ಅವಳ ಕಣ್ಣುಗಳು
ಕವಿತೆ ಅವಳ ಕಣ್ಣುಗಳು ಡಾ. ಪ್ರೇಮಲತ ಬಿ. ಅವಳ ಕಣ್ಣುಗಳು ಅವನನ್ನುನಿರುಕಿಸುವುದೇ ಹೀಗೆನಿಧಾನವಾಗಿ ಪರೀಕ್ಷಿಸುವಂತೆಯಾರೆಂದು ಯಾವತ್ತೂ ನೋಡಿರದ ಹಾಗೆಆಳವಾಗಿ ಕತ್ತರಿಸುವ ಬಗೆ ಅವಳು ಅತ್ತಿತ್ತ ಹರಿಸುವ ನೋಟದಲ್ಲಿಇಡೀ ಜೀವಿತದಿ ಕಂಡಿರದ್ದಕ್ಕಿಂತಹೆಚ್ಚು ನೋಡಿಬಿಡುತ್ತಾನೆ ಅವನುದೀಪಗಣ್ಣುಗಳು ಆಳವಾಗಿ ಯೋಚಿಸುತ್ತನಿಷ್ಯಬ್ದವಾಗಿ ಪ್ರಕಟಿಸುತ್ತವೆತಟ್ಟನೆ ಒಂದು ಕಥೆಯನ್ನು ಬರೆಯುತ್ತಹೊಸಲೋಕದ ಕವಿತೆಯೊಂದನ್ನು ಹಾಡುತ್ತಇವನು ನಿಂತ ನೆಲ ಕಂಪಿಸುವ ಹಾಗೆ ಅವಳ ಕಣ್ಣೋಟದ ಕೊಲೆಗಡುಕನಿಗೆಇವನು ಬಲಿಯಾದ್ದು ಇದೇ ಮೊದಲಲ್ಲಕೊನೆಯೂ ಇಲ್ಲಅವಳ ನೋಟವೇ ಹಾಗೆಅವನ ಹೊರಮೈ ಭಾವಗಳ ಬಟ್ಟೆಕಳಚಿ ನಗ್ನವಾಗಿಸುವ ಹಾಗೆಒಳಮೈಯ ಬೇಗುದಿಗಳಿಗೆ ತಿದಿಯನ್ನುಒತ್ತಿ ಜ್ಯೋತಿ ಬೆಳಗಿಸುವ ಹಾಗೆ ಅವನು ಮಿಡಿಯುತ್ತಾನೆಅವಳು ರೆಪ್ಪೆ ಬಡಿದಾಗೆಲ್ಲ ಹೊಸದೊಂದುಎಪಿಸೋಡಿಗೆ ಕಾಯುವ ವೀಕ್ಷಕನಂತೆಕೊನೆಯಿರದ ಆಳಗಳಲಿ ಮುಳುಗೇಳುತ್ತದೃಷ್ಟಿಗೆ ದೃಷ್ಟಿ ಬೆರೆಸಿ ಕುಣಿಯುತ್ತಚಪ್ಪಾಳೆ ತಟ್ಟಿ ಕೆಲವೊಮ್ಮೆತಾನೇ ಅವಳಂತೆ ಮಗದೊಮ್ಮೆ! ****************************









