ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅಷ್ಟೇನೂ ಅಂತರವಿರಲಿಲ್ಲ

ಕವಿತೆ ಅಷ್ಟೇನೂ ಅಂತರವಿರಲಿಲ್ಲ ನಾಗರಾಜ ಮಸೂತಿ ಅಷ್ಟೇನೂ ಅಂತರವಿರಲಿಲ್ಲ,ಆದರೂನೆರಳು ತಾಗುತ್ತಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂಹೋಟೆಲ್ಲಿನ ಚೆಂಬು ಲೋಟಗಳಿಗೆನಮ್ಮ ಸ್ಪರ್ಶದ ಅರಿವಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಕರಗಳು ಕರ್ಪುರದ ಕಾವುಕಂಡಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಆವಾಸಗಳು ಊರಂಚಿನಲ್ಲಿ ಮಿಂಚುತ್ತಿದ್ದವು ಆದರೆ ಮನಸ್ಸುಗಳುಇದೇ ಅಂತರದ ಅಗ್ನಿಯಸ್ಪರ್ಶದಿಂದ ಕರಕಲಾಗಿದ್ದವು… ************************************

ಅಷ್ಟೇನೂ ಅಂತರವಿರಲಿಲ್ಲ Read Post »

ಕಾವ್ಯಯಾನ

ನೀನಾದೆ ನೀನಾದೆ

ಕವಿತೆ ನೀನಾದೆ ನೀನಾದೆ ಶಾಂತಲಾ ಮಧು ನೀನಾದೆ ಜೀವನದದಾತೆ ತಾಯಿಜೀವನದ ದಾತರುಹಲವಾರುಮುಗ್ದ ಮನಸಿಗೆಹಬ್ಬಿ ಆಲಂಗಿಸಿಉತ್ಸಾಹಕೆ ಚಿಲುಮೆ ನೀನಾದೆ ನೀನಾದೆ ನೀನಾದೆಪ್ರೀತಿ -ಪ್ರೇಮ ವಾತ್ಸಲ್ಯದಲಿತಣಿಸಿ ಸಂಕಲ್ಪ ವಿಕಲ್ಪ ನೀನಾದೆ ನೀನಾದೆಭೂಮಿ ಆಕಾಶಜಲ-ಚರ ಪ್ರಕೃತಿನೀಭಾವನೆಗಳ ಕಲಿಸಿಪುಲಕಿಸಿ ಪ್ರಶ್ನಿಸಿಉತ್ತರವೂ ನೀನಾದೆ ನೀನಾದೆ ನೀನಾದೆತಪ್ಪು ಸರಿ ಕೊಂಡಿಗಳಪೋಣಿಸಿ ನಿನ್ನೀ ಪ್ರಿಯಸರವಾಗಿಸಿ ಮೆರಸಿನೀನಾದೆ ಆದೆಅರಿಷ್ಟ್ ವರ್ಗಗಳಿಗೆಶರಣಾಗಿಸಿ ಕಾಡಿಸಿಬಿಟ್ಟು ಬಿಡದೆಕತ್ತಲು ಬೆಳಕಮಾಯೆಯಲಿ ಮೀಯಿಸಿಮನತಟ್ಟಿ .ನೀನಾದೆನೀನಾದೆಸ್ವಾರ್ಥ ವಿಕಲ್ಪಕೆ ಪ್ರಶ್ನೆನೀನಾದೆ ಶೋಧನೆಗೆ ಹುಟ್ಟುಭಾವನೆ ಬದುಕಿಗೆಹುಡುಕಾಟ ,ನೀನಾದೆ ನೀನಾದೆತಪ್ಪಿಗೆ ಹುಸಿ ಹೊಣೆಗಾರ ನೀನಾದೆ ನೀನಾದೆಭಯ-ಭಕ್ತಿಗೆ – ಭ್ರಮೆ,ಅಳಲನಾಲಿಸಿಅಂತರಂಗದ ಮಾತಾಗಿಸತ್ಯ ನಿತ್ಯವೇ ನೀನಾದೆನೀನಾದೆ ನೀನಾದೆ ನಿನ್ನೊಳಗೇ ‘ನಾ’ ನಿದ್ದೂ“ನಾ “ ?ಪ್ರಶ್ನೆಯೇ ಆದೆ. *****************************************

ನೀನಾದೆ ನೀನಾದೆ Read Post »

ಕಾವ್ಯಯಾನ

ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ

ಕವಿತೆ ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ ಪ್ರಜ್ಞಾ ಮತ್ತಿಹಳ್ಳಿ ಬಾ ಬಾಪೂ ಇಲ್ಲೇ ಕೂಡುಇಕ್ಕಟ್ಟಾದರೂ ಅಂಗಳಕ್ಕಿಳಿಯಲುವೈರಾಣು ಭಯಗುಂಡು ಕನ್ನಡಕವನುಅರ್ಧ ಮುಚ್ಚಿದರೂಮಾಸ್ಕ್ ತೆಗೆಯಬೇಡಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂಹಾರ ಮಂಗಳಾರತಿಸಾಮೂಹಿಕ ಭಜನೆ ರಘುಪತಿಮುಗಿಸಿ ಬಂದ ಮೇಲೆಯೇ ನಾಷ್ಟಾ ತಿಂದೆಆದರೀ ಸಲಏನೋ ಕಲಮಲ ಕಳೆದ ವಾರ ನಿನ್ನ ಆತ್ಮಕತೆ ಓದಿಎಲ್ಲರ ನೋವನು ಬಲ್ಲವನೊಬ್ಬನಹುಡುಕುತ್ತ ಹೊರಟಿದ್ದೆನಡುರಾತ್ರಿ ಕಂದೀಲು ಹಚ್ಚಿದದೋಣಿಗಳು ತುಯ್ಯುವ ಅಲೆಯಲ್ಲಿನಿಧಾನಕ್ಕೆ ಹೊರಟಿದ್ದವು.ನಿದ್ದೆ ಜಗ್ಗುವ ರೆಪ್ಪೆಗಳ ಅಗಲಿಸುತ್ತಹುಟ್ಟು ಹಾಕುವ ಬೆಸ್ತರು ಎಂದೂಮಲಗದ ಮೀನುಗಳ ಹಂಬಲಿಸುತಿದ್ದರುಕೈ ಮಗ್ಗ ನಂಬಿ ಬಟ್ಟೆ ಕತ್ತರಿಸುವಹೆಂಗಸರು ಕೂಳಿಲ್ಲದೇ ಕಂಡವರತೋಟಕ್ಕೆ ಮಣ್ಣು ಹೊರುತ್ತಾಕೆಕ್ಕರಿಸುವ ನೋಟಕ್ಕೆ ಕಾನದಿರುವಂತೆಹರಿದ ಸೆರಗೆಳೆಯಲು ಪರದಾಡುತ್ತಿದ್ದಾರೆ ಆಡಿನ ಹಾಲು ಕರೆದಿಟ್ಟ ಪಾತ್ರೆಯಲ್ಲಿಸಣ್ಣಗೆ ನೊರೆಯ ಗುಳ್ಳೆಗಳುಅಡಗುತ್ತ ಒಳ ಪದರಕ್ಕೆ ಹೈನುಗಸಿ ಮೂಡಿಸುತ್ತ ಕುಡಿದ ತುಟಿಯಮೇಲೊಂದು ಹಾಲಿನ ಮೀಸೆನಿನಗೂ ಮೂಡಿರಬಹುದಲ್ಲವೆ ಬಾಪೂ ಜೊಹಾನ್ಸಬರ್ಗಿನ ಪ್ಲೇಗು ರೋಗಿಗೆಗಂಜಿ ಕಾಯಿಸುವಾಗ ಫೀನಿಕ್ಸಆಶ್ರಮದ ಪುಂಡು ಹುಡುಗರಿಗೆ ಕವಾಯತುಮಾಡಿಸುವಾಗ ಬಿಚ್ಚಿಟ್ಟ ಕೋಟಿನಕಿಸೆಯಲ್ಲಿ ತುಂಡು ಹಾಳೆಯ ಕವಿತೆಲೋಟ ನೀರು ಕೊಟ್ಟವನಿಗೆ ಊಟವಿಕ್ಕುಕಾಸು ಕೊಟ್ಟವಗೆ ಚಿನ್ನದ ಮೊಹರುಹತ್ತು ಪಟ್ಟು ಪ್ರತ್ಯುಪಕಾರಕ್ಕೆತೋಳು ಮಡಚಿ ತಯಾರಾದೆಓ ಅಲ್ಲಿ ರಿಕ್ಷಾದಲ್ಲಿ ಅಡ್ಮಿಶನ್ ಮಾಡಿಸಿಬರುತ್ತಿದ್ದ ಹುಡುಗಿಯನೆಳೆದು ಸಿರಿಂಜುಚುಚ್ಚಿ ಈಗ ಮನೆ ಮುಂದೆ ತಂದೊಗೆದರಕ್ತಸಿಕ್ತೆ ಪ್ರಾಣ ಬಿಡುವಾಗ ಕಿವಿಯಲ್ಲಿಹಾಡಬಹುದೇ ಪೀಡಪರಾಯೆ ಜಾನೆ ಕ್ಷಮೆಯಿರಲಿ ಬಾಪೂ ಈ ಸಲಭಜನೆಗೆ ಧ್ವನಿಗೂಡಿಸುವಾಗಗಂಟಲು ಗೊರಗೊರ ಕಣ್ಣುಒದ್ದೆಯಾದರೂ ನಾಲಿಗೆ ನುಡಿಯುತ್ತಿಲ್ಲಹುಲ್ಲು ಕೊಯ್ಯುವ ಹುಡುಗಿಯಕತ್ತರಿಸಿ ಬಿದ್ದ ನಾಲಿಗೆಯದೇ ನೆನಪುನೋಡು ಬಾಪೂ ಅಕಾಲದಲ್ಲಿಮೋಡ ಕತ್ತರಿಸಿ ಮಳೆ ಹೊಯ್ಯುತಿದೆಬಾರದುದು ಬಂದಾಗ ಬಪ್ಪುದು ತಪ್ಪದುಎನ್ನುತ್ತಾರೆ ಹಿರಿಯರುಮಳೆ ನಿಂತ ಕೆಸರು ದಾರಿಯಲಿಹಗೂರಕೆ ಕೋಲೂರಿ ಹೊರಡುಮುಂದಿನ ಜಯಂತಿಗಾದರೂಹಾಡಲಾಗುತ್ತದೆಯೆ ನೋಡೋಣ ***************************************

ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಮುತ್ತು ಬಳ್ಳಾ ಕಮತಪುರ ಗಾಂಧಿ ನಾಡಿನಲಿ ಮಾತುಗಳು ಮೌನ ಅರ್ಥ ಕಳೆದುಕೊಂಡಿವೆ |ಗಾಂಧಿ ನಾಡಿನಲಿ ಕನಸುಗಳು ಹೊಸಕಿ ಬಿಸಾಕಿ ಹಾಕಲಾಗುತ್ತಿವೆ || ಬಾಪೂಜಿ ದೇಶದಲಿ ನಾಲಿಗೆ ಹರಿತವಾದರೆ ಕತ್ತರಿಸಲಾಗುತ್ತದೆ |ಇಲ್ಲಿ ಎಲ್ಲವೂ ಭಕ್ತಿಯ ಪರಾಕಾಷ್ಠೆ ಉಧೋಒಪ್ಪಿತ ನಿರ್ಧಾರಗಳಿವೆ || ಮಲಗಿದವರ ಎಬ್ಬಿಸಬಹುದು ಸತ್ತಂತೆ ನಟಿಸುವ ದುರುಳರು ತುಂಬಿದ್ದಾರೆ |ಕಟ್ಟೆ ಪಂಚಾಯತಿ ನ್ಯಾಯ ತೀರ್ಮಾನ ಕಚ್ಚೆ ಹರುಕರೆ ತುಂಬಿಕೊಂಡಿವೆ || ಉಳ್ಳವರ ಕಾಯ್ದೆಗೆ ಹೆಣ್ಣು ಭೋಗ ವಸ್ತು ಆಕೆಯ ರಕ್ತವೇ ಗುಲಾಲು |ರಾತ್ರಿಯೂ ಕೆಲಸಗಳು ನಡೆಯುತ್ತಿವೆ ಸತ್ತ ಹೆಣಗಳು ಬೂದಿಯಾಗಿವೆ || ‘ಮುತ್ತು’ಬದಲಾವಣೆಗೆ ಕಾಯದಿರು ಮನೆ ಹೆಣ್ಣು ಮಕ್ಕಳ ಕಾವಲುಗಾರನಾಗು |ನನ್ನ ಸುಟ್ಟ ಹೊಗೆಯ ವಾಸನೆ ಪಕ್ಕದ ಗೂಡಸಲಿಗೂ ಹಬ್ಬಲಿದೆ ಎಚ್ಚರಿಸಿರುವೆ | ****************************

ಗಝಲ್ Read Post »

ಕಾವ್ಯಯಾನ

ಅಬಲೆಯ ಹಂಬಲ

ಕವಿತೆ ಅಬಲೆಯ ಹಂಬಲ ಅಶೋಕ ಬಾಬು ಟೇಕಲ್ ರಾಮನ ನೆಲವಾದರೂ ಅಷ್ಟೇರಹೀಮನ ನೆಲವಾದರೂ ಅಷ್ಟೇಕಾಮುಕನೆಂಬ ಕೆಂಡದಕಣ್ಣುಗಳ ಅಮಲಿಗರಿಗೆಅಬಲೆಯರ ಹಸಿ ಬಿಸಿ ರಕ್ತಹೀರ ಬೇಕಷ್ಟೇ… ಮನಿಶಾ, ಆಸೀಫಾ ಆದರೇನುನಿರ್ಭಯಾ ರಕ್ಷಿತ, ದಿಶಾಆದರೂ ಸರಿಯೇ ಇವರಿಗೆ ನಡು ರಸ್ತೆಯಲಿಹಾಡ ಹಗಲೇ ಹದ್ದು ಮೀರಿದಗೂಳಿಗಳಂತೆ ಬಂದೆರಗಿಹಾಲುಗಲ್ಲ ಹಸುಳೆಯಎದೆಯ ನಾಯಿಯಂತೆನೆಕ್ಕಿ ಬೆತ್ತಲಾಗಿಸಿಕಾಮ ತೃಷೆ ಮುಗಿಸಿಕಣ್ಣಿಲ್ಲದ ಕಾನೂನಿನಸಾಕ್ಷಿಯ ಕಟಕಟೆ ಒಳಗೂಕಥೆ ಹನಿಸಿ ಕಾಂಚಾಣದಬಿಸಿ ಮುಟ್ಟಿಸಿ ಕ್ಷಮಾದಾನದ ಅರ್ಜಿಯಲಿನಿರ್ದೋಷಿ ಪಟ್ಟ..! ಇನ್ನೆಷ್ಟು ದಿನ ಧರ್ಮಮತ ಪಂಥಗಳ ಕಡೆಬೊಟ್ಟು ಮಾಡಿ ಬೀಗುವಿರಿರಾಮ ರಹೀಮ‌ ಜೀಸಸ್ಏನಾದರೂ ಹೇಳಿಯಾರೆಅತ್ಯಾಚಾರ ಎಸಗಿರೆಂದು !! ಭ್ರಷ್ಟ ದುರುಳ ಗೋಮುಖವ್ಯಾಘ್ರರ ಕೈಯಲ್ಲಿನಅಧಿಕಾರದ ಅಂಕುಶಕಿತ್ತೊಗೆಯ ಬನ್ನಿರಿಕಾನೂನಿನ ಕುಣಿಕೆಗೆಕಾಮುಕರ ಕೊರಳೊಡ್ಡಿರಿನಾನಂದು ನಿರುಮ್ಮಳಳಾಗಿನಡು ಬೀದಿಯಲಿನೆತ್ತರಿಲ್ಲದ ಓಕುಳಿಯಲಿಗೆಜ್ಜೆಯ ಸದ್ದಿನೊಂದಿಗೆನಲಿದಾಡುತಾ ನಡೆದಾಡುವೆನಿಮ್ಮಗಳ ಕಾಯಕಕೆಜೈಯ್ ಘೋಷವಮೊಳಗಿಸುವೆ…!! ***********************************************************************

ಅಬಲೆಯ ಹಂಬಲ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಪ್ರಭಾವತಿ ಎಸ್ ದೇಸಾಯಿ ಅರಳಿದ ಸುಮ ದೇವರಿಗೆ ಅಪಿ೯ತವಾಗಲಿ ಬಾಡುವ ಮುನ್ನವೀಣೆ ತಂತಿ ಮೀಟಿ ಶ್ರುತಿ ಸರಾಗವಾಗಲಿ ಹಾಡುವ ಮುನ್ನ ಜಗದ ನಿಂದೆ ಅಪಹಾಸ್ಯ ಗಳಿಗೆ ನೊಂದು ಅನುಮಾನಿಸದಿರುಜೀವಿಗಳ ಪ್ರೀತಿ ಬೆಸುಗೆ ಗಟ್ಟಿಯಾಗಲಿ ಕೂಡುವ ಮುನ್ನ ನೆರಳಿರದ ಹಾದಿಯಲಿ ಬದುಕಿನ ಬಂಡಿ ಸಾಗಿದೆ ಅನವರತಬಾಳಿನ ಕಹಿ ನೆನಪ ದಿನಗಳು ಮರೆಯಾಗಲಿ ಕಾಡುವ ಮುನ್ನ ವಿರಹ ದಳ್ಳುರಿಯಲಿ ನಿತ್ಯ ದಹಿಸುತಿವೆ ಪ್ರೇಮಿಗಳ ಉಸಿರುಅನುರಾಗ ಚುಂಬನಕೆ ಹೃದಯ ಹಗುರಾಗಲಿ ಬೇಡುವ ಮುನ್ನ ಕೋಶ ಕೀಟಕೆ ರೆಕ್ಕೆಗಳ ಹಚ್ಚಿ ಕೊಂಡು ಹಾರುವ ಆತುರಪ್ರಭೆಯ ಮೋಹ ಇರುಳ ಧ್ಯಾನ ದೂರಾಗಲಿ ಹೊರಡುವ ಮುನ್ನ *************************************************

ಗಝಲ್ Read Post »

ಕಾವ್ಯಯಾನ

ನನ್ನಮ್ಮ

ಕವಿತೆ ನನ್ನಮ್ಮ ಶೃತಿ ಎಸ್.ಗೌಡ ನನ್ನಮ್ಮ ಸೀತೆಯಲ್ಲ ಸಾವಿತ್ರಿಯಲ್ಲಕೈ ಹಿಡಿದ ಪತಿಯೊಡನೆವನವಾಸಕ್ಕೂ ಹೋಗಲಿಲ್ಲಅವನಿಗಾಗಿ ಯಮನನ್ನು ಅಡ್ಡಗಟ್ಟಲಿಲ್ಲ ಇದ್ದಲ್ಲಿಯೇ ವನವಾಸ ಮಾಡಿದವಳು ಕುಡಿದ ಮತ್ತಿನಲ್ಲಿ ನಡೆಯಲಾರದೆ ಎಡವಿ ಬಿದ್ದ ಅಪ್ಪನಿಗೆ ತನ್ನ ಹೆಗಲನ್ನು ಆಸರೆಯಾಗಿ ನೀಡಿದವಳು ನನ್ನಮ್ಮ ಆಸರೆ ಬಯಸಲಿಲ್ಲಸಂಸಾರದ ನೊಗ ಹೊತ್ತುನಮಗಾಸರೆಯಾದವಳುತಾನು ನಿಂತು ನಮ್ಮ ನಡೆಸಿತಾನು ಹಸಿದು ನಮಗುಣಿಸಿತನ್ನ ಕಣ್ಣುಗಳಲ್ಲಿಅವಳ ಕನಸುಗಳ ಕಂಡವಳುಸಂಸಾರದ ಹಾದಿಯಲ್ಲಿ ನಿಲ್ಲದೆ ನಡೆದವಳು ನನ್ನಮ್ಮ ಹೆಚ್ಚು ಕಲಿಯಲಿಲ್ಲಗುಡಿಗಳ ಗುಂಡಾರವ ಸುತ್ತಲಿಲ್ಲಸ್ವರ್ಗ ನರಕಗಳ ಕಲ್ಪನೆಯೂ ಅವಳಿಗಿಲ್ಲ ಇರುವಷ್ಟು ದಿನಬಾಳ ಕುಲುಮೆಯಲಿ ಬೆಂದವಳು ಕುಡಿತಕ್ಕೆ ಶರಣಾಗಿ ಬದುಕನ್ನೇ ಬಲಿ ಕೊಟ್ಟ ಅಪ್ಪನ ಕಂಡು ಸತ್ತು ಬದುಕಿದವಳುದೇವರು ಕೊಟ್ಟ ಆಯಸ್ಸುಮುಗಿಯುವ ಮುನ್ನವೇ ಬದುಕು ಭಾರವೆಂದುನೊಂದವಳು ******************

ನನ್ನಮ್ಮ Read Post »

ಕಾವ್ಯಯಾನ

ತಲೆದಿಂಬಿನೊಳಗೆ ಅವಿತ ನಾ

ಕವಿತೆ ತಲೆದಿಂಬಿನೊಳಗೆ ಅವಿತ ನಾ ಡಾ. ರೇಣುಕಾ ಅರುಣ ಕಠಾರಿ ಈಗೀಗ ಸಾಕ್ಷಿಯ ಪ್ರಜ್ಞೆ ಮರೆತ ನಾಸದ್ದಿಲ್ಲದೆ ತಲೆದಿಂಬಿನೊಳಗಿನಿಂದಎದ್ದು ಎದ್ದು ಬರುವ ಕನಸಗಳಿಗೆ ಉತ್ತರ ಕೊಡಬೇಕಿದೆಪ್ರತಿ ಪ್ರಶ್ನೆಗೂ ಅದೇ ಉತ್ತರವೆಂದು ಹೇಳಿದಾಗಲೂ.ಮತ್ತೆ ಅಂತರಾತ್ಮದ ಹೊನಲು ಕೇಕೆ ಹಾಕುತ್ತದೆ. ಕಾಡುವ ಕನಸುಗಳು ಘಳಿಗೆಗೆ ಒಮ್ಮೆನೆನಪಿನ ನೀರುಣಿಸಿ ಈಗೀಗ ಸಾಕುತ್ತಿದ್ದೇನೆ.ಹರಿದು ಬರುವ ನೀರಿಗೆ ಆಣೆಕಟ್ಟು ಕಟ್ಟಿದಂತೆ,ನದಿಯನ್ನು ದಾಟಲು ಸೇತುವೆಯಂತೆ,ಕ್ಷಣಕ್ಷಣವೂ ಉಸಿರು ನುಂಗಿ, ಜೀವಿಸಿ.ಮೊಳಕೆ ಒಡೆದ ಸಸಿಯಂತೆ, ಹೂವು ಅರಳಿಸುವಂತೆಮತ್ತೆ ನನಗೆ ನಾನೇ ಸಾಕ್ಷಿ ರೂಪವಾಗಿ ಬದುಕುತ್ತಿದ್ದೇನೆ ಕನಸಿಗಾಗಿ. ಜೊತೆಯಾಗಿ ಬರುತ್ತೇನೆ,ಉಸಿರಿಗೆ ಉಸಿರಾಗಿ ಇರುತ್ತೇನೆನಿನ್ನ ತಲೆ ಬೆನ್ನಿಗೆ ಬಿಂಬವಾಗಿರುತ್ತೇನೆ, ಎಂದುಬಂದವನು ನಿನ್ನ ಋಣ ತೀರಿತ್ತೆಂದುಬಂದ ದಾರಿಗೆ ನಡೆದು ಬಹುದೂರ ಹೋಗಿದ್ದಾಯಿತು.ಆಗ ಕಟ್ಟಿದೆಲ್ಲವೂ ಬರೀ ಉಳಿದ ಖಾಲಿ ಕನಸುಗಳು. ಬಯಲು ಆಲಯವು ಒಂದಾದಂತೆಆ ಬೇಸುಗೆಯೂ ಬೇಸತ್ತು ಕಂಗಾಲಾಗಿಸಾಗಿ ಸಾಗಿ ಹಾರಿ ಹೋದಿದ್ದಾಯಿತು.ನನ್ನ ಪ್ರಜ್ಞಾಪೂರಿತ ಸಾಕ್ಷಿಯ ಕನಸು,ವಾಸ್ತವಿಕತೆಯೂ ಮನಸುನನ್ನ ತಲೆದಿಂಬಿನೊಳಗೆ ಜೋಪಾನವಾಗಿಯೇ ಮಲಗಿತ್ತು. *****************************************

ತಲೆದಿಂಬಿನೊಳಗೆ ಅವಿತ ನಾ Read Post »

ಕಾವ್ಯಯಾನ

ಮರ್ದಿನಿ ಆಗಲಿಲ್ಲ

ಕವಿತೆ ಮರ್ದಿನಿ ಆಗಲಿಲ್ಲ ಡಾ.ಶಿವಕುಮಾರ್ ಮಾಲಿಪಾಟೀಲ ನಾಲ್ಕಾರು ಜನರು ಅತ್ಯಾಚಾರಕ್ಕೆ ಮುಂದಾದಾಗಮನಿಷಾ,ಮಹಿಷಾಸುರ ಮರ್ದಿನಿ ಆಗಲಿಲ್ಲ ನಿನ್ನ ಗರ್ಭದಲ್ಲಿ ಹುಟ್ಟಿದರೂನಿನ್ನನ್ನು ಗರ್ಭಗುಡಿಗೆ ನಿಷೇಧಿಸಿದಾಗ ಹೆಣ್ಣುಕಾಳಿಯಾಗಲಿಲ್ಲ ವರದಕ್ಷಿಣೆಗಾಗಿ ಅವಮಾನಿಸಿಹಿಂಸೆ ಕೊಟ್ಟುಕೊಲೆ ಮಾಡುವಾಗ ಹೆಣ್ಣುದುರ್ಗೆ ಆಗಲಿಲ್ಲ ಹೆಣ್ಣು ಬೇಡವೆಂದುಭ್ರೂಣವನ್ನು ಗರ್ಭದಲ್ಲೇಕತ್ತರಿಸಲು ಬಂದಾಗ ಹೆಣ್ಣು ಚಾಮುಂಡಿ ಆಗಲಿಲ್ಲ ಮಹಾ ಗ್ರಂಥಗಳಲ್ಲಿ ಮರುಳಾಗಿಕಲೆ ,ಶಿಲೆಗಳಲ್ಲಿ ಗೊಂಬೆಯಾಗಿಗುಡಿ ಗುಂಡಾರದಲ್ಲಿ ಕುಂಕುಮ ಭಂಡಾರವಾಗಿ ಹೆಸರಿಗೆಅರ್ಧ ನಾರೇಶ್ವರಿ…ಆಗಿದ್ದು ಮಾತ್ರ ದೇವದಾಸಿ. ಕಾಡು ಮೇಡುಗಳಲ್ಲಿಚೆಲ್ಲಿದ ಹೆಣ್ಣಿನ ರಕ್ತದ ಕಲೆಗಳನ್ನು ನೋಡಿಭೂ ತಾಯಿ ಬಿರುಕೊಡೆಯಲಿಲ್ಲಗಂಗೆ,ತುಂಗೆ,ಕಾವೇರಿ,ಗೋದಾವರಿ ಎಲ್ಲಾ ಹೆಣ್ಣುಹೆಸರಿನ ನದಿಗಳು ಬರಿದಾಗಲಿಲ್ಲ ಸಾಕ್ಷಿಗಳಿದ್ದರೂಅಪರಾಧಿಗಳಿಗೆ ಶಿಕ್ಷೆ ಇಲ್ಲ..ನಿರಪರಾಧಿಯಾಗಿ ಬಂದವರನ್ನುನೋಡಿ ಓಡುತ್ತಿವೆ ಪ್ರಾಣಿಗಳುಮೃಗಗಳು ಬಂದವೆಂದು… ಮಹಾಭಾರತದಲ್ಲಿ ಅವಮಾನರಾಮಾಯಣದಲ್ಲಿ ಅನುಮಾನನವಭಾರತದಲ್ಲಿ ಅತ್ಯಾಚಾರದ ಬಹುಮಾನ ? ನಾಗರೀಕರಾಗದೆಎಷ್ಟು ಮುಂದುವರಿದರೇನು?ಮನುಷ್ಯತ್ವ ಇರದಯಾವ ರಾಜ್ಯ ಕಟ್ಟಿದರೇನು? ಹೆಣ್ಣು ನಿಜ ದುರ್ಗೆ,ಚಾಮುಂಡಿ,ಕಾಳಿ,ಮರ್ದಿನಿಯಾಗದೆಶತ ಶತಮಾನದ ಈ ಅನ್ಯಾಯ ತಪ್ಪಿದ್ದಲ್ಲ.. **********************************

ಮರ್ದಿನಿ ಆಗಲಿಲ್ಲ Read Post »

ಕಾವ್ಯಯಾನ

ಮನಿಷಾ

ಕವಿತೆ ಮನಿಷಾ ವೀಣಾ ನಿರಂಜನ್ ಮೊದಲೇ ಕುರುಡಿಯಾಗಿದ್ದನ್ಯಾಯ ದೇವತೆಯಮೂಗಿಯನ್ನಾಗಿಸಿದರು ಮಗಳೇನಿನ್ನ ನಾಲಿಗೆ ಕತ್ತರಿಸಿಅವರ ಗಂಡಸುತನಕ್ಕೆ ಧಿಕ್ಕಾರವಿರಲಿ ಅವರ ಬೆಚ್ಚನೆಯ ಮನೆಗಳಲ್ಲಿಬಚ್ಚಿಟ್ಟ ನಿಧಿಯಂತೆ ನೀನೂ ಕೂಡಅರಿತಿದ್ದರೆ ಸಾಕಿತ್ತು ಅವರುಹತ್ತೂ ಕಡೆ ಚಾಚಿದ ವಿಷ ಸರ್ಪಗಳಹೆಡೆ ಮುರಿದು ಕಟ್ಟುತ್ತಿದ್ದರು ಅರಿಯದಾದರೆ ಅವರುನಿನ್ನೊಳಗಿನ ಕುಡಿಯನ್ನುಹೊರಲಾರದಷ್ಟು ಪಾಪದಮೂಟೆ ಹೊತ್ತು ನಡೆದರುಸಾವೂ ಕೂಡ ಸಹಜವಾಗಿಸುಳಿಯಲಾರದಿನ್ನು ಅವರ ಬಳಿ ಇಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆನ್ಯಾಯ ದೇವತೆನಿನ್ನ ನೆತ್ತರ ಬಿಸಿಯ ಸೋಕಿಉರಿಯುತ್ತಿದ್ದಾಳೆ ನಖಶಿಖಾಂತಸತ್ಯದ ನಾಲಿಗೆಯು ನೇತಾಡುತ್ತಿದೆನಿನ್ನ ನಾಲಿಗೆಯ ಹಾಗೇ ತೀರ್ಪು ಏನಾದರೇನು ಮಗಳೇನಿನ್ನ ಜೀವಕ್ಕೆ ಬೆಲೆ ಕಟ್ಟಲಾದಿತೇಬೇಡ ಮಗಳೇನಿನ್ನ ಪಾಡು, ನಿನ್ನ ನೋವು ಮುಂದೆಂದೂಬಾರದಿರಲಿ ನಿನ್ನಕ್ಕ ತಂಗಿಯರ ಪಾಲಿಗೆ ಎಲ್ಲರೊಳಗಿನ ತಾಯಿ, ತಂಗಿ, ಅಕ್ಕ, ಮಗಳುಪ್ರಜ್ವಲಿಸುತಿರಲಿ ಸದಾಅವರ ಎದೆಯೊಳಗೊಂದು ಸೂಜಿಇರಿಯುತಿರಲಿ ಮೊನಚಾಗಿಕಳಚಿ ಬೀಳಲಿ ಪಾಪದ ಕೊಂಡಿಹರೇ ರಾಮ್ ಹರೇ ರಾಮ್ ******************************                

ಮನಿಷಾ Read Post »

You cannot copy content of this page

Scroll to Top