ಕಾವ್ಯಯಾನ
ಗಝಲ್ ಡಾ.ಸುಜಾತ ಲಕ್ಷ್ಮೀಪುರ. ಕತ್ತಲೆ ಗರ್ಭ ಸೀಳಿ ಅರಿವಿನ ಬೆಳಕು ತಂದ ಈ ಭೀಮ ಅಸ್ಪರ್ಶ ಕೊಳಕು ತೊಳೆಯುವ ಜಲವಾಗಿ ಬಂದ ಈ ಭೀಮ ಬಡತನ ಹಸಿವು ನಮ್ಮನ್ನು ರೂಪಿಸುತ್ತದೆಯಂತೆ ಗುಡಿಸಿಲಿನಿಂದಲೇ ಅಸಮಾನತೆಯಲ್ಲೇ ಮೂಡಿದ ಈ ಭೀಮ ಕೊರೆತೆಯಲ್ಲೆ ಕೊರಗಿ ಕೂತವರು ಏನು ಸಾಧಿಸುವರು ಅಸಮಾನತೆ ವಿಷಗಾಳಿಯಲಿ ಸಮಾನತೆಯ ಉತ್ತಿ ಬೆಳೆದ ಈ ಭೀಮಾ ಜ್ಣಾನವೊಂದೆ ಮುಕ್ತಿಗೆ ಮಾರ್ಗ ವೆಂಬುದು ಸತ್ಯವಲ್ಲವೆ ಅಜ್ಞಾನದ ಆಲಯದಿ ಬೆಳಕಿನ ಬಯಲು ಸುರಿದ ಈ ಭೀಮಾ ನನ್ನ ಜನ ನನ್ನ ನಾಡು ಎನ್ನದವರ ಎದೆ ಬೆಂಗಾಡು ಜನರ ಹಸಿವು ನೋವಿಗೆ ಮಿಡಿದು ದುಡಿದ ಈ ಭೀಮಾ ಪ್ರಜಾಪ್ರಭುತ್ವದ ಜೀವಾಳವೆ ಮತದಾನ ಅಲ್ಲವೇ ಹಕ್ಕು ಬಾಧ್ಯತೆಗಳನು ಕಾನೂನಿನ ಮೂಲಕವೆ ಕೊಡಿಸಿದ ಈ ಭೀಮಾ ಸರ್ವೋದಯ ಸಮಾನತೆ ಸಾಮಾಜಿಕ ನ್ಯಾಯ ಇದ್ದೆಡೆ ಸ್ವರ್ಗ ಎಲ್ಲರ ಅಭ್ಯದಯಕಾಗಿ ಸಂವಿಧಾನ ರೂಪಿಸಿದ ಈ ಭೀಮಾ ಶಿವೆ,ಬಾಬಾ ಸಾಹೇಬರ ಅಂಬೇಡ್ಕರ್ ಬಗೆಗೆ ಎಷ್ಟು ಹೇಳಿದರೂ ಅಪೂರ್ಣವೆ ದೇಶದ ಜನತೆಗೆ ಬದುಕು ಕೊಟ್ಟ ಭಾರತ ಭಾಗ್ಯವಿದಾತ ಆದ ಈ ಭೀಮ. *********









