ಕಾಂಕ್ರೀಟ್ ಬೋಧಿ
ಕವಿತೆ ಕಾಂಕ್ರೀಟ್ ಬೋಧಿ ಪೂಜಾ ನಾರಾಯಣ ನಾಯಕ ಯಾವ ಹಕ್ಕಿ ಎಸೆಯಿತೋ, ನನ್ನ ಬೀಜವನಿಲ್ಲಿಅದರ ಪರಿಣಾಮವೇ ಬೆಳೆದೆನಾಯಿಲ್ಲಿಸಿಮೆಂಟ್ ಗಾರೆಯ ಬಿರುಕಿನಾ ಕಿಂಡಿಅದುವೇ ನನ್ನ ಬದುಕಿನಾ ಮೊದಲನೆಯ ಬಂಡಿಗೆದ್ದುಬರುತ್ತಿದ್ದೆ ಆ ಬಿರುಕ ಇನ್ನೂ ಸರಿಸಿಆದರೆ ನೀ ಬರದೇ ಇರಲಾರೆ, ಕೀಳಲು ನನ್ನರಸಿ ಕರವೊಡ್ಡಿ ಬೇಡುವೇ, ಕೀಳಬೇಡವೋ ಮನುಜಕೀಳದಿದ್ದರೆ ನಾ ನೀಡುವೆ, ಔಷಧೀಯ ಕಣಜನಿನಗಷ್ಟೇ ಎಂದು ತಿಳಿಬೇಡವೋ ಅಣ್ಣಾಖಗಗಳಿಗೂ ನೀಡುವೆನೋ ತಿನ್ನಲು ಹಣ್ಣಾನಿಮ್ಮಿಬ್ಬರಿಗೆ ಎಂದು ತಿಳಿಯದಿರು ಮತ್ತಣ್ಣಮೃಗಗಳಿಗೂ ನೀಡುವೆನೋ ನನ್ನ ಮೇವಣ್ಣ ನೀನಾಗಿಹೆ ಇಂದು ಕ್ರೋಧದಾ ಬಂಧನಕೇಳಿಸುತ್ತಿಲ್ಲವೇನೋ ನಿನಗೆ, ನನ್ನ ಮನದ ಆಕ್ರಂದನಹಿಡಿದು ನಿಂತಿರುವೆ ನೀನಿಂದು, ಖಡ್ಗ ಮಹಾರಾಜನಕೆಳಗಿಳಿಸೋ ಮಾರಾಯಾ, ಕೊಡುವೆ ನಾನಿಂಧನನನ್ನ ನೆರಳಿನಲಿ ಕುಳಿತಿದ್ದು, ಮರೆತೋಯ್ತೋ ಏನೋ?ನೀ ಮರೆತೆಯೆಂದು, ನಾ ಮರೆವೆನೇನೋ? ನೀ ಕೂರದೇ ಇರಬಹುದು, ನೆರಳಿನಾ ಕೆಳಗೆಯಾಕೆಂದರೆ ನೀನಿರುವೆ ಕಾಂಕ್ರೀಟ್ನ ಒಳಗೆನೀ ಬಯಸಲಾರೆ, ಎಸಿಯಲಿ ಉಳಿದುಬಯಸುವನು ರೈತ, ಬಿಸಿಲಿನಲಿ ಬಸವಳಿದುಕೇಳಿಸಿಕೋ, ಕೇಳಿಸಿಕೋ ಮನದಾಳದ ಕೂಗವಾಸಿಮಾಡುವೆನು ನಿನ್ನ ಧೀರ್ಘಕಾಲದ ರೋಗ ಬುದ್ಧನಿಗೆ ನೀಡಿದೆ ಜ್ಞಾನವನಾನಂದುನೀನಾಗಬೇಡವೋ ಕೊಲೆಗಡುಕನಿಂದುಸುಡು ಬಿಸಿಲ ಸಹಿಸಿ,ಪರ ಹಿತವ ಬಯಸಿನಾ ಬಾಳುವ ಪರಿಅದುವೇ ನಿನಗೆ ಆದರ್ಶದ ಗರಿ. ******************************************************









