ಕಾವ್ಯಯಾನ
ನೇಪಥ್ಯ ಎಮ್ . ಟಿ . ನಾಯ್ಕ.ಹೆಗಡೆ ಆ ನೀಲಿ ಬಾನು, ಮಿನುಗು ತಾರೆಬೆಳೆದು ಕರಗುವ ಚಂದ್ರಈ ಭೂಮಿ – ಅದರ ಕಣಿವೆಮೊರೆವ ಕಡಲು….ಆ ತಂಗಾಳಿ, ಮುಂದೆ ಬಿರುಗಾಳಿನದಿಯ ಓಟ, ಆ ನಾದದುಂಬಿ ಗಾನಗಾಳಿಗಂಟಿದ ಬದುಕಿನಎಕ್ಕೆ ಬಿತ್ತಗಳೆಲ್ಲಾಬಿತ್ತುತ್ತಾ ಹೊರಟದ್ದುಯಾವ ಕತೆ ? ಯಾರ ಕತೆ ? ಗತಿಸಿದ ಸಾಮ್ರಾಜ್ಯಕರಗಿದ ಅರಮನೆಉರುಳಿದ ಕಿರೀಟಕ್ಕೆ–ಲ್ಲ, ಹಿನ್ನೆಲೆ ಏನು ಕತೆ ? ಬಂದ ಗುರುತುಗಳಿಹುದುನಿಂದ ಗುರುತುಗಳಿಹುದುಹೋದ ಗುರುತುಗಳಿಹುದುಆದರೆ —ಬಂದವರು ಬಂದಂತೆಹೋದುದು ಯಾಕೆ ? ಆ ಬಾನು , ಈ ಭೂಮಿ ,ಅದರ ಹೊನ್ನುಮತ್ತೆ ಮುಕುಟಎಲ್ಲಾ ತೊರೆದೇಹೋದುದು ಯಾಕೆ ?ಇಲ್ಲ … ಮರೆತೇ ಹೋದರೆ ? ಈ ಬಯಲಲಿ ಬದುಕ ಹರಡಿಕತೆ ಬರೆದವರು ಯಾರು ?ಬರೆವವರು ಯಾರು …? *********









