ಕವಿತೆ ಕ್ಷಮಿಸು ಮಗಳೇ, ಬಾಲಾಜಿ ಕುಂಬಾರ ಕ್ಷಮಿಸು ಮಗಳೇ,ನಿನಗೆ ನಾಲಿಗೆ ಕತ್ತರಿಸಿದಾಗನಮಗೂ ನಾಲಿಗೆ ಮೇಲೆ ಗಾಯವಾಗಿದೆ,ಆದರೆ ಮಾತನಾಡಲು ಆಗಲಿಲ್ಲ.ಮಾತು ಮೌನವಾಗಿದೆ, ವೇದನೆ ಮಿತಿಮೀರಿದೆ, ಕ್ಷಮಿಸು ಮಗಳೇ,ನಿನಗೆ ಕಾಲು ಕತ್ತರಿಸಿ, ಕೈ ಮುರಿದಾಗಕಾಲುಗಳಿಗೆ ನೋವಾಗಿದೆ,ಕೈಗಳಿಗೆ ಬೀಗಗಳಿವೆ, ಕೈಕಟ್ಟಿ ಕುಳಿತಿದ್ದೇವೆನಿನ್ನ ‘ಜೀವ’ ಕಳೆದುಕೊಂಡು,ಮತ್ತದೇ ಸೂತಕದ ಮನೆಯಲ್ಲಿ, ಕ್ಷಮಿಸು ಮಗಳೇ,ಇದು ‘ರಾಮರಾಜ್ಯ’ ಇಲ್ಲಿ ಸ್ವಾತಂತ್ರ್ಯವಾಗಿತಿರುಗಾಡುವಂತೆ ಹೇಳಿದ್ದೇವೆ, ಆದರೆರಾಮರಾಜ್ಯದ ಕೀಚಕರ ಕೈಯಿಂದ ನಿನ್ನನ್ನುರಕ್ಷಿಸಲು ಆಗದೇ, ನಾವು ಅಪರಾಧಿಗಳಾಗಿದ್ದೇವೆ. ಕ್ಷಮಿಸು ಮಗಳೇ,ಈಗ ಕೌರ್ಯ ಮೆರೆಯುತ್ತಿದೆ, ನ್ಯಾಯ ಗಂಟಲಲ್ಲಿ ಉಸಿರುಗಟ್ಟಿದೆ, ಇನ್ನು ಮನುಷ್ಯತ್ವ ಎಂಬುದು ಮರೀಚಿಕೆಯಾಗಿದೆ, ಎಲ್ಲೆಡೆ ರಕ್ತದ ಕಲೆಗಳು ಚಿಮ್ಮುತ್ತಿವೆ, ಇನ್ನೆಲ್ಲಿದೆ ‘ಭಾರತ ಮಾತೆಯ’ ರಕ್ಷಣೆ?? ಕ್ಷಮಿಸು ಮಗಳೇ,ಅವಸ್ಥೆಯ ನೆಲದಲ್ಲಿ ಅನ್ಯಾಯ ಪಂಜಿನಮೆರವಣಿಗೆ ಹೊರಟಾಗ ‘ಬಡ ಜೀವಗಳು’ಮೌನವಾಗಿ ಪ್ರತಿರೋಧಿಸುತ್ತಿವೆ,ಆ ಕ್ಷಣದ ತೊಳಲಾಟ, ಅಸಹಾಯಕತೆ,ನಿನ್ನ ರಕ್ತ ಕಣ್ಣೀರು ನೆನೆದಾಗ, ಒಮ್ಮೆ ಕಣ್ಣು ಒದ್ದೆಯಾದವು, ಹಾಗೇ ರಕ್ತ ಕುದಿಯುತ್ತಿದೆ, ಕ್ಷಮಿಸುಬಿಡು ಮಗಳೇ,ನಿನಗೆ ಉಳಿಸಿಕೊಳ್ಳಲು ಆಗಲಿಲ್ಲ, *****************************