ಕಾವ್ಯಯಾನ
ಶಾಯರಿ ಮರುಳಸಿದ್ದಪ್ಪ ದೊಡ್ಡಮನಿ (೧) ಹರೇ ಬಂದ್ರ ಅದು ಖರೇನ ಹೇಳತೈತಿ ಯಾವಾಗ್ಲೂ ನಕ್ಕೊಂತನ ಇರತೈತಿ ಹರೇ ಅನ್ನುದು ಹುಚ್ಚು ಕೊಡಿಯಾಗಿರತೈತಿ ಬೇಕಾದವರನ್ನ ಬೇಕಾದಂಗ ತಿರುಗುಸತೈತಿ. (೨) ಪ್ರೀತಿ ಅನ್ನು ವಿಷ ಕುಡದೇನಿ ಸಾಯಾಕ ಒದ್ದ್ಯಾಡಕ ಹತ್ತೇನಿ ನೀ ಬಂದ್ರ ನಾಕು ದಿನ ಬದುಕತೇನಿ ಇಲ್ಲಂದ್ರ ಸಾವಿನ ಕೂಡ ಮಲಗತೇನಿ. (೩) ಪ್ರೀತಿ ಮಾಡವರ ಮೂಗಿನ ತುದಿ ಮ್ಯಾಲ ಸಿಟ್ಟಿರತೈತಿ ಅವರಿಗೆ ಅದೇ ತಾನೇ ಪ್ರೀತಿ ಹುಟ್ಟಿಗೊಂಡಿರತೈತಿ ಮಾತಾಡವ್ರನ್ನ ಕಂಡ್ರ ಸಿಟ್ಟುಬರತೈತಿ. (೪) ಪ್ರೀತಿ ಸಮುದ್ರ ಒಡಿತೇಂದ್ರ ಅದು ತಡಿಯಾಂಗಿಲ್ಲ ಅದರ ತೆರಿ ಒತ್ತಿ ಬಂದ್ರ ಕಾಡವರು ಉಳಿಯಾಂಗಿಲ್ಲ. (೫) ಸಾವು ದಿವಸ ಮುಗಿಯದ ಬರಂಗಿಲ್ಲ ಪ್ರೀತಿ ಮಾಡಿದ ಹುಡುಗಿ ಕೈ ಕೊಟ್ಟರ ಪ್ರೀತಿಸಿದವ್ರು ಸಾವಿನ ಮನಿ ಮುಂದ ನಿಂದ್ರುದು ಬಿಡಲ್ಲ. *********









