ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎರಡು ಮಳೆ ಕವಿತೆಗಳು ಮಳೆ ಸುರಿದೇ ಇದೆ ಮಳೆ ಬಾನ ಸಂಕಟವೆಲ್ಲ ಕರಗಿಕಣ್ಣೀರಾಗಿ ಇಳಿದಿದೆಯೇ ಹೊಳೆಇಳೆಯ ಅಳಲಿಗೆ ಎದೆ ಕರಗಿಸುರಿಸಿದೆಯೇ ನಭ ತನ್ನೊಲವ ಬಾನು ಬುವಿ ಒಂದಾಗಿಸಿದೂರಗಳ ಇಲ್ಲವಾಗಿಸಿಕಳೆಕೊಳೆ ಗುಡಿಸಿ ತೊಳೆತೊಳೆದು ತೊರೆ ಹರಿಸಿಸುರಿದಿದೆ ಮಳೆ ಬಿಸಿಲಬೇಗೆಗೆ ಬತ್ತಿ ಆಳಆಳ ನೆಲದಲ್ಲಿ ನೀರ ಪಸೆಗೆಚಾಚಿ ಚಾಚಿ ತುಟಿ ಬಸವಳಿದಬೇರಿಗೆ ಈಗ ಜೀವನ ಸೆಲೆಬಾನ ಕರುಣೆಗೆ ತಲೆಯೊಲೆದುತುಟಿಯೊಡ್ಡಿ ಹಿಗ್ಗುವ ಎಲೆ-ಎಲೆ !ಮೊಗ್ಗು ಹೂವು ಕೊಂಬೆಯ ಹಕ್ಕಿಮಣ್ಣಹುಳು ಎಲ್ಲಕ್ಕೂ ಈಗಜೀವ ಚೈತನ್ಯದ ಆವಾಹನೆ- ಅಲೆ ಉಳುವ ಊಡುವ ಮೂಡುವಚಿಗಿತು ಹೊಡೆ ತುಂಬಿಫಲಿಸುವ ಸಂಭ್ರಮವ ನೆಲದಕಣಕಣಕೂ ತುಂಬಿತುಂ ತುಂಬಿ ಹರಿಸಿ ಹರಸಿಉಸಿರಿನ ಮಂತ್ರ ಕಿವಿಯಲೂಡಿ‘ಧೋ ‘ ಶ್ರುತಿಯಲ್ಲಿಉಧೋ ಗತಿಯಲ್ಲಿನಾದವಾಗಿ ಮೋದವಾಗಿಸುರಿದು ಸುರಿಯುತ್ತಿದೆಇದೋ-ಮಳೆ ! ಸಂಜೆಮಳೆ ಪಾತ್ರವೇ ತಾನಾದ ನಟಮೊದಮೊದಲು ಗುಡುಗಿಸಿಡಿಲಾಡಿರೋಷಾವೇಶ ಕಳೆದುಕರುಣರಸವೇ ಮೈತಳೆದು ಕಣ್ಣಕೊನೆಯಲ್ಲಿ ಹಣಕಿದಕಂಬನಿ ಹನಿಹನಿ ಹನಿದುಇದೀಗ ಧಾರಾಕಾರ ಮುಖದ ಬಣ್ಣ ಕರಕರಗಿಕೊನೆಗೆ ಕಲಸಿದಬೂದು ಚಿತ್ರಗಳಾಗಿಇಳಿದಂತೆ ಮುಖದಿಂದಎದೆಗೆ, ನೆಲಕ್ಕೆ. ಸುರಿದಿದೆ ಸಂಜೆಮಳೆ-ಅಮೂರ್ತ ಚಿತ್ರಗಳಬಿಡಿಸುತ್ತಅಳಿಸುತ್ತಬರೆಯುತ್ತ… ********** ಡಾ. ಗೋವಿಂದ ಹೆಗಡೆ

Read Post »

ಕಾವ್ಯಯಾನ

ಮಳೆ ಮಳೆನೆಲ‌ ಮುಗಿಲಿನ ಅನುಸಂಧಾನಪ್ರೀತಿಯಂತೆ ಮಳೆ ಮೋಡ ಕಪ್ಪು ಮೋಡ ಮುಗಿಲ ಚುಂಬಿಸಿ, ಕಡಲ ಮಾತಾಡಿಸಿ, ಗಿರಿಯ ಸವರಿ ,ಕಣಿವೆ ಹೊದ್ದು ಸಾಗಿದವು…ಮಳೆ ; ಎಲ್ಲಲ್ಲೂ ಮಳೆಪ್ರೀತಿಯ ವರ್ಷಧಾರೆ ಆಕೆ ಆತ ದೂರದಲ್ಲಿ ಕುಳಿತುಮಾತಾಡಿದರು ;ಮಳೆಯ ಜೊತೆಹೃದಯಗಳು ಒದ್ದೆಯಾದವುಕಣ್ಣೀರು ಮಳೆಯ ಹನಿಗಳ ಬೆರೆತವು ಮಳೆ ಲೋಕವನ್ನೆಲ್ಲಾ ಸುತ್ತಾಡಿತುಪ್ರೇಮಿಗಳೆಲ್ಲಾ ಮಳೆಯ‌ ಎದುರುಗೊಂಡರು , ಸಂಭ್ರಮಿಸಿದರು; ಹಳೆಯ ಖುಷಿ ನೆನೆದರು, ನೋವು ಸಹ ನೆನಪಿಸಿಕೊಂಡರು;ಕೊನೆಗೆ ಮಳೆ‌ ಸಂತೈಸಿ ಹೊರಟು ಹೋಯಿತು ಮಳೆ ನದಿಯಾಯಿತುಕುಟಿಲಪಥ ಕಾನನವ ದಾಟಿಕಡಲಬಳಿ ಬಂತು…ಅದು‌‌ ಕೊನೆಯ ಅನುಸಂಧಾನಯುಗ ಯುಗಗಳ ದುಃಖಸುಖ ಕನಸು ಕಾತುರ ಪ್ರೇಮವ ದಂಡೆಯಲಿ ಬಿಚ್ಚಿ ಹರಡಿ ಹರಟೆಯೊಡೆದುಪಟ್ಟ ಪಾಡು , ಬಿಟ್ಟ ಹಠ , ಕೊಟ್ಟ ಪ್ರೀತಿಯ ನಿವೇದಿಸಿತುಸಂತೈಸಿದ ಕಡಲ‌ದಂಡೆಮತ್ತೆ ಮಳೆಯಾಗಿ ಎಲ್ಲರ‌ ಮಾತಾಡಿಸಿ ಬರೋಣ ಎಂದಿತು**********‌ ನಾಗರಾಜ್ ಹರಪನಹಳ್ಳಿ

Read Post »

ಕಾವ್ಯಯಾನ

ಪ್ರೀತಿಯ ಹನಿ ಮಳೆಯ ಹನಿಯು ಇಳೆಗೆ ಮುತ್ತಿಕ್ಕಿ ಆದಾಗ ತನುವಿಗೆ ಸಿಂಚನ; ನೆನಪಾಗುವದು ಆ ನಿನ್ನ ಮೊದಲ ಸ್ಪರ್ಶದ ಮೈ ಮನ ರೋಮಾಂಚನ! ನಾ ಬರೆದ ಪ್ರೀತಿಯ ಪದ ಪುಂಜಗಳು ಒದ್ದೆಯಾಗುತಿವೆ ಮಳೆ ನೀರಿಗೆ ಬಿದ್ದು; ನೆನೆದು ಹೋದರೂ ನಿನ್ನ ಧ್ಯಾನದಲ್ಲಿ ಪುಟಿದೇಳುತಿವೆ ಪದಗಳು ಎದ್ದು! ಬಹಿರಂಗದಿ ನಿಲ್ಲದ ವರುಣನ ಆರ್ಭಟದ ಸದ್ದು ಅಂತರಂಗದಿ ನಿನ್ನ ನೆನಪುಗಳ ಮೆಲಕು ಹಾಕುತ ಮಲಗಿರುವೆ ಪ್ರೀತಿಯ ಹೊದ್ದು! ನಿಲ್ಲದ ಮಳೆಯಲಿ ನೀನಿಲ್ಲಿ ಬಂದರೆ ಅದುವೆ ಮಧುರ ಬಂಧನ! ಜೊತೆ ಜೊತೆಗೆ ನೀನಾಗುವೆ ನನ್ನ ಕವನಕ್ಕೆ ಇಂಧನ! ******** ಮಹಾಂತೇಶ ಮಾಗನೂರ

Read Post »

ಕಾವ್ಯಯಾನ

ಮುಂಗಾರು ಮಳೆ ಮುಂಗಾರಿನ ಆಗಮನ ನಮ್ಮೆಲ್ಲರಲ್ಲಿ ನವಚೈತನ್ಯ ಬಿಸಿಲ ಝಳಕ್ಕೆ ಕಂಗಾಲಾಗಿರುವಾಗ ನೀ ಬಂದು ನೀಡುತ್ತಿ ಸಂತಸ! ರಜೆಯ ಮಜದಿಂದ  ಚಿಣ್ಣರು ಶಾಲೆಯತ್ತ ಬೆಳೆಗಳನ್ನು ಫಲವತ್ತಾಗಿಸಲು  ರೈತರು ಗದ್ದೆಯತ್ತ! ಮಾಸಗಳಲ್ಲಿ ಶುರುವಾಗುವ  ಒಂದೊಂದು ಚಟುವಟಿಕೆಗಳು ಚಟುವಟಿಕೆಗಳಿಂದ ಹಚ್ಚ ಹಸಿರಾಗುವ ಪ್ರಕೃತಿ ಪ್ರಕೃತಿಯ ಮಡಿಲಲ್ಲಿ ತೃಪ್ತಿಯಿಂದ ಬೀಗುವ ನಾವುಗಳು ನಾವುಗಳು ಇತ್ತೀಚೆಗೆ ತೋರುವ ಸ್ವಾರ್ಥತೆ ಸ್ವಾರ್ಥತೆಯಿಂದ ನಿಸರ್ಗದ ಮೇಲಿನ ಹಾನಿ ಮನುಜರು ಮಾಡುತಿಹರು ಪಾಪ ನೀ ಕೊಂಚ ತಡವಾದರೂ ಹಾಕುವೆವು ಶಾಪ! ಹೇ ಮುಂಗಾರು ಅದು ನಿನಗಲ್ಲ ಮಾನವನ ದುರಾಸೆಗೆ ಮಿತಿಯಿಲ್ಲ ಹೇಗೆ ಕೇಳಲಿ ನಿನ್ನ ಕ್ಷಮಿಸುವೆಯಾ ನಮ್ಮನ್ನೆಲ್ಲ! ಹಾನಿಯ ತೀವ್ರತೆಗೆ ಮುಂದೂಡಲ್ಪಟ್ಟಿರುವ ಮುಂಗಾರು ಮಳೆ ಮುಂಗಾರು ಮಳೆಗಾಗಿ ನಡೆಯುವ ವಿನಂತಿ ವಿನಂತಿ ಏನೆಂದರೆ ಬೇಡ ಭೂಮಾತೆಯ ನಾಶ ನಾಶ ಮಾಡಿ ಹೋಗುವೆವು ಕಣ್ಣೆದುರೇ ನಶಿಸಿ..!! ******** ಸುಪ್ರೀತಾ ವೆಂಕಟ್

Read Post »

ಕಾವ್ಯಯಾನ

ಬಾಲ್ಯದ ಮುಂಗಾರು ಮಳೆ ನನ್ನ ಬಾಲ್ಯದ ಮಳೆಗಾಲ ಈಗ ಮೊದಲಿನಂತಿಲ್ಲ ಬಹುಶಃ ಕಾಲದೊಂದಿಗೆ ಬೆಳೆದು ಮೊದಲಿನ ಮಾತಿಲ್ಲ ಮುಂಗಾರು ಆಗಲೇ ಬಾಗಿಲು ಬಡಿದು ನಿಂತಿದೆ ವರ್ಷ ಋತುವಿನ ಮೊದಲ ಮಳೆಯ ತಂದಂತಿದೆ ಮನೆಯ ಕಿಡಕಿಯಿಂದ ನೋಡಿದರೆ ಆಕಾಶದಲಿ ಕಪ್ಪು ಮೋಡಗಳ ಗರ್ಜನೆಗೆ ನರ್ತಿಸುವ ಮಳೆಹನಿ ಗಾಜಿನ ಮಣಿಗಳು ಗೋಡೆಗೆ ಟಳಾಯಿಸುತಲಿವೆ ಅಬ್ಬರಿಸುವ ಮಳೆಯ ಸಂಗೀತ ಆಲಾಪಿಸುತಲಿದೆ ಕೆಲವೊಮ್ಮೆ ನಾ ಆಡುತಲಿದ್ದೆ ಅವುಗಳೊಂದಿಗೆ ಅದಕಾಗಿ ಅವು ಈಗ ನನ್ನನು ಕರೆಯುತಲಿವೆ ನಾನಾಗ ಕಿರಿಯಳು ಈ ಮಾತು ಹಿರಿದಾಗಿತ್ತು ಆವಾಗ ಹೊತ್ತಿಗೆ ಮನೆಗೆ ಬರುವುದು ಯಾರಿಗಿತ್ತು ಮಳೆಯ ನೀರಿನಲಿ ನೆನೆಯಲು ಓಡಿದ ಎಳೆ ಮನಸು ಅವಳ ಕೈಹಿಡಿದು ತಡೆದ ನನ್ನಲ್ಲಿಯ ಬೆಳೆದ ಮನುಷ್ಯ ಮಳೆಗಾಲ ಮತ್ತು ನನ್ನ ಅಮಾಯಕ ಬಾಲ್ಯದ ಮಧ್ಯ ತಿಳುವಳಿಕೆಯ ಗೋಡೆಯೊಂದು ಎದ್ದು ನಿಂತಿದೆ ಸಧ್ಯ ಗುಡುಗು ಸಿಡಿಲು ಮಿಂಚು ನಿಸರ್ಗದ ರಮಣೀಯತೆ ಮೊದಲಿನ ಭಯಂಕರ ಗರ್ಜನೆ ಮನಕೆ ಹಿಡಿಸುತ್ತಿತ್ತು ಈಗ ಹೆದರಿಸುತ್ತಿದೆ ಕುತ್ತೆನಿಸಿದ ಮಳೆ ಆಪತ್ತಾಗಿ ಭಯಭೀತ ನಾವಾದರೆ ಕೆಟ್ಟ ಹೆಸರು ಬಂತು ಮಳೆಗೆ ಯಾವ ನೀರಿನಲಿ ಕುಣಿದಾಡುತ್ತಿದ್ದೆವೋ ಅದರಲ್ಲೀಗ ಕೀಟಾಣುಗಳು ಕಾಣುತ್ತಲಿವೆ ಅದಕ್ಕೂ ಹೆಚ್ಚಾಗಿ ಲ್ಯಾಪ್‌ಟಾಪ್ ತೊಯ್ದೀತಲ್ಲಾ ಅನ್ನುವ ಅನುಮಾನ ಹಣುಕಿ ಇಣುಕುತ್ತಿದೆ ಭರಪೂರ ಮಳೆಯಾಗಿ ಶಾಲೆಗೆ ಸೂಟಿಯಾಗಲಿ ಅಂತ ಬಯಸುತ್ತಿದ್ದ ಅಂತರಂಗ ಬಾಲ್ಯದಲಿ ಮಳೆ ಬಂದು ಆಫೀಸ್ ಸೂಟಿಯಾಗಬಾರದಲ್ಲ ಎನ್ನುವ ಆತಂಕದ ಮನೋಭಾವ ಬೆಳೆದವರಲ್ಲಿ ಹಪ್ಪಳ ಸಂಡಿಗೆಯೊಂದಿಗೆ ಬಿಸಿ ಚಹಾ ಮಳೆಗಾಲದ ಮಜವಾಗಿತ್ತು ಆಗ ಅಂಥ ಸಮಯ ಸಂಗತಿ ಬೆಳೆದಂತೆ ಎಲ್ಲೋ ಕಳೆದು ಮಾಯವಾಗಿದೆ ಈಗ ********* ವಿನುತಾ ಹಂಚಿನಮನಿ

Read Post »

ಕಾವ್ಯಯಾನ

ಮಳೆಯಾಗುತಿದೆ, ಭಾರವಾದ ಮೋಡದ ಮನಸು ಹಗುರಾಗುವುದು ಹೀಗೆ ತಾನೇ, ಒಡಲು ತುಂಬಿದ ರಾಶಿ ಹನಿಗಳನೆಲ್ಲ ಹೊರ ಚೆಲ್ಲಿ ಹಗುರಾಗುವ ಮೊದಲು ಭಾರವಾಗಲೇ ಬೇಕು, ಮನ ಕಟ್ಟಬೇಕು ದಟ್ಟೈಸಬೇಕು ತೀವ್ರತೆಯ ದಾಟಿ ಒಮ್ಮೆಗೆ ಸ್ಪೋಟಗೊಳ್ಳಬೇಕು, ಹನಿಯೊಸರಿದರೆ ತಾನೇ ಚಿಗುರ ಕನಸು, ಹನಿಯಬೇಕು ಹನಿದು ಹಗುರಾಗುವ ಮುನ್ನ ಮೋಡ ಕಟ್ಟಬೇಕು ಭಾರವಾಗಬೇಕು, ಮಳೆಯಾಗಿ ಇಳೆಗಿಳಿದು ಹಗುರಾಗುತಲೆ ಹಸಿರ ಕನಸಿಗೆ ಜೀವ ತುಂಬಬೇಕು, ಭುವಿಗಿಳಿದ ಗುರುತಿಗೆ ಸಹಿಯ ಒತ್ತಬೇಕು… ************ ಅರ್ಪಣಾ ಮೂರ್ತಿ

Read Post »

ಕಾವ್ಯಯಾನ

ಹಬ್ಬ ಈ ಮುಂಗಾರು ಇರುವುದೇ ಹೀಗೆ ಪಯಣಿಸಿ ಬಂದ ಮೋಡ ಭುವಿಯನ್ನು ಅಪ್ಪಿ ಆನಂದ ಭಾಷ್ಪವ ಸುರಿಸಿದಂತೆ ಯಾರೋ ಮೇಲೆ ನೀರಿಗೆ ಜರಡಿ ಹಿಡಿದಂತೆ ಗಿಡಮರಗಳು ಹಸಿರು ಎಲೆ ಪುಷ್ಪಗಳ ಗುಚ್ಛ ಕಟ್ಟಿದಂತೆ ಹೊಂಡಗಳು ತೊಳೆದು ನೀರು ತುಂಬಿದಂತೆ ನಡು ನಡುವೆ ಇಣುಕಿ ಮರೆಯಾಗುವ ಸೂರ್ಯ ತೂಕಡಿಸಿದಂತೆ ಮಲಿನವ ಹೊರನೂಕಿ ಮನ‌ಮನಗಳು ಒಂದಾದಂತೆ ಟೊಂಗೆಗಳ‌ ನಡುವಿಂದ ನೆಲಕೆ ಉದುರುವ ಚಿಟಪಟ ಶಬ್ದದಂತೆ ನೆನೆದ ಹಕ್ಕಿಗಳು ಮೈಯ ಜಾಡಿಸಿ ಫಟಫಟನೆ ಹಾರಿದಂತೆ ಅಗೋ‌‌ ಬಂದಿತೋ ಜಿಟಿಜಿಟಿ ರಾಜನ ಕಾರ್ಮೋಡ ರಥವು ಮರಳಿದ ಮುಂಗಾರಿನ‌ ಸಂಭ್ರಮವು ಭುವಿಯ ತುಂಬೆಲ್ಲ ತೋರಣವು *********** ಸಂಮ್ಮೋದ‌ ವಾಡಪ್ಪಿ

Read Post »

ಕಾವ್ಯಯಾನ

ಮಳೆ.. ಬಿರು ಬಿಸಿಲ ರಭಸಕ್ಕೆ ಬಾಡಿ ಬಸವಳಿದಇಳೆಗೆ ಸಂತೈಸಲು ಬಂದಿತು ಮಳೆ..ಬೆವರ ಪಸೆಗೆ ಕಳೆಗುಂದಿದ ಮೊಗಗಳಿಗೆಮತ್ತೆ ರಂಗೇರಿಸಲು ಚಿಮ್ಮಿತು ಮಳೆ.. ಭೂದೇವಿಯ ಒಣಗಿದ ಒಡಲಿಗೆ ಭರದಿಂದಸುರಿಯಲು ಕಾತರಿಸಿದೆ ಮಳೆ..ಚಿಗುರುತ್ತಿರುವ ಹುಲ್ಲಿನ ಮೇಲೆಚಿನ್ನಾಟವಾಡಲು ಜಿನುಗಿದೆ ಮಳೆ.. ಬರಿದಾದ ಕೆರೆ ಕಟ್ಟೆಗಳಿಗೆ ಹಬ್ಬದೂಟಉಣಿಸಲು ಅಣಿಯಾಯ್ತು ಮಳೆ..ದನ ಕರುಗಳು ಸಸ್ಯ ಸಂಕುಲಗಳುಹಿಗ್ಗಿ ಹೀರಲು ಒಂದೇಸಮ ಸುರಿಯಿತು ಮಳೆ.. ದೂರಾದ ಬಾನು ಭೂಮಿಯ ನಂಟುಮತ್ತೆ ಹುರಿಗೋಳಿಸಲು ಹೊಯ್ದಿತು ಮಳೆ..ಬರಗೆಟ್ಟನಾಡಿಗೆ ಕಾಮನಬಿಲ್ಲಿನ ಒನಪುಸಾರಲು ಮತ್ತೆಮತ್ತೆ ಕಾತರಿಸಿತು ಮಳೆ.. ಜೀವಸಂಕುಲಗಳ ಮುಂದಿನ ಪಯಣಸುಖವಾಗಿರಿಸಲು ಮರೆಯದೆ ಬರುವದು ಮಳೆ..ತನಗಾಗಿ ಕಾತರಿಸುವ ಕನವರಿಕೆಗಳಿಗೆನಿರಾಶೆಗೋಳಿಸದೆ ಬಂದೆ ಬರುವದು ಮಳೆ… ********** ಜ್ಯೋತಿ ಡಿ.ಬೊಮ್ಮಾ.

Read Post »

ಕಾವ್ಯಯಾನ

ಮಳೆ_ಪ್ರೀತಿ ಮತ್ತೆ ಸುರಿದಿದೆ ಮಳೆತುಂತುರು ಹನಿಗಳಾಗಿನಮ್ಮೊಲವು ಶುರುವಾದಗಳಿಗೆಯಂತೆ ಒಮ್ಮೆಲೇ ಧೋ ಎಂದುರಭಸವಾಗಿನಮ್ಮ ಪ್ರಣಯೋತ್ಕರ್ಷದಆ ರಸಕ್ಷಣಗಳಂತೆ ಕೆಲವು ಕಾಲ ಶಾಂತ ಪ್ರಶಾಂತಸದ್ದಿಲ್ಲದೇ ನಿರಂತರ ಸೋನೆನಿನ್ನೆದೆಗೆ ಒರಗಿನಾ ಪಡೆದ ನೆಮ್ಮದಿಯಂತೆ ಇಂದೀಗ ಎಲ್ಲ ಸ್ತಬ್ಧಎಲ್ಲೋ ತೊಟ ತೊಟ ಸದ್ದುಸಂಪೂರ್ಣ ನೀರವತೆಮುಗಿದು ಹೋದನಮ್ಮ ಪ್ರೀತಿ ಕಥೆಯಂತೆ ********* ಸುಜಾತಾ ರವೀಶ್

Read Post »

ಕಾವ್ಯಯಾನ

ಮುದ್ದು ಮಳೆ ಮೋಡಗಳು ಒಂದನ್ನೊಂದು ಮುದ್ದಿಸಲುಹಣೆಗೆ ಹಣೆಯ ತಾಕಿಸಲುತಂಗಾಳಿಯು ಮೋಡಕೆ ತಂಪೆರೆದಾಗಲೇನೀ ಬರುವೆ ಭೂಮಿಗೆ ಮಗುವಾಗಿ ಮಳೆಯಾಗಿ ನಾಳೆಯುದುರುವ ಹಣ್ಣೆಲೆಯು ನಿನ್ನ ಸ್ಪರ್ಶ ಮಾತ್ರಕೆ ಪಾವನವುಒಣಭೂಮಿ ಕುಣಿಯುತಿದೆ ನಿನ್ನಮಿಲನದ ಮಣ್ಣಗಂಧವ ಹೊತ್ತು ಗಾಳಿಗೆ ತೂರಿ ಹೋಗುವ ಬೀಜಗಳುನಿನ್ನ ಬರುವಿಕೆಗೆ ಜಾಗ ಹಿಡಿದು ಕುಳಿತಿವೆನಿನ್ನೊಡನೆಯ ಪಿಸುಮಾತುಗಳ ಕೇಳುತ್ತಲೇಭೂಮಿ ಹಸಿರ ತುಂಬಿಕೊಂಡು ಮೈ ನೆರೆದಿದೆ ಸೀರಂಗಿಯೊಡನೆಯೊಂದು ಸೂಕ್ಷ್ಮ ಸಂವೇದನೆಯುಸಿಂಗರಿಸಿಕೊಂಡು ಕಾಯುತ್ತಿದೆ ಒಳಬರಲುಕೋಣೆಯೊಳಗಿರುವ ತಬ್ಬಿರುವ ದೇಹಗಳಿಗೆಮೈ ಬಿಸಿ ಏರಿಸಿ ಕಿಟಕಿಯಿಂದಲೇ ಸೋಕಿ ತಂಪೆರೆದು ರೇಗಿಸಲು ಮಿಲನಾತುರಕ್ಕೆ ಕಪ್ಪೆಗಳು ಕಾತರಿಸಿಇರುಳನ್ನೇ ಬೆಚ್ಚಿ ಬೀಳಿಸಿವೆ ಎಲ್ಲೆಲ್ಲಿನ ಮಿಲನ ಮೈಥುನಗಳ ಬೆಚ್ಚಗಿನ ಭಾವವೊಂದು ಮಳೆಯೊಂದಿಗೆ ಅನವರತ….. ****** ಮೋಹನ್ ಗೌಡ ಹೆಗ್ರೆ

Read Post »

You cannot copy content of this page

Scroll to Top