ಕಾವ್ಯಯಾನ
ದೂರದ ಊರು ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು ಸುರಕ್ಷಿಸಿದೆ ಎಂದು ನಿರಾಳತೆಯಲ್ಲಿ ನಿಟ್ಟುಸಿರು ಬಿಟ್ಟ. ನಾ ಮತ್ತೊಮ್ಮೆ ಎದೆಗವಚಿಕೊಂಡಾಗ ನನ್ನಪ್ಪನ ಬಿಗಿ ಉಸಿರು ತಂಪಾಗೆ ಇತ್ತು. ಎಂದೂ ಬಿಸಿ ಉಸಿರಿನ ಅಪ್ಪುಗೆ ನನಗೆ ಸಿಗಲೇ ಇಲ್ಲ. ಕಾರಣ ಅಪ್ಪ ನನ್ನ ಬಿಟ್ಟು ಬಹು ದೂರ ಹೋದನಲ್ಲ. ತನ್ನ ಉಸಿರಂತೆ ಇದ್ದ ನನ್ನ ತಬ್ಬಲಿ ಗೈದನಲ್ಲ. ( ಕೋರಾನಾ ಮಹಾಮಾರಿಯು ತಂದ ದಾರುಣ ಕಥೆಯ ವ್ಯಥೆ ಇದು.) ******** ರಜಿಯಾ ಕೆ.ಬಾವಿಕಟ್ಟೆ









