ಮಳೆಹಾಡು-4
ಆಶಾ ಜಗದೀಶ್ ಒಂದು ತಣ್ಣನೆಯ ರಾತ್ರಿಮಳೆಗೆಅದೆಷ್ಟೋ ವರ್ಷಗಳ ತಪಸ್ಸಿನಂತೆಕಾದು ಕುಳಿತಿದ್ದೆರಾತ್ರಿಗಳಾಗಲೀ ಮಳೆಯಾಗಲೀಒಟ್ಟಾಗಿ ಬಂದೇ ಇಲ್ಲ ಅಂತಲ್ಲಅವು ಒಟ್ಟಾಗಿ ಬಂದ ಒಂದು ದಿನವೂನಾನು ಪ್ರಜ್ಞೆಯಿಂದಿರಲಿಲ್ಲ ಸರಿ ರಾತ್ರಿ ಹೀಗೆ ಜಗತ್ತೇ ನಿದ್ರೆಯ ತೆಕ್ಕೆಯಲ್ಲಿರತಿ ಶಿಖರ ಮುಟ್ಟುತ್ತಿರುವಾಗನಾನು ಮಾತ್ರ ಅದನ್ನು ಧಿಕ್ಕರಿಸಿಮುಂಬಾಗಿಲ ತೆರೆದು ಮಂಜಿನಷ್ಟು ತಣ್ಣಗಿದ್ದಕಲ್ಲ ಮೆಟ್ಟಿಲ ಮೇಲೆ ಕೂರುವಾಗಪರಮ ಚರಮ ಸುಖವನ್ನೂಮೀರಿದೊಂದು ಅನುಭೂತಿಮತ್ತು ಈ ಮಳೆಯ ಮೇಲೆಸಣ್ಣದೊಂದು ಹುಸಿ ಮುನಿಸು ತನ್ನ ರಾತ್ರಿ ಸಖನನ್ನು ಕೂಡುವಅಮೃತಘಳಿಗೆಯ ಬಗ್ಗೆಚಕಾರೆತ್ತದೆ ಸೂಚನೆ ಕೊಡದೆಸುರಿದು ಸೇರಿ ಸರಿದು ಹೋಗಿಯಾಗಿಮರು ಮುಂಜಾನೆ ಮನೆ ಮುಂದೆನೆನ್ನೆಯ ರಂಗೋಲಿ ಅಳಿಸಿದ್ದುಸಮತಟ್ಟು ಅಂಗಳವೆಲ್ಲ ಕಿತ್ತು ಹೋಗಿಸಣ್ಣ ಸಣ್ಣ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿದ್ದುಎಲ್ಲೆಲ್ಲಿಯದೋ ಕಸಕಡ್ಡಿ ಜೊಂಡು ಜೊಂಪೆಮತ್ತು ಮಿಲನದ ಹಸಿ ಮಣ್ಣ ಪರಿಮಳಭೂಮಿಯಷ್ಟನ್ನೂ ಹಸಿಯಾಗಿಸಿ ಬಿಸಿಯಾಗಿಸಿಹೋದ ಬೆಚ್ಚನೆಯ ಮಿಲನ ಇದಕ್ಕೆ ಸಾಕ್ಷಿಯಾಗಲಿಕ್ಕೆಂದೇನನಗೆ ಬೆಳಕು ಹರಿಯುತ್ತಿತ್ತುಆದರೆ ನನಗಿದ್ದದ್ದು ಮಹೋತ್ಸವ ನೋಡುವಮತ್ತು ಒಂದು ಚಂದನೆ ಮಳೆಹಾಡು ಕಟ್ಟಿರಾತ್ರಿಮಳೆಯ ಸುತ್ತಾ ಹಾಡುತ್ತಾ ನೆನೆಯುತ್ತಾಕಣ್ಣಾಗುತ್ತಾ ದನಿಯಾಗುತ್ತಾ ಮೈಯ್ಯಾಗುತ್ತಾಮುದಗೊಳ್ಳುತ್ತಾ ದಣಿಯುತ್ತಾ ….ಸೋಲಬೇಕೆನ್ನುವ ಬಯಕೆ ಇಂದು ಸುರಿದ ಮಳೆಯ ಮುಂದೆಎಲ್ಲ ಬರಿದಾಗಿಸಿಕೊಂಡು ಕೂತ ನಂತರಆದ ಒಂದು ತಣ್ಣನೆಯ ಸಮಾಧಾನವೆಂದರೆಎಂದೋ ಬರೆದಿಟ್ಟ ಮಳೆ ಹಾಡಿಗೆಗೊದಮೊಟ್ಟೆಯಂಥಾ ಜೀವ ಬಂದಿದೆ **********









