ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮುಂಗಾರು ಮಳೆ ಮುಂಗಾರಿನ ಆಗಮನ ನಮ್ಮೆಲ್ಲರಲ್ಲಿ ನವಚೈತನ್ಯ ಬಿಸಿಲ ಝಳಕ್ಕೆ ಕಂಗಾಲಾಗಿರುವಾಗ ನೀ ಬಂದು ನೀಡುತ್ತಿ ಸಂತಸ! ರಜೆಯ ಮಜದಿಂದ  ಚಿಣ್ಣರು ಶಾಲೆಯತ್ತ ಬೆಳೆಗಳನ್ನು ಫಲವತ್ತಾಗಿಸಲು  ರೈತರು ಗದ್ದೆಯತ್ತ! ಮಾಸಗಳಲ್ಲಿ ಶುರುವಾಗುವ  ಒಂದೊಂದು ಚಟುವಟಿಕೆಗಳು ಚಟುವಟಿಕೆಗಳಿಂದ ಹಚ್ಚ ಹಸಿರಾಗುವ ಪ್ರಕೃತಿ ಪ್ರಕೃತಿಯ ಮಡಿಲಲ್ಲಿ ತೃಪ್ತಿಯಿಂದ ಬೀಗುವ ನಾವುಗಳು ನಾವುಗಳು ಇತ್ತೀಚೆಗೆ ತೋರುವ ಸ್ವಾರ್ಥತೆ ಸ್ವಾರ್ಥತೆಯಿಂದ ನಿಸರ್ಗದ ಮೇಲಿನ ಹಾನಿ ಮನುಜರು ಮಾಡುತಿಹರು ಪಾಪ ನೀ ಕೊಂಚ ತಡವಾದರೂ ಹಾಕುವೆವು ಶಾಪ! ಹೇ ಮುಂಗಾರು ಅದು ನಿನಗಲ್ಲ ಮಾನವನ ದುರಾಸೆಗೆ ಮಿತಿಯಿಲ್ಲ ಹೇಗೆ ಕೇಳಲಿ ನಿನ್ನ ಕ್ಷಮಿಸುವೆಯಾ ನಮ್ಮನ್ನೆಲ್ಲ! ಹಾನಿಯ ತೀವ್ರತೆಗೆ ಮುಂದೂಡಲ್ಪಟ್ಟಿರುವ ಮುಂಗಾರು ಮಳೆ ಮುಂಗಾರು ಮಳೆಗಾಗಿ ನಡೆಯುವ ವಿನಂತಿ ವಿನಂತಿ ಏನೆಂದರೆ ಬೇಡ ಭೂಮಾತೆಯ ನಾಶ ನಾಶ ಮಾಡಿ ಹೋಗುವೆವು ಕಣ್ಣೆದುರೇ ನಶಿಸಿ..!! ******** ಸುಪ್ರೀತಾ ವೆಂಕಟ್

Read Post »

ಕಾವ್ಯಯಾನ

ಬಾಲ್ಯದ ಮುಂಗಾರು ಮಳೆ ನನ್ನ ಬಾಲ್ಯದ ಮಳೆಗಾಲ ಈಗ ಮೊದಲಿನಂತಿಲ್ಲ ಬಹುಶಃ ಕಾಲದೊಂದಿಗೆ ಬೆಳೆದು ಮೊದಲಿನ ಮಾತಿಲ್ಲ ಮುಂಗಾರು ಆಗಲೇ ಬಾಗಿಲು ಬಡಿದು ನಿಂತಿದೆ ವರ್ಷ ಋತುವಿನ ಮೊದಲ ಮಳೆಯ ತಂದಂತಿದೆ ಮನೆಯ ಕಿಡಕಿಯಿಂದ ನೋಡಿದರೆ ಆಕಾಶದಲಿ ಕಪ್ಪು ಮೋಡಗಳ ಗರ್ಜನೆಗೆ ನರ್ತಿಸುವ ಮಳೆಹನಿ ಗಾಜಿನ ಮಣಿಗಳು ಗೋಡೆಗೆ ಟಳಾಯಿಸುತಲಿವೆ ಅಬ್ಬರಿಸುವ ಮಳೆಯ ಸಂಗೀತ ಆಲಾಪಿಸುತಲಿದೆ ಕೆಲವೊಮ್ಮೆ ನಾ ಆಡುತಲಿದ್ದೆ ಅವುಗಳೊಂದಿಗೆ ಅದಕಾಗಿ ಅವು ಈಗ ನನ್ನನು ಕರೆಯುತಲಿವೆ ನಾನಾಗ ಕಿರಿಯಳು ಈ ಮಾತು ಹಿರಿದಾಗಿತ್ತು ಆವಾಗ ಹೊತ್ತಿಗೆ ಮನೆಗೆ ಬರುವುದು ಯಾರಿಗಿತ್ತು ಮಳೆಯ ನೀರಿನಲಿ ನೆನೆಯಲು ಓಡಿದ ಎಳೆ ಮನಸು ಅವಳ ಕೈಹಿಡಿದು ತಡೆದ ನನ್ನಲ್ಲಿಯ ಬೆಳೆದ ಮನುಷ್ಯ ಮಳೆಗಾಲ ಮತ್ತು ನನ್ನ ಅಮಾಯಕ ಬಾಲ್ಯದ ಮಧ್ಯ ತಿಳುವಳಿಕೆಯ ಗೋಡೆಯೊಂದು ಎದ್ದು ನಿಂತಿದೆ ಸಧ್ಯ ಗುಡುಗು ಸಿಡಿಲು ಮಿಂಚು ನಿಸರ್ಗದ ರಮಣೀಯತೆ ಮೊದಲಿನ ಭಯಂಕರ ಗರ್ಜನೆ ಮನಕೆ ಹಿಡಿಸುತ್ತಿತ್ತು ಈಗ ಹೆದರಿಸುತ್ತಿದೆ ಕುತ್ತೆನಿಸಿದ ಮಳೆ ಆಪತ್ತಾಗಿ ಭಯಭೀತ ನಾವಾದರೆ ಕೆಟ್ಟ ಹೆಸರು ಬಂತು ಮಳೆಗೆ ಯಾವ ನೀರಿನಲಿ ಕುಣಿದಾಡುತ್ತಿದ್ದೆವೋ ಅದರಲ್ಲೀಗ ಕೀಟಾಣುಗಳು ಕಾಣುತ್ತಲಿವೆ ಅದಕ್ಕೂ ಹೆಚ್ಚಾಗಿ ಲ್ಯಾಪ್‌ಟಾಪ್ ತೊಯ್ದೀತಲ್ಲಾ ಅನ್ನುವ ಅನುಮಾನ ಹಣುಕಿ ಇಣುಕುತ್ತಿದೆ ಭರಪೂರ ಮಳೆಯಾಗಿ ಶಾಲೆಗೆ ಸೂಟಿಯಾಗಲಿ ಅಂತ ಬಯಸುತ್ತಿದ್ದ ಅಂತರಂಗ ಬಾಲ್ಯದಲಿ ಮಳೆ ಬಂದು ಆಫೀಸ್ ಸೂಟಿಯಾಗಬಾರದಲ್ಲ ಎನ್ನುವ ಆತಂಕದ ಮನೋಭಾವ ಬೆಳೆದವರಲ್ಲಿ ಹಪ್ಪಳ ಸಂಡಿಗೆಯೊಂದಿಗೆ ಬಿಸಿ ಚಹಾ ಮಳೆಗಾಲದ ಮಜವಾಗಿತ್ತು ಆಗ ಅಂಥ ಸಮಯ ಸಂಗತಿ ಬೆಳೆದಂತೆ ಎಲ್ಲೋ ಕಳೆದು ಮಾಯವಾಗಿದೆ ಈಗ ********* ವಿನುತಾ ಹಂಚಿನಮನಿ

Read Post »

ಕಾವ್ಯಯಾನ

ಮಳೆಯಾಗುತಿದೆ, ಭಾರವಾದ ಮೋಡದ ಮನಸು ಹಗುರಾಗುವುದು ಹೀಗೆ ತಾನೇ, ಒಡಲು ತುಂಬಿದ ರಾಶಿ ಹನಿಗಳನೆಲ್ಲ ಹೊರ ಚೆಲ್ಲಿ ಹಗುರಾಗುವ ಮೊದಲು ಭಾರವಾಗಲೇ ಬೇಕು, ಮನ ಕಟ್ಟಬೇಕು ದಟ್ಟೈಸಬೇಕು ತೀವ್ರತೆಯ ದಾಟಿ ಒಮ್ಮೆಗೆ ಸ್ಪೋಟಗೊಳ್ಳಬೇಕು, ಹನಿಯೊಸರಿದರೆ ತಾನೇ ಚಿಗುರ ಕನಸು, ಹನಿಯಬೇಕು ಹನಿದು ಹಗುರಾಗುವ ಮುನ್ನ ಮೋಡ ಕಟ್ಟಬೇಕು ಭಾರವಾಗಬೇಕು, ಮಳೆಯಾಗಿ ಇಳೆಗಿಳಿದು ಹಗುರಾಗುತಲೆ ಹಸಿರ ಕನಸಿಗೆ ಜೀವ ತುಂಬಬೇಕು, ಭುವಿಗಿಳಿದ ಗುರುತಿಗೆ ಸಹಿಯ ಒತ್ತಬೇಕು… ************ ಅರ್ಪಣಾ ಮೂರ್ತಿ

Read Post »

ಕಾವ್ಯಯಾನ

ಹಬ್ಬ ಈ ಮುಂಗಾರು ಇರುವುದೇ ಹೀಗೆ ಪಯಣಿಸಿ ಬಂದ ಮೋಡ ಭುವಿಯನ್ನು ಅಪ್ಪಿ ಆನಂದ ಭಾಷ್ಪವ ಸುರಿಸಿದಂತೆ ಯಾರೋ ಮೇಲೆ ನೀರಿಗೆ ಜರಡಿ ಹಿಡಿದಂತೆ ಗಿಡಮರಗಳು ಹಸಿರು ಎಲೆ ಪುಷ್ಪಗಳ ಗುಚ್ಛ ಕಟ್ಟಿದಂತೆ ಹೊಂಡಗಳು ತೊಳೆದು ನೀರು ತುಂಬಿದಂತೆ ನಡು ನಡುವೆ ಇಣುಕಿ ಮರೆಯಾಗುವ ಸೂರ್ಯ ತೂಕಡಿಸಿದಂತೆ ಮಲಿನವ ಹೊರನೂಕಿ ಮನ‌ಮನಗಳು ಒಂದಾದಂತೆ ಟೊಂಗೆಗಳ‌ ನಡುವಿಂದ ನೆಲಕೆ ಉದುರುವ ಚಿಟಪಟ ಶಬ್ದದಂತೆ ನೆನೆದ ಹಕ್ಕಿಗಳು ಮೈಯ ಜಾಡಿಸಿ ಫಟಫಟನೆ ಹಾರಿದಂತೆ ಅಗೋ‌‌ ಬಂದಿತೋ ಜಿಟಿಜಿಟಿ ರಾಜನ ಕಾರ್ಮೋಡ ರಥವು ಮರಳಿದ ಮುಂಗಾರಿನ‌ ಸಂಭ್ರಮವು ಭುವಿಯ ತುಂಬೆಲ್ಲ ತೋರಣವು *********** ಸಂಮ್ಮೋದ‌ ವಾಡಪ್ಪಿ

Read Post »

ಕಾವ್ಯಯಾನ

ಮಳೆ.. ಬಿರು ಬಿಸಿಲ ರಭಸಕ್ಕೆ ಬಾಡಿ ಬಸವಳಿದಇಳೆಗೆ ಸಂತೈಸಲು ಬಂದಿತು ಮಳೆ..ಬೆವರ ಪಸೆಗೆ ಕಳೆಗುಂದಿದ ಮೊಗಗಳಿಗೆಮತ್ತೆ ರಂಗೇರಿಸಲು ಚಿಮ್ಮಿತು ಮಳೆ.. ಭೂದೇವಿಯ ಒಣಗಿದ ಒಡಲಿಗೆ ಭರದಿಂದಸುರಿಯಲು ಕಾತರಿಸಿದೆ ಮಳೆ..ಚಿಗುರುತ್ತಿರುವ ಹುಲ್ಲಿನ ಮೇಲೆಚಿನ್ನಾಟವಾಡಲು ಜಿನುಗಿದೆ ಮಳೆ.. ಬರಿದಾದ ಕೆರೆ ಕಟ್ಟೆಗಳಿಗೆ ಹಬ್ಬದೂಟಉಣಿಸಲು ಅಣಿಯಾಯ್ತು ಮಳೆ..ದನ ಕರುಗಳು ಸಸ್ಯ ಸಂಕುಲಗಳುಹಿಗ್ಗಿ ಹೀರಲು ಒಂದೇಸಮ ಸುರಿಯಿತು ಮಳೆ.. ದೂರಾದ ಬಾನು ಭೂಮಿಯ ನಂಟುಮತ್ತೆ ಹುರಿಗೋಳಿಸಲು ಹೊಯ್ದಿತು ಮಳೆ..ಬರಗೆಟ್ಟನಾಡಿಗೆ ಕಾಮನಬಿಲ್ಲಿನ ಒನಪುಸಾರಲು ಮತ್ತೆಮತ್ತೆ ಕಾತರಿಸಿತು ಮಳೆ.. ಜೀವಸಂಕುಲಗಳ ಮುಂದಿನ ಪಯಣಸುಖವಾಗಿರಿಸಲು ಮರೆಯದೆ ಬರುವದು ಮಳೆ..ತನಗಾಗಿ ಕಾತರಿಸುವ ಕನವರಿಕೆಗಳಿಗೆನಿರಾಶೆಗೋಳಿಸದೆ ಬಂದೆ ಬರುವದು ಮಳೆ… ********** ಜ್ಯೋತಿ ಡಿ.ಬೊಮ್ಮಾ.

Read Post »

ಕಾವ್ಯಯಾನ

ಮಳೆ_ಪ್ರೀತಿ ಮತ್ತೆ ಸುರಿದಿದೆ ಮಳೆತುಂತುರು ಹನಿಗಳಾಗಿನಮ್ಮೊಲವು ಶುರುವಾದಗಳಿಗೆಯಂತೆ ಒಮ್ಮೆಲೇ ಧೋ ಎಂದುರಭಸವಾಗಿನಮ್ಮ ಪ್ರಣಯೋತ್ಕರ್ಷದಆ ರಸಕ್ಷಣಗಳಂತೆ ಕೆಲವು ಕಾಲ ಶಾಂತ ಪ್ರಶಾಂತಸದ್ದಿಲ್ಲದೇ ನಿರಂತರ ಸೋನೆನಿನ್ನೆದೆಗೆ ಒರಗಿನಾ ಪಡೆದ ನೆಮ್ಮದಿಯಂತೆ ಇಂದೀಗ ಎಲ್ಲ ಸ್ತಬ್ಧಎಲ್ಲೋ ತೊಟ ತೊಟ ಸದ್ದುಸಂಪೂರ್ಣ ನೀರವತೆಮುಗಿದು ಹೋದನಮ್ಮ ಪ್ರೀತಿ ಕಥೆಯಂತೆ ********* ಸುಜಾತಾ ರವೀಶ್

Read Post »

ಕಾವ್ಯಯಾನ

ಮುದ್ದು ಮಳೆ ಮೋಡಗಳು ಒಂದನ್ನೊಂದು ಮುದ್ದಿಸಲುಹಣೆಗೆ ಹಣೆಯ ತಾಕಿಸಲುತಂಗಾಳಿಯು ಮೋಡಕೆ ತಂಪೆರೆದಾಗಲೇನೀ ಬರುವೆ ಭೂಮಿಗೆ ಮಗುವಾಗಿ ಮಳೆಯಾಗಿ ನಾಳೆಯುದುರುವ ಹಣ್ಣೆಲೆಯು ನಿನ್ನ ಸ್ಪರ್ಶ ಮಾತ್ರಕೆ ಪಾವನವುಒಣಭೂಮಿ ಕುಣಿಯುತಿದೆ ನಿನ್ನಮಿಲನದ ಮಣ್ಣಗಂಧವ ಹೊತ್ತು ಗಾಳಿಗೆ ತೂರಿ ಹೋಗುವ ಬೀಜಗಳುನಿನ್ನ ಬರುವಿಕೆಗೆ ಜಾಗ ಹಿಡಿದು ಕುಳಿತಿವೆನಿನ್ನೊಡನೆಯ ಪಿಸುಮಾತುಗಳ ಕೇಳುತ್ತಲೇಭೂಮಿ ಹಸಿರ ತುಂಬಿಕೊಂಡು ಮೈ ನೆರೆದಿದೆ ಸೀರಂಗಿಯೊಡನೆಯೊಂದು ಸೂಕ್ಷ್ಮ ಸಂವೇದನೆಯುಸಿಂಗರಿಸಿಕೊಂಡು ಕಾಯುತ್ತಿದೆ ಒಳಬರಲುಕೋಣೆಯೊಳಗಿರುವ ತಬ್ಬಿರುವ ದೇಹಗಳಿಗೆಮೈ ಬಿಸಿ ಏರಿಸಿ ಕಿಟಕಿಯಿಂದಲೇ ಸೋಕಿ ತಂಪೆರೆದು ರೇಗಿಸಲು ಮಿಲನಾತುರಕ್ಕೆ ಕಪ್ಪೆಗಳು ಕಾತರಿಸಿಇರುಳನ್ನೇ ಬೆಚ್ಚಿ ಬೀಳಿಸಿವೆ ಎಲ್ಲೆಲ್ಲಿನ ಮಿಲನ ಮೈಥುನಗಳ ಬೆಚ್ಚಗಿನ ಭಾವವೊಂದು ಮಳೆಯೊಂದಿಗೆ ಅನವರತ….. ****** ಮೋಹನ್ ಗೌಡ ಹೆಗ್ರೆ

Read Post »

ಕಾವ್ಯಯಾನ

ಮಳೆ ಹಾಡು ಆಕಾಶ ಬಯಲಲ್ಲಿ ಸಾಲುಗಟ್ಟಿದಮೋಡ ಗರಿಕೆಯೊಂದನೂಚಿಗುರಿಸದು ನೋಡು ಇಳೆಯ ಸಾಂಗತ್ಯಕೆ ಇಳಿದುಬಂದೊಡನೆಯೇ ನೆಲವೆಲ್ಲಾಹಚ್ಚ ಹಸಿರು ಪಚ್ಚೆ ಕಾಡು ಬಾನ ನಂಟಿದ್ದೂ ಅಂಟಿಕೊಳದೆಭುವಿಯ ಸಾಮಿಪ್ಯಕೆ ಕಾತರಿಸಿ ಓಡಿಬರುವುದು ಅಮೋಘ ಮೇಘದ ಪಾಡು ಹೀಗೆ ಇರುವ ಪರಿ ಯಾವುದೆಲ್ಲಾಸರಿ ಏನಚ್ಚರಿಯಿದೇನಚ್ಚರಿ ಎಂದುಯೋಚಿಸಲದು ಗೊಂದಲದ ಗೂಡು ಮೋಡಗಟ್ಟಿ ಮಳೆ ಹೊಯ್ಯದುಇಳೆಯ ಬಯಸಿ ಬಳಸಿ ಅಪ್ಪುವುದುಋತುಮಾನ ಚಕ್ರಗತಿಯ ನಡೆಯು ನೋಡು ಆವಿಯಾಗದ ಕಡಲು ಮಳೆಯಾಗದಮೋಡ ನೆಲಕಾಗಿ ಹರಿಯದ ನದಿಎನಿತಿರಲೆಂತು ಲೇಸಹುದು ಬಿಡು ನಶೆಯೊಳಗಾಗಿ ಕಳೆದುಹೋಗದೆನಿನಗಾಗಿ ನಾನು ನನಗಾಗಿ ನೀನುಎಂದಂದು ಬದುಕುವುದು ಒಲವ ಪಾಡು ಕಾದ ಇಳೆಯ ಕಾಡಲಾರದೆ ಇಳಿದುಬಂದು ನೆರಳಂತೆ ಅಪ್ಪಿ ಒಪ್ಪಿಸಿಕೊಳ್ವುದೇಈ ಚಂದದ ಮಳೆಯ ಹಾಡು ******* ವಸುಂಧರಾ ಕದಲೂರು –

Read Post »

ಕಾವ್ಯಯಾನ

ಮುಂಗಾರು ಮಳೆಗೆ ಬಿದ್ದ ಮುಂಗಾರು ಮಳೆಗೆನಿನ್ನದೇ ನೆನಪುಮಣ್ಣ ಕಣ ಕಣದ ಘಮನಿನ್ನದೇ ಸೊಡರು ಕಾದ ಕಬ್ಬಿಣದ ದೋಸೆ ಹಂಚಿಗೆಬಿದ್ದ ಮೊದಲ ನೀರುಚುರ್ ಎನ್ನುತ್ತಾ ಮೇಲೇರುವ ಘಮನಿನ್ನದೇ ಹಳೆಯ ನೆನಪು ಜೂನ್ ಮುಗಿಯುವ ಹೊತ್ತಿಗೆ ಕಾಣೆಯಾಗುವ ದುಂಡು ಮಲ್ಲಿಗೆ ಹೂಮುಡಿದು,ಮುದಿಡಿ ಲಂಗ ಎತ್ತಿ ಮಳೆನೀರ ಗುಂಡಿ ಹಾರಿಸಿ ಗೆಜ್ಜೆ ಹೆಜ್ಜೆಯ ಹೂಡುಗಿ …ಆಗ ನಿನ್ನದೇ ನೆನಪು! ಮುಖಪುಟದ ನೂರಾರು ಫ್ರೊಫೆಲ್ ತಿರುವಿತಿರುವಿನಲಿ ನಿನ್ನ,ನೀನೆ ಎಂಬ ಚಿತ್ರ ಪಟ ಹುಡುಕಿ,ತಿರುಗಿಸಿ,ಮುರುಗಿಸಿ ನೋಡುವಾಗಇವಳ ಕೈಯಲ್ಲಿ ಸಿಕ್ಕಿ,ಕಿವಿ ತಿರುಗಿಸಿಕೊಳ್ಳುವಾಗನಿನ್ನದೇ ಹಳೆಯ ನೆನಪು ರಾತ್ರಿ ಹೇಳದೇ,ಕೇಳದೇ ಬಂದು ಹೋದಮುಂಗಾರುಬೇಕು ಬೇಡವೆಂದರೂ ಬೆಳ ಬೆಳಿಗ್ಗೇ ಸುರಿದುಮದ್ಯಾಹ್ನ ತುಸು ಮೈ ಕೊಡವಿ,ಕಾಲು ಬಿಗಿಮಾಡಿ ಏಳುವಷ್ಟರಲ್ಲಿ ಬಂದು ಹೋದ ಹನಿಹನಿಯಲ್ಲೂ ನಿನ್ನದೇ ಮಧುರ ನೆನಪು ಕಾಡಿಸಿ ಕಾಡಿಸಿ ಕೊಲ್ಲುವ ಮುಂಗಾರುಜಡಿ ಹಿಡಿದು,ಎಲ್ಲೂ ತಲೆ ಹಾಕದೆ ಗಲ್ಲಿಗಲ್ಲಿ ತಿರುಗುವ ಹೆಣ್ಗಳ ನೋಡುತ್ತಿದ್ದರೂಜಡೆ ತಿರುಗಿಸಿ ನಡೆಯುತ್ತಿದ್ದ ಮೊಲ್ಲೆಯೇನಿನ್ನಧೇ ನೆನಪು! ********** ಕೊಟ್ರೇಶ್ ಅರಸಿಕೆರೆ

Read Post »

ಕಾವ್ಯಯಾನ

ಕಾವ್ಯಯಾನ

ಅವನಾಗದಿರಲಿ. ಪ್ರಮೀಳಾ. ಎಸ್.ಪಿ.ಜಯಾನಂದ. ಸದ್ದು ನಿಲ್ಲಿಸಿದ್ದ ನಾಯಿಮತ್ತೇಕೆ ಸದ್ದು ಮಾಡುತ್ತಿದೆ…?ಇಷ್ಟು ದಿನ ಮೌನವಾಗಿದ್ದ ಶುನಕ…ಇಂದೇಕೆ ಸದ್ದು..?? ಅದೊ..ಅವನು ಬಂದಿರುವನೆ..ಚಪ್ಪರದ ಸಂಭ್ರಮ..ವಾಲಗದ ಸದ್ದು ಕೇಳಿಸಿತೆ ಅವನಿಗೆ ಹೂಹುಂ…ಇಲ್ಲ,ಇಲ್ಲ.. ಆ ಹೊತ್ತುಸದ್ದು ಮಾಡದೇ ಎದ್ದು ಹೋದನಲ್ಲ… ಆ ರಾಜ..ಜಗದ ಉದ್ದಾರ ಕ್ಕೆಂದು ನಂಬಿತು ಜಗತ್ತು ಆದರವಳ ಮಗ…ಏನೆಂದು ದುಃಖಿಸಿದನೋ ಇವನುಮಗ್ಗಲು ಬದಲಿಸುವುದರೊಳಗೆ ಎದ್ದು ಹೋಗಿದ್ದು ಯಾಕೆಂದು ತಿಳಿಯಬಲ್ಲದೆ ನನ್ನ ಹಸುಗೂಸು..?? ಗಟ್ಟಿಯಾಗದಿದ್ದರೂ ಮನಸ್ಸುಕಲ್ಲಾದ ದೇಹದುಡಿಯಿತುಮಗಳ ಸಾಕುವುದು ಸುಲಭದ ಮಾತೇನು.. ಅದು ಬರೆಯಲಾಗದ ಕವಿತೆ,ಹಾಡಲು ಬರದ ಹಾಡು.. ಅಳುವ ಕೂಸಿಗೆ ಹಾಲುಣಿಸಿಕಂಬನಿ ಒರೆಸುವ ಕೈ ಅರಸಿಅವನ ಹುಡುಕುವ ವ್ಯರ್ಥಪ್ರಯತ್ನ ಮಾಡಬಾರದಿತ್ತು ನಾನು ನಾಳೆ ಮಗಳು ಹಸೆ ಮಣೆ ಏರಲಿದ್ದಾಳೆ ಬಂದವರೆಲ್ಲಾ.. ಅವಳ ಅಪ್ಪನೆಂಬುವನ ಗುರುತಿಸಿಕೈ ಕುಲುಕಲು ಕಣ್ಣಾಡಿಸುತ್ತಿದ್ದಾರೆ.. ಅವನದ್ದು ಬರೀ ಹುಟ್ಟಿಸುವ ಚಟ..!? ನೀರು-ನೆರಳಿದ್ದಲ್ಲಿ ಮೇದು-ಮಲಗುವ ದನದಂತೆಹೆಣ್ಣು ಶ್ವಾನವೊಂದ ಕಂಡರೆಓಡುವ ಗಂಡು ನಾಯಿಗಳದಂಡಿನಂತೆ ಅದೆಷ್ಟೋ ದೇಹಗಳ ಹಿಂದೆ ಇವನು ಓಡಿದ್ದಾನೆ..ಸುಖ ಪಿಪಾಸಿಕೈಯಲ್ಲಿನ ಕಾಸುತೊಡೆಯೊಳಗಿನ ಕಸುವುಸೋರಿಹೋಗುವಷ್ಟು ದಿನ. ನಾಳೆ ಮಗಳ ಬದುಕಿನಲಿಕಾಲಿಟ್ಟವನಾದರೂಇವನಂತೆ ಆಗದಿರಲಿ…. ಬೊಗಳುತ್ತಿದ್ದ ನಾಯಿಮತ್ತೆ ಮುದುಡಿ ಮಲಗಿತು. ಹೆಂಗಳೆಯರ ಬಳೆಗಳ ಸದ್ದುಕೇಳುತ್ತಿದೆ..ಗಂಗೆ ತರಲು ಹೊರಟಿರಬೇಕು..

ಕಾವ್ಯಯಾನ Read Post »

You cannot copy content of this page

Scroll to Top