ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗುಪ್ತಗಾಮಿನಿ ವಿದ್ಯಾ ಶ್ರೀ ಎಸ್ ಅಡೂರ್. ಸಾಗರವ ಸೇರುವ ನದಿಯಾಗಿದ್ದೆ ನಾನು ಬಳುಕುತ್ತಿದ್ದೆ,ಕುಲು ಕುಲು ನಗುತ್ತಿದ್ದೆ. ನದಿಯೆಲ್ಲ ಬತ್ತಿ ನೀರೇ ಇಲ್ಲ ಈಗ ಯಾರಿಗೂ ಕಾಣದಂತೆ ಗುಪ್ತಗಾಮಿನಿ ಯಾಗಿದ್ದೇನೆ. ರೆಕ್ಕೆ ಬಿಚ್ಚಿ ಎತ್ತರೆತ್ತರಕ್ಕೆ ಹಾರುವ ಹಕ್ಕಿ ಯಾಗಿದ್ದೆ ನಾನು ಹಾಡುತ್ತಿದ್ದೆ,ನಲಿನಲಿದಾಡುತ್ತಿದ್ದೆ ಹಾರಾಡಲು ರೆಕ್ಕೆಗಳೇ ಇಲ್ಲ ಈಗ ಅನಂತ ದಿಗಂತ ವನ್ನು ಕಂಡು ,ಮೂಕವಾಗಿ ರೋಧಿಸುತ್ತಿದ್ದೇನೆ. ಅಂದಚೆಂದದಿ ಕಂಪಬೀರುವ ಹೂವಾಗಿದ್ದೆ,ನಾನು ಬೀಸುವ ತಂಗಾಳಿಗೆ ತೊಯ್ದಾಡುತ್ತಿದ್ದೆ ಕಂಪ ಬೀರಲು ಹೂವುಗಳೇ ಇಲ್ಲ ಈಗ ತಂಗಾಳಿಗೆ ಮೈ ಒಡ್ಡುವ ಮನಸಿಲ್ಲದೇ ನೋಯುತಿದ್ದೇನೆ. ಕನಸ ಹಕ್ಕಿಗಳಿಗೆ ಗೂಡು ಕಟ್ಟುವ ಮರವಾಗಿದ್ದೆ ನಾನು ಅವುಗಳ ಚಿಕ್ ಚೀವ್ ಕಲರವದಿಂದ ಮುದಗೊಳ್ಳುತ್ತಿದ್ದೆ ಅವುಗಳೆಲ್ಲ ವಲಸೆಹೋಗಿ ಮರವೆಲ್ಲ ಖಾಲಿ ಈಗ ಮೌನ ಆವರಿಸಿ ಕಿವಿ ಇದ್ದೂ ಕಿವುಡಿ ಯಾಗಿದ್ದೇನೆ. ಎಲ್ಲರ ರೀತಿ ನೀತಿ ನಿರ್ಧಾರ ಗಳಿಗೆ ಸಮ್ಮತಿಯಾಗಿದ್ದೆ ನಾನು ಎಲ್ಲರ ಮನಗಳಿಗೂ ತೆರೆದುಕೊಳ್ಳುತ್ತಿದ್ದೆ ಹಿಂದಿದ್ದ ಜೀವನದ ಉತ್ಸಾಹವೇ ಇಲ್ಲ ಈಗ ಮನದ ಬಾಗಿಲು ಮುಚ್ಚಿ ಒಂಟಿ ಯಾಗಿದ್ದೇನೆ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭಾವನೆಗಳು ಮಾತನಾಡುತ್ತಿವೆ ಕಲ್ಪನೆಗಳ ಸಾಗರದಲಿ ಹುದುಗಿ ಹೊಕ್ಕಿದ್ದ ಶಿಲ್ಪವನು ಹೆಕ್ಕಿ ನನಸಾಗಿಸುವಾಸೆಯಲಿ ನೂರೂರಗಳ ಸುತ್ತಿ ಸುತ್ತಿ ಮೌನಿಯಾದ ಶಿಲ್ಪಿಯೊಬ್ಬ ಬಾಯಾರಿ ದಣಿದಿರಲು ತಿರುಕನ ಕನಸು ಹಾರೈಸಿದಂತೆ ಚಂದಿರನ ಬೆಳದಿಂಗಳ ಮೀರಿ ಅಮೃತ ಸಮಾನ ಶಿಲೆಯೊಂದು ಹರ್ಷದಾ ವರವಾಗಿ ಗೋಚರಿಸಿ ವನವಾಸದಲಿಹ ಲಕ್ಷ್ಮಣನ ಕಾಯ್ದು ಕನವರಿಸಿ ಕಲ್ಲಾಗಿ ತಪಗೈವಂತೆ ಊರ್ಮಿಳೆ, ಹಸಿವು ನಿದ್ದೆಗಳ ಗೆದ್ದು ಕಾಲನ ಕುಣಿಕೆಯ ಮರೆತು ಹಗಲಿರುಳು ಹವಣಿಸುತಲಿ ಶಿಲೆಯನು ದೃಷ್ಟಿಸುತಲಿ ಅಂತರಾತ್ಮದಿ ಅಡಗಿಹ ಅರಿವನು ಹದಗೊಳಿಸಿ ಕಲ್ಪನೆ ಶಿಲ್ಪವನೆ ಉಸಿರಾಡಿ ಇಂದ್ರಿಯಗಳ ನಿಗ್ರಹಿಸಿ ಅತೀಂದ್ರಿಯ ಹುರಿಗೊಳಿಸಿ ಬಕಧ್ಯಾನದಿಂದಲಿ ಶಿಲೆಯ ತಿದ್ದುತಲಿ ತೀಡುತಲಿ ನವಿರಾಗಿ ಸಿಹಿ ಉಳಿಪೆಟ್ಟು ನೀಡುತಲಿ ಜ್ಞಾನದ ಒಳಗಣ್ಣ ತೆರೆದು ಕಾಲ್ಬೆರಳಿಗುಂಗುರ ಕೈಗೆಬಳೆಗಳ ಮೂಗುನತ್ತು ಕೊರಳ ಮಾಂಗಲ್ಯ ಜೀವ ಭಾವಗಳೆಲ್ಲವ ತುಂಬಿ ಕಣ್ಬಿಟ್ಟ ಶಿಲ್ಪವನು ಹೆಣ್ಣಾಗಿಸಿ ಅಪ್ಸರೆ ಸೋಲಿಸುವ ತವಕದಿ ದಣಿದ ಶಿಲ್ಪಿಯ ಉಸಿರು ಸಿಂಧೂರವಿಡದೆ ಹೆಣ್ಣಾದ ಶಿಲ್ಪಕೆ ವಿಧಿಯಾಟಕೆ ಬಲಿಯಾಯಿತು ಶಿಲ್ಪಿ ಸಾಂಗತ್ಯಕೆ ಕಾಯುತಲಿ ಜೀವಬಂದ ಶಿಲ್ಪ ಒಂಟಿತನದಿ ಬರಿಯ ಮೌನವೇ ಶಾಪವಾಗಿ ಮೂಕ ರೋಧನೆಯ ಕೂಪದಿ ಭಾವನೆಗಳು ಮಾತನಾಡುತ್ತಿವೆ ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ರೆಕ್ಕೆ ಮುರಿದಾಗ… ಚೇತನಾ ಕುಂಬ್ಳೆ ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ಉರುಳಿ ಬಿದ್ದು ಅಸುನೀಗಿದ್ದು ಬರೇ ಜೀವಗಳು ಮಾತ್ರ ಆಗಿರಲಿಲ್ಲ. ಹಲವು ಕುಟುಂಬಗಳ ಆಧಾರಸ್ತಂಭಗಳಾಗಿತ್ತು. ಅಲ್ಲಿ ಕಳೆದುಕೊಂಡದ್ದು ಸ್ನೇಹ ಸಂಬಂಧಗಳ ಕೊಂಡಿಯಾಗಿತ್ತು. ಒಬ್ಬರಿಗೆ ಪ್ರೀತಿಯ ಒಡಹುಟ್ಟಿದವರು ಮತ್ತೊಬ್ಬರಿಗೆ ಸ್ನೇಹಿತರು ಮಗದೊಬ್ಬರಿಗೆ ಬಾಳಿಗೆ ಬೆಳಕಾಗಿದ್ದ ಹೆತ್ತವರು ಕೆಲವರಿಗೆ ಜೀವದುಸಿರಾಗಿದ್ದ ಬಾಳಸಂಗಾತಿಗಳು, ಕರುಳಬಳ್ಳಿಗಳು ಮತ್ತೂ ಕೆಲವರಿಗೆ ಸಂಬಂಧಿಕರು ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ನುಚ್ಚುನೂರಾದದ್ದು ಕೇವಲ ದೇಹಗಳೂ ಎಲುಬುಗಳೂ ಮಾತ್ರವಾಗಿರಲಿಲ್ಲ ಹೆಣೆದಿಟ್ಟ ಕನಸುಗಳಾಗಿತ್ತು ಮನದ ಮೂಲೆಯಲ್ಲಿದ್ದ ನಿರೀಕ್ಷೆಗಳಾಗಿತ್ತು ಭದ್ರವಾಗಿ ಬೇರೂರಿದ ನಂಬಿಕೆಗಳಾಗಿತ್ತು ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಕ್ಷಣದೊಳಗೆ ಹೊತ್ತಿ ಉರಿದದ್ದು ಒಂದಷ್ಟು ಮಿಡಿವ ಹೃದಯಗಳು ಮಾತ್ರ ಆಗಿರಲಿಲ್ಲ ಗೆಳೆಯರಿಗಾಗಿ, ಬಂಧುಗಳಿಗಾಗಿ ಖರೀದಿಸಿದ ಸ್ನೇಹದ ಉಡುಗೊರೆಗಳಾಗಿದ್ದವು ಹೆತ್ತವರಿಗಾಗಿ ತೆಗೆದಿರಿಸಿದ ವಸ್ತ್ರಾಭರಣಗಳಾಗಿದ್ದವು ಬಾಳ ಸಂಗಾತಿಗಾಗಿ ಅಡಗಿಸಿಟ್ಟ ಒಲವ ಉಡುಗೊರೆಗಳಾಗಿದ್ದವು ಮಕ್ಕಳಿಗಾಗಿ ಕೊಂಡುಕೊಂಡ ಚಾಕ್ಲೇಟ್ ಗಳೂ, ಆಟಿಕೆಗಳೂ ಆಗಿದ್ದವು. ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಎಲ್ಲವೂ ನಭವನ್ನಾವರಿಸಿದ ಕಪ್ಪು ಹೊಗೆಯೊಂದಿಗೆ ಬೆರೆತು ಕರಕಲಾಗಲು ಒಂದು ನಿಮಿಷವೂ ಬೇಕಾಗಿರಲಿಲ್ಲ ಎಲ್ಲವೂ ಮುಗಿದಿತ್ತು ಕ್ಷಣದೊಳಗೆ ಏನೆನ್ನಲಿ… ವಿಧಿಯಾಟವ…. ಹೇಗೆ ಮರೆಯಲಿ… ಹೇಗೆ ಸಹಿಸಲಿ…ನೋವನ್ನು… ದಿನಗಳುರುಳಿ ವರುಷಗಳಾಗುತ್ತಿವೆ ವರುಷಗಳೊಂದಿಗೆ ಕಾಲವೂ ಬದಲಾಗುತ್ತಿದೆ ಆದರೆ, ನೆನಪುಗಳು… ಅದೂ ಕಹಿ ನೆನಪುಗಳು… ಈಗಲೂ ಎದೆಯನ್ನು ಇರಿಯುವಾಗ ಕಣ್ಗಳು ಹನಿಗೂಡುತ್ತವೆ ಹೃದಯ ಭಾರವಾಗುತ್ತದೆ ಜೊತೆಗೆ, ದೀರ್ಘವಾದ ಒಂದು ನಿಟ್ಟುಸಿರು… (ದಶಕದ ಹಿಂದೆ ಮಂಗಳೂರಲ್ಲಿ ನಡೆದ ವಿಮಾನ ದುರಂತ ಘಟನೆಯ ಆಧಾರಿತ) *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಂಗಾಳಿ! ಕೆ.ಬಿ.ವೀರಲಿಂಗನಗೌಡ್ರ ಅವಳೆಂದರೆ.. ತೊರೆದವನಿಗೆ ಅರಳಿಮರವಾದವಳು ಅವಳೆಂದರೆ.. ಕೂಡಬೇಕೆಂದವನಿಗೆ ಅನುಭವಮಂಟಪವಾದವಳು ಅವಳೆಂದರೆ.. ಹೋರಾಟಗಾರನಿಗೆ ಊರುಗೋಲಾಗಿ ನಿಂತವಳು ಅವಳೆಂದರೆ.. ಸಮತೆಯೆಂದವನಿಗೆ ತಕ್ಕಡಿ ಹಿಡಿದು ನಿಂತವಳು ಅವಳೆಂದರೆ.. ಎದೆಯದನಿಗೆ ಸ್ವಾತಿ ಹನಿಯಾದವಳು ಅವಳೆಂದರೆ.. ಬೆಳೆಸಲೆಂದೇ ಬೇರಾಗಿ ಕೆಳಗಿಳಿದವಳು ಅವಳೆಂದರೆ.. ಕಾಣದ ತಂಗಾಳಿ ಅರ್ಥವಾಗದ ಅಮೂರ್ತ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸರಸ ಬಾಲಕೃಷ್ಣ ದೇವನಮನೆ ಹುಣ್ಣಿಮೆಯ ಶೃಂಗಾರದಾಟಕೆಉದ್ರೇಕಗೊಂಡು ಮೊರೆಯುತ್ತಿದೆ ಕಡಲುದಂಡೆಯಲ್ಲಿ…ಎದೆಯಿಂದ ನಾಭಿಯಲಿ ಸುಳಿದುತೊಡೆಸಂಧಿಯಲಿ ಕುದಿಯುತ್ತಿದೆ ಉಸಿರು… ಮೌನವನು ಹೊದ್ದ ತಿಂಗಳುಮುಚ್ಚಿದ ರೆಪ್ಪೆ;  ಕಚ್ಚಿದ ತುಟಿ,ಕಿವಿಯ ಪದರದಲಿ ಮುಲುಕಾಟದಾಲಾಪ,ಕುಳಿರ್ಗಾಳಿ ಸೋಕಿದ ಬೆರಳುಮೈಮುರಿದ ತೋಳುಉಸಿರಿನೇರಿಳಿತಕಿಬ್ಬೊಟ್ಟೆಯಲಿ ಬಿಗಿತ;ನಡುವಿಂದ ಕಾಲ್ಸೆಳೆತ. ಚದುರಿದ ಮರಳುಹಾಸಿಗೆ, ಕೆದರಿದ ಮುಂಗುರುಳುಗೀರಿದ ಬೆನ್ನುಉಕ್ಕಿದ ಬೆವರು ಹರಿದುಒಡಲೊಳಗೆ ಜೀವಜಲ ಪುಟಿದುಗರ್ಭಗಡಲಲ್ಲಿ ಪುಳಕ..! ಮೊರೆತ ತಗ್ಗಿದ ಕಡಲು ಶಾಂತಪ್ರಶಾಂತ ಮುಗುಳು ಧನ್ಯ!! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಅಮೃತ ಎಂ ಡಿ ಕಣ್ಮುಚ್ಚಿ ನೋವುಗಳನ್ನೇ ಸಹಿಸಿಕೊಳ್ಳುವೆ ಗೆಳೆಯ ನಿನ್ನ ಹೆಸರಲ್ಲಿ ನನ್ನಯ ಉಸಿರುಂಟು ಗೆಳೆಯ ಆಗಾಗ ಉಸಿರಾಡೋ ಗಾಳಿಯಲ್ಲಿ ನಿನ್ನಯ ಹೆಸರನ್ನೇ ಹುಡುಕುವ ಹುಚ್ಚಾಟದ ಅತಿರೇಕವುಂಟು ಗೆಳೆಯ ಶ್ರೀಗಂಧದ ಘಮಲು ಕೂಡ ಪೈಪೋಟಿ ನೀಡುತ್ತಿರುವಾಗ ಚಂದದ ಮೋರೆಗೆ ಎಲ್ಲಿಲ್ಲದ ಅಂದವುಂಟು ಗೆಳೆಯ ನಿನ್ನೊಲವ ನೆರಳಲ್ಲಿ ಮುಳ್ಳು ಹಾದಿಯು ಕೂಡ ಹೂವಿನ ಹಾಸಿಗೆ ಆಗುವುದೆಂಬ ಆಸೆವುಂಟು ಗೆಳೆಯ “ಅಮ್ಮು”ವಿನ ಸಂತೋಷದ ಪರಿಛಾಯೆಯು ನಿನ್ನ ಸಂಪ್ರೀತಿಯ ಸಾಂಗತ್ಯದಲ್ಲೇ ಉಂಟು ಗೆಳೆಯ ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೊಗಸೆಯೊಳಗಿನ ಬಿಂದು ಎನ್. ಶೈಲಜಾ ಹಾಸನ ಬಿಟ್ಟು ಬಿಡು ಗೆಳೆಯನನ್ನಷ್ಟಕ್ಕೆ ನನ್ನರೆಕ್ಕೆ ಹರಿದ ಹಕ್ಕಿಹಾರಿಹೋಗುವುದೆಲ್ಲಿಇಷ್ಟಿಷ್ಟೆ ಕುಪ್ಪಳಿಸಿಅಲ್ಲಲ್ಲೆ ಅಡ್ಡಾಡಿನಿನ್ನ ಕಣ್ಗಾವಲಲ್ಲಿಯೇಸುತ್ತಿ ಸುಳಿದುಒಂದಿಷ್ಟೆ ಸ್ವಚ್ಛಗಾಳಿಸೋಕಿದಾ ಕ್ಷಣಧನ್ಯತೆಯ ಪುಳಕತಣ್ಣನೆಯ ನಡುಕಎದೆಯ ತಿದಿಯೊಳಗೆನೀನೇ ಒತ್ತಿದ ಕಾವುಭಾವನೆಗಳ ಬೇಯಿಸಿಮನವೀಗ ಚಿತೆಯೊಳಗೆಬೆಂದ ಕುಂಭಬಿಟ್ಟರೂ ಬಿಡಲಾರೆಎನುವ ಮಾಯೆಅಟ್ಟಾಡಿಸುತ್ತಿದೆಗೆಲುವಿನ ಹಾದಿಯನೀನೇ ಹಾರ ಬಿಟ್ಟರೂರೆಕ್ಕೆ ಇಲ್ಲದ ನಾನುಮತ್ತೇ ನಿನ್ನ ಉಡಿಗೆಬೊಗಸೆಯೊಳಗಿನ ಬಿಂದುಮುಷ್ಠಿಯೊಳಗೆ ಆವಿಎತ್ತತ್ತ ಸರಿದರೂಮತ್ತೆ ಅಲ್ಲಿಗೇಪಯಣದ ಹಾದಿದೂರ ದೂರಕೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅರಿಯದ ಹಾಡು ಡಾ.ವೈ.ಎಂ.ಯಾಕೊಳ್ಳಿ ಗಜದಾಲಯದಲಿ ಮೂಡಿದ ಸುಂದರ ರಾಗ. ತೇಲಿ ಬಂದಿತು ಅಂತಪುರದ ಹಂಸತೂಲಿಕದೊಳಗೆ ಬಗೆಯಿತು ರಾಣಿಯ ಎದೆಯನು ಯಾರಿಗೂ ತಿಳಿಯದ ಹಾಗೆ ತಡೆಯಲೇ ಇಲ್ಲ ಕಾವಲುಭಟರ ಸಾವಿರ ಕಾಲಾಳುಗಳ ಪಡೆ ಕೊಟ್ಟಳು ಮನವನು ಎಂದೂ ನೋಡದ ದನಿಗೆ ಮನವನು ಬಗೆದ ರಾಗವ ಬೆನ್ನತ್ತಿ ಹೊರಟೇ ಬಿಟ್ಟಿತು ನಿಲ್ಲದೆ ಎರಡು ಗಳಿಗೆ ಲೋಕದ ವಿಕಾರ ಧರಿಸಿತ್ತು ಮಾನವನ ಆಕಾರ, ಎಲ್ಲಿದೆ ವಿವೇಚನೆ ಒಲಿದ ಎದೆಗೆ ತಡಮಾಡದೇ ಕೊಟ್ಟಿತು ದಾನ ಹೃದಯವ ಮಾವುತನ ಎದೆಯೊಸಗೆಗೆ ಆಹಾ !ಲೋಕದ‌ ಕಣ್ಣಿಗೆ ಅಪಾತ್ರ ದಾನ! ಹೇಳುವರಾರು,ಕೇಳುವರಾರು ನಡೆದೆ ಬಿಟ್ಟಿತುಪ್ರೇಮದಯಾಣ ಕಣ್ಣು‌ಮುಚ್ಚಿ,,ಕಣ್ಣು ತಪ್ಪಿಸಿ ಸಿದ್ಧವಾಯಿತು ಇತಿಹಾಸದಿ ದೊರಕದ‌ ಪುಟವೊಂದು ಲೋಕವೆ ಕರುಬುವ ಗಂಡ, ರಾಣಿಯ ಪಟ್ಟ ಎಲ್ಲವೂ ಆಯಿತು ಕಾಲಿನ ಕಸ ಬದಗನ ಎದೆಯೆ ಆಯಿತು ಸ್ವರ್ಗ ಕಾಣಲೇ ಇಲ್ಲ ಧರ್ಮ ,ಸಮಾಜ ಒಲಿಯದ ಗಂಡನು ಎಸೆದ ಕುಸುಮ‌ ಮಾಡಿತು‌ ಮಾಯದ ಗಾಯ, ಆನೆಯ ಚಬಕದ ಹೊಡೆತ ಬಾಧಿಸಲಿಲ್ಲ ರಾಣಿಯ ಮೈಗೆ ಅಂದಿನದೊಂದೇ ಕಥೆಯೆ ಇದು! ನಡೆದಿದೆ ಎಂದಿಗೂ ಹೀಗೆ , ಆಡುವ ಬಾಯಿಗಳು ಆಡಿಕೊಳ್ಳುತಲೇ ಇವೆ ಕೇಳದೆ ನಡೆದಿವೆ ಅಮೃತಮತಿ ಬದಗರ‌ ಬೆಸುಗೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತುಂಟ ಮೋಡವೊಂದು ಫಾಲ್ಗುಣ ಗೌಡ ಅಚವೆ ಎಲ್ಲಿಂದಲೋ ಹಾರಿಬಂದ ತುಂಟ ಮೋಡವೊಂದು  ನನ್ನೆದೆಗೆ ಬಂದುತನ್ನೊಳಗಿನ ಹನಿ ಹನಿಇಬ್ಬನಿಗರೆಯಿತು ಅಂಗಳದ ಸಂಜೆ ಗತ್ತಲುಬೆರಗುಗಣ್ಣಿನ ಚುಕ್ಕೆಗಳುಅಗಾಧ ನೀಲಾಕಾಶಹಿಮಕಣಗಳ ಹೊತ್ತು ತಂದ ಗಾಳಿನನ್ನ ತೆಕ್ಕೆಯಿಂದ ಹೊರಬಿದ್ದವು ಆ ಬೆಳ್ಳಿ ಮೋಡ ಬಂದದ್ದೇ ತಡ:ಎದೆಯ ತುಂಬೆಲ್ಲನಾದದ ನವನೀತವಾಗಿನೀರವ ಮೌನದ ಮಜಲುಗಳುಶಬ್ದವಾಗಿಸಾಲು ಬೆಳ್ಳಕ್ಕಿಗಳಾದವು ತಿಳಿ ನೀರ ಸರೋವರದ ಆವಿಯೋಕಡಲ ಅಲೆ ಮಿಂಚಿನಹಿತ ನೋವ ಸ್ಪರ್ಶವೋಗಾಳಿ ಮರದ ಮೌನಭಾಷೆಯಇನಿದನಿಗೆ ದಂಗಾಗಿದಿಗಂತಕ್ಕಾಗಿ ಕಾದುಕುಳಿತದಂಡೆಯೋಏನೂ ಹೊಳೆಯಲಿಲ್ಲ ನನ್ನ ಏಕಾಂತವನ್ನು ಹಾದಆ ತುಂಟ ಮೋಡನೋಡ ನೋಡುತ್ತಿದ್ದಂತೆನಕ್ಷತ್ರಗಳಲ್ಲಡಗಿದ ಮಿಂಚಂತೆಮೈ ತುಂಬಿಬಂದುಅಕ್ಷರದಲ್ಲಡಗಿತು! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗತ್ತಿನ ಭಾಷೆ ಗೊತ್ತಿಲ್ಲ ಮಧುಸೂದನ ಮದ್ದೂರು ಅಳುವ ಮುಗಿಲಿನಿಂದ ಕಣ್ಣೀರ ಕಡವ ಪಡೆದು ಭೋರ್ಗೆರೆವ ಕಡಲ ಮೇಲೆ ಯಾತನೆಯ ಯಾನ ಬಯಸಿದ್ದೇನೆ.. ನಿನ್ನ ನೆನಪು ಮಾಸಿ ಸೋಲುಗಳು ಗೆಲುವುಗಳಾಗಲೆಂಬ ಬಯಕೆಯಿಂದಲೂ ಭ್ರಮೆಯಿಂದಲೂ…. ನಗೆಯ ಕೋಟೆಗೆ ಲಗ್ಗೆಯಿಟ್ಟು ಅಳುವ ಆಳೋ ಸಂತಸದ ತೇರನ್ನೇರಿ ಮೈ ಮರೆತ್ತಿದ್ದೇನೆ.. ನಿನ್ನ ಒನಪು ಕಾಡದಿರಲೆಂಬ ಜಂಭದಿಂದಲೂ ಆತಂಕದಿಂದಲೂ… ಬಯಕೆ ಭ್ರಾಂತಿಯಾಗುವುದೋ ಜಂಭ ಕರಗಿ ನಿನ್ನೆದೆಗೆ ಒರಗುವನೋ ಗೊತ್ತಾಗುತ್ತಿಲ್ಲ.. ಕಾರಣ ಹೃದಯಕೆ ಗತ್ತಿನ ಭಾಷೆ ಗೊತ್ತಿಲ್ಲವಲ್ಲ.. **********

ಕಾವ್ಯಯಾನ Read Post »

You cannot copy content of this page

Scroll to Top