ಗಾಳಿ ಪಟ
ಕವಿತೆ ಗಾಳಿ ಪಟ ರೇಷ್ಮಾ ಕಂದಕೂರ. ಕೆಲವೊಮ್ಮೆ ಏರುಇನ್ನೊಮ್ಮೆ ಇಳಿತಹರಿಯ ಬಿಡದಿರುಸಮತೋಲನದ ಬಾಲಂಗೋಚಿ ಗಾಳಿ ಬಂದ ಕಡೆ ಮುಖ ಮಾಡಿಘಾಸಿಗೊಳಿಸುವೆ ಮನವಅತ್ತಿಂದಿತ್ತ ಸುಳಿಯುತಬಾನ ಚಿತ್ತಾರದಿ ತೇಲುತಿದೆ ಬಾನಂಚಿಗೆ ಸಾಗುವ ಕನಸಿಗೆಬಣ್ಣ ಹಚ್ಚುತ ಸಾಗಿದೆಮಕ್ಕಳ ಮನ ತಣಿಸುತಕುಣಿದಿದೆ ಎಲ್ಲ ಮರೆತು ತಾಗದಿರಲಿ ಕುಗ್ಗುವ ಮಾತುಸಿಗದಿರಲಿ ಆಡಿಕೊಳ್ಳುವವರಿಗೆಮೇಲೇರುವ ಧಾವಂತಕೆನೂರೆಂಟು ವಿಘ್ನಸಾವರಿಸಿ ಮೇಲೇರುತಲಿರು ಬೇಕಾ ಬಿಟ್ಟಿತನ ಬೇಡಸಾಕೆಂದು ಕುರದೇಗುರಿಯ ಸಾಕಾರಕೇಗುರುತರ ಜವಾಬ್ದಾರಿಯಲಿ ಏರಿದವ ಕೆಳಗಿಳಿಯಲೇ ಬೇಕುಸೂರೆ ಮಾಡಿದವ ಸೆರೆಯಾಗುವಎಲ್ಲವನು ಸುಸ್ಥಿತಿಯಲಿ ನೋಡುಬಾಳ ಬೆಳಗುವೆ ನಿರಾತಂಕದಿ. **************************************








