ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಕಾವ್ಯಯಾನ

ಭೂಮಿ ದಿನ

ಭೂದೇವಿ ಡಾ: ಪ್ರಸನ್ನ ಹೆಗಡೆ ಕಾಣದ ದೇವರ ಹುಡುಕುವೆ ಏಕೋ ಕಾಣುವ ದೇವತೆ ಈ ಭೂಮಿ ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ ಪ್ರತ್ಯಕ್ಷ ದೇವತೆ ಈ ಧರಣಿ ಗಂಧದ ಕಾಡನು ಜೇನಿನ ಗೂಡನು ಕರುಣಿಪ ದೇವತೆ ಈ ಧರಣಿ ತಣ್ಣನೆ ಹೊನಲನು ತುಂಬಿದ ಹೊಲವನು ಹೊತ್ತಿಹ ದೇವತೆ ಈ ತರುಣಿ ಏನು ಬಿತ್ತಿದರೂ ಬೆಳೆಯನು ಕೊಡುವಾ ಅಕ್ಷಯ ಪಾತ್ರೆಯೇ ಈ ಭೂಮಿ ಸಾವಿರ ತಪ್ಗಳ ನಗುತಾ ಕ್ಷಮಿಸುವ ಕ್ಷಮಾಧಾತ್ರಿಯೆ ಈ ಭೂಮಿ ಒದೆಯುವ ಕಾಲ್ಗಳ ಜರಿಯದೆ ಇರಿಯದೆ ಚುಂಬಿಸೊ ದೇವತೆ ಈ ಧರಣಿ ಉಗುಳುವ ಬಾಯ್ಗಳ ತೆಗಳದೆ ತದುಕದೆ ತುತ್ತೀಯುವ ತಾಯಿ ಈ ಜನನಿ ಧರ್ಮವ ಕೇಳದೆ ಜಾತಿಯ ನೋಡದೆ ಎಲ್ಲರ ಹೊರುವಳು ಈ ಭೂಮಿ ಏನನೂ ಕೇಳದೆ ಎಲ್ಲವ ನೀಡುವ ಕರುಣಾ ಮಯಿಯೇ ಈ ಭೂಮಿ ಚಂದದ ಮಣ್ಣನು ರುಚಿ ರುಚಿ ಹಣ್ಣನು ಈಯುವ ದೇವತೆ ಈ ರಮಣಿ ಜೀವ ಜಲವನು ಉಸಿರಾಟಕೆ ಉಸಿರನು ಕರುಣಿಪ ಕರುಳೇ ಈ ಧರಣಿ ದುಡಿಯುವ ಕೈಗೆ ದುಡಿಮೆಯ ನೀಡುವ ಕೊಡುಗೈ ದೇವಿ ಈ ಭೂಮಿ ಸತ್ತರೂ ಎಸೆಯದೆ ಕೈಗಳ ಚಲ್ಲದೆ ಮಡಿಲನೆ ಕೊಡುವಳು ಈ ಜನನಿ ********

ಭೂಮಿ ದಿನ Read Post »

ಕಾವ್ಯಯಾನ

ಕಾವ್ಯಯಾನ

ಕೆ.ಬಿ.ಸಿದ್ದಯ್ಯ ಹುಳಿಯಾರ್ ಷಬ್ಬೀರ್ ದಲಿತ ಕೇರಿಯ ಹುಡುಗ ಅಲ್ಲಮನ ಮಹಾಮನೆ ಹೊಕ್ಕು ದಲಿತರ ಅಕ್ಷರ ಲೋಕವನ್ನು ಅರಮನೆಯಾಗಿಸಿದ.. ದಲಿತ ಕಾವ್ಯೋದ್ಭದಲ್ಲಿ ಚಿಂತನೆಯ ಫಲ ಬೆರೆಸಿ ಮಸ , ಮಸೆದು ಹತಾರಗಳನ್ನು ಖಂಡಕಾವ್ಯವಾಗಿಸಿದವರು ಮೊನಚು ಮಾತು ಬಿಳಿಯ ಗಡ್ಡದೊಳ್ ಬೆರಳಾಟದ ಚೆಂದದೊಂದಿಗೆ ಅಂಬೇಡ್ಕರ್ ಕೂಗೇ ನಿಮ್ಮ ಕೂಗಾಗಿ ಗಾಂಧಿ ಬುದ್ಧನನ್ನು ನಿಮ್ಮೆರಡು ಕೈಗಳಲ್ಲಿ ತಬ್ಬಿ ಹಿಡಿದವರು .. ಭೌತಿಕ ಜಗತ್ತು ಆಧ್ಯಾತ್ಮದ ಮುಂದೆ ಸೋಲುವಂತೆ ಬಕಾಲ ಮುನಿಯಾಗಿ ಶಬ್ದಕ್ಕೆ ಶಬ್ದವೇ ನಾಚುವಂತೆ ಅದರಾಚೆಗೂ … ಗಲ್ಲೆಬಾನಿಯಲ್ಲೆ ಅದ್ದಿ ಅನಾತ್ಮ ಅರಿವಾಗಿಸಿ, ದಕ್ಲದೇವಿ ಕಾವ್ಯ ಕುಲುಮೆಯ ಒಲೆಯಲ್ಲಿ ಕುದ್ದು ಖಂಡಕಾವ್ಯದ ಕಿಡಿಯಾಗಿ.. ಇಡಿಯಾಗಿ ಸುತ್ತಲಿನ ಬೆಳಕಿನ ಬೆಳಕಾಗಿದ್ದು ಬಸವಣ್ಣಮಾತು ಮುತ್ತಿನಹಾರವಾದಂತೆ ಈ ದೇಹ, ನನ್ನ ದೇಹ, ಇಡೀ ದೇಹ ಭವದ ಸಾಲ ಎಂದಿದ್ದು ಸತ್ಯವಾಗಿದೆ..ಕೆ. ಬಿ. ಸತ್ಯವಾಗಿದೆ. *****************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನದಿ ದಡದಲಿ ನಡೆದಾಡಿದಂತೆ ಶೋಭಾ ನಾಯ್ಕ.ಹಿರೇಕೈ ಕಂಡ್ರಾಜಿ ಕವಿತೆ ಬರಿ ಅಂದರೆ ಕವಿತೆ ಹುಟ್ಟದು ಗೆಳೆಯ ಹುಟ್ಟುವುದು ಕನಸು ಮಾತ್ರ! ಕಿರುಬೆರಳ ನೀ ಹಿಡಿದು ಕಣ್ಮುಂದೇ.. ಬಂದಂತೆ ನದಿ ದಡದ ಮೇಲೆಲ್ಲ ನಡೆದಾಡಿ ಹೋದಂತೆ ಹೋದಲ್ಲಿ ಬಂದಲ್ಲಿ ಹೂ ಅರಳಿ ನಕ್ಕಂತೆ ನಕ್ಷತ್ರವನೇ ಕಿತ್ತು ಕಣ್ಮುಂದೆ ಇಟ್ಟಂತೆ ಅಂಗೈ ಗೆರೆಗಳ ಮೇಲೆ ಕವನಗಳ ಬರೆದಂತೆ ನಯನಗಳು ಒಂದಾಗಿ ಪ್ರೇಮವನೇ ಉಂಡಂತೆ ಅರಬ್ಬಿಯ ಅಲೆಗಳಲಿ ಹೊರಳಾಡಿ ಮಿಂದಂತೆ ದೂರ ತೀರವ ದಾಟಿ ಹೊಸ ಲೋಕ ಕಂಡಂತೆ ಹಾಯಿ ದೋಣಿಯ ಏರಿ ಹಾಡುತ್ತ ಹೋದಂತೆ ಹೊಸ ಹಾದಿಯಲಿ ನಾವು ಹೊಸ ಜನ್ಮ ಪಡೆದಂತೆ….. ಕವಿತೆ ಬರೆ ಎಂದರೆ ಕವಿತೆ ಹುಟ್ಟದು ಗೆಳೆಯ ಹುಟ್ಟುವುದು ಕನಸು ಮಾತ್ರ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಿಡಿಸಲಾಗದ ಒಗಟು ಅನ್ನಪೂರ್ಣ.ಡೇರೇದ ಹಿರಿಹಿರಿ ಹಿಗ್ಗಿ ಕುಣಿದುˌ ಕುಪ್ಪಳಿಸಿ ಕನಸುಗಳೊಡಗೂಡಿ ನಲಿವಾಗ ನಸುಕ ಮುಸಕಲ್ಲಿ ಕಾಂತನೊಡನೆ ರೆಕ್ಕೆ ಬಡಿಯುತಲಿ ರೆಂಬೆ ರೆಂಬೆ ಜಿಗಿದು ನಲಿಯುತಲಿದೆ ಅದಾವುದೋ ಮಾರ್ಜಾಲ ಬಲಿಯ ಬೀಸಿತಲಿ ಒಂದೊಂದು ಕನಸು ಬಿಸಿಲಿಗೆ ಕರಗಿದ ಇಬ್ಬನಿಯಾಗಿದೆ. ಹೆಣ್ಣಬಾಳ ಕಣ್ಣೀರು ಮಣ್ಣ ಮಸಣದೊಳು ಸೇರಿ ˌಕಂಡ ಕನಸು ಒಡಲ ಕಳಚಿತು ಮೌಡ್ಯದ ನಡುವೆ ಮಡುಗಟ್ಟಿದ ಅವಳ ಬದುಕು ˌಜಾತಿ ಧರ್ಮದ ಭೂತಗನ್ನಡಿಗೆ ಹೆದರಿ ಮೂಲೆ ಗುಂಪಾಗಿದೆ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಸ್ವಾರ್ಥ ಲಾಲಸೆಗಳೇ ತುಂಬಿ ತುಳುಕಾಡುತ್ತಿದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ ಅಸಮಾನತೆಯ ಗೋಡೆಗಳು ಮತ್ತೆ ಎದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ ನೀ ತೋರಿದ ಆದರ್ಶದ ಹಾದಿಯ ಪಾಲಿಸುವವರೆಷ್ಟು ನಮ್ಮ ನಡುವೆ ? ಭ್ರಷ್ಟಾಚಾರದ ಕಬಂಧಬಾಹುಗಳಲಿ ಜೀವ ನರಳಿದರೂ ಬಾಳು ಸಾಗುತ್ತಲೇ ಇದೆ ಬಾಪೂ ನೀ ಸಾರಿದ ತತ್ವಗಳು ನಿಸ್ಸತ್ವಗೊಂಡು ಮೂಲೆಗುಂಪಾಗಿ ಕಳೆದುಹೋಗಿವೆ ಜಾತಿ ವೈಷಮ್ಯದಲಿ ನಿಷ್ಪಾಪಿಗಳು ನಲುಗಿದರೂ ಬಾಳು ಸಾಗುತ್ತಲೇ ಇದೆ ಬಾಪೂ ಕಾಮಪಿಪಾಸುಗಳೆದುರು ನಡುರಾತ್ರಿ ಒಂಟಿ ಹೆಣ್ಣು ನಿರ್ಭಯದಿ ನಡೆವುದೆಂತು ? ನೂರಾರು ‘ ನಿರ್ಭಯ ‘ರ ಬಲಿಯಾಗುತ್ತಿದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ ದರ್ಪ,ದಬ್ಬಾಳಿಕೆಯ ಅಗ್ನಿಕುಂಡಕೆ ಎಂದೋ ಅಹಿಂಸೆಯ ಆಹುತಿಯಾಗಿದೆ ಹಿಂಸೆ, ಅನೀತಿಯೇ ಆಯುಧವಾದರೂ ಬಾಳು ಸಾಗುತ್ತಲೇ ಇದೆ ಬಾಪೂ ಸಹಿಷ್ಣುತೆ, ಸೌಹಾರ್ದತೆ ಎಲ್ಲವೂ ಉಳಿದಿವೆ ನಿಘಂಟಿನ ಪುಟಪುಟಗಳಲಿ ಅಸಹನೆಯೇ ಬೆಂಕಿಯಂತೆ ಆವರಿಸಿದರೂ ಬಾಳು ಸಾಗುತ್ತಲೇ ಇದೆ ಬಾಪೂ ಅಸುನೀಗಿವೆ ಸತ್ಯ , ನ್ಯಾಯಗಳಿಂದು ಅಮಾನುಷ ಕೈಗಳು ಕೊರಳು ಹಿಸುಕಿರಲು ರಾಮರಾಜ್ಯದ ಕನಸು ಕನಸಾಗಿಯೇ ಉಳಿದರೂ ಬಾಳು ಸಾಗುತ್ತಲೇ ಇದೆ ಬಾಪೂ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದ್ವೇಷದ ರೋಗಾಣು ಲಕ್ಷ್ಮಿಕಾಂತಮಿರಜಕರಶಿಗ್ಗಾಂವ. ಕೊರೋನಾ ಕೂಡ ತಬ್ಬಿಬ್ಬು ದುರಿತ ಕಾಲದಲ್ಲೂ ಧರ್ಮದ ಅಮಲೇರಿಸುವ ಕಾರ್ಯ ಅವ್ಯಾಹತವಾಗಿ ಸಾಗಿರುವುದ ಕಂಡು ಮೆದುಳು ಮಾರಿಕೊಂಡವರ ತಲೆಯಲ್ಲಿ ಈ ದೇಶವೇಕೆ ಹೀಗಿದೆ? ಬೆಕ್ಕಿನ ನೆರಳು ತೋರಿಸಿ ಹೆಬ್ಬುಲಿ ನಿಂತಿದೆ ಮರೆಯಲ್ಲಿ ಅಂತ ಪರದೆಯಲ್ಲಿ ತೋರಿಸಿದರೆ ಕ್ಷಣಾರ್ಧದಲ್ಲಿ ಎಲ್ಲ ಕಡೆ ಹೆಬ್ಬುಲಿಯದೇ ಮಾತು! ಮಾತು!ಮಾತು ಅಯ್ಯಯ್ಯಪ್ಪ ಎಂದಿರಬಹುದು ಕೊರೋನಾ ಪ್ರಾಣ ಹಿಂಡಲೂ ಬಂದ ಅಗೋಚರ ವೈರಾಣು ಕೂಡ ಅಸಹ್ಯ ಪಡುವಷ್ಟು ನಮ್ಮ ತಲೆಯಲ್ಲಿ ಅಮೇಧ್ಯದ ಹೊಲಸು ವಾಸಿಯಾಗದ ದ್ವೇಷದ ವೈರಾಣೊಂದು ತಲತಲಾಂತರದಿಂದಲೇ ಇವರ ಮನಸ್ಸಿನಲ್ಲಿ ಮನೆಮಾಡಿರುವುದು ಕಂಡು ವೈರಾಣುಗೂ ಆಶ್ಚರ್ಯ ಕಾಡುತಿರಬಹುದು ಅದಕೂ ಪಾಪಪ್ರಜ್ಞೆ ಯಾಕಾದರೂ ಇಲ್ಲಿಗೆ ಬಂದೇನೋ? ಪಾಪಿಗಳು ನನಗೂ ಧರ್ಮದ ಬಣ್ಣ ಬಳಿದರಲ್ಲಾ; ಸಾವಿನ ಬಾಗಿಲಂಚಿನಲ್ಲಿ ನಿಂತಿದ್ದರೂ ಮದ್ದು ಕಂಡು ಹಿಡಿದೆ ಹಿಡಿಯುತ್ತಾರೆ ನನ್ನ ಕೊಲ್ಲಲೂ ಒಂದಲ್ಲ ಒಂದು ದಿನ ನನಗಂತೂ ಅಂತ್ಯವಿದೆ ಇವರ ತಲೆಯೊಳಗಿನ ಮಾರಕ ವೈರಾಣುಗೆ ಅಂತ್ಯ ಬರೆಯುವವರಾರು?ಯಾವಾಗ? ಕೊರೋನಾ ಮನದಲ್ಲಿ ಕಾಡುವ ಪ್ರಶ್ನೆಗೆ ಉತ್ತರ ನಮ್ಮ ದೇಶದಲ್ಲಿಲ್ಲ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಗದಗ ಎದೆಯ ಸಂದೂಕಿಗೆ ಅರಿವಳಿಕೆ ಮದ್ದು ಸುರಿದು ಹೋದಳು| ಉಸಿರಿನಿಂದ ಉಸಿರು ಕದ್ದು ಸಾವು ಬರೆದು ಹೋದಳು|| ಚಾಟಿ ಇಲ್ಲದೆ ಬುಗುರಿಯಂತೆ ತಿರುಗೋಣ ಎಂದವಳು| ಪ್ರೇಮಿಗಳ ಗೋರಿಗೆ ಬಣ್ಣ ಬಳಿದು ಹೋದಳು|| ಇರುಳ ದಾರಿ ತುಂಬ ಕಣ್ಣ ದೀಪ ಬೆಳಗುವೆ ಎಂದವಳು| ಕನಸುಗಳ ಗೋಣು ಮುರಿದು ನೆತ್ತರು ಕುಡಿದು ಹೋದಳು|| ಭಾವನೆಗಳ ನಾವೆಯ ನಾವಿಕ ಎಂದವಳು| ಪ್ರತಿ ಹೆಜ್ಜೆ ಹೆಜ್ಜೆಗೆ ಕಲ್ಪನೆಗಳ ಕೊಂದು ಹೋದಳು|| ‘ಸಾಚಿ’ ಅಧರಕೆ ಜೀವ ಸತ್ವ ತುಂಬೋಣ ಎಂದವಳು| ಹೃದಯದ ಕವಾಟಿಗೆ ಬೆಲ್ಲದ ಚೂರಿಯಿಂದ ಇರಿದು ಹೋದಳು|| **********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶೂನ್ಯ ಡಾ.ಪ್ರಸನ್ನ ಹೆಗಡೆ ಈ ಬದುಕು ಸುಂದರ ಶೂನ್ಯ ಕಂಡಿದ್ದೆಲ್ಲವೂ ಅನ್ಯ ಹಿಂದತಿಲ್ಲ ಇಂದು ನಾಳೆಗೆ ಕಾದಿದೆ ಬೇರೊಂದು ಅಂದಂತಿಂದು ನಾನಿಲ್ಲ ಇಂದಂತಿರುವವ ನಾನಲ್ಲ ಇದು ಇಂತೆಂದೆಂಬುವನಾರಣ್ಣ? ಆ ಅಣ್ಣನೂ ಕೊನೆಗೆ ಮಣ್ಣಣ್ಣಾ ಈ ಅಕ್ಷಿಯ ಕಕ್ಷಿಯು ಕಿರಿದು ಬಾಯ್ಬಿಡಬೇಡಾ ಬಿರಿದು ಈ ಕಾಲನ ಚಕ್ರವು ಹಿರಿದು ಅದನರಿಯಲು ಸಾವದು ಬಿಡದು ಹರಿಯುವ ಹೊಳೆಯೂ ಮಾಯಾವಿ ಗಗನವೇರಲಿದೆ ಹಬೆಯಾಗಿ ಓ! ತೇಲುವ ಮೋಡವು ಮೇಲಿಲ್ಲ ಅದು ನಾಳಿನ ಹೊಳೆಯು ಸುಳ್ಳಲ್ಲ ನನ್ನದು ಎನ್ನಲು ಏನಿಲ್ಲ ನಾ ಧೂಳನು ಮೀರುವ ಭಟನಲ್ಲ ಕಾಣುವದೆಲ್ಲವೂ ನಿಜವಲ್ಲ ನೀ ಕಾಣುವ ಕಣ್ಣಿಗೆ ಕಣ್ಣಿಲ್ಲ ಸತ್ಯವು ಕಾಲನ ಮಿತ್ಯ ಮಿತ್ಯವು ನಾಳಿನ ಸತ್ಯ ಜಗವೇ ಕಾಲನ ಹೊಳೆಯು ನಾವೆಲ್ಲಾ ಅದರೊಳು ಅಲೆಯು ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಖ-ಸಖಿ ವಾಯ್.ಜೆ.ಮಹಿಬೂಬ ವಿಧ-ವಿಧಗಳಿಗೆ ವಿದಾಯ ಹೇಳಿ ಒಂದಾಗೋಣ ಬಾ ಸಖಿ ವಿಧಿ-ವಿಧಾನಗಳು ಬದಿಗಿಟ್ಟು ಪ್ರೀತಿ ಹಂಚೋಣ ಬಾ ಸಖ ನೂರಿದ್ದರೇನು-? ನಮ್ಮನ ನಾವು ಸಂತೈಸಲು ಸಾವೆಂದರೆ ಬೆರೆಸಿ ಸಂಸ್ಕಾರವ ಜಗ ಸಾರಿ,ಹೆತ್ತವರಾಗೋಣ ಬಾ ಸಖಿ ಅತ್ತವರುದಕೆ ಕೈ ತುತ್ತಿಟ್ಟು,ಬಿತ್ತಿ ಬರೋಣು ಬಾ ಸಾಂತ್ವನ ಮೆಟ್ಟಿ ನಿಂತು ರಟ್ಟೆಯರಳಿಸಿ,ಪೃಥ್ವಿ ಬೆಳೆಸೋಣ ಬಾ ಸಖ ಯಾತರದ ಜೀವ-? ಕಾವ ಕಳೆದ ದೇಹಕೆ ಹೆಸರು ನಿಲ್ಲದು ಆತ್ಮ ಸತ್ಯ ನಿತ್ಯ ಮೊಳೆಸುತ ಧರೆಯ ಸುತ್ತೋಣ ಬಾ ಸಖಿ ಆಝಾದ್’ಮೈಖಾನೆಯೂ ಹೊಕ್ಕು ಬರುವ ಖಯಾಲಿ ಇದೆ ಸಾಕಿಯಂತೆ ಮದುವಿಗೊಂದಿಷ್ಟು,ಸಾತ್ ನಿಲ್ಲೋಣ ಬಾ ಸಖಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನತದೃಷ್ಟ ಕವಿತಾ ಸಾರಂಗಮಠ ಪಂಜರದಿ ಹಕ್ಕಿಗಳ ಬಂಧಿಸಿದೆ ಆನೆಗಳ ಗರ್ವ ಅಡಗಿಸಿ ಮದ್ದಾನೆಯಾದೆ ಆನೆ ದಂತಗಳ ಕದ್ದೆ ಹುಲಿ,ಸಿಂಹಗಳ ಬೇಟೆಯಾಡಿದೆ ಓ ಮಾನವ ಗೃಹ ಬಂಧಿಯಾದೆ! ಸ್ವಚ್ಛಂದ ಹಾರಾಡುವ ಪಕ್ಷಿಗಳ ಪಂಜರದಿ ಬಂಧಿಸಿದೆ ಪಶು,ಕೀಟಗಳ ಭೇದವೆಣಿಸದೆ ಚಪ್ಪರಿಸಿದೆ ಉಭಯ ಜೀವಿ ಸಂಕುಲದ ನಾಶಕೆ ಮುಂದಾದೆ ಎಮ್ಮೆ,ಕಾಡು ಕೋಣ,ಚಿರತೆ,ಹುಲಿಗಳ ಚರ್ಮವನೆ ಹೊದ್ದೆ ಓ ಮಾನವ ನೀನೇ ಅವುಗಳಾದೆ! ಆತಂಕವಿಲ್ಲದೆ ಅಂತರಿಕ್ಷಕೆ ಹಾರಿದೆ ಸೂರ್ಯ ಚಂದ್ರರ ಮೀರಿಸಲು ಹೋದೆ ನಿಲುಕಿದ್ದರೆ ನೀಲನಭದೆ ವಾಸಿಸುತ್ತಿದ್ದೆ ಹಣದ ದಾಹಕೆ ಮೌಲ್ಯಗಳ ಮಾರಿಕೊಂಡೆ ಓ ಮಾನವ ಗೃಹ ಬಂಧಿಯಾದೆ *********

ಕಾವ್ಯಯಾನ Read Post »

You cannot copy content of this page

Scroll to Top