ಕಾವ್ಯಯಾನ
ಸಮುದ್ರ ಸಂಗೀತ ಫಾಲ್ಗುಣ ಗೌಡ ಅಚವೆ. ದೂರ ದಿಗಂತದಿಂದ ಓಡಿ ಬರುವಅಲೆಗಳು ದಂಡೆಗೆ ಅಪ್ಪಳಿಸುತ್ತಿವೆನಿರಾಳವಾಗುತ್ತಿವೆ.ಗುರಿಯ ಸಾಫಲ್ಯತೆಪ್ರಯತ್ನದ ಫಲವತ್ತತೆಸಾರುತ್ತಿದೆ ಕಡಲುಹಾಗೆ ಒಳಗೆ ಇಣುಕಿದರೆದಂಡೆಯ ಮೌನ ಸಂಗೀತಕೇಳುವುದು. ಸತ್ತ ಮೀನು ಸೌದೆ ಕೋಲುಎಲ್ಲವನ್ನೂ ದಂಡೆಗೆಸೆವತಾನು ಶುಭ್ರಗೊಳ್ಳುವ ಪರಿಅಚ್ಚರಿ!ಒಂದು ಕ್ಷಣ ಮನದಲ್ಲಿಣುಕಿದರೆನಿನ್ನೊಳಗಿನ ದ್ವೇಷ, ಅಸೂಯೆಕೋಪ ಸಣ್ಣತನಗಳ ಇದೇದಂಡೆಯಲ್ಲಿ ಬಿಟ್ಟು ಹೊರಡುವೆನಿಶ್ಕಲ್ಮಶ ಮನಸ ಹೊತ್ತು. ಶರಧಿಯೋಳಗಿನ ಆಳ ವಿಸ್ತಾರಭೋರ್ಗರೆತ,ಭರತ ಇಳಿತಗಳುಲಾಗಾಯ್ತಿನಿಂದಿಲ್ಲಿವರೆಗೆಸೇರುವ ಹೊಳೆಹಳ್ಳ,ನದಿಗಳುಕೂಡುತ್ತಲೇ ಇವೆ.ಎಲ್ಲ ಇದ್ದು ಇಲ್ಲದಂತಿರುವಸಮುದ್ರ ಸಮತೋಲನದ ಪಯಣನಿನ್ನೊಳಗೆ ಬಿಂದು ಸಿಂಧುವಾಗಲಿ. ಆಗಾಗ್ಗೆ ಅಥವಾ ಸಂಜೆಯಲ್ಲಿಸಣ್ಣಗೆ ಅಲೆವ ಅಲೆ ತನ್ನೊಳಗಿನಸುಪ್ತ ಸಂಗೀತ ಸೃಷ್ಟಿಸುವುದುನಿನ್ನೊಳಗಿನ ಮಂದ್ರ ಮನಸುಅದನು ಕೇಳುವುದು. ಗಿಟಾರು ಹಿಡಿದು ಹೊರಟರೆಸಂಗೀತ ಹೃದಯಕೆ ಬರೋಲ್ಲಅದರೊಳಗಿನ ತಂತಿಗಳುಮೂಡಿಸುವ ತನನನಾದಗಳು ನಿನ್ನ ಮಂತ್ರ ಮುಗ್ಧಗೊಳಿಸುವುದು.ನಿನ್ನ ನೆರಳು ನಿನ್ನ ಅಸ್ತಿತ್ವ ಹೇಳುವುದು.!! *******









