ವಿಭಾ ಪುರೋಹಿತ ಕಾವ್ಯಗುಚ್ಛ
ವಿಭಾ ಪುರೋಹಿತ ಕಾವ್ಯಗುಚ್ಛ ವೆಂಟಿಲೇಟರ್ ಮತ್ತು ರಕ್ಷೆ ಭ್ರಾತೃತ್ವದ ಬಾಂಧವ್ಯ ದೆಳೆಯಲ್ಲಿಫ್ಯಾಷನ್ ಗಿಫ್ಟುಗಳ ಮೋಹದನೂಲುಆತ್ಮೀಯತೆ ಗೌಣ ಪ್ರದರ್ಶನಕ್ಕೆಕ್ಲಿಕ್ಕಾಗುವ ಕೆಂಪು ಕೇಸರಿ ಹಳದಿರಕ್ಷೆ ತಾಯಿ ಕರುಳ ಬಣ್ಣ ಅಂಟಿದೆಅದೇಕೋ ಅವಳ ಕುಡಿಗಳ ಬೆರಳು ಕೆಂಪಾಗಿವೆ! ಎಪ್ಪತ್ತು ವರ್ಷಗಳಿಂದಎದೆಯಲ್ಲಿ ಬೆಂಕಿ ಇಟ್ಟು ಕೊಂಡಿದ್ದಾಳೆ ಇತಿಹಾಸ ಗಡಿರೇಖೆಯೆಳೆದಾಗಸಹಸ್ರೋಪಾದಿಯಾಗಿ ಕಂಗಾಲಾದವರನ್ನೆಲ್ಲತನ್ನವರೆಂದು ತೆಕ್ಕೆಬಡಿದುಕೊಂಡಳುಆತ್ಮಸಾಕ್ಷಿಯಾಗಿ ಕಾಲಿಟ್ಟವರೆಷ್ಟೋ ? ಒಂದೇ ಬಳ್ಳಿಯ ಹೂಗಳಂತೆ ಮುಡಿಗಿಟ್ಟಳುಸುಮ್ಮನಿರದ ಶಕುನಿಗಳ ಕ್ಯಾತೆಗೆಹಣ್ಣಾಗಿದ್ದಾಳೆ ಪುಪ್ಪಸನೆಂಬ ಪುತ್ರರಕ್ಕಸರುಉಸಿರಾಡಲು ಬಿಡುತ್ತಿಲ್ಲ ವೆಂಟಿಲೇಟರ್ ಅಭಾವ ,ಕೆಲವೇ ಶುಶ್ರೂಷಕರಸಿಟ್ರಝೀನ್,ಡೊಲೊಗಳಿಂದ ತುಸು ಉಸುರುವಂತಹ ಗತಿಯಿದೆಬೇಕಾಗುವ ವೆಂಟಿಲೇಟರ್ ಸುಲಭದ್ದಲ್ಲ ‘ನಾವು ಭಾರತೀಯರು’ ಎಂಬ ವೆಂಟಿಲೇಟರ್ಯಾವ ಆಸ್ಪತ್ರೆಯ ಯಂತ್ರ ತಂತ್ರಗಳುಯಾವ ಹಬ್ಬದ ಮಂತ್ರ ಸ್ತೋತ್ರಗಳುಈ ಒಕ್ಕೊರಲಿನ ಭಾರತೀಯತೆಯ ಹೆದ್ದೊರೆ ಹರಿಸಲಿವೆ ? ರಾಷ್ಟ್ರ ನಮನ ಭಾರವಾಗಿದೆಯಿಂದು ಗಾಯವಾಗಿದೆ ಕವಿತೆರಕ್ತಕಾರುವದೊಂದೇ ಬಾಕಿ ಲೇಖನಿಯ ಬಾಯಿಂದಮೂರು ಯುದ್ಧಗಳು ಕೊರೊನಾ ರಣಕೇಕೆಗಡಿನೆಲದ ರಣಹಲಿಗೆ ರಾಜಕಾರಣದಕರ್ಮಕಾಂಡ ನಡುವೆ ನರಳುವ ನರರ ಪ್ರಲಾಪ !ಯಾವ ಭೀತಿ ರೀತಿ ನೀತಿಗೂ ಬಗ್ಗುತ್ತಿಲ್ಲಕಾಡುಪಾಪದ ಕಿಂಕಿಣಿಗಡಿಯಲ್ಲಿ ಸಂಚು ನಿತ್ಯ ಗುಂಡಿನ ಸದ್ದುವೀರಗುಂಡಿಗೆಗಳ ಆಹುತಿ ! ವಿಕೋಪದಲ್ಲೂ ವಿಕೃತವ ಮೆರೆವರಾಜಕೀಯ ತೊಗಲು ಗೊಂಬೆಯಾಟಸಾಮಾನ್ಯರ ಮನೋಭೂಮಿಸೋತು ಅರೆಸತ್ತು ಕಾದಿದೆ ಅಮೃತಘಳಿಗೆಗಿಂದು……. ಚೀನಿಯಾತ್ರಿಕ ಹೂಯಾನ್ ತ್ಸಾಂಗ್ ಅಲ್ಲ ವಕ್ಕರಿಸಿದವ ಅಣುದಾಳಿಕಾರ ಹೊಡೆದೊಡಿಸುವಸಿಡಿಮದ್ದುಗಳು ಸಿದ್ಧವಾಗುತಿವೆಅಶ್ವಿನಿದೇವತೆಗಳ ಸದಯೆಯಲಿ ********************************
ವಿಭಾ ಪುರೋಹಿತ ಕಾವ್ಯಗುಚ್ಛ Read Post »









