ಕನಸು
ಕವಿತೆ ಅರುಣಾ ರಾವ್ ಸ್ವಪ್ನದಲ್ಲಿ ಕಂಡೆ ಸುಂದರ ಲೋಕ ಮನೆಗಳು ಮಹಲು ಮಾಲು ಮಂದಿರ ರಸ್ತೆ ಸೇತುವೆ ಮಾರುಕಟ್ಟೆ ಜನ ನೋಡುತ ನಡೆದೆ ಬೀದಿಯ ಗುಂಟ ಸಿನಿಮಾ ನೋಡಲು ನೆರೆದ ತರುಣರು ವಸ್ತ್ರಭಂಡಾರದಿ ಸೀರೆ ಬಳೆಗಳು ಪುಸ್ತಕ ಭಾರವ ಬೆನ್ನಲ್ಲಿ ಹೊತ್ತು ನಗುತ ಸಾಗುವ ಪುಟ್ಟ ಮಕ್ಕಳು ಕಚೇರಿಗಳಿಗೆ ಸಾಗುವ ಜನರು ದೇಗುಲಗಳಲಿ ನೆರೆದ ಭಕ್ತರು ಮದುವೆ, ಮುಂಜಿ ಸಮಾರಂಭಗಳು ಚರ್ಚು ಮಸೀದಿ ಪ್ರಾರ್ಥನೆ ಮೊಳಗು ರಸ್ತೆಯಂಚಿನಲ್ಲಿ ವ್ಯಾಪಾರ ಜೋರು ಹೋಟೆಲುಗಳಲ್ಲಿ ತಿಂಡಿಗೆ ಸಾಲು ಎಲ್ಲರ ಮುಖದಲ್ಲಿ ಸಂತಸ ಹೊನಲು ಕಾಣುತ ಸಾಗುತ ಹೋಯಿತು ಹೊತ್ತು ದೂರದಲ್ಲೆಲ್ಲೋ ಕೋಲಾಹಲವು ಓಡುತ ನಡೆದು ನೋಡುತ ನಿಂತೆ ನಡೆದು ಬರುವಂತೆ ಆಕಾರವೊಂದು ಕಣ್ಣಿಗೆ ಕಾಣದು ಇದೆ ಆದರದು ಮಂದಿ ಆತಂಕದಲ್ಲಿ ಸೇರಿ ಮನೆಯನು ಬಾಗಿಲು ಮುಚ್ಚಿ ಅಂಗಡಿ ಮುಂಗಟ್ಟು ಶಾಲೆಯ ಬಾಗಿಲು ತೆರೆವುದು ಯಾವತ್ತು ಮೊದಲಿನ ದಿನಗಳ ಕಾಣುವೆವೆಂತು ಕಾಣದ ಆಕಾರವದು ಮೆರೆಯಿತು ಜೋರು ಅವನಿಗೆ ಎಂದಿಗೆ ಬಂದೀತು ಸಾವು ಹೆಂಗಸು ಗಂಡಸು ಮಕ್ಕಳು ಮರಿಗಳು ಭೇದವೆ ಇಲ್ಲದೆ ಬಲಿಯ ಪಡೆದನು ನೋಡುತ ನಿಂತ ಕಾಲದು ನಡುಗಿತು ಓಡುತ ಓಡುತ ಸೇರಿ ಮನೆಯನು ಕದವನು ಇಕ್ಕಿ ಹಾಕಿ ಚಿಲಕವನು ಹೊರಹಾಕಿದೆನು ನಿಟ್ಟುಸಿರೊಂದನು ರಾವಣ ಕೀಚಕ ಭಸ್ಮಾಸುರರು ಕಾಲನ ಬಲೆಗೆ ಜಾರಿ ಬಿದ್ದರು ಪ್ಣೇಗು ಕಾಲರಾ ಮಸಣ ಸೇರಿದರು ಕೊರೊನಾಗೆಂದು ನಿಜದಲ್ಲಿ ಸಾವು ********************************









