ಪೆಗಳ ಮೇಲೆ ಹಗೂ‌♪ರ ಬೆರಳಾಡಿಸಿ ಪಿಸುಗುಡಬೇಕು “ಏಳು ಮಗೂ, ಸರಿದಿದೆ ಮೋಡ ಕಾದಿದೆ ಬಾನು ಹೋಗು ಹಾರು ಗರಿ ಬಿಚ್ಚಿ…” **********

ಕಾವ್ಯಯಾನ Read Post »

You cannot copy content of this page

Scroll to Top