ಕಾರ್ಮಿಕ ದಿನದ ವಿಶೇಷ-ಕವಿತೆ
ಸನ್ಮಾನ ಸಂಮ್ಮೋದ ವಾಡಪ್ಪಿ ಸನ್ಮಾನ ಗಳಿಕೆಗೆ ಸ್ವಾಭಿಮಾನದ ದಿಟ್ಟ ಹೆಜ್ಜೆ ಇಡುತ ಬೆವರ ಹನಿಗಳ ಸುರಿಸಿ ದುಡಿಮೆಯಲಿ ನಗುತ ಭವ್ಯ ದೇಶದ ಏಳಿಗೆಯ ಬೆನ್ನೆಲಬು ನಾವು ಶ್ರಮದ ದಾರಿ ಜೀವನದುದ್ದಕ್ಕೂ ನಡೆಯುತಿಹೆವು ಒಗ್ಗಟ್ಟಿನಲಿ ಒಕ್ಕೊರಲಿನ ಶಿಸ್ತಿನ ನಡೆಯು ದಣಿವಿಲ್ಲದ ಚಲನೆ ನಿಲ್ಲಬೇಕು ಮನೆಯು ಸಹಿಷ್ಣುತೆಯಿಂದ ಸದಾ ಕಾರ್ಯೋನ್ಮುಖ ಆತ್ಮವಿಶ್ವಾಸದ ಪಡೆ ಆಗನೆಂದು ವಿಮುಖ ಕಾರ್ಮಿಕರು ಒಂದೇ ಸೂರಿನಲಿ ಬಂಧುಗಳು ಸಮಯ ಪಾಲನೆ, ಶ್ರದ್ಧೆಯೇ ಪ್ರಮಾಣಗಳು ತಂತ್ರಜ್ಞಾನ ಕಾರ್ಯತಂತ್ರದಲ್ಲಿಯೂ ಪರಿಣಿತರು ಆರ್ಥಿಕತೆಯ ಬುನಾದಿ ನಿರಂತರ ಸಾಧಕರು ದಿನ ವಾರ ಮಾಸ ವರುಷ ದಿಟ್ಟ ದುಡಿಮೆ ವಿವಿಧ ಕಾರ್ಯ ಅನೇಕ ಕ್ಷೇತ್ರದ ಹಿರಿಮೆ ಕಾರ್ಮಿಕರ ಬಲ ದಕ್ಷತೆ ದೇಶದ ಹೆಮ್ಮೆ ಶಕ್ತಿ ಯುಕ್ತಿ ಕಾರ್ಯದಿ ಇವರೇ ರಾಷ್ಟ್ರದ ಗರಿಮೆ ಮೇ ದಿನವು ಕಾರ್ಮಿಕರಿಗಾಗಿ ಒಂದು ದಿನ ಪ್ರತಿಯೊಬ್ಬರ ಶ್ರಮಕೆ ಈ ಕವನದಿ ಸನ್ಮಾನ *******
ಕಾರ್ಮಿಕ ದಿನದ ವಿಶೇಷ-ಕವಿತೆ Read Post »









