ಒಂದು ಪ್ರೇಮ ಕವಿತೆ
ಕವಿತೆ ಎಚ್.ಕೆ.ನಟರಾಜ್ ನಿಜಕ್ಕೂ ನಿನ್ನ ಮೇಲೆ ತುಂಭಾ ಮನಸಾಗಿದೆಹೇಗೇ ಹೇಳಲಿ. ನೀನೊಪ್ಪದೆ ಬಯ್ದರೆತಿರಸ್ಕರಿಸಿದರೆಆ ನೋವ ಹೇಗೆ ಸಹಿಸಲೀಈ ಮನದಾಳದೊಲವಿಗೆಏನೆಂದು ಹೆಸರಿಡಲಿ.ನಿದ್ದೆಗಳಿಲ್ರದ ರಾತ್ರೀಇರುಳ ನಿಶೆಯೂ ನಿನ್ನ ಮುಗುಳ್ನಗೆಯಹೊನಲಲ್ಲಿ ಬೆಳಕಾಗಿ ಕಾಡುತ್ತದೆನೀ ನನ್ನ ಒಲವು ತಾನೆ.ಹೇಳೇಕಾವ್ಯವನೆ ಉಲಿವ ಜಾಣೆಹೃದಯ ಕುದಿವ ಕುಲುಮೆ ಕೆಂಡವಿರಹದುರಿಯ ಹೊಂಡ..ಅಗ್ನೀಕುಂಡವಾಗಿದೆ.ಸವೆಸಿ ಬಂದ ದಾರಿಯಲ್ಲೆಲ್ಲಾ..ನಿನ್ನ ಗುರುತಿನ ನೆನಪುಗಳ ಬಳ್ಳಿ…ವೃಕ್ಷ… ಘಮಲಿನ ಪುಷ್ಪಹೇಗೆ ದಾಟಲಿ ಈ ಬದುಕ.. ಪ್ರೀತಿಯದೆಯಲ್ಲರಳಿದ ಉತ್ಥಾನದ ನೆನಪಹೇಗೆ ಬಂದರೂ.. ಸುತ್ತಿ ನಿಂತರೂಬಳಸಿ ಬಂದರೂ ಕಾಡುವುದು…ನಿಜಕ್ಕೂ ನಿನ ಮೇಲೆ ಮನಸಾಗಿದೆಕನಸುಗಳಲ್ಲಿ ಕಾಡದೆ ಬಂದು ಮುದ್ದಿಸಿಬಿಡೆ ನಿನದೇ ನೆನಪು ಹೊತ್ತು ಗೊತ್ತಿಲ್ಲದೆ ಕಾಡುವುದು. ಹಾಡುವುದು ನಿನದೇ ನೆನಪಮಂಜುಮಾತಿನ ಮಲ್ಲಿಗೆ ನಿನ ಸೂಗಸ ಹೇಳೇ ಕಿನ್ನರಿ.. ನನ್ನೊಲವ ಸುಂದರಿನೀ.. ನನ್ನ ಪ್ರೀತಿಸುವ ತಾನೆ.. ನಾ ಕಾರ್ಮುಗಿಲ ಕಪ್ಪಾದರೂ ನೀನು ಹೊಳೆವ ಬಿಳಿ ಮುಗಿಲುಅಂದುಕೊಳ್ಳಲೇ ಇನ್ನು ನನಗಿಲ್ಲಾ ದಿಗಿಲುನೀನು ಅಪ್ರತಿಮ ಸುರಸುಂದರಿಗೂ ಮಿಗಿಲುತೆರೆದಿದೆ ನಿನ ಸ್ವಾಗತಕೆಎಂದೂ ನನ್ನ ತೆರೆದೆದೆಯ ಬಾಗಿಲು ಹೊತ್ತು ಗೊತ್ತಿನ ಪರಿವೇ ಏತಕೆ ಪರಿಮಳನೀ ಬರದಿದ್ದರೆ ಮನ ತಾಳದು ತಳಮಳಬಂದು ಬೀಡೆ ನಲ್ಲೆ ನಸು ನಾಚಿ ನಿಲ್ಲೆನನ್ನೆದೆಯ ಅಂಗಳದಿ ಆಡೋಣ ನಾವಿಬ್ಬರು ಕುಂಟೋಬಿಲ್ಲೆಹೇಳಿಬಿಡಲೇ.. ನಿನ ಮೇಲೆ ಮನಸಾಗಿದೆ..ಮುನಿಸು ತೋರದೆ..ಮುಖ ಮುತ್ತಿದ ಮುಂಗುರುಳೊಳಗೆನಕ್ಕು ರಮಿಸಿಬಿಡೇ. ಒಮ್ಮೆ..ಹಾಗೇ. ಕ್ಷಮಿಸಿ ಬಿಡೆ ನನ್ನ ಸುಮ್ನೆ(ನೀನು) ******************************









