ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಲಕ್ಷ್ಮಿ ದೊಡಮನಿ ಮಹಾಮಾರಿಯ ಬಲಿ ಕಂಡು ಎದೆಗೆ ಬೆಂಕಿ ಇಟ್ಟಂತಾಗಿದೆ ಎಲ್ಲರ ಕೈಮೀರುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ನನ್ನ ದೌರ್ಬಲ್ಯಗಳನ್ನು ಖಚಿತ ಪಡಿಸಿಕೊಂಡು ನನ್ನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿರುವೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಹಳೆಯದಾದರೂ ಮರೆಯಾಗುತ್ತಿಲ್ಲ ಹೆಚ್ಚುತ್ತಿದೆ ನೋವು ಮನ ನೆನಪಿಸುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಅಂದಿನ ಅನ್ನವನ್ನು ಅಂದೇ ಗಳಿಸುವ ಜನ ನಾವು ಗೃಹಬಂಧನದಿ ಹೊಟ್ಟೆ ಹೊರೆದುಕೊಳ್ಳುವದ್ಹೇಗೆಂದು ಎದೆಗೆ ಇಟ್ಟಂತಾಗಿದೆ ಅತಿಯಾದ ಸ್ವಾರ್ಥವನೆಂದಿಗೂ ನಾನು ಯೋಚಿಸಿಲ್ಲ ‘ಚೆಲುವೆ’ ಈ ಅನೀರಿಕ್ಷಿತತೆಯ ಮಾತು ಎದೆಗೆ ಬೆಂಕಿ ಇಟ್ಟಂತಾಗಿದೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಂಬಲಿಸಿರುವೆ ಶಿವಲೀಲಾ ಹುಣಸಗಿ ನಿನ್ನ ಮೇಲೊಂದು ಮುನಿಸಿದೆ ಕಾರಣ ಹೇಳಲ್ಲ ಚಿಂತಿಸೊಮ್ಮೆ.! ಕನಿಕರಿಸದ ಇರುಳುಗಳೆಲ್ಲ ಉರುಳುಗಳಾಗಿ ಬೆಸೆದಿವೆ..! ಮಬ್ಬಿನಲೊಂದು ನಿಟ್ಟುಸಿರು ತುಟಿಯಂಚಿನಲೊಂದು ಹಸಿಯಾದ ಮೌನದುಸಿರು.! ಕಾಡಿಗೆಯ ಕರಿನೆರಳು.. ಕಮರಿದಾ ಪುಷ್ಪದಂತೆ ರತಿ ಉರಿದು ಭಸ್ಮವಾದಂತೆ..! ಕಪ್ಪುಛಾಯೆಯ ಬಿಂಕನಾನೊಲ್ಲೇ ಮಡುಗಟ್ಟಿದ ಒಡಲುನನ್ನಲ್ಲೇ ನಿನ್ನುಸಿರ ಅಪ್ಪುಗೆಯಲಿ ಬಿಗಿದು ಮುತ್ತಿನಾ ಮಳೆಯ ಸುರಿದ ಬಾರದೇ ನನಗಿನ್ನೇನೂ ಬೇಕಿಲ್ಲ..ನಲ್ಲಾ.. ನಿನ್ನ ಹಿಡಿ ಪ್ರೀತಿಯ ಹೊರತು…! ನಿನ್ನೊಟಕೆ ಹುಸಿಗೋಪ ಮರೆವೆನು ಮರುಗಿದಾಗೆಲ್ಲ ಕನವರಿಕೆಗಳು ಮೊಳಕೆಯೋಡಯದ ಕನಸುಗಳು ನಿಟ್ಟೂಸಿರು ಬಿಡದಾ ಕಂಗಳು..! ನೀ ನೀಡಿದ ಉದರಾಗ್ನಿಯಲಿ ಬೆಂದು- ಬಸವಳಿದಿರುವೆ ಚಿರನಿದ್ರೆಗೆ ಜಾರುವ ಗಳಿಗೆಯಲಿ ಮನದ ಪ್ರತಿಬಿಂಬವಾಗ ಬಾರದೆ….? ಮುನಿಸಾದರೂ ನನ್ನೊಳಗೆ ಮನಸಾದರೆ ನಾ ನಿನ್ನೊಳಗೆ ಹೃದಯವನರಿಯೆಂದು ಪರಿತಪಿಸಿರುವೆ. ಪ್ರೀತಿಗಾಗಿ ಹಗಲಿರುಳು ಹಂಬಲಿಸಿರುವೆ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಕ್ಕಳ ಕವಿತೆ ಆಸೆ ಮಲಿಕಜಾನ ಶೇಖ ಆಕಾಶಕ್ಕೆ ಹಾರುವ ಆಸೆ ರೆಕ್ಕೆಗಳಿಲ್ಲದೆ ಹಾರುವದ್ಹೇಗೆ..? ಗರುಡನೆ ಗರುಡನೆ ಕೇಳಿಲ್ಲಿ ನಿನ್ನಯ ರೆಕ್ಕೆ ಕೊಡು ಎನಗೆ.. ಮುದ್ದಿನ ಬಾಲಕ ಕೇಳಲೆ ನೀನು ರೆಕ್ಕೆಗಳೇನು ಕೊಡುವೆನು ನಾನು ಛಲವಿಲ್ಲದನೆ ಹಾರುವದ್ಹೇಗೆ..? ರೆಕ್ಕೆಗಳಂತು ಚಿಟ್ಟೆಗೆವುಂಟು..! ಸಾಗರದಾಚೆ ಈಜುವ ಆಸೆ ಕಿವಿರುಗಳಿಲ್ಲದೆ ಈಜುವದ್ಹೇಗೆ..? ಮೀನವೆ ಮೀನವೆ ಕೇಳಿಲ್ಲಿ ನಿನ್ನಯ ಕಿವಿರು ಕೊಡು ಎನಗೆ.. ಪುಟ್ಟನೆ ಪುಟಾಣಿ ಕೇಳಲೆ ನೀನು ಕಿವಿರುಗಳೇನು ಕೊಡುವೇನು ನಾನು ತಾಳ್ಮೇಯ ಇಲ್ಲದೆ ಈಜುವದ್ಹೇಗೆ..? ಕಿವಿರುಗಳಂತು ಚಿಪ್ಪೆಗೆವುಂಟು..! ಗುಬ್ಬಿಯ ಗೂಡನು ಕಟ್ಟುವ ಆಸೆ ಕೊಕ್ಕವನಿಲ್ಲದೆ ಕಟ್ಟವದ್ಹೇಗೆ..? ಗುಬ್ಬಿ ಗುಬ್ಬಿ ಕೇಳಿಲ್ಲಿ ನಿನ್ನಯ ಕೊಕ್ಕು ಕೊಡು ಎನಗೆ.. ಚಿಣ್ಣರ ಚಿಣ್ಣಾ ಕೇಳಲೆ ನೀನು ಕೊಕ್ಕವನೇನು ಕೊಡುವೇನು ನಾನು ಬುದ್ಧಿಯ ಇಲ್ಲದೆ ಕಟ್ಟುವದ್ಹೇಗೆ..? ಕೊಕ್ಕಗಳಂತು ಕಾಗೆಗೆವುಂಟು..! ವೇಗದಿ ನನಗೆ ಓಡುವ ಆಸೆ ಕಾಲಲಿ ವೇಗ ಇಲ್ಲದ್ಹೇಗೆ..? ಜಿಂಕೆ ಜಿಂಕೆ ಕೇಳಿಲ್ಲಿ ನಿನ್ನಯ ಕಾಲು ಕೊಡು ಎನಗೆ.. ಅಂದದ ಕಂದಾ ಕೇಳಲೆ ನೀನು ಕಾಲುಗಳೇನು ಕೊಡುವೇನು ನಾನು ಜೋಶ್ ಇಲ್ಲದ ಓಡುವದ್ಹೇಗೆ..? ಕಾಲುಗಳಂತು ಆಮೆಗೆವುಂಟು..! ಮಧುರದಿ ಗಾನವ ಗುನುವ ಆಸೆ ಅಂದದ ಕಂಠವ ಇಲ್ಲದ್ಹೇಗೆ..? ಕೋಗಿಲೆ ಕೋಗಿಲೆ ಕೇಳಿಲ್ಲಿ ನಿನ್ನಯ ಕಂಠವ ಕೊಡು ಎನಗೆ.. ಪುಟಾಣಿ ಕಂದಾ ಕೇಳಲೆ ನೀನು ಕಂಠವನೇನು ಕೊಡುವೇನು ನಿನಗೆ ರಾಗವ ಇಲ್ಲದೆ ಹಾಡುವದ್ಹೇಗೆ..? ಕಂಠವೇನು ಗೂಬೆಗೆವುಂಟು..! ನೂರಾರು ವರ್ಷ ಬದುಕುವ ಆಸೆ ಜೀವಕೆ ಆಯುಷ್ಯ ಇಲ್ಲದ್ಹೇಗೆ..? ಆಮೆ ಆಮೆ ಕೇಳಿಲ್ಲಿ ನಿನ್ನಯ ಜೀವ ಕೊಡು ಎನಗೆ.. ಜಾಣರ ಜಾನ್ ಕೇಳಲೆ ನೀನು ಬೇಡುವದನ್ನು ಬಿಡುವಲೆ ನೀನು ನಿನ್ನಯ ಒಳಗೆ ಅಣುಕಿಸು ನೀನು ಎಲ್ಲವುವುಂಟು ನಿನ್ನಲ್ಲಿ..! ಅರಿತು ಬಾಳುವದನ್ನು ಕಲಿ ಮೊದಲು… *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

‘ಪ್ರಶ್ನೆ ದಾಳ’ ವಸುಂಧರಾ ಕದಲೂರು.  ಎಳೆ ಹುಡುಗನನ್ನು ಮಲೆ ಮೇಲೆ ಕೂರಿಸಿ ಆತ, ಮೊಲೆ ಕಾಣಬಾರದೆಂದು ಬಿಡುತ್ತಾರೆ ! ಹತ್ತಲು ೧೮ ಏಕೆ ..? ಉತ್ತರವಿಲ್ಲದವರ ಬಳಿ ಇಂತಹ ಪ್ರಶ್ನೆ ಕೇಳಬಾರದು. ಎರಡೊಂಬತ್ತಲಿ ಹದಿನೆಂಟೆಂದು ಒಂದು ಗರ್ಭಾವಧಿಯ ಅವಧಿಯ ಮರೆತು ಬಿಡುತ್ತಾರೆ. ಬೀಜ ನಾಟಿ, ಬೇರು ಚಿಗುರಿ ಹೂವೋ ಕಾಯೋ ಅರಳಿಕೊಳಲು ಒಂದ್ಹೊಂಬತ್ತು. ಹೊಟ್ಟೆ ಮಗುಚಿ ಅಂಬೆಗಾಲಿರಿಸಿ, ಬಾಯ ತೊದಲು ಶುರುವಿಗೆ ಇನ್ನೊಂದು ಒಂಬತ್ತು. . ಆಯಿತಲ್ಲ ಹದಿನೆಂಟು..! ಪ್ರತೀ ಪ್ರಶ್ನೆಗೂ ಒಂದು ಉತ್ತರವಿದೆ ಒಪ್ಪಿತವಾದರೆ. ಆದರೂ ತನ್ನ ಮಗುವ ತಾನೇ ಕಾಣಬಾರದೇಕೆನುವ ಉತ್ತರವಿರದ ಒಂದು ‘ಪ್ರಶ್ನೆ ದಾಳ’ ಮರಳಿ ಉರುಳಿ ಉರುಳಿ, ತಾಯ ಹೃದಯ ನರಳಿದೆ.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಿಶ್ವಗುರು ಬಸವಣ್ಣ ತೇಜಾವತಿ ಹೆಚ್. ಡಿ ನೀನೇ ಅಲ್ಲವೇ ಮಹಾಮಾನವತಾವಾದಿ ಹನ್ನೆರಡನೆಯ ಶತಮಾನದ ಕ್ರಾಂತಿಯೋಗಿ ಅದೆಷ್ಟೋ ಅಂಧಕಾರದ ಧೂಳುಹಿಡಿದ ಮನಗಳಲಿ ಅರಿವಿನ ಪ್ರಣತಿಯ ಬೆಳಗಿದೆ ! ಹುಟ್ಟುಬ್ರಾಹ್ಮಣ ಸಂಸ್ಕಾರಶರಣ ಅಂಧಶ್ರದ್ಧೆ ಜಡ ಸಂಪ್ರದಾಯ ತೊರೆದು ಸತ್ಯಾನ್ವೇಷಕನಾದೆ ! ಅಂತರ್ಜಾತಿ ವಿವಾಹ ಮಾಡಿಸಿ ಬಿಜ್ಜಳನಾಸ್ಥಾನ ಮಂತ್ರಿ ನೀನು ಗಡೀಪಾರಿಗೀಡಾದೆ! ಸಮಾಜ ಸುಧಾರಕನಾದೆ ಕಾಯಕವೇ ಕೈಲಾಸವೆಂದೆ ನುಡಿದಂತೆ ನಡೆಯೆಂದೆ ಅಂತರಂಗಶುದ್ಧಿಯೇ ಮಿಗಿಲೆಂದೆ ಜ್ಞಾನವೇ ಬಂಢಾರವೆಂದು ನೀ ಭಕ್ತಿ ಬಂಢಾರಿಯಾದೆ ! ಆಚಾರವೇ ಸ್ವರ್ಗವೆಂದೆ ಅನಾಚಾರವೇ ನರಕವೆಂದೆ ಅನುಭವ ಮಂಟಪದೊಳು ಮಹಾಜ್ಞಾನಿಯಾದೆ ! ಇಷ್ಟಲಿಂಗ ಪರಿಕಲ್ಪನೆಯೊಂದಿಗೆ ಜಗಜ್ಯೋತಿಯಾದೆ ! ಕೂಡಲಸಂಗಮ ವಚನಾಂಕಿತದಿ ನೀ ನಿಜಶರಣನಾದೆ…. ನಿಜ….ಶರಣನಾದೆ… *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಸವಣ್ಣ ಡಾ.ಪ್ರಸನ್ನ ಹೆಗಡೆ ಅಣ್ಣ ಬಸವಣ್ಣನೆಂದರೆ ಬಿಜ್ಜಳ ಮಂತ್ರಿಯೊಂದೇ ಅಲ್ಲ ಸಾವಿರದ ಬೀಜ ಬಿತ್ತಿದ ಮಹಾ ಮಂತ್ರ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೆ ವಚನಕಾರನಲ್ಲ ಹೊಸ ವಿಚಾರ ಸೃಜಿಸಿದ ವಿವೇಕ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಶಿವಶರಣನಲ್ಲ ಶಿವ ಚರಣ ಮುಟ್ಟದಾ ವಿಶ್ವ ಮೂರ್ತಿ ಅಣ್ಣ ಬಸವಣ್ಣನೆಂದರೆ ವಿಚಾರವಾದಿಯೊಂದೇ ಅಲ್ಲ ಶಿಷ್ಟಾಚಾರ ಪಾಲಿಸಿದ ಇಷ್ಟ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಲಿಂಗ ಪಿಡಿದವನಲ್ಲ ಲಿಂಗವನ್ನೇ ಮೆಚ್ಚಿಸಿದ ಜ್ಞಾನ ಮೂರ್ತಿ ಅಣ್ಣ ಬಸವಣ್ಣನೆಂದರೆ ಜ್ಞಾನ ಸಾಗರವಷ್ಟೇ ಅಲ್ಲ ಸರ್ವರನೂ ಕ್ಷಮಿಸಿದ ಕ್ಷಮಾ ಮೂರ್ತಿ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕರೋನ ಕರೋನಾ.. ವಾಣಿ ಮಹೇಶ್ ಅತ್ತ ಹೋಗ್ ಬ್ಯಾಡಿ ಕರೋನಾ ಐತೆ ಇತ್ತ ಬರ್ ಬ್ಯಾಡಿ ಕರೋನಾ ಐತೆ ಎತ್ತಾ ಹೋದ್ರೂನೂ ಪೋಲೀಸು ಕಾಟ ಎತ್ತಾ ಬಂದ್ರೂನೂ ವೈದ್ಯರಾ ಕಾಟ ಏನು ಮಾಡೋದಪ್ಪ… ಹೆಂಗಿರೋದಪ್ಪಾ..? ಮನೆಯಲ್ಲಿ ಕುಂತೂ.. ನಿಂತೂ.. ಸಾಕಾಗೋಗೈತೆ.. ಅಯ್ಯೋ ಸಾಕಾಗೋಗೈತೆ // ಪಕ್ಕದಾ ಮನೆಯಾ ಇಣುಕಿ ನೋಡಲೂ ಭಯವಾಗುತೈತೆ ಯಾಕೋ.. ಏನೋ.. ಬಂದಾ.. ಕೆಮ್ಮು ನೋಡಿದಾ ಜನ ದೂರ ಸರಿಸಿಯೇ ಬಿಟ್ಟರಲ್ಲ!!! ಅಯ್ಯೋ ಓಡಾಡ್ಸಿ ಬಿಟ್ಟರಲ್ಲ..!! ಬೆಳಗಿಂದಾ.. ಮೈ ಬೆಚ್ಗೆ.. ಊರೆಲ್ಲಾ ಸುತ್ತೋಕೆ ಹೋಗಿದ್ನಲ್ಲ ಇರೋಕಾಗದೆ.. ಮನೆಯಲ್ಲಿ ಇರೋಕಾಗದೆ ಬಂದೇ ಬುಟೈತೆ ಕರೋನಾ.. ಕರೋನಾ… ಅದೆಂಥಾ ಕರೋನಾ.. ಅಟ್ಟಾಡ್ಸಿ ಬಿಡ್ತಲ್ಲ .. ಸಾಕಾಗಿ ಬಿಡ್ತಲ್ಲ..// ಚುಚ್ಚಿ ಚುಚ್ಚಿ ಮೈಯ್ಯೆಲ್ಲ ತೂತು ಮೈತುಂಬಾ ಮಾಸ್ಕು ಗೀಸ್ಕು ಹಾಕಿ ಉಸಿರಾಟ ನಿಂತೇ ಹೋಯ್ತಲ್ಲ ಮಲುಗ್ದಲ್ಲೇ ಮಲಗ್ಬೇಕಲ್ಲ… ಏನು ಮಾಡೋದಪ್ಪ.. ಬೀದೀಗೇ.. ಬಂದ ತಪ್ಪಿಗೆ ಅನುಭವಿಸಬೇಕಾಯ್ತಲ್ಲ ಹೇಳಿದ್ನ ಕೇಳಿದ್ರೆ ಇಂಗಾಯ್ತಿರ್ನಿಲ್ವಲ್ಲ..// *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂತಿಮಯಾತ್ರೆ ಹರೀಶ ಕೋಳಗುಂದ ಉಸಿರು ಬಿಗಿ ಹಿಡಿದಿದೆ, ಎದೆಬಡಿತ ಕ್ಷೀಣ. ಕೆಲವೇ ಸಮಯ ಬಾಕಿ. ಪಸೆಯಾರಿದ ಗಂಟಲಿಗೆ ಕಡೆಯ ಬಯಕೆ, ಗುಟುಕು ಗಂಗಾಜಲ ಮಾತ್ರ. ಮತ್ತೇನೂ ಬೇಡ. ಉರಿವ ಹಣತೆಯ ಸೊಡರು ಬೀಸುಗಾಳಿಗೆ ತುಯ್ದಾಟ….! ಕಾಲ ಮೀರುತ್ತಿದೆ, ಸಾಸಿವೆಯ ಸಾಲಕ್ಕೆ ಹೋದವಳು ಇನ್ನೂ ಮರಳಿಲ್ಲ, ದಾರಿಯಲಿ ಬುದ್ಧ ಸಿಕ್ಕಿರಬೇಕು. ಕಾಲವಶದಲ್ಲಿ ಸಾವಿತ್ರಿಯೂ ಲೀನ. ಪುರುದೇವನ ವರ್ತಮಾನವೂ ಇಲ್ಲ. ಕಣ್ಣು ಕವಿಯುತ್ತಿದೆ, ಚಾಚಿ ಮಲಗಿದ ದೇಹ ಅಸಾಧ್ಯ ಭಾರ. ಸುತ್ತ ಕತ್ತಲೆಯ ಕೂಪ, ಏಕಾಂಗಿ ಭಾವ, ಹಠಾತ್ತನೆ ಯಾರದೋ ಚೀತ್ಕಾರ, ಯಾರೋ ನಕ್ಕಂತೆ, ಅತ್ತಂತೆ, ಹೆಸರಿಡಿದು ಕರೆದಂತೆ, ಕೈಹಿಡಿದು ಜಗ್ಗಿದಂತೆ, ಭ್ರಮೆ-ವಾಸ್ತವ ಇಹ -ಪರಗಳ ನಡುವೆ ತಾಕಲಾಟ, ಅವ್ಯಕ್ತ ಆತಂಕ….! ಯಶೋಧರನ ಹಿಟ್ಟಿನ ಹುಂಜಕ್ಕೂ ಉಂಟು ಬೆಂತರನ ಕಾವಲು. ಭೀಷ್ಮ ಇಚ್ಛಾಮರಣಿ. ಅಂಗಾಧಿಪತಿಗೆ ಕವಚ-ಕುಂಡಲಗಳ ರಕ್ಷೆ. ಸುಯೋಧನನಿಗೋ ವಜ್ರಕಾಯದ ದೀಕ್ಷೆ. ನರನ ಬಾಳು.. ಕಾವ, ಕೊಲುವ, ನಗಿಸಿ ಅಳಿಸುವ, ಕುಣಿಸಿ, ನಲಿಸಿ, ಆಡಿಸಿ, ಗೆಲಿಸಿ ಸೋಲಿಸಿ, ಇದ್ದು ಇಲ್ಲವಾಗಿಸುವ, ಕಾಣದ ಕೈಗಳ ಪಗಡೆಯಾಟ…! ಇನ್ನು ನಿಮಿಷಗಳನೆಣಿಸುವುದಷ್ಟೇ ಕೆಲಸ… ಹೊಸ್ತಿಲಾಚೆಯ ಸುದೀರ್ಘ ಮೌನ ಕೈ ಬೀಸಿ ಕರೆಯುತ್ತಿದೆ. ಸಿದ್ಧನಾಗಲೇಬೇಕಿದೆ, ಬಿದಿರುಯಾನ ಕಟ್ಟಿಟ್ಟ ಬುತ್ತಿ… ಪಯಣ ಸ್ವರ್ಗಕ್ಕೋ ನರಕಕ್ಕೋ ತಿಳಿಯದು, ಈಗಲೇ ಅರ್ಜಿ ಹಾಕುವೆ. ಛೇ… ಎಲ್ಲಿಗಾದರೇನು….? ನಭಕೇರಿದ ಆಯುಷ್ಯಚಪ್ಪರದ ಮುದಿಹಣ್ಣೆಲೆ ಉದುರಿ ಮಣ್ಣಾಗಲೇಬೇಕು. ಹಸಿರು ಚಿಗುರಿಗೆ ಎಡೆಯಾಗಲೇಬೇಕು. ಪರಿವರ್ತನೆ ಜಗದ ನಿಯಮ… ಅದೋ….. ಅಲೆ ಅಲೆಯಾಗಿ ತೇಲಿ ಬರುತ್ತಿದೆ, ಅಲ್ಲಮನ ತಮಟೆಯ ಸದ್ದು ಶೂನ್ಯತ್ವದಾಳದಿಂದ. ಜತೆಗೆ ಬಸವನ ಉಕ್ತಿ ಮರಣವೇ ಮ…..ಹಾ……ನ…….ವ……..ಮಿ. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಾಯರಿಗಳು ಮರುಳಸಿದ್ದಪ್ಪ ದೊಡ್ಡಮನಿ (ಕೂದಲಾ)                                                                            ನಿನ್ನ ಕೂದಲ ಹಾಂಗ ಹಗೂರಕ ನಿನ್ನ ಗಲ್ಲಕ್ಕ ಹಾರಿಕೊತ ಮುತ್ತಿಡತಾವು ಅವು ಎಷ್ಟು ಪುಣ್ಯಾ ಮಾಡ್ಯಾವು. ನೀ ಬಾಚಿ ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ಹುಚ್ಚು ಬಿಡಬೇಕು ಅವನ್ನೋಡಿದ ಹರೇದ ಹುಡುಗರಿಗೆ ಹುಚ್ಚು ಹಿಡಿ ಬೇಕು.  ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ನವಿಲು ಕುಣದಂಗಕ್ಕೈತಿ ನವಿಲಿನ ಕುಣತಕ್ಕ ನನಗರ ಒಂದ್ ನಮೂನಿ ಆಕ್ಕೈತಿ. ನಿನ್ನ ಮುಂಗುರುಳು ಎಷ್ಟು ಚಂದ ಮುಖದ ಮ್ಯಾಗ ಹಾರಾಡತಾವು ಅವುಕ ಸಲಿಗಿ ಕೊಟ್ಟಿ ಅಂತ ಕಾಣತೈತಿ ಎಲ್ಲೆಂದ್ರಲ್ಲಿ ನಿನ್ನ ಗಲ್ಲಕ್ಕ ಮುತ್ತಿಡತಾವು. ********

ಕಾವ್ಯಯಾನ Read Post »

ಕಾವ್ಯಯಾನ

ಅನುವಾದ ಸಂಗಾತಿ

ಇನ್ನಿಲ್ಲ ಕ್ಲೀಷೆಗಳು ಮೂಲ: ಆಕ್ತೇವಿಯೋ ಪಾಜ಼್  ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಸು೦ದರ ಮುಖಸೂರ್ಯನಿಗೆ ದಳ ಬಿಚ್ಚಿ ಕೊಳ್ಳುವ ಡೈಸಿ ಹೂವಿನ ಹಾಗೆನೀನೂ ತೆರೆ ನಿನ್ನ ಮುಖವನ್ನು ನನಗೆಪುಟಗಳನು ತೆರೆದ೦ತೆ ಪತ್ರಿಕೆಯ ಒಳಗೆ. ಸಮ್ಮೋಹಕ ಮುಗುಳು ನಗೆಯಓ, ನಿಯತಕಾಲಿಕೆಯ ಸು೦ದರಿಮರುಳಾಗಿ ಬಿಡುವರು ಮ೦ದಿ ನಿನ್ನ ಮೋಡಿಗೆ. ಎಷ್ಟು ಕವನಗಳು ಹುಟ್ಟಿಕೊ೦ಡಿಹವು ನಿನಗಾಗಿ?ಎಷ್ಟು ಜನ “ಡಾ೦ಟೆ” ಗಳು ಬರೆದಿಹರು ನಿನಗಾಗಿ?ಓ, ಬಿಯಾಟ್ರಿಸ್,ಕಾಡುವ ನಿನ್ನ ಮಾಯೆಸೃಜಿಸುವುದು ಭ್ರಮೆ. ಆದರಿ೦ದು, ಮತ್ತೊ೦ದು ಕ್ಲೀಷೆಯಲಿಬರೆಯುವುದಿಲ್ಲ ಈ ಕವಿತೆ ನಿನಗಾಗಿಇಲ್ಲ, ಇನ್ನಿಲ್ಲ ಕ್ಲೀಷೆ. ಯಾರ ಸೌ೦ದರ್ಯಅವರ ಮೋಹಕತೆಯಲ್ಲಿದೆಯೋಯಾರ ಸೌ೦ದರ್ಯಅವರಬುಧ್ಧಿಮತ್ತೆಯಲ್ಲಿದೆಯೋಯಾರ ಸೌ೦ದರ್ಯಅವರ ಸದ್ಗುಣಗಳಲ್ಲಿದೆಯೋಯಾರ ಸೌ೦ದರ್ಯಕೃತಕವಲ್ಲವೊಅ೦ಥ ಹೆ೦ಗಸರಿಗೆ ಇದೋಅರ್ಪಿಸಿದ್ದೇನೆ ಈ ಕವಿತೆಯನ್ನು. ಪ್ರತಿ ದಿನ ಬೆಳಿಗ್ಗೆ ಹೊಸ ಕಥೆಯೊ೦ದಿಗೆ ಏಳುವಶಹಜಾದೆಯ೦ಥ ಹೆ೦ಗಸರೆನಿಮಗಾಗಿ ಈ ಕವಿತೆ.ಬದಲಾವಣೆಯ ಬಯಸಿ ಹಾಡುವ೦ಥ ಕಥೆಗಾಗಿಈ ಕವಿತೆಯುದ್ಧವನ್ನು ಆಶಿಸುವ ಕಥೆಗಾಗಿಈ ಕವಿತೆ. ಸಮ್ಮಿಳಿತ ದೇಹಗಳ ಪ್ರೀತಿಗಾಗಿ ಯುದ್ಧಹೊಸ ಹಗಲು ಹುಟ್ಟಿಸಿದ ಉದ್ರೇಕಕ್ಕಾಗಿ ಯುಧ್ಧನಿರ್ಲಕ್ಷಿತ ಹಕ್ಕುಗಳಿಗಾಗಿ ಯುದ್ಧಅಥವಾ ಕೇವಲ ಒ೦ದು ರಾತ್ರಿಯಉಳಿವಿಗಾಗಿ ಯುದ್ಧ. ಹೌದು, ನೋವಿನ ಲೋಕದಲ್ಲಲೆದಾಡುತ್ತಿರುವ ಹೆಣ್ಣುಗಳೆನಿಮಗಾಗಿ ಈ ಕವಿತೆಕರಗುತ್ತಲೇ ಇರುವ ಜಗದ ಹೊಳೆವ ತಾರೆಗಳೇನಿಮಗಾಗಿ ಈ ಕವಿತೆಸಾವಿರದೊ೦ದು ರಾತ್ರಿ ಹೋರಾಡಿದ ವನಿತೆಯರೇನಿಮಗಾಗಿ ಈ ಕವಿತೆನನ್ನ ಹೃದಯದ ಗೆಳತೀನಿನಗಾಗಿ ಈ ಕವಿತೆ. ನಾನಿನ್ನು ನೋಡುವುದಿಲ್ಲ ನಿಯತಕಾಲಿಕೆಗಳನ್ನಬದಲು ವೀಕ್ಷಿಸುತ್ತೇನೆ ರಾತ್ರಿಯನ್ನಮತ್ತದರ ಹೊಳೆವ ನಕ್ಷತ್ರಗಳನ್ನ. ಹಾಗಾಗಿ ಇನ್ನಿಲ್ಲ ಬಿಡಿ ಕ್ಲೀಷೆಗಳುಹಳೆ ಮದ್ಯದ ಆ ಶೀಷೆಗಳು! *******

ಅನುವಾದ ಸಂಗಾತಿ Read Post »

You cannot copy content of this page

Scroll to Top