ಗಝಲ್
ಗಝಲ್ ಎ.ಹೇಮಗಂಗಾ ಮಧುಶಾಲೆಗಿನ್ನು ಮರಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲುನೆನಪ ಗೋರಿಯನಿನ್ನು ಅಗೆಯಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಏಕಾಂಗಿ ಜೀವದ ತಾಪ ತಣಿಸಲೆಂದೇ ಏಕಾಂತದಿ ಮೈ ಮರೆತವನುನೋವ ಕುಲುಮೆಯಲ್ಲಿನ್ನು ಬೀಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಸಾವಿರ ಟೀಕೆಗಳ ಕತ್ತಿ ಇರಿತಕೆ ಬಲಿಯಾಗಿಸಿದರು ಕುಹಕಿ ಗೆಳೆಯರುನಾಲಿಗೆಗಿನ್ನು ಆಹಾರವಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಮಂದ ಬೆಳಕಿನ ನಿಶೆಯ ನಶೆ ಲೋಕ ಬಲೆಯಾಗಿ ಉಸಿರುಗಟ್ಟಿಸಿದೆಬೇಡುತ ಮದಿರೆಗಿನ್ನು ದಾಸನಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಬದುಕಿನ ಗಮ್ಯ ಸಾರ್ಥಕತೆಯತ್ತ ಸೆಳೆಯಲು ಕೈ ಬೀಸಿ ಕರೆಯುತ್ತಿದೆಅವನತಿ ಹಾದಿಯನಿನ್ನು ತುಳಿಯಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ***********************************









