ಕಾವ್ಯಯಾನ
ಹಸನಾಗಲಿ ಬಾಳು ಜ್ಯೋತಿ ಹೊಸಕೋಟೆ ನನ್ನ ಜೀವದ ಜೀವ ನೀ ನನ್ನೊಲವ ಉಸಿರು ನೀ// ಮೊಲೆಹಾಲ ಕುಡಿಸುವಾಗ ಪುಟ್ಟ ಪುಟ್ಟ ಹೆಜ್ಜೆಗಳಿಂದ ಎದೆಗೆ ಒದ್ದ ಕ್ಷಣ ಪುಳಕಗೊಂಡಿತ್ತು ತನು ಮನ ಎದೆ ಎತ್ತರಕ್ಕೆ ಬೆಳೆಸಿಹೆ ನಾನಿಂದು ಒದೆಯದಿರು ಚುಚ್ಚು ಮಾತುಗಳಿಂದ ನಿನ್ನ ಪ್ರೀತಿಗಾಗಿ ಹಾತೊರೆಯುವ ತಾಯಿಯ ಮನ ತಡೆಯಲಾರದು ಎಡವಿದಾಗ ಕೈ ಹಿಡಿದು ನಡೆಸಿ ದಾರಿ ತೋರಿದ್ದೆ ಅಂದು ಎಡವದಿರು ಮುಗ್ಗರಿಸದಿರು ನೋಡಿ ಸಹಿಸಲಾಗದು ಇಂದು ತಾಯಿಯ ಸೆರಗು ಹಿಡಿದವ ಸಂಗಾತಿಯ ಕೈ ಹಿಡಿದಿರುವೆ ಅವಳಲ್ಲೂ ಮಾತೃತ್ವ ತುಂಬಿಹುದು ನೋಯಿಸದೆ ಬಾಳಿಸು ಕೊನೆಯವರೆಗೂ ಮಮತೆಯ ಕುಡಿಯೊಂದು ನಿನ್ನ ಎದೆ ತಬ್ಬಲಿ ಹಬ್ಬಲಿ ಪ್ರೀತಿ ಹಚ್ಚ ಹಸಿರಾಗಿ ಹಸನಾಗಲಿ ಬಾಳು ಬೆಳಕಾಗಲಿ ********









