ಕಾವ್ಯಯಾನ
ನಮ್ಮ ಅಂತರಂಗ ವೀಣಾ ರಮೇಶ್ ಮೌನದಲಿ ಅದೆಷ್ಟೋ ಮಾತುಗಳನು ಕಟ್ಟಿ ಹಾಕಿದ್ದೇನೆ ಗೆಳತಿ ಏಕಾಂತದಲ್ಲಿ ಒಂದಷ್ಟು ಪದಗಳಿಗೆ ಮೌನದಲ್ಲೆ ತಿವಿದಿದ್ದೇನೆ ಗೆಳತಿ ಕಣ್ಣುಗಳು ಹೊಳೆಯಾಗಿವೆ ಹರಿದು ಬಿಡಲೆ ದೋಣಿ ನಿನ್ನ ನೆನಪಿನ ಹುಟ್ಟು ಹಾಕಿ ಉಸಿರು ಕಟ್ಟಿದೆ ಪ್ರೀತಿ ಎದೆಯ ಪಂಜರದಲಿ, ಉಸಿರು ಬಿಡಲು ತತ್ವಾರ ಎದೆಯ ಬಡಿತವೊಂದೇ ಉಳಿದಿದೆ ಮೌನ ಪರದೆಯ ಹಿಂದೆ ನಿನ್ನ ತುಂಟ ನಗು ಅಣಕಿಸುತ್ತಿದೆ ಈ ಕತ್ತಲೆಯ ನೀರಸ ಮೌನ ಒಂದಷ್ಟು ನಕ್ಷತ್ರಗಳ ನುಂಗ ಬಾರದೆ ಒಂದು ಸಿಹಿಮುತ್ತು, ಒಂದು ಸಿಹಿ ನಗುವಿಗೆ ಬಾಚಿ ತಬ್ಬಿಕೊಳ್ಳಲು, ನೆನಪಿನ ಕಂಬಳಿ ಯೊಳಗೆ ಬಚ್ಚಿಟ್ಟು ಕೊಳ್ಳಲು ಯಾವ ಅಂತರದ ಗೊಡವೆಯು ಇದು? ******







