ಕಾವ್ಯಯಾನ
ಗಝಲ್ ಸಹದೇವ ಯರಗೊಪ್ಪ ಗದಗ ಎದೆಯ ಸಂದೂಕಿಗೆ ಅರಿವಳಿಕೆ ಮದ್ದು ಸುರಿದು ಹೋದಳು| ಉಸಿರಿನಿಂದ ಉಸಿರು ಕದ್ದು ಸಾವು ಬರೆದು ಹೋದಳು|| ಚಾಟಿ ಇಲ್ಲದೆ ಬುಗುರಿಯಂತೆ ತಿರುಗೋಣ ಎಂದವಳು| ಪ್ರೇಮಿಗಳ ಗೋರಿಗೆ ಬಣ್ಣ ಬಳಿದು ಹೋದಳು|| ಇರುಳ ದಾರಿ ತುಂಬ ಕಣ್ಣ ದೀಪ ಬೆಳಗುವೆ ಎಂದವಳು| ಕನಸುಗಳ ಗೋಣು ಮುರಿದು ನೆತ್ತರು ಕುಡಿದು ಹೋದಳು|| ಭಾವನೆಗಳ ನಾವೆಯ ನಾವಿಕ ಎಂದವಳು| ಪ್ರತಿ ಹೆಜ್ಜೆ ಹೆಜ್ಜೆಗೆ ಕಲ್ಪನೆಗಳ ಕೊಂದು ಹೋದಳು|| ‘ಸಾಚಿ’ ಅಧರಕೆ ಜೀವ ಸತ್ವ ತುಂಬೋಣ ಎಂದವಳು| ಹೃದಯದ ಕವಾಟಿಗೆ ಬೆಲ್ಲದ ಚೂರಿಯಿಂದ ಇರಿದು ಹೋದಳು|| **********************************









